ಶ್ರೀ ಪಂಚಮುಖಿ ಜ್ಯೋತಿಷ್ಯಂ.. ಪಂಡಿತ್ ಶ್ರೀ ಗಣೇಶ್ ಕುಮಾರ್.. ಎಲ್ಲಾ ಕಷ್ಟಗಳಿಗೂ ಫೊನಿನ ಮೂಲಕ ಪರಿಹಾರ.. 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಸಮಸ್ಯೆ ಏನೇ ಇರಲಿ, ಎಷ್ಟೇ ಕಷ್ಟವಾಗಿರಲಿ 600 ವರ್ಷ ಹಳೆಯ 108 ಜ್ಯೋತಿಷ್ಯ ತಂತ್ರಗಳಿಂದ ವಶೀಕರಣ, ದಾಂಪತ್ಯ, ಪ್ರೇಮ ವಿಚಾರ, ಹಣಕಾಸು ಗಳಿಕೆ ಅತಿ ಶೀಘ್ರದಲ್ಲಿ ಮಹೋನ್ನತ ಪರಿಹಾರಗಳು.. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.
ನಮಸ್ತೆ ಪ್ರಿಯ ಓದುಗರೇ, ಭಾರತ ಒಂದು ಪುಣ್ಯ ಭೂಮಿ ಇಲ್ಲಿ ಕಟ್ಟಿರುವ ಗುಡಿ ಗೋಪುರಗಳು ಲೆಕ್ಕವೇ ಇಲ್ಲ. ಭಗವಂತ ಯಾವ ಕ್ಷೇತ್ರದಲ್ಲಿ ಬೇಕಾದರೂ ನೆಲೆ ನಿಂತು ತನ್ನನ್ನು ನಂಬಿ ಬರುವ ಭಕ್ತರನ್ನೂ ಉದ್ಧರಿಸುತ್ತಾನೆ ಎನ್ನುವುದಕ್ಕೆ ಒಂದು ಸಾಕ್ಷಿ ಪರಮೇಶ್ವರನ ಈ ದೇವಾಲಯ. ಬನ್ನಿ ಇವತ್ತಿನ ಲೇಖನದಲ್ಲಿ ಅಣ್ಣಿಗೇರಿಯ ಅಮೃತೇಶ್ವರ ದೇವಾಲಯದ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ. ನಮ್ಮ ಹಿಂದೂ ಧರ್ಮದಲ್ಲಿ ಜೀವಮಾನದಲ್ಲಿ ಒಮ್ಮೆ ಕಾಶಿಗೆ ಹೋಗಿ ವಿಶ್ವೇಶ್ವರನ ದರ್ಶನ ಮಾಡಿಕೊಂಡು ಬರಬೇಕು ಎಂದು ಹೇಳಲಾಗುತ್ತದೆ. ಎಲ್ಲಾ ಜನರಿಗೆ ಕಾಶಿಗೆ ಹೋಗೋಕೆ ಆಗಲ್ಲ. ಅಂಥವರು ಈ ಅಮೃತೇಶ್ವರ ದೇವಾಲಯಕ್ಕೆ ಬಂದು ಗರ್ಭ ಗುಡಿಯಲ್ಲಿ ವಿರಾಜಮಾನನಾದ ಜಗದೇಶ್ವರನನ್ನು ನೋಡಿದರೆ ಕಾಶಿಗೆ ಹೋದಷ್ಟು ಪುಣ್ಯ ಬರುತ್ತೆ ಎಂದು ಹೇಳಲಾಗುತ್ತದೆ.
ಅಲ್ಲದೆ ಇಲ್ಲಿಗೆ ಬಂದು ಮಹೇಶ್ವರನಿಗೆ ಪೂಜೆ ಮಾಡಿಸುವುದರಿಂದ ನಾವು ಮನಸ್ಸಿನಲ್ಲಿ ಅಂದುಕೊಂಡ ಕಾರ್ಯಗಳು ಸಿದ್ಧಿ ಆಗುತ್ತೆ ಎನ್ನುವುದು ಇಲ್ಲಿ ಬರುವ ಭಕ್ತಾದಿಗಳ ಅಚಲವಾದ ನಂಬಿಕೆ. ಇಲ್ಲಿನ ಅಮೃತೇಶ್ವರ ದೇವರು ಸ್ವಯಂಭೂ ಆಗಿದ್ದು, ಈ ಕ್ಷೇತ್ರದಲ್ಲಿ ಈಶ್ವರ ಬಂದು ಬೆಲೆ ನಿಲ್ಲುವುದರ ಹಿಂದೆ ಒಂದು ಕಥೆ ಇದೆ. ನಾಲ್ಕು ಯೋಜನಾ ವಿಸ್ತೀರ್ಣವಾದ ಈ ಕ್ಷೇತ್ರದಲ್ಲಿ ಈಶ್ವರನು ಲಿಂಗ ರೂಪಿಯಾಗಿ ಭೂ ಗರ್ಭದಲ್ಲಿ ಹುದುಗಿಕೊಂಡಿದ್ದನು ಆ ಸಮಯದಲ್ಲಿ ಐದು ಕಾಮಧೇನು ಗಳು ಬಂದು ಭಕ್ತಿಯಿಂದ ಈ ಶಿವಲಿಂಗಕ್ಕೆ ಹಾಕಿ ಏರೆಯುತ್ತಿದ್ದವು. ಸಾವಿರಾರು ವರ್ಷಗಳ ಬಳಿಕ ಹುತ್ತ ಕರಗಿ ಶಿವ ಲಿಂಗವು ಭೂಮಿ ಮೇಲೆ ಎದ್ದು ಬಂದಿತು ನಂತರ ಬ್ರಹ್ಮ ದೇವನು ಸಮಸ್ತ ದೇವತೆಗಳನ್ನು ಕರೆದುಕೊಂಡು ಬಂದು ವಿಧಿ ವದ್ದತ್ತಾಗಿ ಇಲ್ಲಿ ಲಿಂಗ ಪ್ರತಿಷ್ಠಾನ ಮಾಡಿದನು ಎಂದು ಇಲ್ಲಿನ ಸ್ಥಳ ಪುರಾಣದಲ್ಲಿ ಉಲ್ಲೇಖಿಸಲಾಗಿದೆ. ಕ್ಷೇತ್ರದಲ್ಲಿ ಶಿವನ ಜೊತೆ ಪಾರ್ವತಿ ದೇವಿ ಗಣಪತಿ ಮತ್ತು ನಂದಿ ನೆಲೆಸಿದ್ದಾರೆ.
ಆದಿಶಕ್ತಿಯು ಕಿವಿಯಲ್ಲಿ ಕುಂಡಲ ಕೊರಳಲ್ಲಿ ಏಕವಳಿ ಸರ ಕಾಲುಗಳಲ್ಲಿ ಹೆಜ್ಜೆಗಳನ್ನು ಹಾಕಿಕೊಂಡು ಸರ್ವಾಲಂಕಾರ ಬೋಶಿತೆ ಆಗಿ ಭಕ್ತರಿಗೆ ದರ್ಶನ ನೀಡುತ್ತಿದ್ದಾಲೆ. ಇಲ್ಲಿನ ಪ್ರವೇಶ ದ್ವಾರ ಬಳಿ ಉಸಲು ಕಂಬ ಇದೆ. ಉಸಲೂ ಸಿಕ್ಕಿ ಹಾಕಿಕೊಂಡಾಗ ಈ ಕಂಬವನ್ನು ಐದು ಬಾರಿ ಪ್ರದಕ್ಷಿಣೆ ಹಾಕಿದರೆ ಈ ರೋಗ ವಾಸಿ ಆಗುತ್ತೆ ಎನ್ನುವುದು ಇಲ್ಲಿನ ಸ್ಥಳೀಯರ ನಂಬಿಕೆ ಆಗಿದೆ. ಸುಮಾರು ಹತ್ತನೇ ಶತಮಾನದಲ್ಲಿ ನಿರ್ಮಿಸಿದ ದೇವಾಲಯ ಆಗಿದ್ದು, ದೇವಾಲಯವು ವಿಶಾಲವಾದ ಮುಖ ಮಂಟಪ ಹೊಂದಿದೆ. ಇಲ್ಲಿನ ಗೋಡೆಗಳ ಮೇಲೆ ಶಿವನ ಹನ್ನೊಂದು ಬಗೆಯ ವಿವಿಧ ಭಂಗಿಯ ಮೂರ್ತಿಗಳನ್ನು ಕೆತ್ತಲಾಗಿದೆ. ನಮ್ಮ ರಾಜ್ಯದ ಲಾಂಛನ ಆದ ಗಂಡಬೇರುಂಡ ಪಕ್ಷಿಯನ್ನು ಇಲ್ಲಿನ ಕಂಬಗಳ ಮೇಲೆ ಕೆತ್ತಲಾಗಿದೆ. ಪರಮೇಶ್ವರನ ಈ ಪುಣ್ಯ ದೇಗುಲವು ಧಾರವಾಡ ಜಿಲ್ಲೆಯ ಅಣ್ಣಿಗೇರಿ ಎಂಬಲ್ಲಿದೆ. ಸಾಧ್ಯವಾದರೆ ನೀವು ಒಮ್ಮೆ ಈ ದೇವಾಲಯಕ್ಕೆ ಭೇಟಿ ನೀಡಿ. ಶುಭದಿನ.