WhatsApp Group Join Now

ಅನ್ನ ಭಾಗ್ಯ ಯೋಜನೆಯ ಫಲಾನುಭವಿಗಳಿಗೆ ಸರ್ಕಾರದಿಂದ ಒಂದು ಭರ್ಜರಿ ಗುಡ್ ನ್ಯೂಸ್ ಇದೆ. ಮನೆಯಲ್ಲಿ ಅನ್ನ ಭಾಗ್ಯ ಅಕ್ಕಿಯನ್ನ ಕ್ಯಾನ್ಸಲ್ ಅಂತ ಹಾಕಿದೀರಾ? ಮತ್ತೆ ಅನ್ನ ಭಾಗ್ಯ ಯೋಜನೆಯ ಫಲಾನುಭವಿಗಳಿಗೆ ಇದು ಹೇಗೆ ಗುಡ್‌ನ್ಯೂಸ್ ಆಗುತ್ತೆ. ಉಚಿತ ಅಕ್ಕಿ ಹಣ ಕ್ಯಾನ್ಸಲ್ ಆದರೆ ಅದು ಬ್ಯಾಡ್ ನ್ಯೂಸ್ ಅಲ್ವಾ? ಹೇಗೆ ಗುಡ್‌ನ್ಯೂಸ್ ಆಗುತ್ತೆ ಅಂತಾನು ಕೇಳಬಹುದು ಅದಕ್ಕೆ ಉತ್ತರವನ್ನು ಕೊಡ್ತೀನಿ ಆದರೆ ಇದು ಎಲ್ಲ ಅನ್ನಭಾಗ್ಯ ಯೋಜನೆ ಫಲಾನುಭವಿಗಳಿಗೆ ಗುಡ್ ನ್ಯೂಸ್ ಅಂತ ಹೇಳಬಹುದು. ಅನ್ನಭಾಗ್ಯ ಯೋಜನೆಯ ಹಣವನ್ನ ಬಂದ್ ಮಾಡ್ತಾ ಇದ್ದಾರೆ. ಅಂದ್ರೆ ಕ್ಯಾನ್ಸಲ್ ಮಾಡ್ತಿದ್ದಾರೆ ಅಂದ್ರೆ ಉಚಿತವಾಗಿ ಅಕ್ಕಿ ಬದಲಿಗೆ ಹಣವನ್ನು ಕೊಡುತ್ತಿದ್ದರಲ್ಲ ಇದು ಅತಿ ಶೀಘ್ರದಲ್ಲಿ ಅತಿ ಬೇಗನೆ ಬಂದ್ ಮಾಡುವಂತ ಅಂದ್ರೆ ಕ್ಯಾನ್ಸಲ್ ಮಾಡುವಂಥ ಸಾಧ್ಯತೆ ಇದೆ.

ಇನ್ಮುಂದೆ ಒಬ್ಬರಿಗೆ 10 ಕೆಜಿ ಅಕ್ಕಿ ಸಿಗುತ್ತದೆ. ಸದ್ಯದಲ್ಲೇ ಅನ್ನಭಾಗ್ಯ ಯೋಜನೆ ಅಡಿಯಲ್ಲಿ ಉಚಿತವಾಗಿ ಹಣವನ್ನ ಕೊಡೋದನ್ನ ಅಂದ್ರೆ ನಿಲ್ಲಿಸಿ ಅದರ ಬದಲಾಗಿ ಡೈರೆಕ್ಟ್ ಆಗಿ ಅಕ್ಕಿಯನ್ನೇ ಕೊಡುವಂತಹ ಎಲ್ಲ ಸಿದ್ದತೆಗಳು ಕೂಡ ನಡೀತಾ ಇದೆ. ಕರ್ನಾಟಕ ಸರ್ಕಾರದಿಂದ ಅಕ್ಕಿಯನ್ನು ಕೊಡುವಂತೆ ಪ್ರಸ್ತಾವನೆಯನ್ನು ಭಾರತೀಯ ಆಹಾರ ನಿಗಮಕ್ಕೆ ಅಂದ್ರೆ ಕೇಂದ್ರ ಸರ್ಕಾರದ ಭಾರತೀಯ ಆಹಾರ ನಿಗಮಕ್ಕೆ ಪ್ರಸ್ತಾವನೆ ಕಳಿಸಿದರು. ಕೇಂದ್ರ ಸರ್ಕಾರ ಈವಾಗ ಅಕ್ಕಿಯನ್ನ ಕೊಡೋದಕ್ಕೆ ಒಪ್ಪಿಗೆಯನ್ನು ಕೊಟ್ಟಿದೆ. ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಕೆಜಿಗೆ ಇಪ್ಪತೆಂಟು ರೂಪಾಯಿಯಂತೆ 2025ವರೆಗೂ ಅಂದ್ರೆ ಮಾರ್ಚ್ 2025 ರವರೆಗೂ ಕೊಡೋದಕ್ಕೆ ಒಪ್ಪಿಗೆ ಕೊಟ್ಟಿದೆ.

ಹಾಗಾಗಿ ಅನ್ನಭಾಗ್ಯ ಯೋಜನೆ ಅಡಿಯಲ್ಲಿ 5,00,00,000 ಹಣದ ಬದಲಿಗೆ ಉಚಿತವಾಗಿ ಐದು ಕೆ ಜಿ ಅಕ್ಕಿಯನ್ನೇ ಕೊಡುವಂತಹ ಎಲ್ಲ ಸಾಧ್ಯತೆ ಕೂಡ ಇದೆ. ಒಬ್ಬರಿಗೆ ಇನ್ನು ಮುಂದೆ 10 ಕೇಜಿ ಅಕ್ಕಿ ಸಿಗುತ್ತೆ. ನೀವು ನೀವು ಈಗಾಗಲೇ ಪಡುತ್ತಿರುವಂತ ಅಕ್ಕಿ ಕೇಂದ್ರ ಸರ್ಕಾರದ ಗರೀಬ್ ಕಲ್ಯಾಣ್ ಯೋಜನೆ ಅಡಿಯಲ್ಲಿ ಕೊಟ್ಟಿರುವಂತ ಅಕ್ಕಿ ಆಗಿರುತ್ತೆ ಅಂದ್ರೆ ಒಬ್ಬರಿಗೆ ಮೂರು ಕೆ ಜಿ ಅಕ್ಕಿ ಮತ್ತು ಎರಡು ಕೆಜಿ ರಾಗಿಯನ್ನು ಸದ್ಯಕ್ಕೆ ಕೊಡ್ತಿದ್ದಾರೆ ಅಂದ್ರೆ ಕೇಂದ್ರ ಸರ್ಕಾರದಿಂದ ಮತ್ತೆ ಅಂತ್ಯೋದಯ ಕಾರ್ಡ್ ಇರುವಂತವರಿಗೆ 20 ಕೆಜಿ ಅಕ್ಕಿ ಮತ್ತು 15 ಕೆಜಿ ರಾಗಿ ಒಟ್ಟು ಮೂವತೈದು ಕೆಜಿ ಆಹಾರ ಧಾನ್ಯವನ್ನ ಅಂತ್ಯೋದಯ ಕಾರ್ಡ್ ಇರುವವರಿಗೆ ಕೊಡ್ತಿದ್ದಾರೆ ಉಚಿತವಾಗಿ ಕೊಡುತ್ತಿದ್ದಾರೆ.

ಇದರ ಜೊತೆಯಲ್ಲಿ ಕರ್ನಾಟಕ ಸರ್ಕಾರದ ಅನ್ನ ಭಾಗ್ಯ ಯೋಜನೆ ಅಡಿಯಲ್ಲಿ ಬಿಪಿಎಲ್ ಇರುವವರಿಗೆ ಐದು ಕೆಜಿ ಹಣದ ಬದಲಿಗೆ ಅಕ್ಕಿಯನ್ನು ಕೊಟ್ಟರೆ 10 ಕೆಜಿ ಒಬ್ಬರಿಗೆ ಸಿಗುತ್ತೆ. ಹಾಗಾಗಿ ಇನ್ನು ಮುಂದೆ ಬಿಪಿಎಲ್ ಕಾರ್ಡಿರುವಂತಹ ಒಬ್ಬ ಸದಸ್ಯರಿಗೆ 10 ಕೆಜಿ ಅಕ್ಕಿ ಸಿಗುತ್ತೆ. ಇದು ರೇಷನ್ ಕಾರ್ಡ್ ಇರುವಂತವರಿಗೆ ಮತ್ತೆ ರೇಷನ್ ಪಡ್ಕೊಳ್ತಿರೋವರಿಗೆ ಒಂದು ಗುಡ್ ನ್ಯೂಸ್ ಅಂತ ಹೇಳಬಹುದು. ಸಂಪೂರ್ಣವಾದ ಮಾಹಿತಿಗಾಗಿ ಕೆಳಗಿರುವ ವಿಡಿಯೋ ವೀಕ್ಷಣೆ ಮಾಡಿ

WhatsApp Group Join Now

Leave a Reply

Your email address will not be published. Required fields are marked *