ಓದು ಮುಗಿದ ನಂತರ ಏನನ್ನಾದರೂ ಸಾಧಿಸೋಣ ಎನ್ನುವ ಬದಲು ಓದುವಾಗಲೇ ಏನಾದ್ರೂ ಸಾಧಿಸೋಣ. ಸೂತ್ರಕ್ಕೆ ಬಿದ್ದು ನಮ್ಮ ದೇಶದ ಜನಲ್ಲದೆ ಬೇರೆ ದೇಶದವರು ಮೆಚ್ಚುವಂತ ಕೆಲಸ ಮಾಡಿದ 16 ವರ್ಷದ ಹುಡುಗಿಯ ಕಥೆ ಇದು. ನಮಗೆ ಬೇಸಿಗೆಕಾಲ ಬಂತು ಅಂತ ಅಂದ್ರೆ ಮುಖ್ಯವಾಗಿ ಬೇಕಾಗಿರುವುದು AC ಅಥವಾ ಫ್ಯಾನ್ ಇವೆರಡು ಇಲ್ಲವೆಂದರೆ ನಮ್ಮ ಜೀವನದಲ್ಲಿ ಬೇಸಿಗೆಯನ್ನು ಕಳುಯುವುದು ಬಹಳ ಕಷ್ಟವಾಗುತ್ತದೆ ಅದನ್ನು ನಾವು ಇತ್ತೀಚಿನ ದಿನಗಳಲ್ಲಿ ಅನುಭವಿಸಿದ್ದೇವೆ ಕೂಡ.AC ಒಂದು ಖರೀದಿ ಮಾಡಬೇಕು ಅಂದ್ರೆ ಏನಿಲ್ಲ ಅಂದ್ರು 25000,ರೂ ಬೇಕು. ಆದ್ರೆ ಈ ಹುಡುಗಿ ₹1800 ಖರ್ಚು ಮಾಡಿ AC ತಯಾರಿಸಿದ್ದಾಳೆ. ಅದು ಹೇಗೆ ಎಂದು ನೋಡೋಣ ಬನ್ನಿ.
ಉತ್ತರ ಪ್ರದೇಶದ ಝಾನ್ಸಿ ನಗರದಲ್ಲಿ ವಾಸವಿರುವ 16 ವರ್ಷದ ಕಲ್ಯಾಣಿ, ಹತ್ತಿರದ ಲೋಕಮಾನ್ಯ ತಿಲಕ್ ಕಾಲೇಜಿನಲ್ಲಿ ಪಿಯುಸಿ ಓದುತ್ತಿದ್ದಾಳೆ. ಈಕೆಯ ತಂದೆ ತಾಯಿ ಇಬ್ಬರು ಕೂಡ ಶಿಕ್ಷಕರೇ ಯಾವಾಗಲೂ ವಿಭಿನ್ನವಾಗಿ ಆಲೋಚಿಸುತ್ತಿದ್ದ ಕಲ್ಯಾಣಿ ಕಡಿಮೆ ಬೆಲೆಯಲ್ಲಿ ತಯಾರಿಸಬೇಕು ಎಂದು ಪ್ಲಾನ್ ಮಾಡಿದ್ದಳು. ಅದರಂತೆ ಕಲ್ಯಾಣಿ ನಿರ್ಮಿಸಿದ ದೇಸಿ ಎಸಿ ಥರ್ಮಾಕೋಲ್‌ನಿಂದ ಮಾಡಿದ ಐಸ್ ಬಾಕ್ಸ್ ಅನ್ನು ಹೊಂದಿದ್ದು ಅಲ್ಲಿ 12 ವೋಲ್ಟ್ ಡಿಸಿ ಫ್ಯಾನ್‌ನಿಂದ ಗಾಳಿಯನ್ನು ಬಿಡುಗಡೆ ಮಾಡಲಾಗುತ್ತದೆ. ನಂತರ ಮೊಣಕೈಯಿಂದ ತಂಪಾದ ಗಾಳಿಯು ಬಿಡುಗಡೆಯಾಗುತ್ತದೆ, ಇದು ಒಂದು ಗಂಟೆಯವರೆಗೆ ಎಸಿ ಬಳಸಿದರೆ ತಾಪಮಾನದಲ್ಲಿ 4-5 ಡಿಗ್ರಿಗಳಷ್ಟು ಕಡಿಮೆಯಾಗುತ್ತದೆ. ಯಾವುದೇ ಮಾಲಿನ್ಯ ಉಂಟಾಗದ ರೀತಿಯಲ್ಲಿ ಈ ಎಸಿಯನ್ನು ನಿರ್ಮಿಸಲಾಗಿದೆ.
ಕೇವಲ ₹1800 ಗೆ ಎಸ್ ತಯಾರಿಸಿದ್ದಾಳೆ. ಕಲ್ಯಾಣಿ ಅಷ್ಟೇ ಅಲ್ಲದೆ ಎಸಿಗೆ ಕರೆಂಟ್ ಬೇಕಾಗಿಲ್ಲ ಸೋಲಾರ್ನಿಂದಲೇ ರನ್ ಆಗುತ್ತದೆ. ರೂಂನಲ್ಲಿ ಅರ್ಧ ಗಂಟೆ ಆನ್ ಮಾಡಿದರೆ ಸಾಕು, ಐದು ಡಿಗ್ರಿ ಟೆಂಪರೆಚರ್ ತಂಪಾಗುತ್ತದೆ.ಕಲ್ಯಾಣಿ ತಯಾರಿಸಿರುವ ಈ ಎಸಿ ಖರೀದಿ ಮಾಡಿದರೆ ಬೇಸಿಗೆಯಲ್ಲಿ ಬೆವರು ಸುರಿಸುವ ಬದಲು.ಎಸಿ ಅನ್ನು ಬಳಸಬಹುದಾಗಿದೆ. ಈ ಹುಡುಗಿಯ ಕ್ರಿಯೇಟಿವಿಟಿ ನೋಡಿ ಜಪಾನ್ ಸೇರಿದಂತೆ ಇತರ ದೇಶಗಳು ತಮ್ಮ ದೇಶಗಳ ಸೆಮಿನಾರ್‌ಗಳಲ್ಲಿ ಪಾಲ್ಗೊಳ್ಳುವಂತೆ ಆಹ್ವಾನ ನೀಡಿವೆ. ಅಷ್ಟೇ ಅಲ್ಲದೆ ಕಲ್ಯಾಣಿಯ ಬಗ್ಗೆ ವಿದೇಶಿ ಕಂಪನಿಗಳು ಆಸಕ್ತಿ ತೋರಿಸುತ್ತಿವೆ ಎಂದು ಹೇಳಲಾಗುತ್ತಿದೆ.ಒಂದು ವಸ್ತುವನ್ನು ತಯಾರಿಸಿದ ಮೇಲೆ ಇಷ್ಟೇನಾ ಎಂದು ತುಂಬಾ ಜನ ಹೇಳ್ತಾರೆ.
ಆದರೆ ಅವರು ತಯಾರಿಸುವ ಹೊಸ ವಿಧಾನವನ್ನು ಕಂಡು ಹಿಡಿಯುವ ಗೋಜಿಗೆ ಹೋಗುವುದಿಲ್ಲ. ಕಲ್ಯಾಣಿ ಕಂಡುಹಿಡಿದಿರುವ ಈ ಎಸಿ ನ್ಯಾಷನಲ್ಗೂ ಸೆಲೆಕ್ಟ್ ಆಗಿದ್ದು, ಈ ವಿನೂತನ ತಂತ್ರಜ್ಞಾನವು ಜಗತ್ತಿನಾದ್ಯಂತ ಪ್ರಶಂಸೆ ಪಡೆಯುತ್ತಿದೆ. ಕಲ್ಯಾಣಿಯ ಎಸಿಯನ್ನು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ದೆಹಲಿ ಐಐಟಿ-ಡಿ ರಾಷ್ಟ್ರೀಯ ಮಟ್ಟದ ಮಾದರಿ ಸ್ಪರ್ಧೆಗೆ ಆಯ್ಕೆ ಮಾಡಿದೆ. ಉತ್ತರ ಪ್ರದೇಶ ಸರ್ಕಾರವು ಪ್ರಾರಂಭಿಸಿದ ‘ನಾರಿ ಸಮ್ಮಾನ್’ ಉಪಕ್ರಮದ ಭಾಗವಾಗಿ ಅವರನ್ನು ಗೌರವಿಸಲಾಯಿತು . ಕ್ರೀಡೆ, ಶಿಕ್ಷಣ, ಕಲೆ ಮತ್ತು ಸಾಮಾಜಿಕ ಕಾರ್ಯಗಳಲ್ಲಿ ಸಾಧನೆ ಮಾಡಿದ ಇತರ ಮಹಿಳೆಯರೊಂದಿಗೆ ಅವರನ್ನು ಸನ್ಮಾನಿಸಲಾಯಿತು.