ಒಂದು ಸೈಟ್ ಖರೀದಿ ಮಾಡಬೇಕು ಅಂದ್ರು. ಸೈಟ್ ನ ನಿಜವಾದ ಬೆಲೆ ಎಷ್ಟು ಇರುತ್ತೆ.ಹಾಗೆ ಅದೇ ರೀತಿ ಯಾವುದೇ ಜಮೀನು ಖರೀದಿ ಮಾಡಬೇಕೆಂದರು. ಜಮೀನಿನ ನೈಜ ಬೆಲೆ ಎಷ್ಟು ಇರುತ್ತೆ. ಈ ವಿಷಯ ಪ್ರತಿಯೊಬ್ಬರಿಗೂ ಬೇಕೇಬೇಕು. ಸೈಟು ಮನೆ ಮತ್ತು ಜಮೀನು ಖರೀದಿ ಮಾಡುವರಿಗೂ ಮತ್ತು ಕೊಂಡುಕೊಳ್ಳುವವರಿಗೂ ಈ ಮಾಹಿತಿ ಭಾರಿ ಉಪಯೋಗವಾಗುತ್ತೆ. ಸೈಟಿಗೆ ಹೊಲಕ್ಕೆ ಮತ್ತು ಮನೆಗೆ ನಿಜವಾದ ಬೆಲೆ ಯಾರು ನಿಗದಿ ಪಡಿಸುತ್ತಾರೆ. ಒಂದು ಜಮೀನಿಗೆ ಮತ್ತು ಒಂದು ಆಸ್ತಿಗೆ ಬೆಲೆ ಹೇಗೆ ನಿಗದಿಪಡಿಸುತ್ತಾರೆ. ಹೇಗೆ ನಿಗದಿಯಾಗುತ್ತೆ. ಅದೇ ರೀತಿ ಯಾವ ಮಾನದಂಡಗಳನ್ನು ಅನುಸರಿಸಿ ಅದನ್ನು ಒಂದು ಬೆಲೆ ನಿಗದಿ ಮಾಡುತ್ತಾರೆ.
ಮೊಟ್ಟ ಮೊದಲಿಗೆ ಜಮೀನಿನ ಮೌಲ್ಯ ಆಸ್ತಿಗೆ ನೈಜ ಬೆಲೆ ಅಂದರೆ ಏನು. ಅದು ಈ ರೀತಿ ಜಮೀನಿನ ಮೌಲ್ಯ ಯಾರು ನಿಗದಿ ಪಡಿಸುತ್ತಾರೆ ಎಂಬುದನ್ನು ತಿಳಿಯೋಣ ಆಸ್ತಿಯ ತೆರಿಗೆ ವಂಚನೆ ತಡೆಗೋಸ್ಕರ ರಾಜ್ಯ ಸರ್ಕಾರ ಇದಕ್ಕೆ ಕಡಿವಾಣ ಹಾಕಲು ಮುದ್ರಾಂಕ ಮತ್ತು ನೋಂದಣಿ ಇಲಾಖೆ ಕರ್ನಾಟಕ ಸರ್ಕಾರ ಸಹಾಯದೊಂದಿಗೆ ಪ್ರತಿಯೊಂದು ಜಮೀನಿಗೆ ಆಗಲಿ ಅಥವಾ ಆಸ್ತಿಗಾಗಲಿ, ಕನಿಷ್ಠ ಮೌಲ್ಯ ನಿಗದಿಪಡಿಸಿವುದನ್ನೇ ಜಮೀನಿನ ಮೌಲ್ಯ ಅಥವಾ ಆಸ್ತಿಗೆ ಒಂದು ನೈಜ ಬೆಲೆ ಎಂದು ಕರೆಯುತ್ತಾರೆ.
ನೆನಪಿಡಿ ಯಾವುದೇ ಒಂದು ಜಮೀನಿಗೆ ಅದರ ನೈಜ ಮೌಲ್ಯ ಕಂಡು ಹಿಡಿಯಲು ಈ ಕೆಳಕಂಡ ಮಾನದಂಡಗಳು ಅನುಸರಿಸುತ್ತಾರೆ. ಭೂಮಿಯ ಗುಣಧರ್ಮಗಳ ಮೇಲೆ ನೈಜ ಬೆಲೆ ಇದ್ದೇ ಇರುತ್ತೆ.ಮಣ್ಣಿನ ಮನೆಗಳು ಉದಾಹರಣೆಗೆ ಕಪ್ಪು ಮಣ್ಣು ಆಗಿರಬಹುದು, ಜೇಡಿಮಣ್ಣು ಮತ್ತು ಕೆಂಪು ಮಣ್ಣು ಪ್ರಸ್ತುತ ಜಮೀನಿನ ಅಂದಾಜು ಮಾರುಕಟ್ಟೆ ಬೆಲೆಗಳು ಸಹ ಅದರ ಮೇಲೆ ಹೋಗುತ್ತೆ.ವಾಣಿಜ್ಯ ಮತ್ತು ಕೈಗಾರಿಕೆ ಅನುಗುಣವಾಗಿ ನೈಜ ಮೌಲ್ಯ ಇದಕ್ಕೆಲ್ಲ ಆಗುತ್ತೆ. ಭವಿಷ್ಯದ ಬದಲಾವಣೆ ಆಧಾರದ ಮೇಲೆ ಸಹ ಆಗುತ್ತೆ. ಬಹಳ ಮುಖ್ಯವಾಗಿ ಆ ಒಂದು ಜಮೀನು ನೀರಾವರಿ ಪ್ರಮುಖ ಪಾತ್ರ ವಹಿಸುತ್ತೆ.
ಇಲ್ಲಿ ಹೇಳಿರುವ ಎಲ್ಲ ಮಾರ್ಗಸೂಚಿಗಳನ್ನು ಅನುಸರಿಸಿ ನೋಂದಣಿ ಮತ್ತು ಮುದ್ರಾಂಕ ಇಲಾಖೆಯವರು ಪ್ರತಿಯೊಂದು ಜಮೀನಿಗೆ ಅದರ ಕನಿಷ್ಠ ಮೌಲ್ಯ ನಿಗದಿ ಪಡಿಸುತ್ತಾರೆ. ಉದಾಹರಣೆಯಾಗಿ ಹೇಳುವುದಾದರೆ ನಮ್ಮ ಉತ್ತರ ಕರ್ನಾಟಕದ ಭಾಗದಲ್ಲಿ ಖುಷ್ಕಿ ಜಮೀನುಗಳು ಅಂದ್ರೆ ಒಣಭೂಮಿ ಬಹಳಷ್ಟಿದೆ. ಆ ಹಿನ್ನೆಲೆಯಲ್ಲಿ ಜಮೀನಿನ ಮೌಲ್ಯ ಕಡಿಮೆ ಇರುತ್ತ ಎಂದು ನಾವು ತಿಳಿದುಕೊಳ್ಳಬೇಕು. ಅದರಂತೆ ಬೇರೆ ಜಮೀನು ಇದ್ದರೆ ಸಹ ಕೆಲವೊಂದು ಕಡೆ ಅದರ ಮೂಲ ಹೆಚ್ಚಾಗಿರುತ್ತೆ. ಇದಕ್ಕೆ ಕಾರಣ ಇಷ್ಟೇ. ಸದರಿ ಜಮೀನಿಗೆ ಹೋಗಿ ಬರಲು ಮುಖ್ಯರಸ್ತೆ ಇದ್ದಿರಬಹುದು ಅಥವಾ ಆ ಒಂದು ಜಮೀನು ಕೃಷಿ ಜಮೀನು ಪಟ್ಟಣಕ್ಕೆ ಸಮೀಪ ಸಹ ಇದ್ದಿರಬಹುದು ಅಷ್ಟೇ ಜಮೀನಿನ ಮೂಲ ನಿಗದಿಪಡಿಸುವುದರಿಂದ ಸಾರ್ವಜನಿಕರಿಗೆ ಆಗುವ ಉಪಯೋಗಗಳು ಏನು ಅಂತ ತಿಳಿದುಕೊಳ್ಳೋಣ.
ಒಂದು ಮಾರುಕಟ್ಟೆ ಬೆಲೆ ಜಾಸ್ತಿ ಇದ್ರು. ಸರಕಾರಕ್ಕೆ ಕಡಿಮೆ ತೆರಿಗೆ ಕಟ್ಟಬಹುದು.ಇದರಿಂದ ನಮಗೆ ಖಂಡಿತ ಉಪಯೋಗವಾಗುತ್ತೆ. ಉದಾಹರಣೆಗೆ ಒಂದು ಹಳ್ಳಿಯಲ್ಲಿ ಸರ್ಕಾರ ನಿಗದಿಪಡಿಸಿದ ಕುಷ್ಕಿ ಜಮೀನಿನ ಮೌಲ್ಯ ಎಕರೆಗೆ 3,00,000 ಇದೆ. ಆದರೆ ಇಲ್ಲಿನ ಮಾರುಕಟ್ಟೆ ಬೆಲೆ ಒಂದು ಎಕರೆಗೆ 8,00,000 ಇದ್ರೆ ಇದರಿಂದ 5,00,000 ರೂಪಾಯಿವರೆಗೂ ತೆರಿಗೆ ಕಟ್ಟುವುದು ಉಳಿಯುತ್ತೆ.ಭೂ ಮಾಫಿಯಾ ಮತ್ತು ಮೋಸಗಾರರು ವಂಚನೆಯಿಂದ ಖಂಡಿತ ಉಪಯೋಗವಾಗುತ್ತೆ. ಮಾರಾಟಗಾರ ಮತ್ತು ಕೊಳ್ಳುವ ಹಿತಾಸಕ್ತಿ ಇದರಲ್ಲಿ ಅಡಗಿರುತ್ತೆ. ಇನ್ನು ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಲು ಕೆಳಗೆ ನೀಡಿರುವ ವಿಡಿಯೋ ವೀಕ್ಷಣೆ ಮಾಡಿ.