ರೈತ ಈ ದೇಶದ ಬೆನ್ನೆಲುಬು ಆದರೆ ಅದೇ ರೈತನ ಕುಟುಂಬಕ್ಕೆ ಬೆನ್ನೆಲುಬು ಬಗ್ಗೆ ಯಾರು ಇಲ್ಲ. ಸಾಲ ಸೂಲ ಮಾಡಿ ನೀರಿಗಾಗಿ ಪರದಾಡಿ ಹಗಲು ರಾತ್ರಿ ಎನ್ನದೇ ಬೇವರು ಸುರಿಸಿ ಫಸಲನ್ನು ತೆಗೆದರೆ ಅದಕ್ಕೆ ತಕ್ಕ ಬೆಲೆ ಸಿಗುತ್ತಿಲ್ಲ. ಕೆಲವೊಮ್ಮೆ ಲಾಭ ಬರುವುದಿರಲಿ ಹಾಕಿರುವ ಬಂಡವಾಳ ಕೂಡ ಬರಲ್ಲ. ಕೃಷಿಗಾಗಿ ಮಾಡಿರುವ ಸಾಲವನ್ನು ತೀರಿಸಕ್ಕೆ ವರ್ಷಗಳೇ ಬೇಕು ಆದರೆ ಈ ಚಿತ್ರದುರ್ಗದ ರೈತ ಮಾತ್ರ ಜಾಕ್ ಪಾಟ್ ಹೊಡೆದಿದ್ದಾರೆ. ಅದು ಹೇಗೆಂದು ನೋಡೋಣ ಬನ್ನಿ.
ಚಿತ್ರದುರ್ಗ ಜಿಲ್ಲೆಯ ದೊಡ್ಡಸಿದ್ದವನ ಹಳ್ಳಿಗೆ ಸೇರಿದ ಈ ರೈತನ ಹೆಸರು ಮಲ್ಲಿಕಾರ್ಜುನ ಈ ಘಟನೆ ನಡೆದಿರುವುದು ಸರಿ ಸುಮಾರು ಒಂದೆರಡು ವರ್ಷಗಳ ಹಿಂದೆ ಯಾವಾಗ ಈರುಳ್ಳಿ ಬೆಲೆ ಗಗನೇಕೆ ಇರುತ್ತಾ ಅವಗ ಸಾಕಷ್ಟು ಜನ ರೈತರು ಅದೃಷ್ಟ ಕುಲಾಯಿಸಿತ್ತು ಅಂತಹ ರೈತರಲ್ಲಿ ಇವರು ಒಬ್ಬರು ಕೂಡ ತನಗಿರುವ 10 ಎಕರೆ ಜಮೀನಿನಲ್ಲಿ ಏನಾದರೂ ಹಾಕೋಣ ಅಂದ್ರೆ ಮಲ್ಲಿಕಾರ್ಜುನ್ ಅವರ ಬಳಿ ಹಣ ಇರಲಿಲ್ಲ. ಆಗ 1500000 ಸಾಲ ಪಡೆದ ಇವರು ಧೈರ್ಯ ಮಾಡಿ ಈರುಳ್ಳಿ ಬೀಜ ಖರೀದಿ ಮಾಡಿ ತಮ್ಮ ಜಮೀನಿನ ಜೊತೆ ಇನ್ನೊಂದು 10 ಎಕರೆ ಜಮೀನನ್ನು ಲೀಸ್ಗೆ ಪಡೆದು ಈರುಳ್ಳಿ ಬಿತ್ತನೆ ಮಾಡಿದರು.
ಮಳೆಗಾಲ ಆಗಿದ್ದರಿಂದ ನೀರು ಹೇಗೂ ಸರಿಹೋಗುತ್ತಿತ್ತು. ಆದರೆ ಮಲ್ಲಿಕಾರ್ಜುನ ಅವರಿಗೆ ಮಾತ್ರ ಪ್ರತಿದಿನ ಭಯ ಮತ್ತು ಚಿಂತೆ ಕಾಡುತ್ತಿತ್ತು. ಕಾರಣ ಈರುಳ್ಳಿಗೆ ಸರಿಯಾದ ಬೆಲೆ ಸಿಗಲಿಲ್ಲ ಅಂದ್ರೆ ನಾನು ದೊಡ್ಡ ಸಾಲಗಾರ ಆಗಿಬಿಡ್ತೀನಿ ಅನ್ನೋದು ತೆಗೆದುಕೊಂಡು ಸಾಲ ತೀರಿಸೋಕೆ ಏನಿಲ್ಲಾ ಅಂದ್ರು. 3 ವರ್ಷ ಬೇಕು ಯಾಕಂದ್ರೆ ಕಳೆದ ವರ್ಷ ಈರುಳ್ಳಿ ಹಾಕಿದ ಮಲ್ಲಿಕಾರ್ಜುನ ಅವರಿಗೆ ಸಿಕ್ಕಿದ್ದು ಬರೀ 5,00,000 ಮಾತ್ರ. ಆದರೆ ಈ ಬಾರಿ ಮಲ್ಲಿಕಾರ್ಜುನ ಅವರಿಗೆ ಅದೃಷ್ಟ ಕುಲಾಯಿಸಿದೆ. ಹಿಂದೆಂದೂ ಕಂಡಿರದ ರೀತಿಯಲ್ಲಿ ಆ ವರ್ಷ ಈರುಳ್ಳಿ ಬೆಲೆ ಗಗನಕ್ಕೇರಿತ್ತು.
ಅದೇ ಸಮಯಕ್ಕೆ ಮಲ್ಲಿಕಾರ್ಜುನ್ ಅವರು ಹಾಕಿದ ಈರುಳ್ಳಿ ಬಂತು. ಹಾಗೆ ಬೆಳೆ ಕೂಡ ಚೆನ್ನಾಗಿ ಆಗಿದ್ದ ಕಾರಣ 240 ಟನ್ ಈರುಳ್ಳಿಯನ್ನು ಕ್ವಿಂಟಲ್ಗೆ 7000 ಲೆಕ್ಕದಲ್ಲಿ ಮಾರಾಟ ಮಾಡಿದ ಮಲ್ಲಿಕಾರ್ಜುನ ಅವರು ಸುಮಾರು 1,60,00,000 ಲಾಭ ಗಳಿಸಿದ್ದಾರೆ. ಬಂದ ಹಣದಿಂದ ತಂಗಿದ್ದ ಸಾಲಗಳನ್ನು ತೀರಿಸುವ ಮಲ್ಲಿಕಾರ್ಜುನ ಅವರು ಒಂದು ಒಳ್ಳೆಯ ಮನೆ ಕಟ್ಟಬೇಕು ಎಂದು ಪ್ಲಾನ್ ಮಾಡಿ ತಮಗೆ ಇಷ್ಟದ ಹಾಗೆ ಒಳ್ಳೆಯ ಐಷಾರಾಮಿ ಮನೆಯನ್ನು ಕಟ್ಟಿಕೊಂಡಿದ್ದಾರೆ.
ಅಷ್ಟೇ ಅಲ್ಲದೇ ಚಿತ್ರದುರ್ಗದ ಸುತ್ತಮುತ್ತ ಹಳ್ಳಿಗಳಲ್ಲಿ ಮಲ್ಲಿಕಾರ್ಜುನ್ ಅವರು ಈಗ ಸೆಲೆಬ್ರಿಟಿ ಆಗಿಬಿಟ್ಟಿದ್ದಾರೆ. ಇನ್ನೊಂದು ಕೋನದಲ್ಲಿ ನೋಡೋದಾದ್ರೆ ಏನು ಬೆಲೆ ಬಂತು. ಮಲ್ಲಿಕಾರ್ಜುನ್ ಅವರು ಬಚಾವ್ ಆದ್ರು ಬೆಲೆ ಸಿಗಲಿಲ್ಲ ಅಂದಿದ್ರೆ ಅವರ ಸ್ಥಿತಿ ಏನು ಅನ್ನೋದು ಯಾಕಂದ್ರೆ ಮಾಡಿದ 15,00,000 ಸಾಲ ತಿಳಿಸಲು ಬಹಳ ಕಷ್ಟ ಹಾಗೂ ವರ್ಷಗಳೇ ಬೇಕಾಗಿರುತ್ತಿತ್ತು.