ನಾವು ಹುಟ್ಟುವಾಗ ಒಬ್ಬರಾಗಿ ಪ್ರಪಂಚಕ್ಕೆ ಬರುತ್ತೇವೆ. ಸಾಯುವಾಗ ಒಬ್ಬರಾಗಿ ಸಾಯುತ್ತೇವೆ. ನಮ್ಮ ಸಾವನ್ನು ಯಾರೂ ತೆಗೆದುಕೊಳ್ಳಲು ಸಾಧ್ಯವಿಲ್ಲ ಹಾಗೆ ನಮ್ಮ ನೋವನ್ನು ಯಾರು ಭರಿಸಲು ಸಾಧ್ಯವಿಲ್ಲ. ನಾವು ಕಷ್ಟದಲ್ಲಿದ್ದಾಗ ಒಂದು ಹಂತದವರೆಗೆ ಮಾತ್ರ ಯಾರಾದ್ರೂ ಸಹಾಯ ಮಾಡಬಲ್ಲರು. ಅದರಿಂದ ಆಚೆ ನಾವೇ ಹೋರಾಡಬೇಕು.ಬದುಕುವ ದಾರಿಗಳನ್ನು ಹುಡುಕಬೇಕು. ಯಾಕಂದ್ರೆ ಜೀವನ ಅನ್ನೋದೇ ಪ್ರತಿ ಕ್ಷಣದ ಹೋರಾಟ ಹೀಗೆ ಎಲ್ಲ ದಾರಿಗಳು ಮುಚ್ಚಿಹೋದಾಗ ತನ್ನ ಸ್ವಂತ ದಾರಿ ಹುಡುಕಿದ ಈ ಮಹಿಳೆ ಈಗ ನೂರಾರು ಮಹಿಳೆಯರಿಗೆ ದಾರಿದೀಪವಾಗಿದ್ದಾರೆ. ಉತ್ತರ ಪ್ರದೇಶಕ್ಕೆ ಸೇರಿದ ಕೃಷ್ಣಾ ಯಾದವ್ ಗೆ ಇಬ್ಬರು ಮಕ್ಕಳು.
ಜೀವನೋಪಾಯಕ್ಕಾಗಿ ಮನೆಯಲ್ಲಿ ಉಪ್ಪಿನಕಾಯಿ ತಯಾರಿ ಮಾಡಿ ಮಾರುತ್ತಿದ್ದರು. ಆದರೆ ಏನು ಲಾಭ ಸಿಗಲಿಲ್ಲ. ಇದರಿಂದ ಉದ್ಯೋಗವನ್ನು ಹುಡುಕಿಕೊಂಡು ಗಂಡ ಮತ್ತು ಚಿಕ್ಕ ಮಕ್ಕಳ ಜೊತೆ ದೆಹಲಿಗೆ ಬಂದು ನೆಲೆಸಿದರು. ದೆಹಲಿಗೆ ಬಂದ ಕೃಷ್ಣ ಯಾದವ್ ಒಂದು ಸಂಸ್ಥೆಯಲ್ಲಿ ಅಡುಗೆ ತಯಾರಿಯ ಬಗ್ಗೆ ತರಬೇತಿ ಪಡೆದರು. ಆದರೆ ಯಾವುದೇ ಕೆಲಸ ಸಿಗಲಿಲ್ಲ.ಇದರಿಂದ ಮತ್ತೆ ಮನೆಯಲ್ಲಿ ಉಪ್ಪಿನಕಾಯಿ ತಯಾರಿ ಮಾಡಿ ಮಾರಾಟ ಮಾಡೋ ನಾನು ನಿರ್ಧಾರಕ್ಕೆ ಬಂದರು. ಆದರೆ ಕೈಯಲ್ಲಿ ₹100 ಕೂಡ ಇರಲಿಲ್ಲ. ಸ್ನೇಹಿತರ ಬಳಿ ₹500 ಸಾಲ ಪಡೆದ ಕೃಷ್ಣ ಯಾದವ್ ಅದು ಸಾಲದ್ದಕ್ಕೆ ಮತ್ತೆ ₹3000 ಸಾಲ ಮಾಡಿ ಉಪ್ಪಿನಕಾಯಿಗೆ ಬೇಕಾದ ವಸ್ತುಗಳನ್ನು ತಂದು ಉಪ್ಪಿನಕಾಯಿ ತಯಾರಿಸಿ ಮನೆಯ ಸುತ್ತಮುತ್ತ ಮಾರಾಟ ಮಾಡಿದರು.
ಇದರಿಂದ ಆಕೆಗೆ ₹5250 ಲಾಭ ಬಂತು. ಆ ಲಾಭದ ಹಣವನ್ನೇ ಬಂಡವಾಳವನ್ನಾಗಿ ಮಾಡಿಕೊಂಡ ಇವರು ಮತ್ತೆ ಉಪ್ಪಿನಕಾಯಿ ತಯಾರಿ ಮಾಡಿದ್ದರು.ಹೀಗೆ ಹಂತ ಹಂತವಾಗಿ ಬೆಳೆದ ಕೃಷ್ಣ ಯಾದವ್ ಮತ್ತೆ ಹಿಂತಿರುಗಿ ನೋಡಲಿಲ್ಲ. ವಿವಿಧ ರೀತಿಯ ಉಪ್ಪಿನಕಾಯಿನ್ನು ತಯಾರಿ ಮಾಡಿ ಮಾರುಕಟ್ಟೆಗೆ ಬಿಟ್ಟರು. ಒಳ್ಳೆಯ ಲಾಭಬರತೊಡಗಿತ್ತು. ದಿನೇ ದಿನೇ ಉಪ್ಪಿನ ಕಾಯಿ ಕೊಳ್ಳುವವರ ಸಂಖ್ಯೆ ಹೆಚ್ಚಾಯಿತು. ಶ್ರೀಕೃಷ್ಣ ಪಿಕಲ್ಸ್ ಎಂಬ ಹೆಸರಿನಿಂದ ತಮ್ಮ ಸ್ವಂತ ಕಂಪನಿಯನ್ನೇ ತೆರೆದರು. ನೋಡಿದ್ರಲ್ಲ ವೀಕ್ಷಕರೆ ಯಾವುದೇ ರೀತಿ ವ್ಯಕ್ತಿ ಯಶಸ್ಸು ಕಾಣಬೇಕು ಎಂದರೆ ಮೊದಲಿಗೆ ಸಣ್ಣ ವಿಷಯಗಳೆಂದರೆ ಅವನು ಶುರು ಮಾಡಬೇಕು.
ಇದಾದ ನಂತರ ದೊಡ್ಡ ವಿಷಯಗಳ ಸುಖ ಕೊನೆಗೆ ಸಿಗುತ್ತದೆ ಹಾಗಾಗಿ ಚಿಕ್ಕದು ದೊಡ್ಡದು ಎಂದು ಬೇಧ ಭಾವ ಮಾಡಬೇಡಿ.ಈಗ ಇವರನ್ನು ಹಿಡಿದವರೇ ಯಾರಿಲ್ಲ ಯಾಕೆಂದರೆ ಶ್ರೀ ಕೃಷ್ಣ ಪಿಕಲ್ಸ್ ಎಂಬ ಹೆಸರಿನಿಂದ ಹೆಸರಿನಲ್ಲಿ ಕಂಪನಿಯನ್ನು ತೆರೆದಿರುವ ಇವರು ಸುಮಾರು ನಾನೂರಕ್ಕೂ ಹೆಚ್ಚು ಮಹಿಳೆಯರಿಗೆ ಉದ್ಯೋಗ ಕೊಟ್ಟಿದ್ದಾರೆ. ಈಗಲೂ ಬೇರೆ ಬೇರೆ ರೀತಿಯ ಉಪ್ಪಿನಕಾಯಿಯನ್ನು ತಯಾರಿ ಮಾಡುತ್ತಾ ದೆಹಲಿಯಲ್ಲಿ ದೊಡ್ಡ ಉದ್ಯಮಿಯಾಗಿ ಬೆಳೆದು ನಿಂತಿದ್ದಾರೆ.