ನಿಮಗೆ ಪ್ರಪಂಚದ ಅತ್ಯಂತ ಹಠವಾದಿ ಮನೆ ಓನರ್ ಗಳ ಬಗ್ಗೆ ಮಾಹಿತಿ ತಿಳಿಸಿ ಕೊಡ್ತೀನಿ. ಈ ವ್ಯಕ್ತಿಗಳ ಹಠದ ಬಗ್ಗೆ ನಿಮಗೆ ಗೊತ್ತಾದ್ರೆ ನಿಜಕ್ಕೂ ನೀವು ಆಶ್ಚರ್ಯ ಪಡ್ತೀರಾ. ತುಂಬಾ ಇಂಟರೆಸ್ಟಿಂಗ್ ಆಗಿರುತ್ತೆ.ಮೊದಲನೆಯದು ಮೊದಲನೆಯ ವ್ಯಕ್ತಿ ಹೆಸರು ಆಸ್ಟಿನ್ ಸ್ಪ್ರಿಕ್ಸ್ 1980 ರಲ್ಲಿ ಆಸ್ಟಿನ್ ಸ್ಪ್ರಿಕ್ಸ್ ಅನ್ನು ವ್ಯಕ್ತಿ ವಾಷಿಂಗ್ಟನ್ ನಲ್ಲಿ ₹1,00,00,000 ಖರ್ಚು ಮಾಡಿ ಒಂದು ಮನೆಯನ್ನ ಖರೀದಿ ಮಾಡುತ್ತಾನೆ ಹಾಗೂ 2001ರಲ್ಲಿ ಆತನಿಗೆ ಒಂದು ಬಂಪರ್ ಆಫರ್ ಬರುತ್ತೆ. ಅದೇನೆಂದರೆ ಆ ಜಾಗದಲ್ಲಿ ಒಂದು ದೊಡ್ಡ ಶಾಪಿಂಗ್ ಕಾಂಪ್ಲೆಕ್ಸ್ ನಿರ್ಮಾಣ ಮಾಡಕ್ಕೆ ಒಬ್ಬ ಬಿಲ್ಡರ್ ಆಸ್ಟಿನ್ ಸ್ಪ್ರಿಕ್ಸ್ ಗೆ 20,00,00,000 ರೂಪಾಯಿಗಳ ಆಫರ್ ಕೊಡ್ತಾನೆ.
ಆದ್ರೆ ಆಫರ್‌ನ ಸ್ಪಷ್ಟ ನಿರಾಕರಣೆ ಮಾಡ್ತಾನೆ. ಆದ್ದರಿಂದ ಆ ಬಿಲ್ಡಿಂಗ್ ಆ ಮನೆ ಎಷ್ಟು ಬೇಕೋ ಅಷ್ಟು ಮಾತ್ರ ಬಿಟ್ಟು ಮಿಕ್ಕಿದ್ದೆಲ್ಲಾ ಜಾಗದಲ್ಲಿ ಒಂದು ದೊಡ್ಡ ಬಿಲ್ಡಿಂಗ್ ಕಟ್ಟುತ್ತಾರೆ.ನಾಲ್ಕು ವರ್ಷಗಳಲ್ಲಿ ಆ ಬಿಲ್ಡಿಂಗ್ ನಿರ್ಮಾಣ ಕಾರ್ಯ ಪೂರ್ತಿ ಆಗುತ್ತೆ. ಆಗಷ್ಟೆ ಆಸ್ಟಿನ್ ಸ್ಪ್ರಿಕ್ಸ್ ಅವರ ಮನೆಯನ್ನು ಒಂದು ಹೋಟೆಲ್ ಆಗಿ ಚೇಂಜ್ ಮಾಡಕ್ಕೆ ಮುಂದಾಗುತ್ತಾನೆ. ಆದರೆ ಬ್ಯಾಂಕ್ ಆತನಿಗೆ ಲೋನ್ ಕೊಡೋದಿಲ್ಲ. ಆಗ ಇನ್ನೊಬ್ಬ ಬಿಲ್ಡರ್ ಆಸ್ಟಿನ್ ಸ್ಪ್ರಿಕ್ಸ್ ಗೆ 10 ಕೋಟಿಯ ಆಫರ್ ನ ಕೊಡ್ತಾನೆ. ಆದರೆ ಅದನ್ನು ಕೂಡ ಆಸ್ಟಿನ್ ಸ್ಪ್ರಿಕ್ಸ್ ನಿರಾಕರಿಸುತ್ತಾನೆ. ಮನೆಯ ಮೂರು ದಿಕ್ಕಿನಲ್ಲೋ ತುಂಬ ದೊಡ್ಡ ದೊಡ್ಡ ಎತ್ತರದ ಕಟ್ಟಡಗಳು ಇರೋದ್ರಿಂದ ಈತನ ಮನೆ ತುಂಬಾ ಚಿಕ್ಕದಾಗಿ ಕಾಣುತ್ತೆ.
ಕೊನೆಯದಾಗಿ ಆಸ್ಟಿನ್ ಸ್ಪ್ರಿಕ್ಸ್ 10,00,00,000 ರುಪಾಯಿಗಳಿಗೆ ಒಪ್ಪೋ ತಾನೇ ಆದರೆ ಆ ಬಿಲ್ಡರ್ ಆಗ 10,00,00,000 ರೂಪಾಯಿಗಳನ್ನು ಕೊಡೋದಕ್ಕೆ ರೆಡಿ ಇರಲಿಲ್ಲ. ವಿಧಿಯಿಲ್ಲದೆ ಆಸ್ಟಿನ್ ಸ್ಪ್ರಿಕ್ಸ್ ₹5,00,00,000 ಗಳಿಗೆ ಒಪ್ಪಿಕೊಂಡು ಮನೆನ ಮಾರಿಬಿಡುತ್ತಾನೆ. ಆದರೆ ಇದೇ ಕೆಲಸ ಮುಂಚೇನೇ ಮಾಡಿದ್ರೆ ಆಸ್ಟಿನ್ ಸ್ಪ್ರಿಕ್ಸ್ ಗೆ 20,00,00,000 ರೂಪಾಯಿಗಳು ಸಿಗ್ತಾ ಇತ್ತು. ಎರಡು ಮಿಸ್ಟರ್ ಯಾಂಗ್ ಒಮ್ಮೆ ಕೆಳಗೆ ಕೊಟ್ಟಿರುವ ವಿಡಿಯೋ ವೀಕ್ಷಣೆ ಮಾಡಿ.
ಯಾಕೆ ಅವರು ಇಷ್ಟು ತಗ್ಗು ಪ್ರದೇಶದಲ್ಲಿ ಮನೆ ಕಟ್ಟಿಕೊಂಡಿದ್ದಾರೆ ಅಂತ ನಿಮಗೆ ಅನಿಸುತ್ತೆ. ಆದರೆ ಇವರ ಮನೆ ಮುಂಚೆ ನಾರ್ಮಲ್ ಆಗಿತ್ತು. ಯಾಂಗ್ 1990ರಲ್ಲಿ ಒಂದು ಮನೆಯನ್ನು ಕಟ್ಟಿಕೊಳ್ಳುತ್ತಾನೆ. ಆದರೆ 2012 ರಲ್ಲಿ ಚೈನಾದಲ್ಲಿ ಅರ್ಬನ್ ಡೆವಲಪ್‌ಮೆಂಟ್ ಜಾಸ್ತಿ ಇಂಪ್ರೂವ್ ಆಗಿದ್ರಿಂದ ದೊಡ್ಡ ದೊಡ್ಡ ಬಿಲ್ಡಿಂಗ್ಗಳನ್ನ ಕಟ್ಟೋದಿಕ್ಕೆ ಮುಂದಾಗ್ತಾರೆ. ಚಿಕ್ಕ ಚಿಕ್ಕ ಮನೆಗಳು ಇರೋರಿಗೆ ನಷ್ಟ ಪರಿಹಾರಗಳನ್ನು ಕೊಟ್ಟು ಮನೆ ಖಾಲಿ ಮಾಡಿಸುತ್ತಾರೆ. ಆದರೆ ಯಾಂಗ್ ಮಾತ್ರ ನೀವು ಕೊಡ್ತಾ ಇರೋದು ನನಗೆ ಸಾಕಾಗುವುದಿಲ್ಲ ಅಂತ ಹೇಳಿ ಮನೆ ಖಾಲಿ ಮಾಡೋದಿಕ್ಕೆ ನಿರಾಕರಿಸುತ್ತಾನೆ.
ಆದ್ದರಿಂದ ಅಲ್ಲಿನ ಲೋಕಲ್ ಗವರ್ನ್ಮೆಂಟ್ ಯಾಂಗ್ ಮನೆಗೆ ವಿದ್ಯುತ್ ಮತ್ತು ನೀರಿನ ಸಪ್ಲೈ ಕಟ್ ಮಾಡ್ತಾರೆ. ಈ ರೀತಿ ಮಾಡಿದರೆ ಅವನು ಮನೆ ಖಾಲಿ ಮಾಡಿದ್ದಾನೆ ಅಂತ ಅನ್ಕೊಂಡಿರ್ತಾರೆ. ಆದ್ರೆ ಯಾಂಗ್ ಮಾತ್ರ ಇದ್ಯಾವುದಕ್ಕೂ ಹೆದರದೆ ಕರೆಂಟ್ ಮತ್ತು ನೀರಿನ ಸಪ್ಲೈ ಕಟ್ ಮಾಡಿದವರ ಮೇಲೆ ಕೇಸ್ ದಾಖಲಿಸುತ್ತೇನೆ. ಆದರೆ ಆ ಕೇಸನ್ನು ಯಾಂಗ್ ಸೋತು ಹೋಗುತ್ತಾನೆ. ಆದ್ದರಿಂದ ಯಾಂಗ್ ನೀರಿಗಾಗಿ ಒಂದು ಕಿಲೋಮೀಟರ್‌ನಷ್ಟು ನಡಕೊಂಡು ಹೋಗಿ ನೀರನ್ನು ತರಬೇಕು ಹಾಗೂ ರಾತ್ರಿ ಸಮಯದಲ್ಲಿ ಬೆಳಕಿಗೋಸ್ಕರ ಕ್ಯಾಂಡಲ್‌ಗಳನ್ನು ಬಳಸಿಕೊಂಡು ಜೀವನ ನಡೆಸುತ್ತಿದ್ದಾನೆ. ಅದರ ಜೊತೆಗೆ ಈಗ ಯಾಂಗ್ ಮನೆ ತುಂಬಾ ತಗ್ಗು ಪ್ರದೇಶದಲ್ಲಿ ಇರುವುದರಿಂದ ಮಳೆ ಬಿದ್ರೆ ಆ ಮಳೆ ನೀರೆಲ್ಲ ಆತನ ಮನೆಯೊಳಗೆ ನುಗ್ಗುತ್ತೆ. ಇಷ್ಟೆಲ್ಲ ಇದ್ರು ಯಾಂಗ್ ಮಾತ್ರ ಆ ಮನೆ ಖಾಲಿ ಮಾಡದೆ ಈಗಲೂ ಸಹ ಅದೇ ಮನೆಯಲ್ಲೇ ಇದ್ದಾನೆ.