WhatsApp Group Join Now

ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ ನಡೆಸುವ ನಾಗರಿಕ ಸೇವೆಗಳ ಪರೀಕ್ಷೆಯು ಜಾಗತಿಕವಾಗಿ ಅತ್ಯಂತ ಸವಾಲಿನ ನೇಮಕಾತಿ ಪರೀಕ್ಷೆಗಳಲ್ಲಿ ಒಂದಾಗಿದೆ ಮಹತ್ವಕಾಂಕ್ಷೆ ಅಭ್ಯರ್ಥಿಗಳು ತಮ್ಮ ತಯಾರಿಗಾಗಿ ವರ್ಷಗಳ ಸಮರ್ಪಣೆ ಹೂಡಿಕೆ ಮಾಡುತ್ತಾರೆ ಆಗಲೇ ಯಶಸ್ಸನ್ನು ಪಡೆಯಲು ಅನೇಕ ಪ್ರಯತ್ನಗಳ ಅಗತ್ಯವಿರುತ್ತದೆ ಆದರೆ ಯುಪಿಎಸ್ಸಿ ಪರೀಕ್ಷೆ ತೇರ್ಗಡೆಯಾಗುವ ಮೂಲಕ ಭಾರತೀಯ ಆಡಳಿತ ಸೇವೆಗಳ ಅಧಿಕಾರಿಯಾಗಿರುವ ಐಎಎಸ್ ಸೌಮ್ಯತಾ ಅವರು ತಮ್ಮ ಮೊದಲ ಪ್ರಯತ್ನದಲ್ಲಿ ಪರೀಕ್ಷೆಯಲ್ಲಿ ಉತ್ತೀರಣರಾಗುವ ಮೂಲಕ ಗಮನಹರ ಸಾಧನೆ ಮಾಡಿ ಪ್ರತಿಯೊಬ್ಬರ ಮಾದರಿಯಾಗಿದ್ದಾರೆ.

ಸೌಮ್ಯತಾ ದೌರ್ಬಲ್ಯವನ್ನು ಮೆಟ್ಟಿನಿಂತು ಸಾಧನೆ ಮಾಡಿದರು ಆಕೆ ಹದಿನಾರರ ಹರಿಯಾದಲ್ಲಿದ್ದಾಗಲೇ ಶ್ರವಣ ಸಾಮರ್ಥ್ಯ ಕಳೆದುಕೊಂಡರು ಆದರೆ ಸೌಮ್ಯ ತಮ್ಮ ಮುಖ್ಯ ಗುರಿಯನ್ನು ಬಿಡಲಿಲ್ಲ ಹಾಗೂ ಮಹತ್ವಕಾಂಕ್ಷೆಯನ್ನು ಇಟ್ಟುಕೊಂಡು ಮುಂದುವರಿದರು ತನ್ನ ಶಾಲಾ ವರ್ಷಗಳಲ್ಲಿ ಶೈಕ್ಷಣಿಕವಾಗಿ ಉತ್ತಮ ಸಾಧನೆ ಮಾಡಿದವರು ಕಾನೂನು ಅಧ್ಯಯನಕ್ಕಾಗಿ ಪ್ರತಿಷ್ಠಿತ ರಾಷ್ಟ್ರೀಯ ಕಾನೂನು ಶಾಲೆಯಲ್ಲಿ ಸ್ಥಾನವನ್ನು ಪಡೆದರು. 2017ರಲ್ಲಿ ಯುಪಿಎಸ್ಸಿ ಪರೀಕ್ಷೆಗೆ ಹಾಜರಾಗಲು ಅವರ ನಿರ್ಧಾರವು ಕೇವಲ ನಾಲ್ಕು ತಿಂಗಳುಗಳ ತಯಾರಿಗೆ ಮಾತ್ರ ಬಾಕಿ ಇತ್ತು ಇದು ಅವರ ಗಾಂಭೀರ್ಯತೆ ಹಾಗೂ ಪರಿಶ್ರಮವನ್ನು ಮತ್ತಷ್ಟು ತೋರಿಸುತ್ತದೆ ಸಾಮಾಜಿಕ ಖಾತೆಯಲ್ಲಿ ವೈಯಕ್ತಿಕ ಹಾಗೂ ಗ್ರಾಮೀಣ ಅಭಿವೃದ್ಧಿ ಫೋಟೋಗಳನ್ನು ಹಂಚಿಕೊಳ್ಳುವ ಸೌಮ್ಯ ಅನೇಕ ಅಧಿಕಾರಿಗಳಿಗೆ ಮಾದರಿಯಾಗಿದ್ದಾರೆ.

ಸೌಮ್ಯ ಅವರ ವೈಯಕ್ತಿಕ ಜೀವನ ಕೂಡ ಗಮನಹರ ಸಾಧನೆಗಳನ್ನು ಮಾಡಿದೆ ಆಕೆ ತನ್ನ ಬ್ಯಾಚ್ಮೇಟ್ ಅರ್ಜಿತ್ ಚಂದ ಅವರನ್ನು ವಿವಾಹವಾಗಿದ್ದಾರೆ ಮೊದಲೇ ಹೇಳಿದಂತೆ 16ನೇ ವಯಸ್ಸಿನಲ್ಲಿ ಕಿವಿ ಕೇಳುವ ಸಾಮರ್ಥ್ಯವನ್ನು ಹಟ್ಟಾತನೆ ಕಳೆದುಕೊಂಡರು ಮತ್ತು ಶ್ರವಣ ಸಾಧನದ ಸಹಾಯವನ್ನು ತೆಗೆದುಕೊಳ್ಳಬೇಕಾಯಿತು ಆದರೆ ಅದು ತನ್ನ ಕೊರತೆಯಾಗಲು ಬಿಡಲಿಲ್ಲ ನಿವಾರಿಸಿ ಸೌಮ್ಯ ಯಾವುದೇ ಕೋಚಿಂಗ್ ಇಲ್ಲದೆ 23ನೇ ವಯಸ್ಸಿನಲ್ಲಿ ನಾಗರಿಕ ಸೇವಾ ಪರೀಕ್ಷೆಯನ್ನು ಭೇದಿಸಿದರು ಅವರ ಪ್ರಕಾರ ಯುಪಿಎಸ್ಸಿ ಪರೀಕ್ಷೆಯನ್ನು ಭೇದಿಸುವುದು ಇತರ ಯಾವುದೇ ಪರೀಕ್ಷೆಯನ್ನು ಬೇಧಿಸಿದಂತೆ ನಿಮಗೆ ಬೇಕಾಗಿರುವುದು ಸರಿಯಾದ ಯೋಚನೆ ಮತ್ತು ಉತ್ತಮ ತಂತ್ರ ಎಂದಾಗಿದೆ.

ಸೌಮ್ಯಳ ತಂದೆ ತಾಯಿ ವೃತ್ತಿಯಲ್ಲಿ ವೈದ್ಯರಾಗಿದ್ದು ಅವರಂತೆ ಆಕೆಯೂ ಆಗಬೇಕು ಎಂದು ಬಯಸಿದರು ಆದರೆ ಆಕೆ ಮನಸ್ಸು ಬದಲಿಸಿ ಕಾನೂನು ಓದಲು ಆರಂಭಿಸಿದರು ಸೌಮ್ಯ ತನ್ನ ಶಾಲಾ ದಿನಗಳಿಂದಲೂ ಬುದ್ಧಿವಂತ ವಿದ್ಯಾರ್ಥಿಯಲ್ಲೂ ಅಗ್ರಸ್ಥಾನ ಪಡೆದಿದ್ದಾರೆ ಮೊದಲಿನಿಂದಲೂ ಪ್ರಚಲಿತ ವಿದ್ಯಮಾನಗಳ ಬಗ್ಗೆ ಆಸಕ್ತಿ ಹೊಂದಿದ್ದ ಆಕೆ ತನ್ನ ಮೂರನೇ ವಯಸ್ಸಿನಲ್ಲಿ ದಿನ ಪತ್ರಿಕೆಗಳನ್ನು ಓದಲು ಆರಂಭಿಸಿದರು ಯುಪಿಎಸ್ಸಿ ಪರೀಕ್ಷೆ 16 ಗಂಟೆಗಳ ಕಾಲ ಅಧ್ಯಯನ ಮಾಡುತ್ತಿದ್ದರು.

https://youtu.be/vciX_yDnDYM

WhatsApp Group Join Now

Leave a Reply

Your email address will not be published. Required fields are marked *