ಹೌದು ಸ್ನೇಹಿತರೆ ನಮ್ಮ ದೇಶದ ಬಡ ಜನರ ಏಳಿಗೆಗಾಗಿ ಕೇಂದ್ರ ಸರ್ಕಾರ ಬಹಳಷ್ಟು ಶ್ರಮಿಸುತ್ತಿದೆ. ನಮ್ಮ ನಾಗರಿಕರು ಮುಂದೆ ಬರಬೇಕು ಬಡ ನಾಗರಿಕರನ್ನ ಮೇಲೆತ್ತಬೇಕು ಅನ್ನುವ ಕೆಲಸಕ್ಕೆ ಕೇಂದ್ರ ಸರ್ಕಾರ ಕೈ ಹಾಕಿದೆ. ಬಡವರ ಆರ್ಥಿಕತೆಯನ್ನು ಗಟ್ಟಿ ಮಾಡಲು ಸುಧಾರಿಸಲು ಕೇಂದ್ರ ಸರ್ಕಾರ ಈ ಯೋಜನೆಯನ್ನು ಜಾರಿಗೆ ತಂದಿದೆ. ಹಾಗಾದರೆ ಈ ಯೋಜನೆ ಬಗ್ಗೆ ಒಂದಿಷ್ಟು ಮಾಹಿತಿಗಳನ್ನ ನಾವು ತಿಳಿದುಕೊಳ್ಳೋಣ.
ಬಹಳಷ್ಟು ಜನರು ಈ ಯೋಜನೆಯ ಉಪಯೋಗವನ್ನು ಪಡೆದುಕೊಳ್ಳುತ್ತಿದ್ದಾರೆ. ಹೊಸದಾಗಿ ಕಾರ್ಮಿಕರಿಗೆ ಉಪಲಬ್ಧವಾಗುವ ಸಹಾಯವಾಗುವ ಈ ಒಂದು ಯೋಜನೆಯನ್ನ ಕೇಂದ್ರ ಸರ್ಕಾರವು ಸೃಷ್ಟಿಸಿದೆ. ಕೇಂದ್ರ ಸರ್ಕಾರವು ಕಾರ್ಮಿಕರಿಗೋಸ್ಕರ ಬ್ಲೂ ಪ್ರಿಂಟನ್ನ ರೆಡಿ ಮಾಡಿದೆ. ಅದೇನೆಂದರೆ ಕುಶಲ ಕಾರ್ಮಿಕರು ಮತ್ತು ಸಣ್ಣ ಸಣ್ಣ ಉದ್ದಿಮೆಯನ್ನು ಶುರು ಮಾಡುವಂತವರು ಮಹಿಳೆಯರಾಗಿರಬಹುದು, ಯಾರೇ ಆಗಿರಬಹುದು ಅವರಿಗೆ ಸಾಲವನ್ನು ನೀಡುವ ಯೋಜನೆಯನ್ನು ಜಾರಿಗೆ ತಂದಿದೆ.
ಈ ಸಾಲವನ್ನು ತೆಗೆದುಕೊಂಡರೆ ಅತಿ ಕಡಿಮೆ ಬಡ್ಡಿ ದರದಲ್ಲಿ ನಿಮಗೆ ಸಾಲವು ದೊರೆಯುತ್ತದೆ ಮತ್ತು ನಿಮಗೆ ತುಂಬಾ ಸೌಲಭ್ಯಗಳು ಸಿಗುತ್ತವೆ. ಕಾರ್ಮಿಕರಿಗೆ ಬೆಂಬಲವಾಗಿ ನಿಲ್ಲಲು ಸರ್ಕಾರ ಈ ಯೋಜನೆಯನ್ನು ರೂಪಿಸಿದೆ. ಹಾಗಾದರೆ ಆ ಯೋಜನೆ ಯಾವುದು ಅಂತ ಕೇಳಿದ್ರೆ ಇದೇ ವಿಶ್ವಕರ್ಮ ಯೋಜನೆ. ಭಾರತದಲ್ಲಿರುವ ಕುಶಲಕರ್ಮಿಗಳು ಕೌಶಲ್ಯ ಕಲೆಯನ್ನ ಉತ್ತೇಜಿಸುವುದು ಇದರ ಉದ್ದೇಶವಾಗಿದೆ.
ಜನರಿಗೆ ಇದರ ಮೂಲಕ ಬೆಂಬಲವನ್ನು ನೀಡಿ ಇವರನ್ನು ಉತ್ತೇಜಿಸಿ ಮೇಲಕ್ಕೆ ತರುವುದು ಸರ್ಕಾರದ ಉದ್ದೇಶವಾಗಿದೆ. ಇದರಿಂದ ಅವರು ಜೀವನವನ್ನು ಕೂಡ ಕಟ್ಟಿಕೊಳ್ಳಬಹುದು. ನಮ್ಮ ಕೌಶಲ್ಯ ಪರಂಪರೆಯನ್ನು ಉಳಿಸಬೇಕು ಬೆಳೆಸಬೇಕು ಎನ್ನುವಂತದ್ದು ಈ ಯೋಜನೆಯ ಉದ್ದೇಶವಾಗಿದೆ. ಈ ಸೌಲಭ್ಯದ ಮೂಲಕ ಈ ಯೋಜನೆಯ ಮೂಲಕ ಭಾರತದಲ್ಲಿ ವಾಸಿಸುವ ಕುಶಲಕರ್ಣಿಗಳಿಗೆ ಸೌಲಭ್ಯ ತರಬೇತಿಯನ್ನು ನೀಡಲು 13000 ಕೋಟಿ ರೂಪಾಯಿಯನ್ನು ಮೀಸಲಿಡಲಾಗಿದೆ.
ಕುಶಲಕರ್ಮಿಗಳು ತಮ್ಮ ಕೆಲಸಕ್ಕೆ ಅನುಕೂಲವಾಗುವ ರೀತಿಯಲ್ಲಿ ಈ ಸಾಲವನ್ನು ಪಡೆದುಕೊಳ್ಳಬಹುದಾಗಿದೆ ಅದು ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಅಂದರೆ ಐದು ಪ್ರತಿಶತ ಐದು ಶೇಕಡಾ ಬಡ್ಡಿ ದರದಲ್ಲಿ ಈ ಸಾಲವನ್ನು ನೀಡಲಾಗುತ್ತದೆ. ಅವರಿಗೆ ಯಾವ ಯಾವ ವಸ್ತುಗಳು ಬೇಕು ಅವರ ಕೆಲಸಕ್ಕೆ ಅನುಕೂಲವಾಗುವಂತಹ ರೀತಿಯಲ್ಲಿ ಸರಕು ಸಾಮಾನುಗಳನ್ನು ತೆಗೆದುಕೊಳ್ಳಲು ಹಾಗೂ ಅವರ ಉದ್ಯೋಗವನ್ನು ಮುಂದುವರಿಸಲು ಸರ್ಕಾರ ಈ ಯೋಜನೆಯನ್ನು ಜಾರಿಗೊಳಿಸಿದೆ.
ವಿಶ್ವಕರ್ಮ ಯೋಜನೆಯ ಫಲಾನುಭವಿಗಳು ಬಯೋಮೆಟ್ರಿಕ್ ಆಧಾರಿತ ಪಿಎಮ್ ವಿಶ್ವಕರ್ಮ ಪೋರ್ಟಲ್ ನಲ್ಲಿ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ಮೊದಲನೇ ಕತ್ತಿನಲ್ಲಿ ಒಂದು ಲಕ್ಷ ರೂಪಾಯಿ ಹಾಗೂ ಎರಡನೇ ಕಂತಿನಲ್ಲಿ 2 ಲಕ್ಷ ರೂಪಾಯಿ ಒಟ್ಟು 3,00,000 ಸಾಲ ಅತ್ಯಂತ ಕಡಿಮೆ ಬಡ್ಡಿದರಕ್ಕೆ ಅಂದರೆ 5% ಬಡ್ಡಿದರಕ್ಕೆ ಈ ಸಾಲವು ಸಿಗಲಿದೆ. ನೀವು ಹೆಸರನ್ನು ನೋಂದಾಯಿಸಿಕೊಂಡ ನಂತರ ನಿಮಗೆ ವಿಶ್ವಕರ್ಮ ಸರ್ಟಿಫಿಕೇಟ್ ಮತ್ತು ಐಡಿ ಇವೆರಡನ್ನು ಕೊಡಲಾಗುತ್ತದೆ.
ಹಾಗಾದರೆ ಯಾರು ಯಾರು ಈ ಸಾಲವನ್ನು ಪಡೆದುಕೊಳ್ಳಲು ಅರ್ಹರಾಗಿರುತ್ತಾರೆ ಅಂತಂದ್ರೆ ಮೀನುಗಾರರು ಹೈನುಗಾರು ಮಡಿಕೆ ಮಾಡುವವರು ಅಕ್ಕಸಾಲಿಗರು ಇನ್ನೂ ಮೊದಲಾದ ನಮ್ಮ ದೇಶದ ಪರಂಪರೆಯನ್ನು ಉಳಿಸಿಕೊಂಡು ಬೆಳೆಸಿಕೊಂಡು ಬರುತ್ತಿರುವವರು ಇದಕ್ಕೆ ಅರ್ಹರಾಗಿರುತ್ತಾರೆ ಈ ಸಾಲವನ್ನು ಅವರು ಪಡೆಯಬಹುದಾಗಿದೆ. ನೋಡಿ ಇಲ್ಲಿ ಮತ್ತೊಂದು ಅಂದ್ರೆ ನೀವು ಅರ್ಜಿಯನ್ನು ಸಲ್ಲಿಸುವಾಗ ನಿಮಗೆ 18 ವರ್ಷ ವಯಸ್ಸಾಗಿರಲೇಬೇಕು. ಮತ್ತು ನೀವು ಯಾವ ಉದ್ಯೋಗವನ್ನು ಮಾಡುತ್ತಿದ್ದೀರಿ ಅಂತ ಅಲ್ಲಿ ನಮೂದಿಸಬೇಕಾಗುತ್ತದೆ.
ಆಗಲೇ ನೀವು ಈ ಸಾಲಕ್ಕೆ ಅರ್ಹರಾಗುತ್ತೀರಾ. ಈ ವ್ಯಾಪಾರ ಅಭಿವೃದ್ಧಿಗಾಗಿ ಸಾಲವನ್ನು ಪಡೆಯುವವರು ಬೇರೆ ಯಾವುದೂ ಸಾಲದಲ್ಲಿ ಇರಬಾರದು ಅಂದ್ರೆ ಬೇರೆ ಯಾವುದು ಯೋಜನೆಯ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದ ಸಾಲದ ಅಡಿಯಲ್ಲಿ ಇರಬಾರದು. ನೋಡಿದ್ರಲ್ಲ ಸ್ನೇಹಿತರೆ ಇನ್ನೂ ಹೊಸ ಹೊಸ ಮಾಹಿತಿಯೊಂದಿಗೆ ಮತ್ತೆ ಭೇಟಿಯಾಗೋಣ. ನಮ್ಮ ಮಾಹಿತಿ ಇಷ್ಟವಾದಲ್ಲಿ ಲೈಕ್ ಮಾಡಿ ಹಾಗೂ ಶೇರ್ ಮಾಡಿ.