ದಾಳಿಂಬೆ ಬರ-ಸಹಿಷ್ಣು ಮತ್ತು ಮೆಡಿಟರೇನಿಯನ್ ಚಳಿಗಾಲದ ಮಳೆಗಾಲದ ಹವಾಮಾನ ಅಥವಾ ಬೇಸಿಗೆಯ ಮಳೆಯ ವಾತಾವರಣದಲ್ಲಿ ಒಣ ಪ್ರದೇಶಗಳಲ್ಲಿ ಬೆಳೆಯಬಹುದು. ದಾಳಿಂಬೆ ಹಣ್ಣು ರುಚಿಕರವಾಗಿದ್ದು,ತಿನ್ನಲು ಹಾಗೂ ಪಾನೀಯ ತಯಾರಿಸಲು ಉಪಯೋಗಿಸುತ್ತಾರೆ. ಹಣ್ಣಿನ ಸಿಪ್ಪೆ,ತೊಗಟೆ,ಬೀಜ ಹಾಗೂ ಎಲೆಗಳು ಔಷಧಿಗಳಲ್ಲಿ ಬಳಸಲ್ಪಡುತ್ತವೆ. ದಾರುವು ಸಣ್ಣ ಕಣರಜನೆ ಹೊಂದಿದ್ದು,ಕೈ ಬೆತ್ತ,ಉಪಕರಣಗಳ ಹಿಡಿ ಇತ್ಯಾದಿಗಳ ತಯಾರಿಕೆಯಲ್ಲಿ ಉಪಯೋಗಿಸಲ್ಪಡುತ್ತದೆ.

ದಾಳಿಂಬೆ ಬೆಳೆದಿರುವ ರೈತನ ಮಾತು ಕೇಳಿ ಇದರ ಲಾಭ ಮತ್ತು ಹೇಗೆ ಬೆಳೆಯುತ್ತಾರೆ ಏನೆಲ್ಲಾ ಸಮಸ್ಯೆಗಳು ಇವೆ ಹಾಗೆ ಇನ್ನಿತರ ಹಲವು ಮಾಹಿತಿಗಳು ಈ ವಿಡಿಯೋದಲ್ಲಿ ಇವೆ ನೋಡಿ.

ಪ್ರತಿದಿನ ದಾಳಿಂಬೆ ಸೇವಿಸಿದರೆ, ಇದರಲ್ಲಿರುವ ವಿಟಮಿನ್ ಸಿ, ಆಂಟಿ ಆಕ್ಸಿಡೆಂಟ್ ಮತ್ತು ಉರಿಯೂತದ ಮತ್ತು ಆಂಟಿವೈರಲ್ ಗುಣಗಳು ಅನೇಕ ರೋಗಗಳಿಂದ ರಕ್ಷಿಸುತ್ತದೆ. ತಜ್ಞರ ಪ್ರಕಾರ, ದಾಳಿಂಬೆಯ ಔಷಧೀಯ ಗುಣಗಳಿಂದಾಗಿ, ಇದು ಅಪಾಯಕಾರಿ ರೋಗಗಳು ಬರದಂತೆ ತಡೆಯಬಲ್ಲದು. ದಾಳಿಂಬೆ ನಮ್ಮ ದೇಹವನ್ನು ಆರೋಗ್ಯವಾಗಿರಿಸುವುದಲ್ಲದೆ, ನಮ್ಮ ಕೂದಲು ಮತ್ತು ಚರ್ಮವನ್ನು ಸಹ ಆರೋಗ್ಯವಾಗಿರಿಸುತ್ತದೆ.

Leave a Reply

Your email address will not be published. Required fields are marked *