ಡ್ರೈವಿಂಗ್ ಲೈಸನ್ಸ್ ಇದ್ದವರಿಗೆ ಗುಡ್‌ನ್ಯೂಸ್ ನಾಲ್ಕು ಚಕ್ರದ ಅಂದರೆ ಕಾರು ಖರೀದಿಸಲು ಸರ್ಕಾರದಿಂದ 3,00,000 ಸಹಾಯಧನ. ಹೌದು. ನಾಲ್ಕು ಚಕ್ರದ ವಾಹನ ಖರೀದಿಸಲು ಅಂದರೆ ಹೊಸ ಕಾರು ಖರೀದಿಸಲು ಸರ್ಕಾರದಿಂದ ನೇರವಾಗಿ ಮೂರು ಲಕ್ಷಗಳ ಹಣ ಸಂಪೂರ್ಣ ಉಚಿತವಾಗಿ ನೀಡಲಾಗುತ್ತದೆ. ಈ ಹಣ ಪಡೆದುಕೊಳ್ಳಲು ನೀವು ಹೊಸ ಕಾರನ್ನೇ ಖರೀದಿಸಬೇಕು. ಹೊಸ ಕಾರನ್ನ ಖರೀದಿಸಲು ಸರ್ಕಾರದಿಂದ ನಿಮಗೆ ಉಚಿತವಾಗಿ 3,00,000 ರೂಪಾಯಿಗಳ ಸಹಾಯಧನ ಹಣವನ್ನ ನೀಡಲಾಗುತ್ತದೆ ಬನ್ನಿ ಹಾಗಿದ್ರೆ 3,00,000 ರೂಪಾಯಿಗಳ ಧನ ಸಹಾಯ ಪಡೆದುಕೊಳ್ಳಲು ಅರ್ಜಿಯನ್ನ ಎಲ್ಲಿ ಹೇಗೆ ಸಲ್ಲಿಸಬೇಕು? ಈ ಯೋಜನೆಯ ಹೆಸರೇನು, ಯಾವಾಗ ಹಣ ದೊರೆಯುತ್ತದೆ.

ಯಾವೆಲ್ಲ ಕಾರುಗಳಿಗೆ ಈ ಯೋಜನೆ ಅನ್ವಯಿಸುತ್ತದೆ ಎನ್ನುವ ಕಂಪ್ಲೀಟ್ ಮಾಹಿತಿಯನ್ನ ತಿಳಿದುಕೊಳ್ಳೋಣ. ಟೂರಿಸ್ಟ್ ವಾಹನ ಅಥವಾ ಗೂಡ್ಸ್ ಗಾಡಿ ಖರೀದಿಗೆ 3,00,000 ಸಹಾಯ ಧನ ಪಡೆಯಲು ರಾಜ್ಯದ ವಿವಿಧ ನಿಗಮಗಳಿಂದ ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಸ್ವಾವಲಂಬಿ ಸಾರಥಿ ಯೋಜನೆಯಡಿ ಸಬ್ಸಿಡಿಯಲ್ಲಿ ನಾಲ್ಕು ಚಕ್ರ ವಾಹನ ಖರೀದಿಗೆ ಸಹಾಯ ಧನ ನೀಡಲು ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿತ್ತು. ಸ್ವ ಉದ್ಯೋಗ ಮಾಡಲು ಆಸಕ್ತಿ ಇರುವ ಯುವಕರಿಗೆ ಪ್ರೋತ್ಸಾಹ ನೀಡಲು ರಾಜ್ಯದ ವಿವಿಧ ನಿಗಮದಿಂದ ಸಹಾಯಧನ ಯೋಜನೆಯಡಿ ಟೂರಿಸ್ಟ್ ವಾಹನ ಅಥವಾ ಗೂಡ್ಸ್ ವಾಹನ ತೆಗೆದುಕೊಳ್ಳಲು ಸಬ್ಸಿಡಿ ನೀಡಲು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಲಾಗಿತ್ತು.

ಯಾವೆಲ್ಲಾ ನಿಗಮಗಳಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿದೆ. ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ, ಉಪ್ಪಾರ ಅಭಿವೃದ್ಧಿ ನಿಗಮ, ಮರಾಠ ಅಭಿವೃದ್ಧಿ ನಿಗಮ, ವಿಶ್ವಕರ್ಮ ಅಭಿವೃದ್ಧಿ ನಿಗಮ, ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮ, ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮ, ಸವಿತಾ ಸಮಾಜ ಅಭಿವೃದ್ಧಿ ನಿಗಮ, ಅಲೆಮಾರಿ ಅರೆ ಅಲೆಮಾರಿ ಅಭಿವೃದ್ಧಿ ನಿಗಮ, ಒಕ್ಕಲಿಗ ಅಭಿವೃದ್ಧಿ ನಿಗಮ, ಅರ್ಹ ಅರ್ಜಿದಾರರು ಅಗತ್ಯ ದಾಖಲಾತಿಗಳ ಸಮೇತ ನಿಮ್ಮ ಹತ್ತಿರದ ಗ್ರಾಮ ವನ್ ಅಥವಾ ಕರ್ನಾಟಕ ವನ್ ಅಥವಾ ಕಂಪ್ಯೂಟರ್ ಸೆಂಟರ್‌ನ ಭೇಟಿ ಮಾಡಿ ಆನ್‌ಲೈನ್ ಮೂಲಕ ಕೊನೆಯ ದಿನಾಂಕದೊಳಗಾಗಿ ಅರ್ಜಿ ಸಲ್ಲಿಸಬೇಕು.

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು ಅರ್ಜಿದಾರರ ಆಧಾರ್ ಕಾರ್ಡ್, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಡ್ರೈವಿಂಗ್ ಲೈಸೆನ್ಸ್ ಬ್ಯಾಂಕ್, ಪಾಸ್ ಬುಕ್ ನ ಪ್ರತಿ ರೇಷನ್ ಕಾರ್ಡ್, ಪ್ರತಿ ಮೊಬೈಲ್ ಸಂಖ್ಯೆ, ಹಿಂದು ಳಿದ ವರ್ಗಗಳ ಪ್ರವರ್ಗ, 12 ಎ ಮೂರು ಎ ಮತ್ತು ಮೂರು ಬಿ ಅರ್ಧ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಟೂರಿಸ್ಟ್ ವಾಹನ ಅಥವಾ ಗೂಡ್ಸ್ ಗಾಡಿ ಖರೀದಿಗೆ ಶೇಕಡಾ 50 ರಷ್ಟು ಸಬ್ಸಿಡಿಯಲ್ಲಿ. 3,00,000 ಸಹಾಯ ಧನ ನೀಡಲಾಗುತ್ತದೆ. ಈ ಯೋಜನೆಯಡಿ ಅರ್ಜಿ ಸಲ್ಲಿಸಲು ಅಭ್ಯರ್ಥಿಯು ಲಘು ವಾಹನ ಅಥವಾ ಲೈಟ್ ವಾಹನ ಪರವಾನಗಿ ಹೊಂದಿರಬೇಕು.

Leave a Reply

Your email address will not be published. Required fields are marked *