WhatsApp Group Join Now

ನಮಸ್ತೇ ಪ್ರಿಯ ಓದುಗರೇ, ಈರುಳ್ಳಿ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ಪ್ರತಿಯೊಬ್ಬರ ಮನೆಯಲ್ಲಿ ರಾರಾಜಿಸುತ್ತದೆ. ಈರುಳ್ಳಿ ಇಲ್ಲದೇ ಅಡುಗೆಯ ಸ್ವಾದ ಹೆಚ್ಚುವುದಿಲ್ಲ. ಹಾಗೂ ಅಡುಗೆ ಮಾಡಲು ಮನಸ್ಸು ಕೂಡ ಬರುವುದಿಲ್ಲ. ಹೀಗಾಗಿ ಈರುಳ್ಳಿ ಅಡುಗೆ ಮನೆಯಲ್ಲಿ ಬೇಕೇ ಬೇಕಾಗುತ್ತದೆ. ಆದರೆ ಈರುಳ್ಳಿಯ ಬಗ್ಗೆ ಹೇಳುವ ಅವಶ್ಯಕತೆ ಇಲ್ಲ ಗೆಳೆಯರೇ, ಒಂದು ಬಾರೀ ಇದರ ಬೆಲೆ ಮುಗಿಲೇರುತ್ತದೆ ಹಾಗೆಯೇ ಕೆಲವೊಂದು ಬಾರೀ ಭೂಮಿಗೆ ಕುಸಿಯುತ್ತದೆ.

ಇದೇ ಒಂದು ಕಾರಣಕ್ಕೆ ರೈತರು ದಲ್ಲಾಳಿಗಳು ಶೆಡ್ ಗಳನ್ನು ಹಾಕಿಕೊಂಡು ಈರುಳ್ಳಿಯ ಬೆಲೆ ಯಾವಾಗ ಜಾಸ್ತಿಯಾಗುತ್ತದೆಯೋ ಅವಾಗ ಮಾತ್ರ ಮಾರಾಟ ಮಾಡುತ್ತಾರೆ. ಹಾಗೂ ಲಾಭವನ್ನು ಗಳಿಸುತ್ತಾರೆ. ಆದರೆ ಸಣ್ಣ ಪ್ರಮಾಣದ ರೈತರು ತಮ್ಮ ಬೆಳೆಗಳಿಗೆ ಸರಿಯಾದ ಬೆಲೆ ಸಿಗದೇ ಒದ್ದಾಡುತ್ತಾ ಸಂಕಷ್ಟದಲ್ಲಿ ಸಿಲುಕುತ್ತಾರೆ. ಈರುಳ್ಳಿ ತೇವಾಂಶ ಭರೀತವಾದ ಬೆಳೆಯಾಗಿದೆ. ಆದ ಕಾರಣ ಇದು ಬೇಗನೆ ಹಾಳಾಗುತ್ತದೆ. ಅದಕ್ಕಾಗಿ ನಮ್ಮ ಕರ್ನಾಟಕ ರಾಜ್ಯ ಸರ್ಕಾರವು ಈರುಳ್ಳಿಯನ್ನು ಸಂಗ್ರಹಣೆ ಮಾಡಲು ಶೆಡ್ ಗಳನ್ನು ನಿರ್ಮಿಸಲು ಎಲ್ಲ ರೈತರಿಗೆ ಸಹಾಯ ಧನವನ್ನು ನೀಡುತ್ತಿದೆ.

ಇದರಿಂದ ಮೂರು ನಾಲ್ಕು ತಿಂಗಳವರೆಗೆ ಶೇಖರಣೆ ಮಾಡಿ ಬೆಲೆ ಏರಿದಾಗ ಮಾರುಕಟ್ಟೆಗೆ ತಂದು ಮಾರಾಟ ಮಾಡಿ ಆದಾಯವನ್ನು ಸುಲಭವಾಗಿ ಗಳಿಸುವ ಉದ್ದೇಶದಿಂದ ಸರ್ಕಾರವು ಶೆಡ್ ನಿರ್ಮಾಣ ಮಾಡಲು ಸಹಾಯ ಧನವನ್ನು ಒದಗಿಸಲು ಯೋಚಿಸಿದೆ. ಇದರಿಂದ ರೈತರಿಗೆ ಒಳ್ಳೆಯದಾಗಲಿ ಅನ್ನುವ ಉದ್ದೇಶಕ್ಕಾಗಿ ಈ ಯೋಜನೆಯನ್ನು ಸರ್ಕಾರ ಹಮ್ಮಿಕೊಂಡಿದೆ. ಹಾಗಾದರೆ ಸರ್ಕಾರವು ಯಾವ ರೀತಿಯಾಗಿ ರೈತರಿಗೆ ಈರುಳ್ಳಿ ಶೆಡ್ ನಿರ್ಮಾಣ ಮಾಡಲು ಎಷ್ಫು ಹಣವನ್ನು ನೀಡುತ್ತದೆ ಅನ್ನುವ ಮಾಹಿತಿಯನ್ನು ಇಂದಿನ ಲೇಖನದಲ್ಲಿ ತಿಳಿದುಕೊಳ್ಳೋಣ ಬನ್ನಿ.

ಕೆಲವು ಸಂಧರ್ಭದಲ್ಲಿ ಈರುಳ್ಳಿಗೆ ಬೆಲೆ ಇರುವುದಿಲ್ಲ. ಈರುಳ್ಳಿಗೆ ಬೆಲೆ ಇದ್ದಾಗ ಅದನ್ನು ಕೊಂಡುಕೊಳ್ಳುವುದಿಲ್ಲ. ಹೀಗಾಗಿ ಅರಿತುಕೊಂಡವರು, ಈರುಳ್ಳಿಯನ್ನು ಶೇಖರಣೆ ಮಾಡಿ ಮಾರಾಟ ಮಾಡಿ ಲಾಭವನ್ನು ಪಡೆಯುತ್ತಾರೆ. ಹೀಗಾಗಿ ಸರ್ಕಾರವು ಇವರಿಗೆ ನೆರವು ಮಾಡಿ ಕೊಡಲು ಈರುಳ್ಳಿಯನ್ನು ಸಂಗ್ರಹಣೆ ಮಾಡುವ ಉದ್ದೇಶದ ಸಲುವಾಗಿ ಶೆಡ್ ನಿರ್ಮಾಣ ಮಾಡಲು ಸಹಾಯ ಧನ ನೀಡಲು ಮುಂದಾಗಿದೆ.

ಇನ್ನೂ ಸರ್ಕಾರದಿಂದ ಈ ಲಾಭವನ್ನು ಪಡೆಯಲು ಏನೆಲ್ಲಾ ದಾಖಲೆಗಳು ಬೇಕಾಗುತ್ತದೆ ಅಂದರೆ ಮೊದಲಿಗೆ ಒಂದು ಸ್ಟ್ಯಾಂಪ್ ತೆಗೆದುಕೊಳ್ಳಬೇಕು. ಇದು 20 ರೂಪಾಯಿಗೆ ಸಿಗುತ್ತದೆ ಇದರಲ್ಲಿ ಹೇಳಿಕೆ ಬರೆದು ಸಹಿ ಮಾಡಬೇಕು ಸ್ಟ್ಯಾಪ್ ಪೇಪರ್ ನಲ್ಲಿ ಅರ್ಜಿದಾರನ ಹೆಸರು, ಎರಡನೆಯ ಪಾರ್ಟಿ ಹೆಸರು ಮತ್ತು ತೋಟಗಾರಿಕೆ ಕಚೇರಿಯ ಹೆಸರು ಇರಬೇಕು. ಇದರ ಜೊತೆಗೆ ಪಡಿತರ ಚೀಟಿ, ಆಧಾರ ಕಾರ್ಡ್ ಹಾಗೂ ನೀರು ಬಳಕೆ ಪತ್ರ ಕೂಡ ಬೇಕಾಗುತ್ತದೆ.

ಇನ್ನೂ ಅರ್ಜಿ ನಮೂನೆಯನ್ನು ತೆಗೆದುಕೊಂಡು ಅದನ್ನು ಸಂಪೂರ್ಣವಾಗಿ ತುಂಬಬೇಕು. ಬ್ಯಾಂಕ್ ಪಾಸ್ ಬುಕ್ ಜೊತೆಗೆ ನಮೂನೆ ಆರು ತೆಗೆದುಕೊಳ್ಳಬೇಕು. ಕೆಲಸಗಾರನ ಹೆಸರು ಜಾಬ್ ನಂಬರ್ ಹಾಗೆಯೇ ಇದರ ಪಿಡಿಓ ಸಹಿ ಕೂಡ ಇರಬೇಕು. ಮತ್ತು ಹೊಲದ ಪಹಣಿ ಜೊತೆಗೆ ಈ ಎಲ್ಲ ದಾಖಲೆಗಳನ್ನು ತಾಲೂಕಿನ ತೋಟಗಾರಿಕೆ ಇಲಾಖೆಯ ಕಚೇರಿಗೆ ಸಲ್ಲಿಸಬೇಕು. ತೋಟಗಾರಿಕೆ ಇಲಾಖೆ ಇಂದ ಪ್ರತಿನಿಧಿಯು ಪರೀಶೀಲನೆ ಮಾಡಿ ಕ್ರಿಯಾ ಯೋಜನೆಗೆ ಸಿದ್ದ ಮಾಡಿ ನಂತರ ಅದನ್ನು ಕಂಪ್ಯೂಟರ್ ಗೆ ದಾಖಲಿಸಿದ ನಂತರ ಪ್ರತಿನಿಧಿಯು ನೇರವಾಗಿ ಪ್ರದೇಶಕ್ಕೆ ಭೇಟಿ ನೀಡುತ್ತಾರೆ.

ತದ ನಂತರ ಶೆಡ್ ನಿರ್ಮಾಣ ಮಾಡಲು ನೇರವಾಗಿ ಬ್ಯಾಂಕ್ ಖಾತೆಯಲ್ಲಿ ಶೇಕಡಾ 40% ರಷ್ಟು ಸಹಾಯಧನ ನೀಡುತ್ತಾರೆ ಮತ್ತು 60% ಭಾಗದಷ್ಟು ಹಣವನ್ನು ಮಟಿರಿಯರ್ಲಸ್ ಅಂಗಡಿಗೆ ಕೊಡುತ್ತಾರೆ. 60 ಸಾವಿರದಿಂದ 1,60,000 ರೂಪಾಯಿಯವರೆಗೆ ಸಹಾಯ ಧನವನ್ನು ನೀಡುತ್ತಾರೆ. ಹೊಲದ ವಿಸ್ತೀರ್ಣ್ದ ಅನುಗುಣವಾಗಿ ಶೆಡ್ ಅನ್ನು ನಿರ್ಮಾಣ ಮಾಡಲಾಗುತ್ತದೆ. ಕೆಲಸಗಾರನ ಕೂಲಿಯು ನೇರವಾಗಿ ಬ್ಯಾಂಕ್ ಖಾತೆಗೆ ಉದ್ಯೋಗ ಖಾತ್ರಿ ಯೋಜನೆಯಡಿ ಜಮಾ ಆಗುತ್ತದೆ.

ಹಾಗೂ ಮಟಿರಿಯಲ್ ಅಂಗಡಿಯ ಮಾಲೀಕನಿಗೆ ಜಮಾ ಆಗುತ್ತದೆ. 10% ಇತರೆ ಖರ್ಚಿಗಾಗಿ ಅರ್ಜಿದಾರನ ಖಾತೆಗೆ ನೀಡಲಾಗುತ್ತದೆ. ಈರುಳ್ಳಿ ತೇವಾಂಶ ಗುಣವನ್ನು ಹೊಂದಿದ್ದು ಬೇಗನೆ ಹಾಳಾಗುತ್ತದೆ ಅನ್ನುವ ಉದ್ದೇಶಕ್ಕಾಗಿ ಹಾಗೂ ರೈತರಿಗೆ ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗಲಿ ಅನ್ನುವ ಉದ್ದೇಶದ ಕಾರಣಕ್ಕಾಗಿ ಈ ಯೋಜನೆ ಜಾರಿಗೆ ತಂದಿದೆ ಸರ್ಕಾರವು. ಮಾಹಿತಿ ಇಷ್ಟವಾದರೆ ಲೈಕ್ ಮಾಡಿ ಶೇರ್ ಮಾಡಿ ಶುಭದಿನ.

WhatsApp Group Join Now

Leave a Reply

Your email address will not be published. Required fields are marked *