ಸರ್ಕಾರ ದಿಂದ ರೇಷನ್ ಕಾರ್ಡ್ ಇರುವಂತವರಿಗೆ ಉಚಿತವಾಗಿ ನ್ಯಾಯಬೆಲೆ ಅಂಗಡಿಯಲ್ಲಿ ಅಕ್ಕಿ ಸಿಗ್ತಾ ಇದೆ. ಆ ಒಂದು ಅಕ್ಕಿಯಲ್ಲಿ ಪ್ಲಾಸ್ಟಿಕ್ ಅಕ್ಕಿ ಪತ್ತೆ ಆಗಿದೆ ಅಂತ ಹೇಳ್ಬಿಟ್ಟು ಸಾಕಷ್ಟು ವೈರಲ್ ಆಗಿ ಇರುವಂತದ್ದು. ಇದರ ಬಗ್ಗೆ ಸಾಕಷ್ಟು ಚರ್ಚೆ ನಡೀತಾ ಇದೆ ಹಾಗೇ ಸಾಮಾಜಿಕ ಜಾಲತಾಣಗಳಲ್ಲಿ ಅಂದರೆ ಸೋಷಿಯಲ್ ಮೀಡಿಯಾಗಳಲ್ಲಿ ಇದು ಅಕ್ಕಿಯನ್ನ ಬೇರ್ಪಡಿಸಿ ಚೀಲದಲ್ಲಿ ಹಾಕುತ್ತಿರುವ ವಿಡಿಯೋ ವೈರಲ್ ಆಗುತ್ತಿದೆ ಮತ್ತೆ ಅದನ್ನು ತಿಂದರೆ ಒಂದು ರೀತಿಯ ಅಂಟು ಆಗ್ತಾ ಇದೆ ಅಂತ ಹೇಳ್ಬಿಟ್ಟು ಸಾಕಷ್ಟು ವೈರಲ್ ಆಗಿರೋವಂತದ್ದು ಚಿತ್ರ ನೋಡಕ್ಕೆ ಒಂದು ರೀತಿ ಪ್ಲಾಸ್ಟಿಕ್ ಅಕ್ಕಿ ರೀತಿ ಇರುತ್ತೆ.
ಯಾಕಂದ್ರೆ ಅದು ಬೇರೆ ಬೇರೆಕ್ಕೆ ಒಲಿಸಿಕೊಂಡು ಒಂದು ಡಿಫರೆಂಟ್ ಆಗಿರುತ್ತೆ ಏನೇ ಅನ್ನ ಬೇಯಿಸಿಕೊಂಡು ತಿಂದರೆ ಅದು ಸ್ವಲ್ಪ ಅಂಟು ರೀತಿಯಾಗಿರುತ್ತೆ. ಹಾಗಾಗಿ ಅದು ನೀರಿನಲ್ಲಿ ತೇಲುತ್ತಾಗಾಗಿ ಉಚಿತವಾಗಿ ನ್ಯಾಯ ಬೆಲೆ ಅಂಗಡಿಯಲ್ಲಿ ಕೊಟ್ಟಿರುವಂತಹ ಅಕ್ಕಿಯಲ್ಲಿ ಪ್ಲಾಸ್ಟಿಕ್ ಅಕ್ಕಿ ಮಿಕ್ಸ್ ಆಗಿದೆ ಅಂತ ಜನ ನಂಬಿದ್ದರು. ಹಾಗೇ ಒಂದು ಅಕ್ಕಿಯನ್ನ ಬಳಸದೆ ಹಾಗೆ ಕೂಡ ಇಟ್ಟಿದ್ದರು. ಇನ್ನು ಕೆಲವರು ಅದನ್ನ ಬೇರ್ಪಡಿಸಿ ಅಡುಗೆಯನ್ನು ಮಾಡಿ ತಿಂತಾ ಇದ್ರು. ಹಾಗಾದ್ರೆ ಇದು ನಿಜವಾಗಲು ಪ್ಲಾಸ್ಟಿಕ್ ಅಕ್ಕಿಯನ್ನ ಉಚಿತವಾಗಿ ಕೊಡುವಂತಹ ಅಕ್ಕಿಯಲ್ಲಿ ಪ್ಲಾಸ್ಟಿಕ್ ಅಕ್ಕಿ ಮಿಕ್ಸ್ ಆಗಿದೆಯಾ? ಇದರ ಬಗ್ಗೆ ಸರ್ಕಾರ ಒಂದು ಸ್ಪಷ್ಟನೆಯನ್ನು ಕೊಟ್ಟಿದೆ.
ಸರ್ಕಾರ ಉಚಿತವಾಗಿ ಕೊಡುವಂತಹ ಅಕ್ಕಿಯಲ್ಲಿ ಪ್ಲಾಸ್ಟಿಕ್ ಅಕ್ಕಿ ಮಿಶ್ರ ಆಗಿದ್ಯಾ ಇಲ್ವಾ? ಕರ್ನಾಟಕ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕಡೆಯಿಂದ ಕರ್ನಾಟಕ ವಾರ್ತೆ ಸೋಶಿಯಲ್ ಮೀಡಿಯಾದಲ್ಲಿ ಒಂದು ಸ್ಪಷ್ಟನೆ ಕೊಟ್ಟಿದೆ. ಇದು ಪ್ಲಾಸ್ಟಿಕ್ ಅಕ್ಕಿನಾ ಅಥವಾ ಬೇರೆ ಅಕ್ಕಿನಾ ಸ್ಪಷ್ಟನೆ ಕೊಟ್ಟಿದೆ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ ಅಂತ ನೋಡೋದಾದ್ರೆ ಇದು ಪ್ಲಾಸ್ಟಿಕ್ ಅಕ್ಕಿ ಅಲ್ಲ, ಇದು ಸಾರವರ್ಧಿತ ಅಕ್ಕಿ ಅನ್ನೋದನ್ನ ಇಲ್ಲಿ ಸ್ಪಷ್ಟನೆಯನ್ನು ಕೊಟ್ಟಿದ್ದಾರೆ. ಆದರೆ ಸಾರವರ್ಧಿತ ಅಕ್ಕಿ ಅಂದ್ರೆ ಏನು? ಇದನ್ನ ಏನಕ್ಕೆ ಮಿಶ್ರಣ ಅಂದ್ರೆ ಏನು ಕೆಮಿಕಲ್ಸ್ ಮಾಡ್ತಾರೆ ಅಂತ ನೋಡೋದಾದ್ರೆ ಇದು ಸಾರವರ್ಧಿತ ಅಕ್ಕಿ. ಇದು ಪೋಷ್ಟಿಕಾಂಶ ಉಳ್ಳಂತಹ ಒಂದು ಅಕ್ಕಿ.
ಇದರಲ್ಲಿ ಹೆಚ್ಚಿನ ಪೋಷಕಾಂಶಗಳು ಇರುತ್ತೆ ಅಂತ ಇಲ್ಲಿ ಸರ್ಕಾರ ಸ್ಪಷ್ಟನೆ ಕೊಟ್ಟಿದೆ. ಇದರಿಂದ ಆರೋಗ್ಯ ಕೂಡ ಚೆನ್ನಾಗಿರುತ್ತೆ ಅಂತೆ. ಮತ್ತೆ ರಕ್ತಹೀನತೆ ಮತ್ತು ಅಪೌಷ್ಟಿಕತೆಯನ್ನು ಕಡಿಮೆ ಮಾಡುತ್ತದೆ.ಹಾಗಾಗಿ ಒಂದು ಅಕ್ಕಿ ನಾವು ಮಿಶ್ರಣ ಮಾಡಿದಿವಿ ಅಂತ ಇಲ್ಲಿ ಸರ್ಕಾರದ ಸ್ಪಷ್ಟನೆಯನ್ನೂ ಕೊಟ್ಟಿದೆ. ಅಷ್ಟೇ ಅಲ್ಲ, ಕೇಂದ್ರ ಸರ್ಕಾರದಿಂದ ಇದಕ್ಕೆ ಮಾರ್ಗಸೂಚಿನು ಕೂಡ ಇದೆಯಂತೆ. ಏನು ಮಾಡಿದ ಸೂಚಿ ಅಂತ ನೋಡಿದ್ರೆ ಪ್ರತಿ ಒಂದು ಕೆಜಿಗೆ 10 ಗ್ರಾಂ ನಷ್ಟು ಸಾರವರ್ಧಿತ ಅಕ್ಕಿಯನ್ನ ಮಿಕ್ಸ್ ಮಾಡಬೇಕು ಅಂತ ಮಾರ್ಗಸೂಚಿ ಇದೆ ಅಂತ. ಅಂದ್ರೆ ಒಂದು ಕೆ ಜಿ ಅಕ್ಕಿಗೆ 10 ಗ್ರಾಂ ನಷ್ಟು ಸಾರವರ್ಧಿತ ಅಕ್ಕಿಯ ಮಿಕ್ಸ್ ಮಾಡಬೇಕು ಅಂತ ಇಲ್ಲಿ ಕೇಂದ್ರ ಸರ್ಕಾರ ಮಾರ್ಗಸೂಚಿಯಲ್ಲಿ ತಿಳಿಸಿದೆ ಅಂತೆ.
ಅದರ ಪ್ರಕಾರ ಒಂದು ಸಾರವರ್ಧಿತ ಅಕ್ಕಿಯನ್ನ ಮಿಶ್ರಣ ಮಾಡ್ತಾ ಇದ್ದಾರಂತೆ. ಈ ಸಾರವರ್ಧಿತ ಅಕ್ಕಿಯನ್ನ ತಿನ್ನೋದ್ರಿಂದ ಅಂದ್ರೆ ಸೇವನೆ ಮಾಡೋದ್ರಿಂದ ಏನೆಲ್ಲಾ ಆರೋಗ್ಯಕ್ಕೆ ಲಾಭ ಸಿಗುತ್ತೆ ಅಂತ ನೋಡಿದ್ರೆ ಇಲ್ಲಿ ಅಗತ್ಯವಾದ ಜೀವಸತ್ವಗಳು ಸಿಗುತ್ತದೆ ಮತ್ತೆ ಸೂಕ್ಷ್ಮ ಪೋಷಕಾಂಶಗಳದಂತಹ ಕಬ್ಬಿಣಾಂಶ ಫೋಲಿಕ್ ಆಮ್ಲ ಮತ್ತು ವಿಟಮಿನ್ ಬಿ ಒಂದು ಅಕ್ಕಿಯಿಂದ ಸಿಗುತ್ತೆ ಅಂತ ಹೇಳಿ ಸರ್ಕಾರ ಹೇಳ್ತಾ ಇರೋದು.