ಜೀವನದಲ್ಲಿ ಮುಂದೆ ಬರಬೇಕು ಎಂದರೆ ನಮ್ಮ ಮನಸ್ಸಿನಲ್ಲಿ ಛಲ ಮತ್ತು ಏಕಾಗ್ರತೆ ಇರಬೇಕು ನಾವು ಯಾವ ಕೆಲಸ ಮಾಡುತ್ತೇವೆ ಅಂದುಕೊಂಡಿರುತ್ತೇವೆ ಆ ಕೆಲಸವನ್ನು ಮಾಡದೆ ನಾವು ಹಿಂತಿರುಗಿರಬಾರದು ಇದೇ ನಮ್ಮನ್ನು ಜೀವನದಲ್ಲಿ ಅಭಿವೃದ್ಧಿಗೆ ಒಯ್ಯುತ್ತದೆ ಇವರ ಹೆಸರು ಆಶಾ ಆಂಧ್ರಪ್ರದೇಶ ರಾಜ್ಯದ ಗುಂಟೂರು ನಗರದವರು. ಇವರ ಗಂಡ ಬಿಸಿನೆಸ್ ಮಾಡುತ್ತಿದ್ದು ಇವರದು ಶ್ರೀಮಂತ ಕುಟುಂಬ ಆಗಿತ್ತು .ಆಶಾ ಅವರು ಪ್ರೆಗ್ನೆಂಟ್ ಆಗಿದ್ದ ಸಮಯದಲ್ಲಿ ಅವರ ಗಂಡನ ಬಿಸಿನೆಸ್ ಸಡನ್ ಆಗಿ ನಷ್ಟವನ್ನು ಕಂಡಿತ್ತು. ಅದರ ಪರಿಣಾಮವಾಗಿ ಬರೋಬ್ಬರಿ 80,00,000 ಕಳೆದುಕೊಂಡು ಬಾರಿ ಆರ್ಥಿಕ ನಷ್ಟದಲ್ಲಿ ಸಿಲುಕಿ ಕೊಂಡರು.
ಸಡನ್ ಆಗಿ ಗಂಡ ಎದುರಿಸಿದ ನಷ್ಟವನ್ನು ನೋಡಿ ತೀವ್ರ ಮಾನಸಿಕ ನೋವನ್ನು ಅನುಭವಿಸಿದ ಆಶಾ ಅವರು ಡೆಲಿವರಿ ಡೇಟ್ ಗೂ ಮುಂಚೆ ಎಂಟು ತಿಂಗಳಿಗೆ ಮಗುವಿಗೆ ಜನ್ಮ ಕೊಟ್ಟರು ಪ್ರಗ್ನೆಂಟ್ ಆಗಿದ್ದಾಗ ಆಶಾ ಅವರು ಯೋಗ ಮಾಡುತ್ತಿದ್ದ ಫಲವಾಗಿ ಬೇಗನೆ ಜನ್ಮ ಕೊಟ್ಟರು ಮಗು ಮಾತ್ರ ಉತ್ತಮ ತೂಕವನ್ನು ಹೊಂದಿತ್ತು. ಆಗ್ಲೇ ಬಾರಿ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದ ಕಾರಣ ಮಗುವಿಗೆ ಹಾಲು ಕೊಂಡುಕೊಳ್ಳಲು ಹಣ ಇಲ್ಲದೇ ಕಷ್ಟ ಪಡುತ್ತಿದ್ದರು.ಆಶಾ ಅವರು ಇದರ ಮಧ್ಯೆ ಮಾರುಕಟ್ಟೆಯಲ್ಲಿ ಸಿಗುವ ಕ್ರೀಮ್ ಗಳನ್ನು ಬಳಸಿದ ಕಾರಣ ಮಗುವಿನ ಚರ್ಮ ಕೂಡ ಸ್ವಲ್ಪ ಕಪ್ಪು ಬಣ್ಣಕ್ಕೆ ತಿರುಗಿತ್ತು. ಆಗ ತಮ್ಮ ಅಜ್ಜಿಯ ಬಳಿ ಕೆಲವು ಟಿಪ್ಸ್ ತೆಗೆದುಕೊಂಡ ಆಶಾ ಅವರು ಅಂಗಡಿಯಿಂದ ಆಲ್ಮಂಡ್ ತೆಗೆದುಕೊಂಡು ಬಂದು ಅದರಿಂದ ಆಲ್ ಮುಂಡಾಯ ತಯಾರು ಮಾಡಿಕೊಂಡು ಅದನ್ನು ಮಗುವಿಗೆ ಹಚ್ಚಿದರು.
ಕೆಲವೇ ದಿನಗಳಲ್ಲಿ ಮಗುವಿನ ಚರ್ಮ ತ್ವಚೆಯಾಗಿ ಬರಿದಾಗಿ ತಿರುಗಿತ್ತು.ಇದನ್ನು ನೋಡಿದ ಆಶಾ ಸ್ನೇಹಿತೆ ಕೂಡ ನನಗೂ ಆಲ್ಮಂಡ್ ಆಯಿಲ್ ಕೊಡು ಎಂದು ಕೇಳಿದರು. ಆಗ ಆಶಾ ಅವರಿಗೆ ಒಂದು ಐಡಿಯಾ ಹೊಳೆಯಿತು. ಅದರ ಪ್ರಕಾರ ₹200 ಕೊಟ್ಟು ಅಲ್ಮಂಡ್ ಹಾಗೂ ಇತರ ವಸ್ತುಗಳನ್ನು ತಂದು ಅದರಿಂದ ಸೋಪ್ ತಯಾರಿಸಿ ಗೊತ್ತಿದ್ದವರಿಗೆ ಮಾರಾಟ ಮಾಡಿದ್ದರು.ಸೋಪ ಪರಿಣಾಮ ಉತ್ತಮವಾಗಿದ್ದ ಕಾರಣ ಬೇಡಿಕೆ ಹೆಚ್ಚಾಯಿತು. ₹200 ನಲ್ಲಿ ಬಂದ ಹಣವನ್ನೇ ಬಳಸಿಕೊಂಡು ಹಂತ ಹಂತವಾಗಿ ಬೆಳೆದ ಆಶಾ ಅವರು ನಂತರ ನ್ಯಾಚುರಲ್ ಪದ್ಧತಿಯಿಂದ ಮುಗುವಿಗೆ ಸೋಪ್, ಶಾಂಪೂ, ಹೇರ್, ಆಯಿಲ್ ಹೀಗೆ ಮಗುವಿಗೆ ಹಾಗೂ ತಾಯಿಗೆ ಎರಡು ರೀತಿಯ ಕಿಟ್ ತಯಾರಿಸಿ ಫೇಸ್‌ಬುಕ್ ಹಾಗೂ ಆನ್‌ಲೈನ್‌ನಲ್ಲಿ ತನ್ವಿ ನ್ಯಾಚುರಲ್ ಅನ್ನೋ ಹೆಸರಿನಲ್ಲಿ ಮಾರಾಟ ಮಾಡುತ್ತಿದ್ದು ಲಕ್ಷ ಲಕ್ಷ ಹಣ ಗಳಿಸುತ್ತಿದ್ದಾರೆ.