ದಾನ ಮತ್ತು ಪಾಲುಪತ್ರ ಯಾವುದು ಶ್ರೇಷ್ಠ ವಿಭಾಗ ಪತ್ರ ಮತ್ತು ದಾನ ಪತ್ರ. ನೋಡಿ ಸ್ನೇಹಿತರೆ ಒಂದು ಕುಟುಂಬ ಅಂತ ಅಂದಮೇಲೆ ಆಸ್ತಿ ಜಮೀನು ಮನೆ ಅಂತ ಇರುತ್ತೆ. ಈಗ ಆಸ್ತಿ ಪತ್ರವನ್ನು ನಾವು ವಿಭಾಗ ಮಾಡುವಾಗ ವಿಭಜನೆಯನ್ನು ಮಾಡುವಾಗ ನಾವು ದಾನ ಪತ್ರದ ಮೂಲಕ ಮಾಡಬೇಕು ಅಥವಾ ವಿಭಾಗ ಪತ್ರದ ಮೂಲಕ ಮಾಡಬೇಕು ಅನ್ನುವ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ. ಎಲ್ಲರಲ್ಲೂ ಇದು ಒಂದು ಗೊಂದಲ ಇದ್ದೇ ಇರುತ್ತದೆ. ಆಸ್ತಿ ಪಾಲು ಮಾಡುವಾಗ ಯಾವ ವಿಭಾಗದಿಂದ ಪಾಲು ಮಾಡಿದ್ರೆ ಅಂದ್ರೆ ದಾನ ಪತ್ರ ಮತ್ತು ಪಾಲು ಪತ್ರ ಇದರಲ್ಲಿ ಯಾವುದರಿಂದ ಭಾಗ ಮಾಡಿದ್ರೆ ಉತ್ತಮವಾಗಿರುತ್ತದೆ ಅಂತ ತಿಳಿದುಕೊಳ್ಳೋಣ.
ಹಾಗಾದ್ರೆ ದಾನ ಪತ್ರ ಮತ್ತು ವಿಭಾಗ ಪತ್ರ ಏನು ಇದರ ಎರಡರ ನಡುವೆ ಇರುವ ವ್ಯತ್ಯಾಸವೇನು ಅಂತ ತಿಳಿದುಕೊಳ್ಳೋಣ. ಈ ಪೂರ್ತಿ ಲೇಖನವನ್ನು ಓದಿ ನಿಮಗೆ ಪೂರ್ತಿ ಮಾಹಿತಿ ಸಿಗುತ್ತದೆ. ಒಂದು ಕುಟುಂಬದಲ್ಲಿ ಆಸ್ತಿಯನ್ನು ಪಾಲು ಮಾಡುವಾಗ ವಿಭಾಗ ಪತ್ರದ ಮೂಲಕ ಮಾಡುತ್ತಾರೆ. ಇನ್ನೊಂದು ಅಂದ್ರೆ ಇದನ್ನು ಸಹ ನೀವು ಮಾಡಬಹುದು ಸ್ವಲ್ಪ ಹೆಚ್ಚು ಹಣ ಖರ್ಚಾಗುತ್ತೆ. ಆದರೂ ಹೆಚ್ಚು ಹಣ ಖರ್ಚಾದ್ರೂ ಸಹ ದಾನ ಪತ್ರದ ಮೂಲಕ ಮಾಡುತ್ತಾರೆ. ನಿಜವಾಗಲೂ ಹೇಳ್ಬೇಕಂದ್ರೆ ದಾನ ಪತ್ರ ಮತ್ತು ವಿಭಾಗ ಪತ್ರ ಇವೆರಡರ ನಡುವೆ ಅಜಗಜಾಂತರ ವ್ಯತ್ಯಾಸವಿದೆ.
ನೋಡಿ ಕೆಲಸ ಸಂದರ್ಭದಲ್ಲಿ ದಾನ ಪತ್ರ ಸಹಾಯಕ್ಕೆ ಬಂದರೆ ಇನ್ನೂ ಕೆಲವು ಸಂದರ್ಭದಲ್ಲಿ ವಿಭಾಗ ಪತ್ರವೂ ಕೆಲಸಕ್ಕೆ ಬರುತ್ತದೆ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಯಾವುದಾದರೂ ಒಂದನ್ನು ಆಯ್ಕೆ ಮಾಡಲು ಸಾಧ್ಯವಿಲ್ಲ ನಮಗೆ ಇದೆರಡು ಬೇಕು. ಆದರೆ ಇವೆರಡರ ನಡುವಿನ ವ್ಯತ್ಯಾಸವನ್ನು ನಾವು ತಿಳಿದುಕೊಳ್ಳೋಣ. ಈಗ ದಾನ ಪತ್ರ ಅಂತ ಅಂದ್ರೆ ಪುಕ್ಕಟೆ ಕೊಡುವುದು ಅಂತ ಅರ್ಥ ಕೊಡುತ್ತೆ. ಈಗ ಏನು ಅಂತಂದ್ರೆ ಒಬ್ಬ ವ್ಯಕ್ತಿ ತನ್ನ ಕಾಲದ ನಂತರ ಅಥವಾ ತಾನು ಇರುವಾಗಲೇ ತನ್ನ ಎಲ್ಲಾ ಆಸ್ತಿಯನ್ನ ಇನ್ನೊಬ್ಬರಿಗೆ ಪುಕ್ಕಟೆಯಾಗಿ ಅವನು ಮನಸ್ಸಿಗೆ ಬಂದ ವ್ಯಕ್ತಿಗೆ ಪುಕ್ಕಟೆಯಾಗಿ ಕೊಡೋದು ಅಂತ ಹೇಳ್ತಿವಲ್ವ ಅದಕ್ಕೆ ನಾವು ದಾನ ಅಂತ ಹೇಳ್ತಿವಿ. ಈ ಸಂದರ್ಭದಲ್ಲಿ ದಾನ ಪತ್ರ ಸಹಾಯ ಆಗುತ್ತೆ.
ಹಾಗಾದ್ರೆ ವಿಭಾಗ ಪತ್ರ ಅಂದ್ರೆ ಈ ಆಸ್ತಿಯನ್ನು ಹಂಚಿಕೊಳ್ಳುವುದು ಎಂದರ್ಥ. ಒಂದು ಮನೆಯಲ್ಲಿ ಈಗ ಅಣ್ಣತಮ್ಮಂದಿರು ನಾಲ್ಕು ಜನ ಇದ್ರೆ ಆಸ್ತಿಯನ್ನೆಲ್ಲ ಸಮನಾಗಿ ಪಾಲ್ ಹಂಚಿಕೊಳ್ಳುತ್ತಾರೆ ಅಲ್ವಾ ಅದಕ್ಕೆ ಈ ವಿಭಾಗ ಪತ್ರ ವಿಭಾಗ ಸಹಾಯ ಮಾಡುತ್ತದೆ. ದಾನ ಪತ್ರಗಳಲ್ಲಿ ಎರಡು ಪ್ರಕಾರಗಳು ಕಾಣುತ್ತವೆ. ಅವು ಯಾವುದು ಅಂತಂದ್ರೆ ಶರತ್ತು ರಹಿತ ದಾನ ಪತ್ರ ಮತ್ತು ಬೇ ಶರತ್ತು ದಾನ ಪತ್ರ. ವಿಭಾಗ ಪತ್ರದಲ್ಲಿ ಆಸ್ತಿಯನ್ನು ಎಲ್ಲರೂ ಸಮನಾಗಿ ಕುಟುಂಬದ ಒಳಗೆ ಹಂಚಿಕೊಳ್ಳುವುದರಿಂದ ಇಲ್ಲಿ ಯಾವುದೇ ಪ್ರಕಾರಗಳು ಕಾಣಿಸುವುದಿಲ್ಲ.
ಇನ್ನು ದಾನ ಪತ್ರ ಒಬ್ಬ ಮನುಷ್ಯನು ತನ್ನ ಆಸ್ತಿಯನ್ನು ಯಾರಿಗೆ ಬೇಕಾದರೂ ದಾನ ಮಾಡಬಹುದು. ಉದಾಹರಣೆಗೆ ಒಬ್ಬ ವ್ಯಕ್ತಿ ತನ್ನ ಆಸ್ತಿಯನ್ನ ಹೆಂಡತಿಗೆ ಆಗಲಿ ಅಥವಾ ಮಕ್ಕಳಿಗಾಗಲಿ ಅಥವಾ ಮನೆ ಒಳಗಿನ ಯಾವುದೇ ವ್ಯಕ್ತಿಗಾಗಲಿ ಅಥವಾ ಮನೆಯ ಹೊರಗಿನ ಅಪರಿಚಿತ ವ್ಯಕ್ತಿಯು ಕೂಡ ಅವನು ದಾನ ಮಾಡಬಹುದು ಸ್ವಯಾರ್ಜಿತ ಆಸ್ತಿಯನ್ನು. ಈ ವಿಭಾಗ ಪತ್ರದಲ್ಲಿ ಹಾಗೆ ಮಾಡಲು ಸಾಧ್ಯವಿಲ್ಲ ಏನಿದ್ದರೂ ಕುಟುಂಬ ಸದಸ್ಯರು ಮಾತ್ರ ಸಂಬಂಧಪಟ್ಟ ಏನೇ ಆದರೂ ಏನೇ ವಿಭಾಗ ಆದರೂ ಕುಟುಂಬದ ಜನರಲ್ಲಿ ಆಗಬೇಕು. ಹೊರಗಿನವರು ಬರೋಹಾಗಿಲ್ಲ. ದಾನ ಪತ್ರ ಹಾಗೂ ವಿಭಾಗ ಪತ್ರ ಏನೆಂದರೇನು ಅದರ ನಡುವಿನ ವ್ಯತ್ಯಾಸವೇನು ಅದರ ಬಗ್ಗೆ ಮಾಹಿತಿಯನ್ನು ತಿಳಿದುಕೊಂಡ್ರಲ್ವಾ. ಸ್ನೇಹಿತರೆ ನಮ್ಮ ಮಾಹಿತಿ ಇಷ್ಟವಾದಲ್ಲಿ ಲೈಕ್ ಮಾಡಿ ಹಾಗೂ ಶೇರ್ ಮಾಡಿ.