ಸ್ನೇಹಿತರೇ ಇದು ಪ್ರಪಂಚದ ಮೊದಲ ಏಕೈಕ ಅತಿ ದುಬಾರಿ ಸಂಪೂರ್ಣ ಗಾಜುಗಳಿಂದ ನಿರ್ಮಾಣವಾಗಿರುವ ಹಿಂದೂ ದೇವಸ್ಥಾನ. ಈ ದೇವಸ್ಥಾನದ ಹೆಸರು ಅರುಳ್ಮಿಗು ಶ್ರೀ ರಾಜ ಕಾಳಿ ಅಮ್ಮನ್ ಗ್ಲಾಸ್ ಟೆಂಪಲ್ ಈ ದೇವಸ್ಥಾನ ಇರೋದು ನಮ್ಮ ಭಾರತ ದೇಶದಲ್ಲಿ ಅಲ್ಲ. ಭಾರತ ದೇಶದಿಂದ 5524 ಕಿಲೋಮೀಟರ್ ಪ್ರಯಾಣ ಮಾಡಿದ್ದಾರೆ. ಈ ದೇವಸ್ಥಾನ ಸಿಗುತ್ತೆ. ಅತಿ ಹೆಚ್ಚು ಪ್ರವಾಸಿಗರು ಭೇಟಿ ಕೊಡುವ ಏಕೈಕ ಪ್ರವಾಸಿ ತಾಣ. ಮಲೇಶಿಯಾ ದೇಶದಲ್ಲಿ ಈ ಮಲೇಶಿಯಾ ಹಿಂದೂ ದೇವರುಗಳ ಮತ್ತೊಂದು ತವರು ಎಂದು ಹೇಳಿದರು. ತಪ್ಪಾಗಲ್ಲ ಯಾಕಪ್ಪಾ ಅಂದರೆ ಈ ಮಲೇಶಿಯಾ ರಾಷ್ಟ್ರ ದಲ್ಲಿ ಇರೋದು ಒಂದಲ್ಲ ಎರಡಲ್ಲ ಬರೋಬ್ಬರಿ 546 ಹಿಂದೂ ದೇವಸ್ಥಾನಗಳು ಇವೆ. ಭಾರತ ದೇಶದ ಪಕ್ಕದಲ್ಲೇ ಸಾಲಾಗಿ ಬರುವ ರಾಷ್ಟ್ರಗಳಾದ ನೇಪಾಳ ,ಫಿಲಿಫೈನ್ಸ್, ಮಲೇಷಿಯಾ ಎಲ್ಲ ರಾಷ್ಟ್ರ ಗಳಲ್ಲೂ ಹಿಂದೂ ದೇವಸ್ಥಾನಗಳು ರಾರಾಜಿಸುತ್ತಿದೆ. ಸ್ನೇಹಿತರೆ ಈ ರಾಜ ಕಾಳಿ ಮಾತೆ ಅಮ್ಮನವರ ಗ್ಲಾಸ್ ಟೆಂಪಲ್ ಕೇವಲ ಒಂದು ಗ್ಲಾಸ್ ಬಳಸಿ ಮಾಡಿಲ್ಲ.
ಬರೋಬ್ಬರಿ 3,00,000ಕ್ಕೂ ಅಧಿಕ ಕೆಂಪು ನೀಲಿ, ಹಳದಿ, ಹಸಿರು, ನೇರಳೆ ಮತ್ತು ಬಿಳಿ ಬಣ್ಣದ ಗಾಜಿನ ತುಂಡುಗಳನ್ನು ಬಳಸಿ ನಿರ್ಮಾಣ ಮಾಡಿದ್ದಾರೆ. ಇಲ್ಲಿ ಹೋಗುವ ಪ್ರತಿಯೊಬ್ಬರೂ ಈ ದೇವಸ್ಥಾನಕ್ಕೆ ಭೇಟಿ ಕೊಡದೆ ವಾಪಾಸ್ ಬರೋದಿಲ್ಲ. ಈ ದೇವಸ್ಥಾನ ಇರುವ ನಗರದ ಹೆಸರು ಕೂಡ ಸುಲ್ತಾನ್ ಆಫ್ ಜೋಹಾರ್ ಎಂದೇ ಕರೆಯುತ್ತಾರೆ. 1991. ಅಲ್ಲಿ ಮಲೇಶಿಯಾದಲ್ಲಿ ನಡೆದ ಅತಿ ದೊಡ್ಡ ಭೂಕಂಪ ಕ್ಕೆ ದೇವಸ್ಥಾನದ ಶೇಕಡಾ 68% ಭಾಗ ಹಾನಿಯಾಗುತ್ತೆ. ದೇವಸ್ಥಾನದಲ್ಲಿ ನೆಲೆಸಿರುವ ಕಾಳಿ ಮಾತೆಯನ್ನು ವಿಶೇಷವಾದ ಕಲ್ಲಿನಿಂದ ಕೆತ್ತನೆ ಮಾಡಲಾಗಿದ್ದು, ಮಲೇಶ್ಯಾದಲ್ಲಿ ಡಿಪಾರ್ಟ್ ಮೆಂಟ್ ಹೇಳುವ ಪ್ರಕಾರ ಸುಮಾರು 2000 ವರ್ಷಗಳ ಪುರಾತನದ್ದು ಎಂದು ತಿಳಿದುಬಂದಿದೆ. ದೇವಸ್ಥಾನದ ಹಿಂಬದಿಯಲ್ಲಿ ಮದುವೆ ಮಂಟಪ ಕೂಡ ಇದೆ.
ಹಿಂದೂ ಆಗಲಿ ಮುಸ್ಲಿಂ ಆಗಲೀ ಇಬ್ಬರಿಗೂ ಮದುವೆ ಮಂಟಪ ಸಂಪೂರ್ಣ ಉಚಿತ. ಈ ದೇವಸ್ಥಾನ ದಲ್ಲಿ ಹುಂಡಿ ಡಬ್ಬ ಇದೆ. ಈ ಹುಂಡಿ ಡಬ್ಬಕ್ಕೆ ಬರುವ ಕಾಣಿಕೆ ಮಲೇಶಿಯಾ ದೇಶದಲ್ಲಿ ನೆಲೆಸಿರುವ ಅನಾಥ ಮಕ್ಕಳ ಜೀವನ ಉದ್ಧಾರಕ್ಕೆ ಹೋಗುತ್ತೆ .ಸ್ನೇಹಿತರ ವಿಜ್ಞಾನಕ್ಕೆ ಸವಾಲಾಗುವ ಒಂದು ಘಟನೆ ಈ ದೇವಸ್ಥಾನದಲ್ಲಿ ನಡೆಯುತ್ತೆ ಏನು ಗೊತ್ತಾ?ದೇವಸ್ಥಾನ ದಲ್ಲಿ ಎಂಟು ಗಾಜಿನ ಕಂಬಗಳು ಇವೆ. ಬೆಳಗ್ಗೆ ಸೂರ್ಯನ ಬೆಳಕನ್ನು ಹೀರಿ ಕೊಂಡು ರಾತ್ರಿ ಇಡೀ ದೇವಸ್ಥಾನಕ್ಕೆ ಬೆಳಕು ಕೊಡುತ್ತೆ. ಈ ಕಂಬಗಳಿಗೆ ಯಾವ ಟೆಕ್ನಾಲಜಿ ಬಳಸಿದ್ದಾರೆ ಎಂಬುದು ಇಂದಿಗೂ ಯಾರಿಗೂ ಕಂಡು ಹಿಡಿಯಲು ಸಾಧ್ಯವಾಗಿಲ್ಲ. ಭೂಕಂಪಕ್ಕೆ ಒಳಪಟ್ಟ ಈ ದೇವಸ್ಥಾನದಲ್ಲಿ ಕಂಬಗಳಿಗೆ ಯಾವುದೇ ಹಾನಿಯಾಗಿಲ್ಲ. ಭಾರತ, ಅಮೆರಿಕ ಸೇರಿ ಸಾಕಷ್ಟು ದೇಶಗಳು ಈ ಕಂಬಗಳ ಮೇಲೆ ರಿಸರ್ಚ್ ಮಾಡಿದೆ. ಆದರೆ ಯಾವುದು ಪ್ರಯೋಜನವಾಗಿಲ್ಲ. ಹಾಗಾಗಿ ಇಂದಿಗೂ ಕೂಡ ಇದು ಆಕಸ್ಮಿಕ ದೇವಸ್ಥಾನಗಳಲ್ಲಿ ಒಂದಾಗಿದೆ.