ನಮ್ಮ ಜಗತ್ತಿನಲ್ಲಿ ಒಂದಲ್ಲ ಒಂದು ರೀತಿಯಿಂದ ನಮಗೆ ಆಶ್ಚರ್ಯ ತರುವಂತ ಸಂಗತಿಗಳು ಆಗುತ್ತಾ ಬರುತ್ತಾ ಇದ್ದಾವೆ. ಕೆಲವೊಮ್ಮೆ ನಂಬಲು ಸತ್ಯವಾದರೂ ಕೂಡ ನಂಬುವಂತಹ ಪರಿಸ್ಥಿತಿ ಬರುತ್ತದೆ ಇವತ್ತಿನ ಮಾಹಿತಿ ಕೂಡ ಅದೇ ರೀತಿ ಆಗಿದೆ ಅಷ್ಟಕ್ಕೂ ಅದೇನಂತೀರಾ ಇಲ್ಲಿದೆ ನೋಡಿ ಸಂಪೂರ್ಣವಾದ ಮಾಹಿತಿ ಹೆತ್ತ ತಂದೆ ತಾಯಿ ಅಣ್ಣ ತಮ್ಮಂದಿರನ್ನು ಬಿಟ್ಟು ಗಂಡ ಚೆನ್ನಾಗಿ ನೋಡಿಕೊಳ್ಳುತ್ತಾನೆ ಅನ್ನೋ ಒಂದೇ ಒಂದು ನಂಬಿಕೆಯಿಂದ ಹುಡುಗಿ ಎಷ್ಟು ದಿನಗಳಿಂದ ಗಂಡನನ್ನು ಆರಿಸಿಕೊಂಡು ಮದುವೆಯಾಗುತ್ತಾರೆ ಮದುವೆಯಾದ ನಂತರ ನಮ್ಮ ಜೀವನ ಮತ್ತೆ ಬೇರೆ ದಾರಿಯನ್ನು ಹಿಡಿದುಕೊಳ್ಳುತ್ತದೆ.
ಕೆಲವೊಬ್ಬರು ಬಡ ಕುಟುಂಬದಿಂದ ಬಂದರೂ ಕೂಡ ಗಂಡಂದಿರು ಬಹಳಷ್ಟು ಪ್ರೀತಿಯಿಂದ ನೋಡಿಕೊಂಡು ಯಾವುದೇ ರೀತಿಯಾದಂತಹ ತೊಂದರೆಯನ್ನು ಕೊಡದೆ ವರದಕ್ಷಿಣೆಗೆ ಕಿರುಕಳ ನೀಡದೆ ಪ್ರೀತಿಯಿಂದ ನೋಡಿಕೊಳ್ಳುತ್ತಾ ಬರುತ್ತಿದ್ದಾರೆ ಆದರೆ ಕೆಲವೊಂದು ಸಂಗತಿಗಳನ್ನು ನಮ್ಮ ದೇಶದಲ್ಲಿ ವರದಕ್ಷಿಣೆ ಕಿರುಕಳಕ್ಕಾಗಿ ಎಷ್ಟೊಂದು ಸುದ್ದಿಗಳು ಈಗಾಗಲೇ ನಮ್ಮ ಮುಂದೆ ಇವೆ. ಇನ್ನು ಕೆಲವೊಂದು ಪರಿಸ್ಥಿತಿಗಳಲ್ಲಿ ಇದೇ ವಿಷಯಕ್ಕೆ ಸಂಬಂಧಪಟ್ಟಂತೆ ವಿಚ್ಛೇದನಕ್ಕೂ ಕಾರಣವಾಗಿದೆ. ಹಾಗೆ ತುಂಬಾ ಬಲವಾದ ಕಾರಣಗಳು ಇಲ್ಲದೆ ವಿಚ್ಛೇದನ ಪಡೆದು ತವರು ಮನೆಗೆ ಬರೋದಿಲ್ಲ ಹುಡುಗಿ. ಆದರೆ ಇಲ್ಲಿ ಕೇವಲ ಮೂರು ನಿಮಿಷಕ್ಕೆ ಮದುವೆ ಮುರಿದು ಹೋಗಿದೆ.
ಹಾಗಾದರೆ ಅಲ್ಲಿ ಏನಾಯಿತು? ಕುವೈತ್ ನಗರಕ್ಕೆ ಸೇರಿದ ಹುಡುಗ ಮತ್ತು ಹುಡುಗಿ. ಕೂತು ಮದುವೆ ಮಾತುಕತೆ ಮುಗಿಸಿ ಗುರು ಹಿರಿಯರು ನಿರ್ಧರಿಸಿದಂತೆ ನಗರದ ನ್ಯಾಯಾಲಯದಲ್ಲಿ ಕಾನೂನು ಬದ್ಧವಾಗಿ ಮದುವೆ ಮಾಡಿಕೊಳ್ಳಲು ತೆರಳಿದ್ದರು. ನ್ಯಾಯಾಧೀಶರ ಮುಂದೆ ಇಬ್ಬರು ಒಪ್ಪಿ ಮದುವೆ ಪತ್ರಕ್ಕೆ ಸಹಿ ಹಾಕಿ ವಿವಾಹ ಮಾಡಿಕೊಂಡರು. ಮದುವೆ ಮುಗಿದ ನಂತರ ನ್ಯಾಯಾಲಯದಿಂದ ನವದಂಪತಿ ಹೊರಗೆ ಬರುವಾಗ ಆಕಸ್ಮಿಕವಾಗಿ ಕಾಲು ಜಾರಿ ಕೆಳಗೆ ಬಿದ್ದಳು ಮದುವೆ ಹೆಣ್ಣು. ಈ ಸಮಯದಲ್ಲಿ ಯಾರೇ ಆದ್ರೂ ತಕ್ಷಣ ಆಕೆಯ ಕೈ ಹಿಡಿದು ಮೇಲಕ್ಕೆತ್ತಿ ಏನಾಯ್ತು ಎಂದು ಕೇಳುತ್ತಾರೆ.
ಆದರೆ ಈ ಮದುವೆ ಗಂಡು ಮಾಡಿದ್ದೇನು ಗೊತ್ತಾ ಆಕಸ್ಮಿಕವಾಗಿ ಕೆಳಗೆ ಬಿದ್ದ ಮದುವೆ ಹೆಣ್ಣನ್ನು ಮೇಲಕ್ಕೆ ಎತ್ತುವ ಬದಲು ಸ್ಟುಪಿಡ್ ನಿನಗೆ ಸರಿಯಾಗಿ ನಡೆಯುವುದಕ್ಕೆ ಬರೋದಿಲ್ವ ಎಂದನು.ಮದುವೆ ಗಂಡು ಕೈಹಿಡಿದು ಮೇಲೆತ್ತುವ ಬದಲು ಎಲ್ಲರ ಮುಂದೆ ಅವಮಾನಸಿದ ಗಂಡನ ಜೊತೆ ಜೀವನವನ್ನು ಊಹಿಸಿಕೊಳ್ಳಲಾಗದ ಮದುಮಗಳು. ತಕ್ಷಣ ಕೋರ್ಟ್ ಒಳಗೆ ಹೋಗಿ ನನಗೆ ವಿಚ್ಛೇದನ ಕೊಡಿ ಎಂದು ಜಡ್ಜ್ ಮುಂದೆ ಕೇಳಿಕೊಂಡಳು. ಇವರ ವಿವಾಹವಾಗಿ ಕೇವಲ 3 ನಿಮಿಷ ಆಗಿತ್ತು. ಮದುಮಗಳ ಮನವಿಯನ್ನು ಸ್ವೀಕರಿಸಿದ ನ್ಯಾಯಾಧೀಶರು ಆಕೆಯ ಅಂತರಂಗವನ್ನು ಅರ್ಥ ಮಾಡಿಕೊಂಡು ತಕ್ಷಣ ಅವರು ಇಬ್ಬರಿಗೂ ವಿಚ್ಛೇದನ ಕೊಟ್ಟಿದ್ದಾರೆ. ನೋಡಿದ್ರಲ್ಲ ಯಾವ ಯಾವ ರೀತಿಯಾಗಿ ಘಟನೆಗಳು ನಮ್ಮ ಜಗತ್ತಿನಲ್ಲಿ ನಡೆಯುತ್ತವೆ ಎಂದು.