ಪೆಟ್ರೋಲ್ ಪಂಪ್ ವ್ಯವಹಾರವು ಭಾರತ ಮತ್ತು ವಿದೇಶಗಳಲ್ಲಿ ಅತ್ಯಂತ ಲಾಭದಾಯಕ ಉದ್ಯಮಗಳಲ್ಲಿ ಒಂದಾಗಿದೆ. ಸುದ್ದಿ ವರದಿಗಳ ಪ್ರಕಾರ, ಭಾರತದಲ್ಲಿ ಸುಮಾರು 64,624 ಪೆಟ್ರೋಲ್ ಪಂಪ್‌ಗಳಿವೆ. ಹಲವಾರು ವ್ಯಕ್ತಿಗಳು ಈ ವ್ಯವಹಾರದಲ್ಲಿ ಹೂಡಿಕೆ ಮಾಡಲು ಸಿದ್ಧರಿದ್ದಾರೆ. ಆದರೆ ಮಾಹಿತಿ ಕೊರತೆಯಿಂದಾಗಿ ಅವರು ತೆರೆಯಲು ಸ್ವಲ್ಪ ತಡವಾಗುತ್ತಿದೆ ಇವತ್ತಿನ ಮಾಹಿತಿಯಲ್ಲಿ ನೀವು ಸಂಪೂರ್ಣವಾಗಿ ಇದರ ನಿಯಮಗಳನ್ನು ನೀವು ತಿಳಿದುಕೊಳ್ಳುತ್ತೀರಾ. ಹಾಗೆ ಈ ಪೆಟ್ರೋಲ್ ಬಂಕ್ ಅನ್ನು ನಿರ್ಮಾಣ ಮಾಡಲು ನಿಮ್ಮಿಂದ ಎಷ್ಟು ಹಣ ಬಂಡವಾಳ ಬೇಕು ಎಂಬುದನ್ನು ನೀವು ತಿಳಿದುಕೊಳ್ಳುತ್ತೀರಾ.
ಪೆಟ್ರೋಲ್ ಪಂಪ್ ಪರವಾನಗಿಯನ್ನು ಪಡೆಯಲು ಮತ್ತು ಪೆಟ್ರೋಲ್ ಪಂಪ್ ಅನ್ನು ಪ್ರಾರಂಭಿಸಲು ಅರ್ಹರಾಗಲು ಆದಾಯ ತೆರಿಗೆ ನಿಯಮಗಳ ಪ್ರಕಾರ ವ್ಯಕ್ತಿಯು ಭಾರತೀಯ ನಾಗರಿಕನಾಗಿರಬೇಕು ಮತ್ತು ಭಾರತದ ನಿವಾಸಿಯಾಗಿರಬೇಕು. ಭಾರತದ ನಿವಾಸಿ ಡಾಕ್ಯುಮೆಂಟ್ ಪಡೆಯಲು, ಒಬ್ಬ ವ್ಯಕ್ತಿಯು ಹಿಂದಿನ ಹಣಕಾಸು ವರ್ಷದಲ್ಲಿ 182 ದಿನಗಳು ಅಥವಾ ಅದಕ್ಕಿಂತ ಹೆಚ್ಚು ಕಾಲ ಭಾರತದಲ್ಲಿ ಇರಬೇಕು. ಅರ್ಜಿದಾರರು 21 ವರ್ಷಕ್ಕಿಂತ ಕಡಿಮೆಯಿಲ್ಲ ಮತ್ತು 55 ವರ್ಷಕ್ಕಿಂತ ಹೆಚ್ಚಿರಬಾರದು. ಅರ್ಜಿದಾರರ ವಯಸ್ಸಿನ ಪುರಾವೆಯನ್ನು 10 ನೇ ತರಗತಿಯ ಬೋರ್ಡ್ ಪ್ರಮಾಣಪತ್ರ ಅಥವಾ ಮಾಧ್ಯಮಿಕ ಶಾಲೆ ಬಿಡುವ ಪ್ರಮಾಣಪತ್ರ ಅಥವಾ ಜನನ ಪ್ರಮಾಣಪತ್ರ ಅಥವಾ ಪಾಸ್‌ಪೋರ್ಟ್ ಅಥವಾ ಚುನಾವಣಾ ಆಯೋಗವು ನೀಡಿದ ವಯಸ್ಸು ಅಥವಾ ಗುರುತಿನ ಚೀಟಿಯ ಪ್ರತಿಯನ್ನು ಸಲ್ಲಿಸುವ ಮೂಲಕ ಮೌಲ್ಯೀಕರಿಸಬೇಕು.
ಅರ್ಜಿದಾರರು ಹುಟ್ಟಿದ ದಿನಾಂಕದ ಪುರಾವೆಯಾಗಿ 10 ನೇ ಅಂಕ ಪಟ್ಟಿಯ ಫೋಟೋಕಾಪಿಯನ್ನು ಲಗತ್ತಿಸಬೇಕು.SC ST OBC ವರ್ಗದ ಅರ್ಜಿದಾರರು 10 ನೇ ತೇರ್ಗಡೆಯಾಗಿದ್ದರೆ ಸಾಮಾನ್ಯ ವರ್ಗಕ್ಕೆ 12 ನೇ ತೇರ್ಗಡೆಯಾಗಿರಬೇಕು.ಅರ್ಜಿದಾರರು ನಗರ ಪ್ರದೇಶಗಳಲ್ಲಿ ಪೆಟ್ರೋಲ್ ಪಂಪ್ ತೆರೆಯಲು ಬಯಸಿದರೆ ಪದವೀಧರರಾಗಿರಬೇಕು. ಸ್ವಾತಂತ್ರ್ಯ ಹೋರಾಟಗಾರರ ವಿಷಯದಲ್ಲಿ ಕನಿಷ್ಠ ವಿದ್ಯಾರ್ಹತೆಯ ಮಾನದಂಡವು ಅನ್ವಯಿಸುವುದಿಲ್ಲ. ಇನ್ನು ಪೆಟ್ರೋಲ್ ಬಂಕ್ ಓಪನ್ ಮಾಡಲು ತಗಲುವ ಸಾಮಾನ್ಯ ಕರ್ಚು ನೋಡುವುದಾದರೆ, ಇದು ನಿಮ್ಮ ಏರಿಯಾ ಅಥವಾ ಜಾಗದ ಮೇಲೆ ಅವಲಂಬಿತವಾಗಿರುತ್ತದೆ ಅಂದರೆ ಹಳ್ಳಿ ಮತ್ತು ನಗರಗಳಿಗೆ ಸಂಬಂಧಿಸಿ ಪೆಟ್ರೋಲ್ ಬೆಲೆಗಳು ವ್ಯತ್ಯಾಸವನ್ನು ಹೊಂದಿರುತ್ತದೆ.
ಪೆಟ್ರೋಲ್ ಪಂಪ್ ಅನ್ನು ಪ್ರಾರಂಭಿಸಲು ಅರ್ಜಿದಾರರು ಸಾಮಾನ್ಯ ಪೆಟ್ರೋಲ್ ಪಂಪ್‌ಗಳಲ್ಲಿ ಕನಿಷ್ಠ ರೂ.25 ಲಕ್ಷಗಳನ್ನು ಮತ್ತು ಗ್ರಾಮೀಣ ಪೆಟ್ರೋಲ್ ಪಂಪ್‌ಗಳ ಸಂದರ್ಭದಲ್ಲಿ ರೂ.12 ಲಕ್ಷಗಳನ್ನು ಹೂಡಿಕೆ ಮಾಡುವ ಸಾಮರ್ಥ್ಯವನ್ನು ನೀವು ಹೊಂದಿರಬೇಕು. ನೀವು ಪೆಟ್ರೋಲ್ ಪಂಪ್ ತೆರೆಯಲು ಯಾವ ಯಾವ ಅರ್ಜಿಗಳು ನಿಮಗೆ ಬೇಕಾಗುತ್ತದೆ ಎಂಬುದನ್ನು ನಾವು ತಿಳಿದುಕೊಳ್ಳೋಣ. ನಿಮ್ಮ ಹತ್ತಿರ ಮೊದಲಿಗೆ ಖಾಲಿ ಜಾಗ ಇರಬೇಕುಆಮೇಲೆ ನೀವು ವೆಬ್ಸೈಟ್ಗೆ ಭೇಟಿ ಕೊಟ್ಟು ಅರ್ಜಿಯನ್ನು ಸಲ್ಲಿಸಬಹುದು. ಮುಖ್ಯವಾಗಿ ನೀವು ಪೆಟ್ರೋಲ್ ಬಂಕ್ ಓಪನ್ ಮಾಡುವಲ್ಲಿ ಗ್ರೀನ್ ಬೆಲ್ಟ್ ಏರಿಯಾಗಳು ಇರಬಾರದು. ಒಂದು ವೇಳೆ ಜಾಗ ನಿಮ್ಮ ಸ್ವಂತ ವಿಲ್ಲದಿದ್ದರೆ ನೀವು ಸ್ವಂತ ಜಾಗದ ಮಾಲೀಕರಿಂದ NOC ತಗೆದುಕೊಳ್ಳಬೇಕು. ಇಷ್ಟೆಲ್ಲಾ ಆದ್ಮೇಲೆ ನಿಮಗೆ ಪೆಟ್ರೋಲ್ ಪಂಪ್ ತೆರೆಯಲು ಅವಕಾಶ ಸಿಗುತ್ತದೆ ನಮಗೆಲ್ಲ ಗೊತ್ತಿರುವ ಹಾಗೆ ನಾವು ತಿಂಗಳಿಗೆ ಈ ವ್ಯವಹಾರದಲ್ಲಿ ಏನಿಲ್ಲ ಎಂದರು ಲಕ್ಷ ನೋಗಟ್ಟಲೆ ವ್ಯವಹಾರವನ್ನು ಮಾಡಬಹುದು