ಒಬ್ಬ ರೈತ ಒಳ್ಳೆಯ ತಂತ್ರಜ್ಞಾನ ಉಪಯೋಗಿಸಿ ವ್ಯವಸಾಯ ಮಾಡಿದರೆ ಅವರ ಮುಂದೆ ಯಾರು ಸಾಟಿ ಇಲ್ಲ. ಇಲ್ಲೊಬ್ಬ ರೈತ ಒಂದು ಹಲಸಿನ ಮರದಿಂದ 10 ಲಕ್ಷಕ್ಕೂ ಹೆಚ್ಚು ಸಂಪಾದನೆ ಮಾಡುತ್ತಿದ್ದಾರೆ.ಅದು ಹೇಗೆ ಸಾಧ್ಯವಾಗಿದೆ ಎಂದು ನೋಡೋಣ ಬನ್ನಿ. ಒಂದು ಹಲಸಿನ ಮರದಿಂದ 10,00,000 ಸಂಪಾದನೆ ಮಾಡುತ್ತಿರುವ ಈ ರೈತನನ್ನ ನೋಡಿ ಎಲ್ಲರೂ ಆಶ್ಚರ್ಯಕ್ಕೆ ಒಳಗಾಗಿದ್ದಾರೆ ಯಾಕೆಂದರೆ ಈ ರೈತ ಮಾಡುವುದು ಅಸಾಧ್ಯವಾದ ಮಾತು ಇವನು ಸುತ್ತಮುತ್ತಲಿ ಇರುವಂತಹ ಜನ ಯಾರಿಂದಲೂ ಕೂಡ ಈ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ ಹಾಗಾಗಿ ಇವನನ್ನು ಸ್ವಲ್ಪ ಆಶ್ಚರ್ಯದಿಂದ ನೋಡುತ್ತಲೇ ಇರುತ್ತಾರೆ.
ಅಂದಹಾಗೆ ಈ ಹಣ್ಣಿನ ತಳಿಯ ಹೆಸರು ಹಲಸಿನ ಹಣ್ಣು.36 ವರ್ಷದ ಈ ಮರ ಇರುವುದು ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಚೇಳೂರು ಎಂಬ ಗ್ರಾಮದಲ್ಲಿ ಇದರ ಮಾಲಿಕ ಎಸ್. ಪರಮೇಶ್ ಅವರು ತನ್ನ ತಂದೆ ಸಿದ್ದಪ್ಪ ಇಬ್ಬರು ಸೇರಿಕೊಂಡು ಈ ಮರದ ಪೋಷಣೆಯನ್ನು ಮಾಡಿದ್ದಾರೆ.ಮರದ ತಳಿಗೆ ಸಿದ್ದು ಎಂದು ಹೆಸರಿಟ್ಟಿದ್ದಾರೆ. ಹಾಗಾಗಿ ಈ ತಳಿಯನ್ನು ಅವರ ಹೆಸರಿನಲ್ಲೇ ಕರೆಯಲಾಗುತ್ತದೆ. ಭಾರತದಲ್ಲಿ ಸುಮಾರು 137 ಕ್ಕೂ ಅಧಿಕ ವಿವಿಧ ತಳಿಯ ಹಲಸಿನ ಹಣ್ಣುಗಳ ಮರಗಳಿದ್ದು, ಈ ಎಲ್ಲ ಹಣ್ಣುಗಳ ಪೈಕಿ ಸಿದ್ದು ತಳಿಯ ಹಣ್ಣುಗಳನ್ನು ಶ್ರೇಷ್ಠ ವಿಶಿಷ್ಟ ಗೋಲಿನ ಹಣ್ಣುಗಳ ರಾಜ ಎಂದು ಕರೆಯಲಾಗುತ್ತದೆ.
ಎರಡು ವರ್ಷಗಳ ಹಿಂದೆ ಸಿದ್ದು ಹಲಸಿನ ಹಣ್ಣನ್ನು ಪ್ರಯೋಗಾಲಯಕ್ಕೆ ಒಳಪಡಿಸಿದಾಗ ಅದರಲ್ಲಿ ಕೊಬ್ಬಿನಾಂಶ ಹೆಚ್ಚಾಗಿ ಇರುವುದು ಪತ್ತೆಯಾಗಿತ್ತು. 100 ಗ್ರಾಂ ಸಿದ್ದು ಹಲಸಿನ ಹಣ್ಣಿನಲ್ಲಿ ಎರಡು ಇಪ್ಪತೈದು ಬೇರೆ ತಳಿಯ ಹಣ್ಣಿನಲ್ಲಿ ಇದು ಪಾಯಿಂಟ್ಸ್ ಮಾತ್ರ ಇರುತ್ತದೆ.ನಿಕೋಟಿನ್ ಅಂಶ ಹೃದಯಸಂಬಂಧಿ ಕಾಯಿಲೆಗಳಿಗೆ ರಾಮಬಾಣವಾಗಿ ಕೆಲಸ ಮಾಡುತ್ತದೆ. ಹಾಗಾಗಿ ಸಿದ್ದು ಹಲಸಿನ ಹಣ್ಣಿಗೆ ಹಾಗು ಸಸಿಗಳಿಗೆ ಭಾರಿ ಬೇಡಿಕೆ ಸೃಷ್ಟಿಯಾಗಿದ್ದು ವರ್ಷಕ್ಕೆ 10,00,000 ಸಂಪಾದನೆ ಮಾಡುತ್ತಿದೆ. ಪ್ರತಿ ವರ್ಷದಿಂದ ವರ್ಷಕ್ಕೆ ಈ ತಳಿಯ ಸಸಿಗಳ ಬೇಡಿಕೆ ಹೆಚ್ಚುತ್ತಲೇ ಇದ್ದು, 1,00,000 ಸಸಿಗಳ ಬೇಡಿಕೆ ಬರುತ್ತಿದೆ.
ಆದರೆ ಈ ರೈತ ಸುಮಾರು 4500 ಸಸಿಗಳನ್ನು ವರ್ಷಕ್ಕೆ ಪೂರೈಕೆ ಮಾಡುತ್ತಿದ್ದು, ಒಂದು ಸಸಿಯನ್ನು ₹200 ಗೆ ಮಾರಾಟ ಮಾಡಿ ಸಸಿಗಳಿಂದ ಸುಮಾರು 9,00,000 ಲಾಭ ಗಳಿಸುತ್ತಿದ್ದಾರೆ.ತನ್ನ ಜೀವನವನ್ನೇ ಬದಲಾಯಿಸಿದ ಹಲಸಿನ ಮರದ ರಕ್ಷಣೆಗೆಂದು ಸೀಸಿಟೀವಿನ್ನು ಅಳವಡಿಸಿದ್ದಾರೆ. ಇದಕ್ಕೆ ಕಾರಣ ಕಳ್ಳರ ಕಾಟ ಅದು ಯಾರಾದರೂ ಒಬ್ಬ ಬೆಳೆಯುತ್ತಿದ್ದಾರೆ ಎಂದರೆ ಅವರನ್ನು ಕೆಳಗೆ ಇಳಿಸಲು ಹಲವಾರು ಜನ ಕಾಯುತ್ತಾ ಇರುತ್ತಾರೆ ಅದೇ ಕಾರಣಕ್ಕಾಗಿ ಈ ಒಂದು ಮಾದರಿಯನ್ನು ಪಾಲಿಸುತ್ತಿದ್ದಾರೆ ಈ ಸಿದ್ದು ಹಲಸಿನ ಹಣ್ಣಿನ ತಳಿಯನ್ನು ಅಭಿವೃದ್ಧಿಪಡಿಸಲು ಆಸ್ಟ್ರೇಲಿಯಾ ಮೂಲದ ಕಂಪನಿ ಆಸಕ್ತಿ ವಹಿಸಿತ್ತು. ಆದರೆ, ಭಾರತೀಯ ತೋಟಗಾರಿಕಾ ನೀತಿ ಅನ್ವಯ ಇದು ವಿರುದ್ಧವಾಗಿದೆ ಹಾಗೆ ಅವರೇ ತಮ್ಮ ಸ್ವಂತ ಶ್ರಮವನ್ನು ವಹಿಸಿ ಇಷ್ಟು ಎತ್ತರ ಮಟ್ಟಕ್ಕೆ ಬೆಳೆದಿದ್ದಾರೆ.