ಹೋಟೆಲ್ ರೂಮ್‌ಗಳಲ್ಲಿ ಬಳಸೋ ಬಿಳಿ ಬಣ್ಣದ ಬೆಡ್ ಶೀಟ್ ಬಗ್ಗೆ ಮಾಹಿತಿ ತಿಳಿಸಿ ಕೊಡ್ತೀನಿ. ಅದು ನೀವೆಂದಾದರೂ ಹೋಟೆಲ್ ರೂಮ್ ನಲ್ಲಿ ತಂಗಿದ್ದರೆ ನಿಮಗೆ ಈ ಅನುಭವ ಆಗಿರುತ್ತೆ. ಅದೇನಂದ್ರೆ ಹೋಟೆಲ್ ರೂಂಗಳಲ್ಲಿ ಬಳಸುವ ಬೆಡ್ ಶೀಟ್ ಯಾವಾಗಲೂ ಬಿಳಿ ಬಣ್ಣದ ಬೆಡ್ ಶೀಟ್ ಇರುತ್ತೆ. ಅದು ಚಿಕ್ಕ ಹೋಟೆಲ್ ರೂಂ ಇರಬಹುದು ಅಥವಾ ಫೈವ್‌ಸ್ಟಾರ್ ಹೋಟೆಲ್ ರೂಂ ಇರಬಹುದು. ಹೋಟೆಲ್ ರೂಮ್ ಯಾವುದೇ ಇರಬಹುದು. ಆದರೆ ಅದರಲ್ಲಿ ಬಲು ದುಬಾರಿ ಬಿಳಿ ಬಣ್ಣದ ಬೆಡ್ ಶೀಟ್ ಮಾತ್ರ. ಅದು ಯಾಕೆ ಅಂತ ನಿಮಗೆ ತಿಳಿಸಿಕೊಡ್ತೀನಿ. ಎಲ್ಲ ಹೋಟೆಲ್ ರೂಮ್‌ಗಳಲ್ಲಿ ಬಿಳಿ ಬಣ್ಣದ ಬಟ್ಟೆಗಳನ್ನೇ ಯೂಸ್ ಮಾಡೋದಕ್ಕೆ ಮೂರು ಮುಖ್ಯವಾದ ಕಾರಣಗಳಿದೆ.
ಅದರಲ್ಲಿ ಮೊದಲನೆಯದೆಂದರೆ ಬಿಳಿ ಬಣ್ಣದ ಬೆಡ್ ಶಿಟ್ ಗಳು ಕೊಳೆಯಾದರೆ ಅದು ಚೆನ್ನಾಗಿ ಎದ್ದು ಕಾಣುತ್ತೆ. ಅದು ಕೊಳೆಯನ್ನು ಮರೆಮಾಚುವುದಿಲ್ಲ.ಆಗ ರೂಮ್ ಕ್ಲೀನ್ ಮಾಡಲು ಕ್ಲೀನರ್ ಗಳಿಗೆ ತುಂಬಾ ಇಷ್ಟ ಆಗುತ್ತೆ. ಹಾಗೆಯೇ ರೂಮ್ ಕ್ಲೀನ್ ಮಾಡುವ ವ್ಯಕ್ತಿಗಳ ಮೇಲೆ ಒಂದು ಜವಾಬ್ದಾರಿ ಇರುತ್ತದೆ ಸಾಮಾನ್ಯವಾಗಿ ಯಾವ ಕೊಳೆ ಎದ್ದು ಕಾಣುತ್ತದೆ ಆ ಕೊಳೆಯನ್ನು ಅವರು ತೆಗೆಯಲು ಹರಸಾಹಸ ಪಡುತ್ತಾರೆ ಏಕೆಂದರೆ ಅವರ ಮೇಲಿರುವ ಅಧಿಕಾರಿಗಳು ಅವರನ್ನು ಬಂದು ಬಯ್ಯಬಹುದು ಹಾಗಾಗಿ ಅವರು ಬಹಳ ಕಷ್ಟಪಟ್ಟು ಆ ಒಂದು ಕೊಳೆಯನ್ನು ತೆಗೆಯಲು ಪ್ರಯತ್ನಿಸುತ್ತಾರೆ.
ಹಾಗೂ ಆ ರೂಂ ನಲ್ಲಿ ತಂಗಿರುವ ವ್ಯಕ್ತಿಗಳು ಸಹ ಬೆಡ್ ಶೀಟ್ ಬಿಳಿ ಬಣ್ಣದಲ್ಲಿ ಇರೋದ್ರಿಂದ ರೂಂನ ಕೊಳೆ ಮಾಡಬೇಕು ಅಂದ್ರೆ ಸ್ವಲ್ಪ ಹಿಂದೆ ಮುಂದೆ ಯೋಚನೆ ಮಾಡ್ತಾರೆ ಮತ್ತೊಂದು ಕಾರಣ ಏನು ಅಂದ್ರೆ ಬಿಳಿ ಬಣ್ಣದ ಬೆಡ್ ಶೀಟ್ ಗಳನ್ನ ಬೇರೆ ಬಣ್ಣದ ಬೆಡ್ ಶೀಟ್ ಗಳಿಗೆ ಹೋಲಿಸಿದರೆ ಬಿಳಿ ಬಣ್ಣ ಆಕರ್ಷಿತ ವಾಗಿರುತ್ತದೆ ಹಾಗೂ ಬಿಳಿ ಬಣ್ಣದ ಬೆಡ್ ಶಿಟ್ಗೆ ವೈರಸ್ ಬ್ಯಾಕ್ಟೀರಿಯಾ ಆಗೋದು ತುಂಬಾನೇ ಕಮ್ಮಿ. ಒಂದು ವೇಳೆ ಆದರೂ ಬೇರೆಯುವುದಕ್ಕೆ ಹೋಲಿಸಿದರೆ ಅವುಗಳು ಬೇಗ ನಾಶ ಆಗುತ್ತೆ ಬಿಳಿ ಬಣ್ಣದ ಬಟ್ಟೆಗಳನ್ನ ಉಪಯೋಗಿಸೋದ್ರಿಂದ ಕಸ್ಟಮರ್ಗೆ ಧನಾತ್ಮಕವಾದ ಫೀಲ್ ಬರುತ್ತೆ.
ಹಾಗೂ ತುಂಬಾ ರಿಲ್ಯಾಕ್ಸ್ ಆಗಿ ಫೀಲ್ ಆಗ್ತಾರೆ ಅನ್ನೋ ಕಾರಣಕ್ಕೆ ಹೋಟೆಲ್ ರೂಮ್‌ಗಳಲ್ಲಿ ಬಿಳಿ ಬಣ್ಣದ ಬೆಡ್ ಶೀಟ್ ಬಳಸ್ತಾರೆ. ಹೌದು ಇದೇ ಮುಖ್ಯವಾದ ಕಾರಣ ಆಗಿರುತ್ತದೆ ಯಾವುದೇ ಒಂದು ವ್ಯಾಪಾರವಾದರೂ ಕೂಡ ಗ್ರಾಹಕರನ್ನು ಖುಷಿಪಡಿಸುವುದು ಅವರ ಮುಖ್ಯ ಗುರಿಯಾಗಿರುತ್ತದೆ. ಹಾಗಾಗಿ ಆ ರೀತಿಯಾಗಿ ಇವರು ತಯಾರು ಮಾಡುತ್ತಾರೆ. ಇದರ ಬಗ್ಗೆ ನೀವೇನಂತೀರಿ ಎಂಬುದು ತಪ್ಪದೇ ನಮಗೆ ಕಾಮೆಂಟ್ ಮೂಲಕ ತಿಳಿಸಿ.