ಪಿತ್ರಾರ್ಜಿತ ಆಸ್ತಿ ಎಂದರೇನು? ಮತ್ತು ಸ್ವಯಾರ್ಜಿತ ಆಸ್ತಿ ಎಂದರೆ ಏನು? ಪ್ರತಿಯೊಬ್ಬರಿಗೂ ತಮ್ಮ ಹೆಸರಿನಲ್ಲಿ ಆಗಲಿ ಅಥವಾ ತಂದೆ ಹೆಸರಿನಲ್ಲಿ ಆಗಲಿ ಅಥವಾ ಅಜ್ಜನ ಹೆಸರಿನಲ್ಲಿ ಆಗಲಿ ಮನೆ ಇರುತ್ತೆ.ಖಾಲಿ ಸೈಟ್ ಆದ್ರು ಇದ್ದೇ ಇರುತ್ತೆ ಮತ್ತು ಮುಖ್ಯವಾಗಿ ಜಮೀನು ಅಂದ್ರೆ ಹೊಲ ಇದ್ದೇ ಇರುತ್ತೆ. ಆದ್ರೆ ಆ ನಿಮ್ಮ ಆಸ್ತಿ ಪಿತ್ರಾರ್ಜಿತ ಆಸ್ತಿನಾ ಅಥವಾ ಸ್ವಯಾರ್ಜಿತ ಆಸ್ತಿಯ ಎಂದು ಗೊತ್ತಿರಲೇಬೇಕು. ಯಾಕೆಂದ್ರೆ ಆಸ್ತಿ ಮುಂದಿನ ದಿನಗಳಲ್ಲಿ ನಿಮಗೆ ಸಿಗುತ್ತಾ ಅಥವಾ ಬೇರೆಯವರು ನಿಮ್ಮ ಆಸ್ತಿ ಮೇಲೆ ಹಕ್ಕು ಸಾಧಿಸುವುದಕ್ಕೆ ಅಂದ್ರೆ ಬೇರೆಯವರು ಆಸ್ತಿ ಮೇಲೆ ಹಕ್ಕು ಸಾಧಿಸಬಹುದು.
ಈ ವಿಚಾರವಾಗಿ ಸ್ವಯಾರ್ಜಿತ ಆಸ್ತಿ ಮತ್ತು ಪಿತ್ರಾರ್ಜಿತ ಆಸ್ತಿ ಬಗ್ಗೆ ಪ್ರತಿಯೊಬ್ಬ ನಾಗರಿಕರು ತಿಳಿದುಕೊಳ್ಳಬೇಕು. ಆದ್ದರಿಂದ ಈ ಮಾಹಿತಿ ಮುಖ್ಯವಾಗಿದೆ.ನಮ್ಮ ಹಿರಿಯರು ಗಳಿಸಿದ ಆಸ್ತಿಯನ್ನು ಪಿತ್ರಾರ್ಜಿತ ಆಸ್ತಿ ಎಂದು ಕರೆಯಬಹುದು. ಇದು ಮೂರು ತಲೆಮಾರು ಒಳಗೊಂಡಿರುತ್ತೆ. ಉದಾಹರಣೆಗೆ ನಾನು ನನ್ನ ತಂದೆ ಮತ್ತು ನನ್ನ ತಾತ ಮಾತ್ರ ಅಂದರೆ ನನ್ನ ಅಜ್ಜ ಮಾತ್ರ.ಈ ರೀತಿ ಮೂರು ತಲೆಮಾರಿನ ಆಸ್ತಿಯನ್ನು ಪಿತ್ರಾರ್ಜಿತ ಆಸ್ತಿ ಒಳಗೊಂಡಿರುತ್ತೆ. ಪಿತ್ರಾರ್ಜಿತ ಆಸ್ತಿ ವಿವರ ಸರಳವಾಗಿ ತಿಳಿದುಕೊಳ್ಳಬಹುದು.
ಉದಾಹರಣೆಗೆ ಅಜಯ ತನ್ನ ಸ್ವಂತ ಆದಾಯದಿಂದ ಗಳಿಸಿದ ಆಸ್ತಿಯನ್ನು ಅಜ್ಜ ಯಾರ ಹೆಸರಿಗೆ ವರ್ಗಾವಣೆ ಮಾಡದೆ ತೀರಿಕೊಂಡರೆ ಅಂದ್ರೆ ಮರಣ ಬಂದರೆ ಅಜ್ಜನ ವಾರಸುದಾರ ಅಜ್ಜನ ಹೆಂಡತಿ ಹಾಗೂ ಅಜ್ಜನ ಮಕ್ಕಳು ಮತ್ತು ಅದೇ ರೀತಿ ಅಜ್ಜನ ಮೊಮ್ಮಕ್ಕಳಿಗೂ ಕೂಡ ಆ ಅಜ್ಜನ ಆಸ್ತಿಯಲ್ಲಿ ಪಾಲು ಇರುತ್ತೆ.ಎರಡನೇ ಉದಾಹರಣೆ ನೋಡುವುದಾದರೆ ಪಿತ್ರಾರ್ಜಿತ ಆಸ್ತಿ ಬಗ್ಗೆ ತಂದೆಯು ತನ್ನ ಸ್ವಂತ ದುಡಿಮೆಯಿಂದ ಆಸ್ತಿ ಗಳಿಸಿ ಆಸ್ತಿಯನ್ನು ಯಾರಿಗೂ ಕೊಡದೆ ತೀರಿಕೊಂಡರೆ ತಂದೆ ಗಳಿಸಿದ ಆಸ್ತಿಯಲ್ಲಿ ತಾಯಿ, ಮಕ್ಕಳು ಮತ್ತು ಮರಿ ಮೊಮ್ಮಕ್ಕಳಿಗೂ ತಂದೆ ಗಳಿಸಿದ ಆಸ್ತಿಯಲ್ಲಿ ಪಾಲು ಹಂಚಿಕೊಳ್ಳಬಹುದು.
ಯಾವ ಆಸ್ತಿಗಳಿಗೆ ಸ್ವಯಾರ್ಜಿತ ಆಸ್ತಿ ಎಂದು ಕರೆಯಬಹುದು. ಹೆಸರುಗಳು ಹಾಗೆ ಸ್ವಯಂ ಅಂದ್ರೆ ಸ್ವಂತ ಅರ್ಜಿತೆಂದರೆ ಗಳಿಸಿದ್ದು ಸ್ವಂತ ಗಳಿಸಿದ ಆಸ್ತಿಯನ್ನು ಸ್ವಯಾರ್ಜಿತ ಆಸ್ತಿ ಎಂದು ಹೇಳಬಹುದು. ಒಬ್ಬ ವ್ಯಕ್ತಿ ತನ್ನ ಸ್ವಂತ ದುಡಿಮೆಯಿಂದ ಅಂದ್ರೆ ತನ್ನ ಪರಿಶ್ರಮದಿಂದ ಸಂಪಾದಿಸಿದ ಆಸ್ತಿಯನ್ನು ಅಥವಾ ಸ್ವತ್ತನ್ನು ಸ್ವಯಾರ್ಜಿತ ಆಸ್ತಿ ಎಂದು ಹೇಳಬಹುದು.ಸ್ವಯಾರ್ಜಿತ ಆಸ್ತಿ ಮೇಲೆ ಯಾರಿಗೂ ಅಧಿಕಾರ ಇರುವುದಿಲ್ಲ. ಕೇವಲ ಆಸ್ತಿ ಗಳಿಸಿದ ವ್ಯಕ್ತಿ ಮಾತ್ರ ಸಂಪೂರ್ಣ ಅಧಿಕಾರ ಆಸ್ತಿ ಮೇಲೆ ಬಂದಿರುತ್ತಾರೆ.ಸ್ವಯಾರ್ಜಿತ ಆಸ್ತಿ ಹೊಂದಿದ ಆ ವ್ಯಕ್ತಿ ಆಸ್ತಿಯನ್ನು ಯಾರಿಗೆ ಬೇಕಾದರೂ ಕೊಡಬಹುದು ಅಥವಾ ದಾನ ಮಾಡಬಹುದು.ತನ್ನ ಸ್ವಂತ ಅಂದ್ರೆ ತನ್ನ ಸ್ವಯಾರ್ಜಿತ ಆಸ್ತಿಯನ್ನು ಒಬ್ಬ ವ್ಯಕ್ತಿ ತಾನು ಬದುಕಿರುವಾಗ ತನ್ನ ಇಚ್ಛೆ ಬಂದವರಿಗೆ ಕೊಡಬಹುದು. ಇದನ್ನು ಅವನು ವಿಲ್ ನಲ್ಲಿ ಬರೆದು ಬೇರೆಯವರಿಗೆ ಕೊಡಬಹುದು.