ನಮಸ್ತೆ ಪ್ರಿಯ ಓದುಗರೇ, ಲೇಬರ್ ಕಾರ್ಡ್ ಅಥವಾ ಕಾರ್ಮಿಕರ ಕಾರ್ಡ್ ಅಂತ ಕರೆಯುವ ಈ ಕಾರ್ಡನ್ನು ಕಟ್ಟಡ ನಿರ್ಮಾಣ ಮಾಡುವ ಕೆಲಸಗಾರರಿಗೆ ಸಂಭಂದಿಸುತ್ತದೆ. ಈ ಕಾರ್ಡ್ ಅನ್ನು ಪ್ರತಿಯೊಬ್ಬ ಕಟ್ಟಡ ನಿರ್ಮಾಣ ಕಾರ್ಮಿಕ ಹೊಂದಿರಬೇಕು. ಹಾಗಾದರೆ ಈ ಕಾರ್ಡ್ ಅನ್ನು ಮಾಡಿಸುವುದು ಹೇಗೆ? ಇದರಿಂದ ಆಗುವ ಲಾಭಗಳು ಆದರೂ ಏನು?ಇದನ್ನು ಪಡೆಯಲು ಯಾವೆಲ್ಲ ಡಾಕ್ಯುಮೆಂಟ್ ಬೇಕಾಗುತ್ತದೆ ಹಾಗೆಯೇ ಸರ್ಕಾರವು ಈ ಕಾರ್ಡ್ ಅನ್ನು ಪಡೆದರೆ ಎಷ್ಟು ಧನ ಸಹಾಯ ಮಾಡುತ್ತದೆ. ಎಲ್ಲವನ್ನು ಇಂದಿನ ಲೇಖನದಲ್ಲಿ ಸವಿಸ್ತಾರವಾಗಿ ನಿಮಗೆ ತಿಳಿಸಿಕೊಡುತ್ತೇವೆ ಬನ್ನಿ.

ಶ್ರೀ ಪಂಚಮುಖಿ ಜೋತಿಷ್ಯ ಪಂಡಿತ್ ಶ್ರೀ ಗಣೇಶ್ ಕುಮಾರ್ ಎಲ್ಲ ಕಷ್ಟಗಳಿಗೂ ಫೋನಿನ ಮೂಲಕ ಪರಿಹಾರ ನೀಡುತ್ತಾರೆ 22 ವರ್ಷಗಳ ಸುದೀರ್ಘ ಅನುಭ ಹೊಂದಿರುವ ಸುಪ್ರಸಿದ್ದ ಜ್ಯೋತಿಷ್ಯರು, ಸಮಸ್ಯೆ ಯಾವುದೇ ಇರಲಿ ಇವರಲ್ಲಿ ಖಂಡಿತ ನಿಮ್ಮ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆದರದಿಂದ ನಿಮ್ಮ ಸಮಸ್ಯೆಗಳನ್ನು ಶಾಶ್ವತವಾಗಿ ಪರಿಹಾರ ಮಾಡುತ್ತಾರೆ ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಮೊದಲಿಗೆ ಈ ಕಾರ್ಡ್ ಅನ್ನು ಪಡೆಯಲು ನೀವು ಕನಿಷ್ಠ 18 ವರ್ಷದವರು ಆಗಿದ್ದು ಗರಿಷ್ಠ 60 ವಯಸ್ಸು ವಯೋಮಿತಿ ಹೊಂದಿರಬೇಕು. ಹಾಗಾದರೆ ಅರ್ಜಿ ಸಲ್ಲಿಕೆಗೆ ಏನೆಲ್ಲ ಡಾಕ್ಯುಮೆಂಟ್ ಬೇಕಾಗುತ್ತದೆ ಅಂತ ಮೊದಲು ತಿಳಿದುಕೊಂಡು ನಂತ್ರ ನಾವು ಈ ಕಾರ್ಡ್ ನಿಂದ ಆಗುವ ಹತ್ತಾರು ಲಾಭಗಳ ಬಗ್ಗೆ ಹೆಚ್ಚುವರಿ ಆಗಿ ತಿಳಿಯುತ್ತಾ ಹೋಗೋಣ ಮಿತ್ರರೇ. ಆಧಾರ ಕಾರ್ಡ್ ಗೆ ಲಿಂಕ್ ಆಗಿರುವ ಪ್ರಸ್ತುತ ಮೊಬೈಲ್ ನಂಬರ್, ವೋಟರ್ ಐಡಿ, ಬ್ಯಾಂಕ್ ಪಾಸ್ ಬುಕ್, ಪಾನ್ ಕಾರ್ಡ್, ಮುಖ್ಯವಾಗಿ ಉದ್ಯೋಗ ದೃಢೀಕರಣ ಪತ್ರ ಅಥವಾ ಗುತ್ತಿಗೆದಾರನಿಂದ ಪಡೆದ ಅರ್ಜಿ ನಮೂನೆಯನ್ನು ಸಲ್ಲಿಸಬೇಕು.

ಇಷ್ಟು ದಾಖಲಾತಿ ನಿಮ್ಮ ಹತ್ತಿರ ಇದ್ದರೆ ನೀವು ನಿಮ್ಮ ಹತ್ತಿರವಿರುವ ಕಾನೂನು ಭಾಗಗಳಿಗೆ ಹೋಗಿ ಅರ್ಜಿಯನ್ನು ಸಲ್ಲಿಸಬಹುದು ಅಥವಾ ಸೇವಾ ಸಂಸ್ಥೆಗಳ ಮೂಲಕ ಅರ್ಜಿಯನ್ನು ಅಪ್ಲೈ ಮಾಡಬಹುದು ಇಲ್ಲವಾದರೆ ನೀವು ಆನ್ಲೈನ್ ಮುಖಾಂತರ ನೀವೇ ಅರ್ಜಿಯನ್ನು ಸಲ್ಲಿಸಬಹುದು. ಈ ರೀತಿ ಮಾಡಿದರೆ ನೀವು ಲೇಬರ್ ಕಾರ್ಡ್ ಪಡೆಯಬಹುದು. ನಿಮಗೆ ಅನ್ನಿಸುತ್ತಿರಬಹುದು ಇಷ್ಟೊಂದು ಬೆಲೆ ಇದೆಯಾ? ಈ ಲೇಬರ್ ಕಾರ್ಡ್ ಪಡೆಯುವುದರಿಂದ ಅಂತ ಹೌದು ಮಿತ್ರರೇ ನಿಜಕ್ಕೂ ಈ ಲೇಬರ್ ಕಾರ್ಡ್ ನಿಂದ ನಿಮಗೆ ಊಹಿಸಲಾಗದಷ್ಟು ಲಾಭಗಳು ದೊರೆಯುತ್ತದೆ.

ಹಾಗಾದರೆ ಬನ್ನಿ ಅವುಗಳನ್ನು ಒಂದೊಂದಾಗಿ ತಿಳಿಯೋಣ. ಕಾರ್ಮಿಕ ಕಾರ್ಡ್ ಪಡೆದುಕೊಂಡ ವ್ಯಕ್ತಿಗೆ ಅಥವಾ ಫಲಾನುಭವಿಗೆ ಪ್ರತಿ ತಿಂಗಳು ಪಿಂಚಣಿ ರೂಪದಲ್ಲಿ ಒಂದು ಸಾವಿರ ರೂಪಾಯಿ ದೊರೆಯುತ್ತದೆ. ಇನ್ನೂ ಕಾರ್ಮಿಕರು ಏನಾದರೂ ಮನೆಯನ್ನು ಕಟ್ಟಿಸಿಕೊಳ್ಳಲು ಇಷ್ಟ ಪಟ್ಟರೆ ಅವರಿಗೆ ಕಾರ್ಮಿಕ ಗೃಹ ಯೋಜನೆ ಅಡಿ ಎರಡು ಲಕ್ಷದವರೆಗೆ ಮುಂಗಡ ಸಾಲವಾಗಿ ಪಡೆಯಬಹುದು.

ಈ ಲೇಬರ್ ಕಾರ್ಡ್ ಅನ್ನುವುದು ಕೇವಲ ಪುರುಷರಿಗೆ ಮಾತ್ರ ಸೀಮಿತವಲ್ಲದೆ ಈ ಕಾರ್ಡ್ ಅನ್ನು ಮಹಿಳೆಯರು ಏನಾದರೂ ಹೊಂದಿದ್ದರೆ ಅವರ ಹೆರಿಗೆಯ ಸಮಯದಲ್ಲಿ ಹೆಣ್ಣು ಮಗುವಾದರೆ 20 ಸಾವಿರ ಮತ್ತು ಗಂಡು ಮಗು ಜನ್ಮವಾದರೆ 20ಸಾವಿರ ಸಹಾಯ ಧನ ಪಡೆಯಬಹುದು. ಇನ್ನೂ ಕಟ್ಟಡ ನಿರ್ಮಾಣ ಮಾಡುವಾಗ ಕಾರ್ಮಿಕರು ಏನಾದ್ರೂ ಅಪ್ಪಿ ತಪ್ಪಿ ದೈಹಿಕವಾಗಿ ಅಂಗವಿಕಲರು ಆದರೆ ಅವರಿಗೆ ಎರಡು ಲಕ್ಷದವರೆಗೆ ಸಹಾಯ ಧನವನ್ನು ನೀಡಲಾಗುತ್ತದೆ. ಹಾಗೆಯೇ ಕಾರ್ಮಿಕನು ಏನಾದರು ಕೆಲಸವನ್ನು ಮಾಡುವಾಗ ಮರಣವನ್ನು ಹೊಂದಿದ್ದರೆ ಅವರಿಗೆ 5ಲಕ್ಷ ರೂಪಾಯಿಯವರೆಗೆ ಸಹಾಯ ಧನ ನೀಡಲಾಗುತ್ತದೆ.

ಇನ್ನೂ ಈ ಲೇಬರ್ ಕಾರ್ಡ್ ಹೊಂದಿರುವ ವ್ಯಕ್ತಿಯ ಮಕ್ಕಳ ಮದುವೆಗೆ 50ಸಾವಿರ ರೂಪಾಯಿ ನಗದು ಹಣದ ಮೂಲಕ ನೀಡಲಾಗುತ್ತದೆ. ಅಲ್ಲದೆ ಇವರು ಕೆ.ಎಸ್.ಆರ್.ಟಿ.ಸಿ ಮತ್ತು ಬಿ.ಎಂ.ಟಿ.ಸಿ ಬಸ್ಸುಗಳಲ್ಲಿ ಉಚಿತವಾಗಿ ರಾಜ್ಯಾದಂತ ಪ್ರಯಾಣವನ್ನು ಕೈಗೊಳ್ಳಬಹುದು. ಕಟ್ಟಡ ಕಾರ್ಮಿಕರಿಗೆ ವಿಧ್ಯಾರ್ಥಿ ವೇತನವೂ ಕೂಡ ನೀಡಲಾಗುತ್ತದೆ. ಒಂದನೇ ತರಗತಿಯಿಂದ ಹಿಡಿದು ಸ್ನಾತಕೋತ್ತರ ಪದವಿಯವರೆಗೆ ವಿಧ್ಯಾರ್ಥಿ ಓದಲು ಇಚ್ಛಿಸಿದರೆ ಆತನಿಗೆ 2ಸಾವಿರದಿಂದ 20ಸಾವಿರವರೆಗೆ ವಿಧ್ಯಾರ್ಥಿ ವೇತನವೂ ಕೂಡ ನೀಡಲಾಗುತ್ತದೆ.

ಇನ್ನೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅವರ ಅಂಕಗಳ ಆಧಾರದ ಮೇಲೆ ಕೂಡ ವಿಧ್ಯಾರ್ಥಿ ವೇತನ ಪಡೆಯಲಾಗುವುದು. ಹೀಗೆ ಈ ಎಲ್ಲಾ ಸೌಲಭ್ಯಗಳು ಸಹ ಕಾರ್ಮಿಕರ ಕಾರ್ಡ್ ಹೊಂದಿದವರಿಗೆ ಹಾಗೂ ಅವರ ಕುಟುಂಬದ ಸದಸ್ಯರಿಗೆ ದೊರೆಯುತ್ತದೆ. ಇಷ್ಟೊಂದು ಸೌಲಭ್ಯವನ್ನು ಪಡೆಯಲು ನೀವು ಇಷ್ಟ ಪಡುವುದಾದರೆ ತಕ್ಷಣವೇ ಕಟ್ಟಡ ಕಾರ್ಮಿಕ ಕಾರ್ಡ್ ಮಾಡಿಸಿ.

Leave a Reply

Your email address will not be published. Required fields are marked *