ಹಳ್ಳಿಗಳಲ್ಲಿರುವ ಮನೆ ಮಾಲೀಕರಿಗೆ ಅಂದ್ರೆ ಗ್ರಾಮಗಳಲ್ಲಿರುವ ಮನೆ ಮಾಲೀಕರಿಗೆ ಈ ತುಂಬಾನೇ ಇಂಪಾರ್ಟೆಂಟ್ ಎಂದು ಹೇಳಬಹುದು. ಸಾಮಾನ್ಯವಾಗಿ ಎಲ್ಲರಿಗೂ ಗ್ರಾಮಗಳಲ್ಲಿ ಅಂದ್ರೆ ಹಳ್ಳಿಗಳಲ್ಲಿ ಮನೆ ಇದ್ದೇ ಇರುತ್ತೆ. ಆದರೆ ಖಾತೆ ಮಾಡಿರುವುದಿಲ್ಲ ಅಥವಾ ಖಾತೆ ಬದಲಾವಣೆ ಮಾಡುವುದಿಲ್ಲ. ಅದರಂತೆ ಮನೆ ಮಾಲಿಕ ಅಂದ್ರೆ ಮನೆ ಓನರ್ ಮರಣ ಹೊಂದಿದಾಗ ಅವರ ಮಾಲೀಕತ್ವದಲ್ಲಿರುವ ಮನೆ ಹಕ್ಕು ಬದಲಾವಣೆ ಮಾಡಿಸುವ ಗೋಜಿಗೆ ಯಾರು ಸಹ ಹೋಗಿರೋದಿಲ್ಲ. ಇದರ ಪರಿಣಾಮವಾಗಿ ಹಲವು ತೊಡಕುಗಳು. ತೊಂದರೆಗಳು ಸಾಮಾನ್ಯ ಜನರು ಅನುಭವಿಸಿದ್ದನ್ನು ನೀವು ನೋಡೇ ಇರ್ತಿರಾ.
ಶ್ರೀ ಪಂಚಮುಖಿ ಜೋತಿಷ್ಯ ಪಂಡಿತ್ ಶ್ರೀ ಗಣೇಶ್ ಕುಮಾರ್ ಎಲ್ಲ ಕಷ್ಟಗಳಿಗೂ ಫೋನಿನ ಮೂಲಕ ಪರಿಹಾರ ನೀಡುತ್ತಾರೆ 22 ವರ್ಷಗಳ ಸುದೀರ್ಘ ಅನುಭ ಹೊಂದಿರುವ ಸುಪ್ರಸಿದ್ದ ಜ್ಯೋತಿಷ್ಯರು, ಸಮಸ್ಯೆ ಯಾವುದೇ ಇರಲಿ ಇವರಲ್ಲಿ ಖಂಡಿತ ನಿಮ್ಮ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆದರದಿಂದ ನಿಮ್ಮ ಸಮಸ್ಯೆಗಳನ್ನು ಶಾಶ್ವತವಾಗಿ ಪರಿಹಾರ ಮಾಡುತ್ತಾರೆ ಫೋನ್ ಅಥವಾ ವಾಟ್ಸಪ್ ಮಾಡಿ 9880444450.
ಹಾಗಾದ್ರೆ ಗ್ರಾಮದ ಒಳಗಡೆ ಅಂದ್ರೆ ಹಳ್ಳಿ ಒಳಗಡೆ ಗ್ರಾಮ ಪಂಚಾಯತಿ ವ್ಯಾಪ್ತಿ ಪ್ರದೇಶದಲ್ಲಿ ಬರುವ ಮನೆಗಳನ್ನು ಈ ಸುತ್ತು ಹೇಗೆ ಮಾಡಿಸಿಕೊಳ್ಳಬೇಕು? ಇ-ಸ್ವತ್ತು ಅರ್ಜಿ ಸಲ್ಲಿಸುವಾಗ ಯಾವ ಯಾವ ದಾಖಲೆಗಳು ಮುಖ್ಯವಾಗಿ ಬೇಕಾಗುತ್ತೆಹಾಗೆ ಈ ಸುತ್ತುಗಾಗಿ ಅರ್ಜಿ ಸಲ್ಲಿಸಿದ ಬಳಿಕ ಆ ಒಂದು ಪ್ರೊಸೆಸ್ ಯಾವ ರೀತಿ ಇರುತ್ತೆ. ಅದರಂತೆ ಮುಖ್ಯವಾಗಿ ಇ-ಸ್ವತ್ತು ಅಂದ್ರೆ ಏನು ಮತ್ತು ಇ-ಸ್ವತ್ತು ನಿಯಮಗಳು ಮತ್ತು ಉಪಯೋಗಗಳ ಬಗ್ಗೆ ಹೇಳುತ್ತೇವೆ. ಆಸ್ತಿಗೆ ಇ ಸ್ವತ್ತು ಬೇಕೇ ಬೇಕು .ಮೊದಲಿಗೆ ಇ-ಸ್ವತ್ತು ಅಂದ್ರೆ ಏನು ಅಂತ ನೋಡೋಣ. ಹೆಸರೇ ಹೇಳುವಂತೆ ಈ ಅಂದ್ರೆ ತಂತ್ರಾಂಶ ಎಂದರ್ಥ. ಇದನ್ನು ಎಲೆಕ್ಟ್ರಾನಿಕ್ ಅಥವಾ ಆನ್‌ಲೈನ್ ಸೇವೆ ಅಂತಲೂ ಕರೆಯಬಹುದು.
ಅದರಂತೆ ಸ್ವತ್ತು ಅಂದ್ರೆ ಆಸ್ತಿ ಎಂದರ್ಥ. ಸಂಕ್ಷಿಪ್ತವಾಗಿ ಹೇಳುವುದಾದರೆ ಇ-ಸ್ವತ್ತು ಅಂದ್ರೆ ಆಸ್ತಿಗಳನ್ನು ಗಣಕೀಕರಣ ಮೂಲಕ ಖಾತೆ ಮಾಡಿಸಿ ಒದಗಿಸುವ ಸೇವೆಯನ್ನೇ ಇ ಸ್ವತ್ತು ಎಂದು ಕರೆಯಬಹುದು.ಗ್ರಾಮ ಠಾಣಾ ವ್ಯಾಪ್ತಿಯಲ್ಲಿನ ಮನೆ ಹಕ್ಕು ಪತ್ರ ಅದು ಕ್ರಯಪತ್ರ ಆಗಿರಬಹುದು ಅಥವಾ ಹೊಸದಾಗಿ ಸೃಷ್ಟಿಸಿದ ಮನೆ ಪತ್ರ ಆಗಿರಬಹುದು ಅಥವಾ ಗ್ರಾಮದ ಹೊರಭಾಗದಲ್ಲಿ ಎನ್ ಪ್ಲಾಟ್‌ಗಳಲ್ಲಿ ನಿಮ್ಮ ಮನೆ ಇದ್ರೆ ಅದರ ನೋಂದಣಿ ಪತ್ರ ಕೊಡಬೇಕಾಗಿ ಬರುತ್ತೆ.ಎರಡನೆಯದು ಅರ್ಜಿದಾರರ ಆಧಾರ್ ಕಾರ್ಡ್ವಂತೂ ಬೇಕೇ ಬೇಕಾಗುತ್ತೆ. ಮೂರನೆಯದು ಅರ್ಜಿದಾರರ ಫೋಟೋ ಸಹಬೇಕು. ನಾಲ್ಕನೆಯದು ಮನೆ ನಕ್ಷೆ ಕಡ್ಡಾಯವಾಗಿ ಕೊಡಬೇಕು.
ಐದು ನಿಗದಿತ ನಮೂನೆಯನ್ನು ಸಹ ಸಿಗುತ್ತೆ. ಆ ನಮೂನೆ ನೀವು ತೆಗೆದುಕೊಂಡು ಸಂಪೂರ್ಣವಾಗಿ ಭರ್ತಿ ಮಾಡಬೇಕು. ಆರನೇದು ಕಟ್ಟಡ ತೆರಿಗೆ ರಶೀದಿ ಅಥವಾ ವಿದ್ಯುತ್ ಬಿಲ್ ಒಂದು ವೇಳೆ ಖಾಲಿ ನಿವೇಶನ ಅಂದ್ರೆ ಖಾಲಿ ಸೈಟ್ ಖರೀದಿ ಮಾಡಿದ್ರೆ ಇವು ಅವಶ್ಯಕತೆ ಇರುವುದಿಲ್ಲ. ಯಾವುದು ಕಟ್ಟಡ ತೆರಿಗೆ ರಸೀದಿ ಮತ್ತು ವಿದ್ಯುತ್ ಬಿಲ್ ಇನ್ನು ಇದನ್ನು ಹೇಗೆ ಅರ್ಜಿ ಬರೆಯಬೇಕು ಎಂಬುದನ್ನು ತಿಳಿದುಕೊಳ್ಳಲು ಕೆಳಗಿನ ವಿಡಿಯೋ ವೀಕ್ಷಣೆ ಮಾಡಿ