ವಾಸ್ತು ಶಾಸ್ತ್ರದ ಪ್ರಕಾರ, ವಾಸ್ತು ದೋಷವಿಲ್ಲದಿದ್ದರೆ ಧನಾತ್ಮಕ ಶಕ್ತಿಯು ಮನೆಯಲ್ಲಿ ನೆಲೆಸುತ್ತದೆ. ಆದರೆ ವಾಸ್ತುವಿನಲ್ಲಿ ಯಾವುದೇ ತೊಂದರೆಯಾದರೆ, ಮನೆಯಲ್ಲಿ ತೊಂದರೆಗಳು, ಪ್ರಗತಿಯಲ್ಲಿ ಅಡಚಣೆಗಳು ಮತ್ತು ಸಮಸ್ಯೆಗಳು ನಿರಂತರವಾಗಿ ಇರುತ್ತದೆ. ವಾಸ್ತು ಪ್ರಕಾರ, ಪ್ರತಿಯೊಂದು ದಿಕ್ಕನ್ನೂ ಕೆಲವು ದೇವತೆಗಳ ವಾಸಸ್ಥಾನವೆಂದು ಪರಿಗಣಿಸಲಾಗುತ್ತದೆ. ಈ ಕಾರಣದಿಂದಾಗಿ, ಮನೆಯ ಹೊರಗಿನ ವಸ್ತುಗಳು ಸಹ ಹಲವು ರೀತಿಯಲ್ಲಿ ಪರಿಣಾಮ ಬೀರುತ್ತವೆ. ಅದೇ ರೀತಿ ಮನೆಯ ಮುಂಭಾದಲ್ಲಿ ಈ ವಸ್ತುಗಳಿದ್ದರೆ ನೀವು ಕಾಳಜಿ ವಹಿಸಲೇಬೇಕು. ಮನೆಯ ಮುಂದೆ ಈ ವಸ್ತುಗಳನ್ನು ಇಡುವುದರಿಂದ ನಿಮ್ಮ ಅದೃಷ್ಟ ಒಲಿಯುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಮುಂದೆ ಇಂತಹ ವಸ್ತುಗಳನ್ನು ಇಡುವುದರಿಂದ ನಿಮ್ಮ ಕಷ್ಟಗಳೆಲ್ಲವೂ ದೂರವಾಗಿ ಅದೃಷ್ಟ ನಿಮ್ಮನ್ನು ಹಿಂಬಾಲಿಸುತ್ತದೆ.
ಹಾಗಾದರೆ ಅವು ಯಾವುವು ಎಂದು ತಿಳಿಯೋಣ ಬನ್ನಿ ಮನೆಯ ಎದುರು ತುಳಸಿ ಗಿಡವನ್ನು ಇಡುವುದರಿಂದ ವಾಸ್ತುದೇವರು ಪ್ರಸನ್ನರಾಗುತ್ತಾರೆ ತುಳಸಿ ಗಿಡ ಸಂಪತ್ತನ್ನು ಹೆಚ್ಚಿಸುತ್ತದೆ.ಮನೆಯ ಪ್ರವೇಶ ದ್ವಾರದಲ್ಲಿ ಕಳಸವನ್ನು ಇಡುವುದರಿಂದ ಮಂಗಳಕರವೆಂದು ಪರಿಗಣಿಸಲಾಗುತ್ತದೆ ವಾಸ್ತು ಶಾಸ್ತ್ರದಲ್ಲಿ ಇದನ್ನು ಸಮೃದ್ಧಿಯ ಸಂಕೇತವೆಂದು ತಿಳಿಸಲಾಗಿದೆ .ಗಣೇಶನು ಎಲ್ಲಾ ಸಂಕಷ್ಟಗಳನ್ನು ನಿವಾರಿಸುವ ದೇವರಾಗಿದ್ದಾರೆ.ಆದ್ದರಿಂದ ಮನೆಯ ಬಾಗಿಲಿಗ ಗಣೇಶನ ಫೋಟೋ ಅಥವಾ ವಿಗ್ರಹವನ್ನು ಇಟ್ಟರೆ ಯಾವುದೇ ಕಷ್ಟಗಳು ಬರುವುದಿಲ್ಲ. ಮನೆಯ ಮುಖ್ಯ ಬಾಗಿಲಿನ ಎರಡು ಕಡೆಯಲ್ಲಿಯೂ ಸ್ವಸ್ತಿಕ್ ಚಿಹ್ನೆಗಳನ್ನು ಇಡುವುದು ಶುಭಕರವೆಂದು ಪರಿಗಣಿಸಲಾಗುತ್ತದೆ.
ಈ ಚಿಹ್ನೆಯು ಕೆಂಪು ಬಣ್ಣದಲ್ಲಿ ಇರುವುದರಿಂದ ಆರೋಗ್ಯ ಭಾಗ್ಯ ಲಭಿಸುವುದು ಮನೆಯ ಮುಖ್ಯ ದ್ವಾರವನ್ನು ಹೂವಿನ ಹಾರಗಳಿಂದ ಅಲಂಕರಿಸುವುದರಿಂದ ಸಕಾರಾತ್ಮಕ ಶಕ್ತಿಯ ಸಂವಹನದ ಸಂಕೇತವಾಗಿದೆ ನಿಮ್ಮ ಮನೆಯ ಮುಖ್ಯ ದ್ವಾರವನ್ನು ಹಣ್ಣು ಮತ್ತು ಎಲೆಗಳಿಂದ ಮಾಡಿದ ಮಾಲೆಯನ್ನು ಅಲಂಕರಿಸುವುದರಿಂದ ಸಮೃದ್ಧಿಯನ್ನು ತರುತ್ತದೆ ಒಣಗಿದ ಹೂವುಗಳೊದಿಗೆ ಹಾರವನ್ನು ತಪ್ಪದೆ ತೆಗೆಯಬೇಕೆಂವಬುವುದನ್ನು ಗಮನಿಸಿ.ವಾಸ್ತು ಪ್ರಕಾರ ಯಾವ ಮನೆಗಳಲ್ಲಿ ಸ್ವಚ್ಛತೆ ಮತ್ತು ವಸ್ತುಗಳನ್ನು ಇಡುವ ಪ್ರಕ್ರಿಯೆ ಸರಿಯಾಗಿದೆಯೋ ಅಲ್ಲಿ ಲಕ್ಷ್ಮಿಯು ನೆಲೆಸುತ್ತಾಳೆ. ಅನೇಕ ಜನರು ತಮ್ಮ ಮನೆ ಮುಂದೆ ಕಸ ಸಂಗ್ರಹಿಸುತ್ತಾರೆ.
ಮನೆಯ ಮುಖ್ಯ ದ್ವಾರದ ಮುಂದೆ ಕಸ ಶೇಖರಣೆಯಾಗುವುದು ಬಡತನಕ್ಕೆ ಕಾರಣವಾಗುತ್ತದೆ. ಅಂತಹ ಮನೆಗಳಲ್ಲಿ ಯಾತನೆ, ರೋಗಗಳು ಮತ್ತು ಹಣದ ನಷ್ಟದ ಸಾಧ್ಯತೆಯೇ ಹೆಚ್ಚು.ವಾಸ್ತು ಪ್ರಕಾರ, ಮನೆಯ ಮುಖ್ಯ ದ್ವಾರ ಯಾವಾಗಲೂ ಮುಂಭಾಗದ ರಸ್ತೆಗಿಂತ ಎತ್ತರವಾಗಿರಬೇಕು. ಯಾರ ಮನೆ ಎದುರಿನ ರಸ್ತೆಗಿಂತ ತಗ್ಗಿದೆಯೋ ಅವರಲ್ಲಿ ನಕಾರಾತ್ಮಕ ಶಕ್ತಿ ನೆಲೆಸಿರುತ್ತದೆ. ಅಂತಹ ಮನೆಯ ಸದಸ್ಯರು ಕಷ್ಟಗಳನ್ನು ಎದುರಿಸಬೇಕಾಗುತ್ತದೆ.ವಾಸ್ತು ಪ್ರಕಾರ ಮನೆಯ ಮುಖ್ಯ ದ್ವಾರದ ಮುಂದೆ ಮುಳ್ಳಿನ ಗಿಡಗಳನ್ನು ನೆಡಬಾರದು. ಹೀಗೆ ಮಾಡುವುದರಿಂದ ಮನೆಯಲ್ಲಿ ಸುಖ-ಸಮೃದ್ಧಿ ಇರುವುದಿಲ್ಲ ಎಂಬ ನಂಬಿಕೆ ಇದೆ.