WhatsApp Group Join Now

ಕೇಂದ್ರ ಸರ್ಕಾರದಿಂದ ಅನ್ನದಾತರಿಗೆ ಒಂದು ಸಿಹಿ ಸುದ್ದಿ. ನಮ್ಮ ಕೇಂದ್ರ ಸರ್ಕಾರವು ದೇಶದ ಬೆನ್ನೆಲುಬಾದ ರೈತರಿಗೆ ಒಂದು ಸಿಹಿ ಸುದ್ದಿಯನ್ನು ನೀಡಿದೆ. ಕೇಂದ್ರ ಸರ್ಕಾರದ ಪಿಎಂ ಕಿಸಾನ್ ಯೋಜನೆಯ ಮೂಲಕ ಫಲಾನುಭವಿಗಳಿಗೆ ಒಂದು ಉತ್ತಮ ಪರಿಹಾರವನ್ನು ಒದಗಿಸಿದೆ. ಇದು ರೈತರಿಗೆ ಕೇಂದ್ರ ಸರ್ಕಾರದ ವತಿಯಿಂದ ಒಂದು ತರಹದ ಗುಡ್ ನ್ಯೂಸ್ ಅಂತಾನೇ ಹೇಳಬಹುದು. ಇದು ಪಿಎಂ ಕಿಸಾನ್ ಫಲಾನುಭವಿಗಳಿಗೆ ಒಂದು ಉತ್ತಮ ಮಾರ್ಗವನ್ನು ಒದಗಿಸುತ್ತಿದೆ.

ಇತ್ತೀಚಿಗಷ್ಟೇ ಕೇಂದ್ರ ಸಚಿವಾಲಯವು ಎ ಐ ಚಾಟ್ ಬಾಟ್ ಸೇವೆಗಳನ್ನ ಉಪಯುಕ್ತಗೊಳಿಸಿದೆ. ಈ ಸೇವೆಗಳು ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳಿಗೆ ಲಭ್ಯವಿರುತ್ತದೆ. ಮೊನ್ನೆ ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವ ಕೈಲಾಶ್ ಚೌದ್ರಿ ಸೇವೆಗೆ ಚಾಲನೆಯನ್ನು ನೀಡಿದರು. ಈ ಹೊಸ ಚಾಟ್ ಬಾಟ್ ಸೇವೆಯು ಕಿಸಾನ್ ಯೋಜನೆಗೆ ತುಂಬಾ ಸಹಾಯಕವಾಗಿದೆ. ಈ ಚಾಟ್ ಬಾಟ್ ಸೇವೆಯು ಕಿಸಾನ್ ಯೋಜನೆಯ ದಕ್ಷತೆಯನ್ನ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಇದರಿಂದ ರೈತರು ಸಮಯಕ್ಕೆ ಸರಿಯಾಗಿ ತಮ್ಮ ಪ್ರಶ್ನೆಗಳಿಗೆ ಉತ್ತರವನ್ನು ಸಹ ಕಂಡುಕೊಳ್ಳಬಹುದಾಗಿದೆ. ಇನ್ನು ಎಕ್ಸಿಸ್ ಸ್ಟೆಪ್ ಫೌಂಡೇಶನ್ ಮತ್ತು ಭಾಷಿಣಿಯ ಸಹಾಯದೊಂದಿಗೆ ಚಾಟ್ ಬಾಟ್ ಸೇವೆಯನ್ನ ಅಭಿವೃದ್ಧಿಗೊಳಿಸಲಾಗಿದೆ. ಎಂದು ಕೇಂದ್ರ ಸರ್ಕಾರವು ಹೇಳಿಕೊಂಡಿದೆ. ಕುಂದು ಕೊರತೆ ನಿರ್ವಹಣಾ ವ್ಯವಸ್ಥೆಯ ಮೂಲಕ ಚಾಟ್ ಬಾಟ್ ಸೇವೆಯಲ್ಲಿ ರೈತರು ಸಾಕಷ್ಟು ಪರಿಹಾರವನ್ನು ಪಡೆದುಕೊಳ್ಳಬಹುದು.

ಅಷ್ಟೇ ಅಲ್ಲದೆ ಇದರ ಮೂಲಕ ರೈತರು ಹಲೋ ಉತ್ತರದ ಮೂಲಕ ಮಾಹಿತಿಗಳನ್ನು ಕೂಡ ಪಡೆಯಬಹುದಾಗಿದೆ. ಈ ಚಾಟ್ ಬಾಟ್ ಸೇವೆಗೆ ಸಂಬಂಧಪಟ್ಟಂತೆ ರೈತರು ತಮ್ಮ ಅರ್ಜಿಯ ಜೊತೆಗೆ ಪಾವತಿ ವಿವರಗಳು ಹಾಗೂ ಪಿಎಂ ಕಿಸಾನ್ ಯೋಜನೆಗೆ ಸಂಬಂಧಪಟ್ಟಂತಹ ವಿವರಗಳನ್ನ ಇಲ್ಲಿ ಪಡೆಯಬಹುದಾಗಿದೆ. ಅಷ್ಟೇ ಅಲ್ಲದೆ ಇನ್ನು ಅನೇಕ ಸೇವೆಗಳು ಇದರಲ್ಲಿ ಲಭ್ಯವಿರುತ್ತವೆ. ಹಾಗಾದ್ರೆ ರೈತರು ಈ ಚಾಟ್ ಬಾಟ್ ಸೇವೆಯನ್ನು ಹೇಗೆ ಪಡೆಯುವುದು? ಮೊದಲು ಪಿಎಂ ಕಿಸಾನ್ ಆಪ್ ಅನ್ನ ನೀವು ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಳ್ಳಿ. ಈ ಆಪ್ ನ ಮೂಲಕ ಬೇರೆ ಬೇರೆ ಭಾಷೆಗಳಲ್ಲಿ ನೀವು ಚಾಟ್ ಬಾಟ್ ಸೇವೆಗಳನ್ನ ಪಡೆಯಬಹುದಾಗಿದೆ. ರೈತರು ಸುಲಭವಾಗಿ ಈ ಸೇವೆಯ ಮೂಲಕ ಎಲ್ಲಾ ಮಾಹಿತಿಯನ್ನ ಪಡೆಯಬಹುದಾಗಿದೆ. ಇದು ರೈತರ ಅಭಿವೃದ್ಧಿಗೆ ಸಹಾಯಕವಾಗಿದೆ. ರೈತರು ಈ ಸೇವೆಯ ಮೂಲಕ ಸುಲಭವಾಗಿ ಮಾಹಿತಿಯನ್ನ ಪಡೆದುಕೊಳ್ಳಬಹುದಾಗಿದೆ.

ಹೊಸದಾಗಿ ಪ್ರಾರಂಭಿಸಲಾದ ಈ ಚಾಟ್ ಬಾಟ್ ಸೇವೆಯ ಮೂಲಕ ನೀವು ಎಲ್ಲ ಭಾಷೆಗಳಿಂದಲೂ ಕೂಡ ಮಾಹಿತಿಯನ್ನ ಪಡೆದುಕೊಳ್ಳಬಹುದು. ಇದರಲ್ಲಿ ಇಂಗ್ಲಿಷ್ ಹಿಂದಿ ಬಂಗಾಳಿ ಓಡಿಯ ಮತ್ತು ತಮಿಳು ಎಲ್ಲ ಭಾಷೆಗಳು ಕೂಡ ಲಭ್ಯವಿದೆ. ಮತ್ತು ಪಿ ಎಂ ಕಿಸಾನ್ ಯೋಜನೆಯ 15ನೇ ಕಂತಿನ ಹಣ ನಿಮಗೆ ಶೀಘ್ರದಲ್ಲೇ ಸಿಗಲಿದೆ. ನವೆಂಬರ್ ತಿಂಗಳಿನಲ್ಲಿ ರೈತರ ಬ್ಯಾಂಕ್ ಖಾತೆಗೆ 2,000 ಜಮಾ ಆಗಬಹುದು ಎಂದು ಮೂಲಗಳು ತಿಳಿಸಿವೆ.

WhatsApp Group Join Now

Leave a Reply

Your email address will not be published. Required fields are marked *