ಇಲ್ಲಿ ಕಂಡುಬರುವ ವಿನಾಯಕ ಎಲ್ಲರಂಥಲ್ಲ. ಜಡೆಯೇ ಇವನ ವಿಶೇಷ. ಅದಕ್ಕಾಗಿಯೇ ಈತ `ಜಡೆ ಗಣಪ’. ಗಣಪತಿ ಮೂರ್ತಿ ಹಿಂದೆ ಜಡೆ ಇದ್ದು, ಇದು ಸ್ತ್ರೀ ರೂಪ ಅಂದರೆ ಸಾಕ್ಷಾತ್ ಪಾರ್ವತಿಯ ಸ್ವರೂಪವಾಗಿದೆ. ಉಗ್ರ ನರಸಿಂಹ ಸ್ವಾಮಿಯು ಗಣಪತಿಯ ಕೈಯಲ್ಲೇ ಆಸೀನನಾಗಿದ್ದಾನೆ. ಭಕ್ತರಿಗೆ ಅಭಯ ನೀಡುತ್ತಿರುವ ಅಪೂರ್ವ ಗಣೇಶ ಕೂಡ ಈತ.

ಶ್ರೀ ಪಂಚಮುಖಿ ಜೋತಿಷ್ಯ ಪಂಡಿತ್ ಶ್ರೀ ಗಣೇಶ್ ಕುಮಾರ್ ಎಲ್ಲ ಕಷ್ಟಗಳಿಗೂ ಫೋನಿನ ಮೂಲಕ ಪರಿಹಾರ ನೀಡುತ್ತಾರೆ 22 ವರ್ಷಗಳ ಸುದೀರ್ಘ ಅನುಭ ಹೊಂದಿರುವ ಸುಪ್ರಸಿದ್ದ ಜ್ಯೋತಿಷ್ಯರು, ಸಮಸ್ಯೆ ಯಾವುದೇ ಇರಲಿ ಇವರಲ್ಲಿ ಖಂಡಿತ ನಿಮ್ಮ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆದರದಿಂದ ನಿಮ್ಮ ಸಮಸ್ಯೆಗಳನ್ನು ಶಾಶ್ವತವಾಗಿ ಪರಿಹಾರ ಮಾಡುತ್ತಾರೆ ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಕುಜ ದೋಷ ಮತ್ತು ಕೇತು ದೋಷ ಪರಿಹಾರಕ್ಕೆ ಪ್ರಸಿದ್ಧಿ ಹೊಂದಿರುವ ಈ ದೇವಾಲಯದಲ್ಲಿ ಏಕಶಿಲಾಮೂರ್ತಿ `ಜಡೆ ಗಣಪ’ ಬಲು ಆಕರ್ಷಣೀಯ. ಸಂಕಷ್ಟಹರ ಬಯಲು ಗಣಪ, ಜಡೆ ಗಣಪತಿ ಎಂದೂ ಪ್ರಖ್ಯಾತಿ ಯಾಗಿರುವ ಈ ದೇವಸ್ಥಾನ ತನ್ನದೇ ಆದ ವಿಶೇಷತೆಯನ್ನು ಹೊಂದಿದೆ. ಶಿಲ್ಪ ಆಗಮ ಶಾಸ್ತ್ರದ ಪ್ರಕಾರ 21 ಗಣಪತಿ ಪ್ರಭೇದಗಳಿವೆ. ಅವುಗಳಲ್ಲಿ ಒಂದಾದ ಪ್ರಸನ್ನ ಗಣಪತಿಗೆ ನಾಲ್ಕು ಕೈಗಳು.

ಮೇಲಿನೆರಡರಲ್ಲಿ ಪಾಶ, ಅಂಕುಶಗಳು ಇದ್ದರೆ, ಕೆಳಗಿನ ಕೈಗಳು ಅಭಯ, ವರದ ಮುದ್ರೆಗಳನ್ನು ಪ್ರದರ್ಶಿಸುತ್ತವೆ. ಪ್ರಸನ್ನ ಮುಖಮುದ್ರೆ ಇರುವುದರಿಂದ ಶ್ರಿ ಪ್ರಸನ್ನ ಗಣಪತಿ ಎಂಬ ಹೆಸರು. ಈ ಗಣಪತಿ ಸರ್ವಾಭರಣ ಪ್ರಿಯ. ನರಸಿಂಹ ಸ್ವಾಮಿ ಸುಬ್ರಹ್ಮಣ್ಯನ ಅಂಶವುಳ್ಳ ದೇವತೆ. ಗಣಪತಿ ಮೂಲಾಧಾರ ಕ್ಷೇತ್ರಸ್ಥಿತನಾಗಿ ಕುಂಡಲಿನೀ ಶಕ್ತಿ ಪ್ರಚೋದಕರಾಗಿ ಉಗ್ರಸ್ವಾಮಿಯೊಂದಿಗೆ ನೆಲೆಸಿದ್ದಾನೆ. ಇಷ್ಟಾರ್ಥ ಸಿದ್ಧಿಗಾಗಿ ಬರುವ ಭಕ್ತ ಸಮೂಹ ಇಲ್ಲಿಗೆ ಬಂದು ಯಾವುದೇ ಬೇಡಿಕೆಯನ್ನಿಟ್ಟರೂ ನೆರವೇರುತ್ತದೆ ಎನ್ನುವ ಅಪಾರ ನಂಬಿಕೆ ಭಕ್ತರಲ್ಲಿದೆ.

ಈ ಗಣಪನ ಮತ್ತೊಂದು ವಿಶೇಷ ಏನೆಂದರೆ, ಮದುವೆ, ಸಂಪತ್ತು, ಆಶ್ವರ್ಯ, ಸಂತಾನ ಭಾಗ್ಯ ಹೀಗೆ ಹಲವು ಸಂಸಾರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ತುಂಬಾ ಶಕ್ತಿ ಶಾಲಿ ಗಣಪ ಎಂದೇ ಪ್ರಸಿದ್ಧಿವಾಗಿದೆ. ಪ್ರಪಂಚದ ಯಾವುದೇ ಮೂಲೆಯಲ್ಲಿ ಇರದಂಥ ಗಣಪ ಇದಾಗಿದ್ದು ಈತನಿಗೆ ಪುರುಷರು ಮತ್ತು ಮಹಿಳೆಯರು ಏಕಕಾಲದಲ್ಲಿ ಪೂಜೆ ಮಾಡಿದ್ರು ಗಣಪನ ಹಿಂಭಾಗದಲ್ಲಿ ಕೇವಲ ಮಹಿಳೆವರು ಮಾತ್ರ ಪೂಜೆ ಮಾಡುತ್ತಾರೆ.

ಈ ಗಣಪನಿಗೆ ಉದ್ದನೆಯ ಜಡೆ ಇದ್ದು ಮಹಿಳೆಯರು ಜಡೆಗೆ ಬೆಣ್ಣೆ ಹಚ್ಚಿ ಪೂಜೆ ಮಾಡುತ್ತಾರೆ ಕಾರಣ ಗಣಪನ ಜಡೆಯೆಂತೆ ತಮಗೂ ಕೂಡ ಉದ್ದನೆಯ ಕೇಶ ರಾಶಿ ಬರುತ್ತದೆ ಎಂಬ ನಂಬಿಕೆಯಿಂದ ಪೂಜೆ ಮಾಡಲಾಗುತ್ತದೆ. 16.5 ಅಡಿ ಎತ್ತರ ಮತ್ತು 12.5 ಅಡಿ ಅಗಲವಿರುವ ಗಣಪತಿಗೆ ಬೆಣ್ಣೆ ಪೂಜೆಗೆ 85 ಕೆ.ಜಿ. ಬೆಣ್ಣೆ ತಂದು ಪೂಜೆ ಮಾಡಿದರೆ ತಮ್ಮ ಇಷ್ಟಾರ್ಥ ಸಿದ್ಧಿಯಾಗುತ್ತದೆ ಎಂಬ ಅಪಾರ ನಂಬಿಕೆ ಇಲ್ಲಿನ ಭಕ್ತರಲ್ಲಿದೆ.

ಇಲ್ಲಿ ಕಡುಬಿನ ಹಾರ, ಕುಂಕುಮ ಪೂಜೆ, ಅಭಿಷೇಕ. ಕ್ಷೀರಾಭಿಷೇಕ, ರುದ್ರಾಭಿಷೇಕ, ತೈಲಾಭಿಷೇಕ, ಹೂವಿನ ಪೂಜೆ, ಜನ್ಮ ದಿನಾಚರಣೆ ಶಾಂತಿ, ವಿವಾಹ ಸಮಾರಂಭಗಳು ನಡೆಯುತ್ತವೆ. ಅಭಿಷೇಕ, ಕುಂಕುಮಾರ್ಚನೆ, ವಿಶೇಷ ಪೂಜೆ ಹಾಗೂ ಪ್ರಭಾವಳಿ ಅಲಂಕಾರ ಪೂಜೆ ಮಾಡಲಾಗುತ್ತದೆ. ದೇವಸ್ಥಾನದ ಸಮಯ: ಬೆಳಿಗ್ಗೆ 6.30ರಿಂದ ರಾತ್ರಿ 9.30ರವರೆಗೆ ದೇವರ ದರ್ಶನಕ್ಕೆ ಅವಕಾಶವಿದೆ. ದೇವಸ್ಥಾನಕ್ಕೆ ಹೋಗುವ ದಾರಿ: ಹೊಳಲ್ಕೆರೆಯು ಶಿವಮೊಗ್ಗದಿಂದ 80 ಕಿ.ಮೀ, ಚಿತ್ರದುರ್ಗದಿಂದ 60ಕಿ.ಮೀ, ದಾವಣಗೆರೆಯಿಂದ 60 ಕಿ.ಮೀ ದೂರದಲ್ಲಿದೆ.

Leave a Reply

Your email address will not be published. Required fields are marked *