ಕರ್ನಾಟಕ ರಾಜ್ಯದಾದ್ಯಂತ ಇರುವ ರಾಜ್ಯದ ಎಲ್ಲಾ ಮಹಿಳೆಯರಿಗೆ ಗೃಹಲಕ್ಷ್ಮಿ 11 ಮತ್ತು ಹನ್ನೆರಡನೇ ಕಂತಿನ ಹಣ ಬಿಡುಗಡೆ ಮಾಡಿ ಮಹಿಳೆಯರಿಗೆ ಭರ್ಜರಿ ಗುಡ್ ನ್ಯೂಸ್ ಈ ಮಹಿಳೆಯರಿಗೆ ಖಾತೆಗಳಿಗೆ ಈಗಾಗಲೇ ಹಣ ಜಮಾ ಆಗಿದೆ. ನಿನ್ನೆ ಈಗಾಗಲೇ ಕೆಲವು ಜಿಲ್ಲೆಗಳಲ್ಲಿರುವ ಮಹಿಳೆಯರ ಖಾತೆಗಳಿಗೆ ಹಣ ಬಂದಿದ್ದು, ಇನ್ನುಳಿದ ಕೆಲವು ಜಿಲ್ಲೆಗಳಿಗೆ ಹಣ ಇವತ್ತು ಮತ್ತು ನಾಳೆ ಹಾಗೂ ನಾಡಿದ್ದು ಈ ಮೂರು ದಿನಗಳು ಕೂಡ ಹಣ ಮಹಿಳೆಯರ ಖಾತೆಗಳಿಗೆ ಜಮಾ ಆಗುತ್ತದೆ. ಕೆಲವು ತಿಂಗಳಿನಿಂದ ಹಣ ಬರದೆ ಮಹಿಳೆಯರು ಪರದಾಡುತ್ತಿದ್ದು ಗೃಹಲಕ್ಷ್ಮಿ ಹಣ ಈಗ ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ಜಮಾ ಆಗಿದೆ. ಆದರೆ ಕೆಲವರ ಖಾತೆಗಳಿಗೆ ಕೇವಲ ಹನ್ನೊಂದನೇ ಕಂತಿನ ಹಣ ಬಿಡುಗಡೆಯಾಗಿದ್ದು, ಇನ್ನು ಕೆಲವರಿಗೆ 11 ಮತ್ತು ಹನ್ನೆರಡನೇ ಕಂತಿನ ಎರಡು ತಿಂಗಳ ಒಟ್ಟು 4000 ಹಣ ಜಮಾ ಆಗಿದೆ.
ರಾಜ್ಯದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆಯಾಗಿರುವ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಮಾಧ್ಯಮಗಳಿಗೆ ಮಾಹಿತಿಯನ್ನು ನೀಡಿದ್ದು, ನೆನ್ನೆ ರಾಜ್ಯದ ಕೆಲವು ಮಹಿಳೆಯರ ಖಾತೆಗಳಿಗೆ ಹಣ ಜಮಾ ಆಗಿತ್ತು.ಇನ್ನುಳಿದ ಜಿಲ್ಲೆಗಳ ಮಹಿಳೆಯರ ಖಾತೆಗಳಿಗೆ ಇವತ್ತಿನಿಂದ ಮೂರು ದಿನಗಳ ಕಾಲ ಹಣ ವರ್ಗಾವಣೆ ಮಾಡಲಾಗುತ್ತಿದೆ. ಆದರೆ ಮೂರು ದಿನಗಳವರೆಗೆ ಮಹಿಳೆಯರು ತಮ್ಮ ಬ್ಯಾಂಕ್ ಖಾತೆಯನ್ನ ಪ್ರತಿದಿನ ಚೆಕ್ ಮಾಡಿಕೊಳ್ಳಬಹುದು. ಕರ್ನಾಟಕ ರಾಜ್ಯ ಖಜಾನೆಯಿಂದ ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ಹಣ ಬಿಡುಗಡೆಯಾಗಿ ಈಗಾಗಲೇ ಕೆಲವು ಮಹಿಳೆಯರ ಬ್ಯಾಂಕ್ ಖಾತೆಗೆ ಬಂದಿವೆ. ಆದರೆ, ವರದಿಯ ಪ್ರಕಾರ ಇಂತಹ ಮಹಿಳೆಯರ ಖಾತೆಗಳಿಗೆ ಹಣ ಬಂದಿಲ್ಲ. ಜೂನ್ ಹಾಗೂ ಜುಲೈ ತಿಂಗಳ ಗೃಹಲಕ್ಷ್ಮಿ ಹಣ ಯಜಮಾನರ ಖಾತೆಗೆ ಜಮಾ ಆಗಿದೆ. ಗೃಹಲಕ್ಷ್ಮಿ ಹಣ ಜಮಾ ಆಗಿರುವ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಕೆಲವರು ಹಂಚಿಕೊಳ್ಳುತ್ತಿದ್ದಾರೆ. ಕೆಲವರು ಒಂದು ತಿಂಗಳ ಹಿಂದೆ ಹಣ ಬಂದಿದೆ.
ಇನ್ನು ಕೆಲವರು ನಮಗೆ ಎರಡು ತಿಂಗಳ ಹಣ ಬಂದಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಹಣ ಬಂದಾಗ ಎಸ್ಎಂಎಸ್ ನ ಸ್ಕ್ರೀನ್ ಶಾಟ್ ಹಂಚಿಕೊಂಡಿದ್ದಾರೆ. ಎಲ್ಲ ಫಲಾನುಭವಿಗಳ ಖಾತೆಗೆ ಹಿಂದಿನಿಂದ ಹಣ ಜಮೆಯಾಗಲಿದೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ನೆನ್ನೆ ಹೇಳಿದರು. ಮಂಡ್ಯದಲ್ಲಿ ನಡೆದ ಕಾಂಗ್ರೆಸ್ ಜನಾಂದೋಲನ ಸಭೆಯಲ್ಲಿ ಮಾತನಾಡಿ ದಂತ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಾಂತ್ರಿಕ ದೋಷದಿಂದ ಕಳೆದ ಎರಡು ತಿಂಗಳಿಂದ ಹಣ ಬಂದಿಲ್ಲ ಎಂದು ನಮಗೆ ಕೆಲವರು ದೂರು ನೀಡಿದ್ದಾರೆ. ತಾಂತ್ರಿಕ ಸಮಸ್ಯೆಯಿಂದ ಕೆಲವರ ಖಾತೆಗೆ ಹಣ ಜಮೆ ಆಗಿಲ್ಲ. ಇಂದಿನಿಂದ ಎಲ್ಲ ಫಲಾನುಭವಿಗಳ ಖಾತೆಗೂ ಹಣ ಜಮೆ ಆಗಲಿದೆ ಎಂದು ಹೇಳಿದರು.
ಗೃಹಲಕ್ಷ್ಮಿ ಯೋಜನೆಯು ಕಾಂಗ್ರೆಸ್ ಸರ್ಕಾರವು ಜಾರಿಗೆ ತಂದಿರುವ ಯೋಜನೆಯಾಗಿದೆ. ಜೂನ್ ಮತ್ತು ಜುಲೈ ತಿಂಗಳ ಎರಡು ತಿಂಗಳ ಕಂತಿನ ಹಣವನ್ನ ಒಟ್ಟಿಗೆ ಇದೆ. ಆಗಸ್ಟ್ ಮೊದಲ ವಾರದಲ್ಲಿ ಯಜಮಾನರ ಖಾತೆಗೆ ಜಮಾ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ. ಇನ್ನು ಮುಂದೆ ಪ್ರತಿ ತಿಂಗಳು ಹದಿನೈದ ರೊಳಗೆ ಗೃಹಲಕ್ಷ್ಮಿ ಹಣ ಜಮಾ ಆಗಲಿದೆ. ಚಿಂತೆ ಬೇಡ ಎನ್ನುವ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಅವರು ಇತ್ತೀಚೆಗೆ ಹೇಳಿದ್ದರು. ಈಗಾಗಲೇ ರಾಜ್ಯದಲ್ಲಿರುವ ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾವಣೆ ಆಗಲಿದೆ.