ನಮ್ಮ ಸನಾತನ ಹಿಂದೂ ಧರ್ಮವೂ ಕರ್ಮ ಸಿದ್ದಾಂತವನ್ನು ಪ್ರತಿ ಪಾಲಿಸುತ್ತದೆ ಮನುಷ್ಯನಾದವನು ತನ್ನ ಪಾಪ ಪುಣ್ಯಗಳ ಲೆಕ್ಕಾಚಾರದಂತೆ ಮುಂದಿನ ಜನ್ಮದಲ್ಲಿ ತಮ್ಮ ಹಣೆ ಬರಹಗಳನ್ನು ಪಡೆದುಕೊಳ್ಳುತ್ತಾನೆ ಹುಟ್ಟಿನಿಂದ ಹಿಡಿದು ವಿದ್ಯಾಭ್ಯಾಸ ಉದ್ಯೋಗ ಮದುವೆ ಸಂತಾನ ಯಶಸ್ಸು ಆಯಸ್ಸು ಎಲ್ಲವು ಸಹ ನಾವು ಮಾಡಿದ ಕರ್ಮಫಲಗಳ ಮೇಲೆ ಆಧಾರಿತವಾಗಿರುತ್ತದೆ ಬ್ರಹ್ಮದೇವರು ಬರೆದ ಹಣೆ ಬರಹವನ್ನು ಯಾರಿಂದಲೂ ಸಹ ಬದಲಾವಣೆ ಮಾಡಲು ಸಾಧ್ಯವಿಲ್ಲ ಆದರೆ ನಮ್ಮ ಭಾರತ ದೇಶದಲ್ಲಿ ಮಹಿಮಾನಿತ ದೇವಾಲಯ ಒಂದು ಇದೆ ಸೃಷ್ಟಿಕರ್ತನಾದ ಬ್ರಹ್ಮದೇವನ ಹಣೆಬರಹ ವನ್ನ ಬದಲಾವಣೆ ಮಾಡಿದ ಶಕ್ತಿಶಾಲಿ ದೇಗುಲವಿದು ಈ ದೇಗುಲದಲ್ಲಿ ತೀರ್ಥ ಸ್ಥಾನವನ್ನು ಮಾಡಿ ದೇವರ ಮೂರ್ತಿಗೆ ಪೂಜೆಯನ್ನು ಸಲ್ಲಿಸಿದರೆ.

ನಮ್ಮ ಹಣೆಬರಹವೇ ಬದಲಾಗಿ ಅದೃಷ್ಟ ಕುಲಾಯಿಸುತ್ತದೆ ಬ್ರಹ್ಮದೇವ ಬರೆದ ಹಣೆಬರಹವನ್ನೇ ಬದಲಾವಣೆ ಮಾಡುವ ನಮ್ಮ ದುರಾದೃಷ್ಟಗಳನ್ನು ದೂರ ಮಾಡಿ ಅದೃಷ್ಟವನ್ನು ನಮ್ಮ ಬದುಕಿಗೆ ದಯಪಾಲಿಸುವ ಈ ಒಂದು ವಿಶೇಷ ದೇಗುಲದ ಹೆಸರೇ ಬ್ರಹ್ಮಪುರೀಶ್ವರ ದೇವಸ್ಥಾನ ನಮ್ಮ ತಮಿಳು ನಾಡು ರಾಜ್ಯದ ತಿರುಚನಾಪಲ್ಲಿ ಇಂದ ಸುಮಾರು 32 ಕಿಲೋಮೀಟರ್ ದೂರದಲ್ಲಿರುವ ತಿರುಪತ್ತೂರಿನಲ್ಲಿ ಬ್ರಹ್ಮಪುರೀಶ್ವರ ದೇವಾಲಯ ಸ್ಥಿತಗೊಂಡಿದೆ ಮೂಲತಹ ಬ್ರಹ್ಮಪುರೀಶ್ವರ ದೇಗುಲ ಒಂದು ಶಿವನ ದೇವಾಲಯ ಬ್ರಹ್ಮಪುರೀಶ್ವರ ಎಂದು ಕರೆಯಲ್ಪಡುವ ಶಿವಲಿಂಗ ಈ ದೇವಸ್ಥಾನದಲ್ಲಿ ಸ್ಥಿತಗೊಂಡಿದೆ ದೇವಾಲಯ ಶಿವದೇವನಿಗೆ ಸಮರ್ಪಿತವಾಗಿದ್ದರೂ ಸಹ ಬ್ರಹ್ಮನಿಗೆ ಪ್ರತ್ಯೇಕವಾದ ಸನ್ನಿಧಿ ಇದೆ ಬ್ರಹ್ಮಪುರೀಶ್ವರ ದೇವಸ್ಥಾನಕ್ಕೆ ಸಂಬಂಧಿಸಿದ ಸ್ಥಳ ಪುರಾಣ ಬ್ರಹ್ಮ ದೇವರೊಂದಿಗೆ ತಳಕು ಹಾಕಿಕೊಂಡಿದೆ.

ಸ್ಥಳ ಪುರಾಣ ಒಮ್ಮೆ ಬ್ರಹ್ಮದೇವರಿಗೆ ಈ ಸೃಷ್ಟಿಯ ಮೂಲಕ್ಕೆ ತಾನೇ ಕಾರಣವೆಂಬ ಗರ್ವ ಬಂದಿರುತ್ತದೆ ಶಿವ ದೇವರಿಗಿಂತ ಹೆಚ್ಚು ಶಕ್ತಿಶಾಲಿ ನಾನೇ ಎಂದು ಬ್ರಹ್ಮದೇವ ಬೀಗುತ್ತಿರುತ್ತಾರೆ ಬ್ರಹ್ಮದೇವರ ಅಹಂಕಾರವನ್ನು ನಿಗ್ರಹಿಸುವ ಉದ್ದೇಶದಿಂದ ಶಿವ ಪರಮಾತ್ಮರು ಬ್ರಹ್ಮದೇವನ ಐದನೆಯ ತಲೆಯನ್ನು ಕತ್ತರಿಸಿಬಿಡುತ್ತಾರೆ ಇದರ ಪರಿಣಾಮವಾಗಿ ಬ್ರಹ್ಮದೇವರ ತೇಜಸ್ಸು ನಶಿಸಿಹೋಗಿ ಬ್ರಹ್ಮದೇವ ಸೃಷ್ಟಿಯ ನಿರ್ಮಾಣದ ಶಕ್ತಿಯನ್ನು ಸಹ ಕಳೆದುಕೊಳ್ಳಬೇಕಾಗುತ್ತದೆ ಪಶ್ಚತಾಪದಿಂದ ಬ್ರಹ್ಮದೇವರು ಪಾಪ ವಿಮೋಚನೆಗಾಗಿ ಈಗಿನ ಬ್ರಹ್ಮಪುರೀಶ್ವರ ದೇಗುಲದ ಸ್ಥಳದಲ್ಲಿ 12 ಲಿಂಗಗಳನ್ನು ಸ್ಥಾಪನೆ ಮಾಡಿ ಪೂಜಿಸುತ್ತಾರೆ ಶಿವ ಪರಮಾತ್ಮನನ್ನು ಪೂಜಿಸಲು ಬ್ರಹ್ಮ ದೇವರು ನೀರನ್ನು ತೆಗೆದುಕೊಂಡ ಕೊಳವನ್ನು ಬ್ರಹ್ಮ ತೀರ್ಥ ಎಂದು ಕರೆಯಲಾಗುತ್ತದೆ.

ಬ್ರಹ್ಮದೇವರು ಪ್ರಾಯಶ್ಚಿತಕ್ಕಾಗಿ ಶಿವನನ್ನು ಪೂಜಿಸಿದ ಸ್ಥಳವಾದುದ್ದರಿಂದ ಈ ಪಟ್ಟಣವನ್ನು ಬ್ರಹ್ಮಪುರಿ ಎಂದು ಕರೆಯಲಾಗುತ್ತದೆ ಬ್ರಹ್ಮದೇವನ ಭಕ್ತಿಯಿಂದ ಸಂತುಷ್ಟರಾದ ಶಿವ ಪರಮಾತ್ಮರು ಪಾರ್ವತಿ ದೇವಿಯೊಂದಿಗೆ ಪ್ರತ್ಯಕ್ಷರಾಗಿ ಬ್ರಹ್ಮ ದೇವರಿಗೆ ನೀಡಿದ ಶಾಪವನ್ನು ವಿಮೋಚನೆ ಮಾಡುತ್ತಾರೆ ಅಷ್ಟು ಮಾತ್ರವಲ್ಲದೇ ಬ್ರಹ್ಮ ದೇವರಿಗೆ ಸೃಷ್ಟಿ ನಿರ್ಮಾಣ ಮಾಡುವ ಶಕ್ತಿಯನ್ನು ಮರುದಯ ಪಾಲಿಸುತ್ತಾರೆ ನಂತರ ಶಿವ ಪರಮಾತ್ಮರು ಈ ದೇವಸ್ಥಾನದಲ್ಲಿ ಸ್ವಯಂ ಲಿಂಗ ಸ್ವರೂಪಿಯಾಗಿ ನೆಲೆ ನಿಲ್ಲುತ್ತಾರೆ ಅಷ್ಟು ಮಾತ್ರವಲ್ಲದೆ ಶಿವ ಪರಮಾತ್ಮರು ಬ್ರಹ್ಮ ದೇವರಿಗೆ ಮತ್ತೊಂದು ವರವನ್ನು ಸಹ ದಯಪಾಲಿಸುತ್ತಾರೆ ಪ್ರತಿಯೊಬ್ಬರ ಹಣೆಬರಹವನ್ನು ಬರೆಯುವ ಹೊಣೆ ಹೊತ್ತವರ ಹಣೆಬರಹವನ್ನು ಸಹ ಈ ಸ್ಥಳ ಬದಲಾವಣೆ ಮಾಡಿತು ಆದ್ದರಿಂದ ಈ ಸ್ಥಳಕ್ಕೆ ಭೇಟಿ ನೀಡಿ ಶಿವ ಪರಮಾತ್ಮರು ಪಾರ್ವತಿ ದೇವಿ ಹಾಗೂ ಬ್ರಹ್ಮ ದೇವರನ್ನು ಪೂಜೆ ಮಾಡುವುದರಿಂದ ಭಕ್ತರ ಜೀವನದಲ್ಲಿ ದುರಾದೃಷ್ಟವೆಲ್ಲ ಕಳೆದು ಬದಲಾವಣೆಗಳು ಸಂಭವಿಸುವಂತಾಗಲಿ ಎಂದು ಸಾಕ್ಷಾತ್ ಶಿವಪರಮಾತ್ಮರೆ ಹರಸಿದ್ದಾರೆ ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋವನ್ನು ನೋಡಿ.

 

Leave a Reply

Your email address will not be published. Required fields are marked *