ನಮಗೆ ಗೊತ್ತಿರುವ ಹಾಗೆ ಬಿಎಂಟಿಸಿಯಲ್ಲಿ ಹೋಗುವುದು ಎಂದರೆ ಅದು ಬೆಂಗಳೂರಿನಲ್ಲಿ ಬಹಳ ಕಷ್ಟವಾಗುತ್ತದೆ. ಏಕೆಂದರೆ ಕೆಲವೊಮ್ಮೆ ಈ ಬಸ್ಸಿನಲ್ಲಿ ಬಹಳಷ್ಟು ಜನ ಇರುವುದರಿಂದ ನಮಗೆ ಒಂದು ರೀತಿಯಿಂದ ಹೆಚ್ಚು ಜನ ಇರುವುದರಿಂದ ನಮಗೆ ಸ್ವಲ್ಪ ಸಮಸ್ಯೆಗಳು ಉಂಟಾಗಬಹುದು ಹಾಗೆ ಇತ್ತೀಚಿನ ದಿನಗಳಲ್ಲಿ ಏರುವಂತಹ ತಾಪಮಾನದಲ್ಲಿ ಬಿಎಂಟಿಸಿ ಬಸ್ಸಿನಲ್ಲಿ ಹೋದರೆ ನಮಗೆ ಬಹಳಷ್ಟು ಸಮಸ್ಯೆ ಜಾಸ್ತಿ ಆಗುತ್ತದೆ ಆದರೆ ಈ ಬಸ್ಸಿನಲ್ಲಿ ಮಾತ್ರ ಜನ ಹೋಗಲು ಯಾವಾಗಲೂ ಮುಂದೆ ಬರುತ್ತಾರೆ. ಏಕೆಂದರೆ ಈ ಬಸ್ಸಿನಲ್ಲಿ ಇರುವಂತಹ ವಾತಾವರಣ ಈ ಬಸ್ಸಿನಲ್ಲಿ ಇರುವಂತಹ ಚಾಲಕ ಹಾಗೂ ಕಂಡಕ್ಟರ್ ಸೇರಿ ಇಲ್ಲಿ ಸಣ್ಣಪುಟ್ಟ ಗಿಡಗಳನ್ನು ಬಸ್ಸಿನಲ್ಲಿ ಬೆಳೆಸಿದ್ದಾರೆ.
ಇದೇ ಕಾರಣಕ್ಕಾಗಿ ಸಾಕಷ್ಟು ಜನ ಆಕರ್ಷಿತರಾಗಿ ಈ ಈ ಬಸ್ಸನ್ನು ಹತ್ತಲು ಯಾವಾಗಲೂ ಮುಂದೆ ಇರುತ್ತಾರೆ. ಕೆಲವೊಮ್ಮೆಚಾಲಕ ಹಾಗೂ ಕಂಡಕ್ಟರ್ ಕೆಲಸ ಮುಗಿಸಿಕೊಂಡು ಯಾವಾಗ ಮನೆಗೆ ಹೋಗುತ್ತೇವೆ ಎಂದು ಕಾಯುತ್ತಿರುತ್ತಾರೆಆದರೆ ಇನ್ನೂ ಕೆಲವೊಂದಿಷ್ಟು ಜನ ಆ ಬಸ್ಸುಗಳನ್ನು ಮನೆ ದೇವರಂತೆ ಕಾಪಾಡಿಕೊಳ್ಳುತ್ತಾರೆ. ಏಕೆಂದರೆ ತಾವು ಊಟ ಮಾಡುವ ಆಹಾರದಿಂದ ಹಿಡಿದು ಉಡುವ ಬಟ್ಟೆಯ ತನಕ ಎಲ್ಲವೂ ಕೂಡ ಅದೇ ಬಸ್ಸಿನಿಂದ ಗಳಿಸಿದ್ದಾರೆ ಹಾಗಾಗಿ ಸ್ವಲ್ಪ ಜನ ಆ ಬಸ್ಸನ್ನೇ ಮನೆ ದೇವರೆಂದು ಪ್ರಾರ್ಥಿಸಿ, ಬಸ್ಸನ್ನು ಹೊಡೆಯುತ್ತಾರೆ ಹಾಗೆ ಅದೇ ರೀತಿ ಪ್ರೀತಿಯಿಂದ ಕೂಡ ನೋಡಿಕೊಳ್ಳುತ್ತಾರೆ.
ಇದಕ್ಕೆ ಉದಾಹರಣೆಯಾಗಿ ಇವತ್ತಿನ ಮಾಹಿತಿ. ಇದರ ಬಗ್ಗೆ ಚಾಲಕನನ್ನು ವಿಚಾರಿಸಿದಾಗ ಆ ಚಾಲಕ ಹೇಳುವುದು ಒಂದೇ, ಈ ಗಿಡವನ್ನು ನಾನು ನೆಟ್ಟುವುದರಿಂದ ನನಗೆ ಸಾಕಷ್ಟು ಖುಷಿ ಸಿಕ್ಕಿದೆ. ಕೆಲವೊಮ್ಮೆ ಈ ಗಿಡಗಳನ್ನು ನೋಡಿದರೆ ನನ್ನ ಮನಸ್ಸಿಗೆ ಏನೋ ಒಂತರ ಖುಷಿ ಸಿಗುತ್ತದೆ ಹಾಗೆ ಈ ಸಲ ಈ ಗಿಡಗಳನ್ನು ಬಹಳಷ್ಟು ಪ್ರೀತಿಯಿಂದ ನೋಡಿಕೊಳ್ಳುತ್ತಾರೆ ಯಾವಾಗ ಬೇಕು ಅವಾಗ ಪ್ರತಿದಿನ ನೀರನ್ನು ಹೊಡೆಯುತ್ತಾರೆ. ತಮ್ಮ ಮನೆಯಲ್ಲಿ ಇರುವಂತಹ ಗಿಡಗಳಿಂದ ಜಾಸ್ತಿ ಪ್ರೀತಿ ಈ ಬಸ್ಸಿನಲ್ಲಿ ಇರುವಂತಹ ಗಿಡಗಳಿಗೆ ಮಾಡುತ್ತಾರೆ ಎಂದು ಹೇಳಿದ್ದಾರೆ. ಅದೆಷ್ಟೇ ಅಲ್ಲದೆ ಇನ್ನೊಂದು ಮನಸ್ಸು ಮುಟ್ಟುವಂತಹ ಮಾತುಗಳು ಅವರು ಮಾತನಾಡಿದ್ದಾರೆ.
ಇದರ ಜೊತೆಗೆ ಈ ಬಸ್ಸಿನಲ್ಲಿ ಪ್ರಯಾಣ ಮಾಡುವಂತಹ ಪ್ರಯಾಣಿಕರಿಗೆ ಯಾವುದೇ ರೀತಿಯಿಂದ ತೊಂದರೆ ಆಗಬಾರದು ಎಂದು ಈ ಬಸ್ಸಿನಲ್ಲಿ ಕುಡಿಯಲು ನೀರನ್ನು ಸಹ ಈ ಚಾಲಕ ಹಾಗೂ ಕಂಡಕ್ಟರ್ ಇಟ್ಟಿದ್ದಾರೆ ಇದೇ ಕಾರಣಕ್ಕಾಗಿ ಜನ ಇವರನ್ನು ಹೆಚ್ಚು ಪ್ರೀತಿಸುತ್ತಾರೆ ಈಗಿನ ಬಿಸಿಗೆ ಕಾಲದಲ್ಲಿ ನೀರು ಇಲ್ಲ ಎಂದರೆ ನಮಗೆ ಬಹಳಷ್ಟು ಸಮಸ್ಯೆವಾಗುತ್ತದೆ ಈ ಸಮಸ್ಯೆಯನ್ನು ನೀಗಿಸಲು ಇವರು ಸಹಾಯ ಮಾಡುತ್ತಿದ್ದಾರೆ. ಕಾರ್ಯವನ್ನು ನೋಡಿದ ಹಿರಿಯ ಅಧಿಕಾರಿಗಳು ಕೂಡ ಇವರಿಗೆ ಬಹಳಷ್ಟು ಪ್ರಶಂಸೆಯನ್ನು ಕೊಟ್ಟಿದ್ದಾರೆ. ಹಾಗೆ ಇವರ ಬಗ್ಗೆ ನೀವು ಇನ್ನೂ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಬೇಕು ಎಂದರೆ ಈ ಕೆಳಗೆ ನೀಡಿರುವ ಲಿಂಕ್ ಅನ್ನು ಓಪನ್ ಓಪನ್ ಮಾಡಿಕೊಳ್ಳಿ.