ಅಪ್ಪಿ ತಪ್ಪಿಯೂ ಶ್ರಾವಣ ಮಾಸದಲ್ಲಿ ಈ ತಪ್ಪುಗಳನ್ನ ಮಾಡಲೇಬೇಡಿ. ಶ್ರಾವಣ ಮಾಸವು ಶಿವನಿಗೆ ಅತ್ಯಂತ ಪ್ರಿಯವಾದ ತಿಂಗಳು. ಈ ತಿಂಗಳಿನ ಪ್ರತಿಯೊಂದು ದಿನವು ಹಬ್ಬದಂತೆ ಭಾಸವಾಗುತ್ತೆ. ಈ ಬಾರಿ ಆ ಶ್ರಾವಣ ಮಾಸವು ಆಗಸ್ಟ್ ಐದರಂದು ಅಂದ್ರೆ ಶ್ರಾವಣ ಮಾಸ ಭಾನುವಾರದಿಂದ ಆರಂಭ ಆಗಲಿದೆ. ಈ ಸಮಯದಲ್ಲಿ ನೀವು ಶಿವನ ಮೆಚ್ಚಿಸಲು ಬಯಸಿದರೆ ನೀವು ಶಿವನಿಗೆ ರುದ್ರಾಭಿಷೇಕ ಮತ್ತು ಜಲಾಭಿಷೇಕವನ್ನು ಮಾಡಬೇಕು. ಮತ್ತೊಂದೆಡೆ ಶ್ರಾವಣ ಮಾಸದಲ್ಲಿ ಕೆಲವೊಂದು ಕೆಲಸಗಳನ್ನು ತಪ್ಪಿಯೂ ಮಾಡಬಾರದು ಅಂತ ಹೇಳಲಾಗಿದೆ. ಶ್ರಾವಣ ಮಾಸದಲ್ಲಿ ನಾವು ಈ ತಪ್ಪುಗಳನ್ನು ಮಾಡುವುದರಿಂದ ಶಿವನ ಕೋಪಕ್ಕೆ ಗುರಿಯಾಗುವಂತೆ ಆಗಬಹುದು. ಶ್ರಾವಣ ಮಾಸದಲ್ಲಿ ನಾವು ಯಾವೆಲ್ಲಾ ತಪ್ಪುಗಳನ್ನು ಮಾಡಬಾರದು ತಿಳಿಯೋಣ.
ಶ್ರಾವಣ ಮಾಸದಲ್ಲಿ ತಪ್ಪಿಯೂ ನೀವು ಈ ತಪ್ಪುಗಳನ್ನು ಮಾಡಿದಿರಿ ತಿನ್ನುವ ವಸ್ತುಗಳ ಬಗ್ಗೆ ವಿಶೇಷ ಕಾಳಜಿ ಇರಲಿ, ಶ್ರಾವಣ ಮಾಸದಲ್ಲಿ ಯಾವುದೇ ವ್ಯಕ್ತಿ ತಪ್ಪಾಗಿಯೂ ಮಾಂಸ ಮತ್ತು ಮದ್ಯ ಸೇವಿಸಬಾರದು. ಈ ಸಮಯದಲ್ಲಿ ಈ ವಸ್ತುಗಳನ್ನ ಸೇವಿಸುವುದರಿಂದ ಶುಭಫಲ ನೀಡುವುದಿಲ್ಲ. ಇವುಗಳನ್ನು ಹೊರತುಪಡಿಸಿ ಶ್ರಾವಣ ಮಾಸದಲ್ಲಿ ಬೆಳ್ಳುಳ್ಳಿ, ಈರುಳ್ಳಿ ಮತ್ತು ಬದನೆಕಾಯಿಯಂತಹ ಆಹಾರವನ್ನ ಸೇವಿಸೋದುನ್ನು ತಪ್ಪಿಸಬೇಕು. ಎಣ್ಣೆಯನ್ನು ಹಚ್ಚಬೇಡಿ. ಧಾರ್ಮಿಕ ನಂಬಿಕೆಗಳ ಪ್ರಕಾರ ಶ್ರಾವಣ ಮಾಸದಲ್ಲಿ ಯಾವುದೇ ವ್ಯಕ್ತಿ ದೇಹಕ್ಕೆ ಎಣ್ಣೆಯನ್ನು ಹಚ್ಚಬಾರದು. ಈ ತಿಂಗಳಲ್ಲಿ ಎಣ್ಣೆಯನ್ನು ದಾನ ಮಾಡುವುದು ತುಂಬಾ ಮಂಗಳಕರವೆಂದು ಪರಿಗಣಿಸಲಾಗಿದೆ. ಹಾಲು ಸೇವಿಸುವುದನ್ನು ತಪ್ಪಿಸಿ ಪವಿತ್ರವಾದ ಶ್ರಾವಣ ಮಾಸದಲ್ಲಿ ಶಿವಲಿಂಗಕ್ಕೆ ಅಭಿಷೇಕ ಮಾಡುವುದು ಶಿವನ ಪೂಜೆಯನ್ನು ಮಾಡುವುದಕ್ಕಿಂತಲೂ ಹೆಚ್ಚಿನ ಪ್ರಯೋಜನವನ್ನು ನೀಡುತ್ತದೆ.
ಈ ಮಾಸದಲ್ಲಿ ಶಿವಲಿಂಗಕ್ಕೆ ನೀರಿನ ಅಭಿಷೇಕವನ್ನು ಹಾಲಿನ ಅಭಿಷೇಕವನ್ನ ಎಳನೀರಿನ ಅಭಿಷೇಕವನ್ನು ಹೀಗೆ ನಾನಾ ರೀತಿಯ ಅಭಿಷೇಕವನ್ನ ಮಾಡಲಾಗುತ್ತೆ. ಶಿವಲಿಂಗಕ್ಕೆ ಶ್ರಾವಣ ಮಾಸದಲ್ಲಿ ಶಿವಲಿಂಗಕ್ಕೆ ಅಭಿಷೇಕ ಮಾಡುವುದರಿಂದ ಈ ರೀತಿಯಾಗಿ ಈ ಮಾಸದಲ್ಲಿ ಹಾಲನ್ನು ಸೇವಿಸಬಾರದು. ಬದಲಾಗಿ ಶಿವನಿಗೆ ಅರ್ಪಿಸಬೇಕು. ಯಾವುದೇ ರೀತಿಯ ವ್ಯಕ್ತಿಯನ್ನ ಗೌರವಗೊಳಿಸಬಾರದು. ಧಾರ್ಮಿಕ ನಂಬಿಕೆಗಳ ಪ್ರಕಾರ ಶ್ರಾವಣ ಮಾಸದಲ್ಲಿ. ಯಾವುದೇ ವ್ಯಕ್ತಿಯನ್ನ ತಪ್ಪಾಗಿ ಅಗೌರವಗೊಳಿಸಬಾರದು ಮತ್ತು ಇತರೆ ವ್ಯಕ್ತಿಯ ಬಗ್ಗೆ ನಾವು ನಕಾರಾತ್ಮಕ ಆಲೋಚನೆಗಳನ್ನು ನಾವು ನಮ್ಮ ಮನಸ್ಸಿನಲ್ಲಿ ತಂದುಕೊಳ್ಳಬಾರದು ಹಾಗೂ ಇತರರ ಬಗ್ಗೆ ನಿಂದನೀಯ ಪದಗಳನ್ನು ನಾವು ಬಳಸಬಾರದು..