ಈ ಬಾರಿ ಮಳೆಯಾಗದೆ ರೈತರು ಒದ್ದಾಡುತ್ತಾರೆ. ಚೆನ್ನಾಗಿ ಬೆಳೆಯನ್ನ ಬೆಳೆಯುವ ರೈತರಿಗೆ ನಿರಾಸೆ ಕಾಡಿದೆ. ಅಷ್ಟೇ ಅಲ್ಲದೆ ಹಕ್ಕಿಗಳ ಕಾಟವು ಶುರುವಾಗಿದೆ. ಇದರಿಂದ ಬೆಳೆಗಳನ್ನ ರಕ್ಷಿಸಿಕೊಳ್ಳಲು ರೈತರು ಹೊಸ ಮಾರ್ಗವೊಂದನ್ನ ಕಂಡು ಹಿಡಿದಿದ್ದಾರೆ. ಬಾಗಲಕೋಟೆಯ ಜಿಲ್ಲೆಯಲ್ಲಿ ಶಂಕರಪ್ಪ ಎನ್ನುವವರು ಅವರ ನಾಲ್ಕು ಎಕರೆ ಜಮೀನಿನಲ್ಲಿ ಮೆಕ್ಕೆಜೋಳ ಕಬ್ಬು ಜೋಳ ಸಜ್ಜೆ ಹೀಗೆ ಹಲವಾರು ರೀತಿಯ ಬೆಳೆಗಳನ್ನ ಬೆಳೆದಿದ್ದಾರೆ. ಬೀಜ ಬಿತ್ತನೆ ಮಾಡಿ ಸುಮಾರು ಒಂದು ನಾಲ್ಕು ತಿಂಗಳು ಕಳೆದಿದೆ. ಆಳೆತ್ತರಕ್ಕೆ ಬೆಳೆದಿರುವ ತೆನೆ ಗಳಿಗೆ ಹಕ್ಕಿಗಳ ಕಾಟ ಮಾತ್ರ ತಪ್ಪಿಲ್ಲ.
ಇದರಿಂದ ನೊಂದ ಶಂಕ್ರಪ್ಪನವರು ಹಕ್ಕಿಗಳ ಕಾಟವನ್ನು ತಪ್ಪಿಸಲು ಒಂದು ಹೊಸ ಮಾರ್ಗವನ್ನು ಕಂಡುಕೊಂಡಿದ್ದಾರೆ ಅದೇನೆಂದರೆ ಎಣ್ಣೆ ಡಬ್ಬಿಯನ್ನು ಎರಡು ಹೋಲು ಮಾಡಿ ಅದಕ್ಕೆ ದಾರವಂದನ ಕಟ್ಟಿ ಹೆಗಲಿಗೆ ತೂಗಿ ಹಾಕಿಕೊಂಡು ಅದನ್ನು ಬಡಿದರೆ ಹಕ್ಕಿಗಳು ಹತ್ತಿರ ಬರುವುದಿಲ್ಲ. ಇದೊಂದು ಉಪಾಯ ಫಲಿಸಿದೆ. ಈ ರೀತಿಯಾಗಿ ಶಂಕ್ರಪ್ಪನವರು ತಮ್ಮ ಬೆಳೆಗಳನ್ನ ರಕ್ಷಿಸಿಕೊಳ್ಳುತ್ತಿದ್ದಾರೆ.
ಅದೇ ರೀತಿ ಎಲ್ಲರೂ ಆ ಊರಿನಲ್ಲಿ ತಮ್ಮ ಬೆಳೆಯನ್ನ ರಕ್ಷಿಸಿಕೊಳ್ಳಲು ಡಬ್ಬ ಬಡಿಯುವ ಕೆಲಸಕ್ಕೆ ಕಾರ್ಮಿಕರನ್ನು ಇಟ್ಟುಕೊಳ್ಳುತ್ತಿದ್ದಾರೆ. ದಿನಕ್ಕೆ 500 ರೂಪಾಯಿಯಂತೆ ಸಂಬಳವನ್ನು ಕೊಟ್ಟು ಬೆಳೆಯನ್ನ ರಕ್ಷಣೆ ಮಾಡುವುದಕ್ಕೋಸ್ಕರ ಕಾರ್ಮಿಕರನ್ನ ಇಟ್ಟುಕೊಳ್ಳುತ್ತಿದ್ದಾರೆ. ಇದರಿಂದ ಆ ಊರಿನವರು ತಮ್ಮ ಬೆಳೆಯನ್ನ ರಕ್ಷಿಸಿಕೊಳ್ಳುವುದರ ಜೊತೆಗೆ ಕಾರ್ಮಿಕರಿಗೂ ಕೂಡ ಒಂದು ಹೊಸ ಉದ್ಯೋಗ ಸಿಕ್ಕಿದೆ ಅಂತಾನೆ ಹೇಳಬಹುದು. ನಮ್ಮ ಮಾಹಿತಿ ಇಷ್ಟವಾದಲ್ಲಿ ಲೈಕ್ ಮಾಡಿ ಹಾಗೂ ಶೇರ್ ಮಾಡಿ.