ಪ್ರಧಾನ ಮಂತ್ರಿ ಮಸ್ಯ ಸಂಪದ :ಯೋಜನೆ ಪ್ರಧಾನ ಮಂತ್ರಿ ಮಸ್ಯ ಸಂಪದ ಯೋಜನೆ ( ಪಿ ಎಮ್ ಎಮ್ ಎಸ್ ವೈ ) ಯು ಪ್ರಮುಖವಾಗಿ ಮೀನುಗಾರಿಕೆ ಕ್ಷೇತ್ರದ ಸುಸ್ತಿರ ಅಭಿವೃದ್ಧಿಯತ್ತ ಗಮನ ಹರಿಸುತ್ತದೆ. ಆತ್ಮನಿರ್ಭರ ಭಾರತ ಪ್ಯಾಕೇಜ್ ನ ಭಾಗವಾಗಿ ಇದಕ್ಕೆ 2020-25 ರ ಹಣಕಾಸು ವರ್ಷದಲ್ಲಿ ಅಂದಾಜು ರೂ . 20,500 ಕೋಟಿಗಳನ್ನು ಅನುಷ್ಟಾನಕ್ಕಾಗಿ ವೆಚ್ಚ ಮಾಡಲಾಗುತ್ತದೆ.
ಇದರಲ್ಲಿ, ಫಲಾನುಭವಿ ಆಧಾರಿತ ಚಟುವಟಿಕೆಗಳಾದ ಸಾಗರ, ಒಳನಾಡು ಮೀನುಗಾರಿಕೆ ಹಾಗೂ ಅಕ್ವಾಕಲ್ಟರ್ ಗಾಗಿ ರೂ. 12,340 ಕೋಟಿಗಳನ್ನು ಹೂಡಿಕೆ ಮಾಡಲಾಗುತ್ತದೆ ಹಾಗೂ ಸುಮಾರು 7,710 ಕೋಟಿಗಳಷ್ಟು ಮೊತ್ತವನ್ನು ಮೀನುಗಾರಿಕೆ ಮೂಲ ಸೌಕರ್ಯಕ್ಕಾಗಿ ಹೂಡಿಕೆ ಮಾಡಲಾಗುತ್ತದೆ .ರಫ್ತು ಆದಾಯ ಗಳಿಸುವ , ಮೀನುಗಾರಿಕೆ ಹಾಗೂ ಮೀನು ಕೃಷಿಕರ ಆದಾಯನ್ನು ದ್ವಿಗುಣಗೊಳಿಸುವ ಕಟಾವು ನಂತರದ ನಷ್ಟಗಳನ್ನು 20-25 % ರಿಂದ 10 ನಂತರದ ನಷ್ಟಗಳನ್ನು 20-25 % ರಿಂದ 10 % ರಷ್ಟು ಕಡಿಮೆಗೊಳಿಸುವ ಮತ್ತು ಮೀನುಗಾರಿಕೆ ಹಾಗೂ ಸಂಬಂಧಿತ ಚಟುವಟಿಕೆಗಳಲ್ಲಿ ಹೆಚ್ಚುವರಿ ಉದ್ಯೋಗ ಅವಕಾಶಗಳನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ.
ಪಿ ಎಮ್ ಎಮ್ ಎಸ್ ವೈ ಯೋಜನೆಯು ಪ್ರಾಥಮಿಕವಾಗಿ ‘ ಗುಚ್ಛ ( ಕ್ಲಸ್ಟರ್) ಅಥವಾ ವಲಯ ಆಧಾರಿತ ದೃಷ್ಟಿಕೋನಕ್ಕೆ ಹೆಚ್ಚು ಗಮನ ನೀಡುತ್ತದೆ ಹಾಗೂ ಮೀನುಗಾರಿಕೆ ಗುಚ್ಚಗಳ ರಚನೆಯ ಮೂಲಕ ಹಿಮ್ಮುಖವಾದ ಹಾಗೂ ಮುಮ್ಮುಖ ಸಂಪರ್ಕಗಳನ್ನು ಏರ್ಪಡಿಸುವುದರತ್ತ ಗಮನ ಹರಿಸುತ್ತದೆ . ಉದ್ಯೋಗ ಸೃಷ್ಟಿಯ ಚಟುವಟಿಕೆಗಳಾದ ಸಮುದ್ರ ಕಳೆ ಹಾಗೂ ಅಲಂಕಾರಿಕ ಮೀನುಗಾರಿಕೆ ಚಟುವಟಿಕೆಗಳಿಗೆ ವಿಶೇಷ ಗಮನ ನೀಡಲಾಗುತ್ತದೆ. ಗುಣಮಟ್ಟದ ತಳಿಗಳು, ಬೀಜಗಳು ಹಾಗೂ ಆಹಾರಗಳಿಗೆ ಒತ್ತು ನೀಡುತ್ತದೆ, ತಳಿ ವೈವಿಧ್ಯತೆ, ನಿರ್ಣಾಯ ಮೂಲ ಸೌಕರ್ಯ, ಮಾರುಕಟ್ಟೆ ಸರಣಿ ಇತ್ಯಾದಿಗಳಿಗೆ ವಿಶೇಷ ಗಮನ ನೀಡಲಾಗುತ್ತದೆ.
ಇದಕ್ಕೆ ಯಾರು ಅರ್ಹರಾಗಿರುತ್ತಾರೆ ? ಮಾರಾಟಗಾರರು ಮೀನುಗಾರರು ಮೀನು ಕೃಷಿಕರು ಮೀನುಗಾರಿಕೆ ಕೆಲಸಗಾರರು ಹಾಗೂ ಸಂಸ್ಥೆಗಳು ಮೀನುಗಾರಿಕೆ ಕ್ಷೇತ್ರದ ಸ್ವಸಹಾಯ ಗುಂಪುಗಳು / ಜಂಟಿ ಹೊಣೆಗಾರಿಕೆ ಗುಂಪುಗಳು ಮೀನುಗಾರಿಕೆ ಸಹಕಾರಿ ಸಂಘಗಳು ಮೀನುಗಾರಿಕೆ ಅಭಿವೃದ್ಧಿ ನಿಗಮಗಳು ಉದ್ಯಮಗಳು ಹಾಗೂ ಖಾಸಗಿ ಇವುಗಳಿಗಾಗಿ ಹಣಕಾಸು ನೆರವು & ಸಹಾಯಗಳು : ಮೀನುಗಾರಿಕೆ ದೋಣಿ ವಿಮೆ ಹೊಸ / ಮೀನುಗಾರಿಕೆ ವೆಸಲ್ಸ್ / ದೋಣಿಗಳನ್ನು ಮೇಲ್ದರ್ಜೆಗೇರಿಸಲು ಸಹಾಯ ಜೈವಿಕ ಶೌಚಾಲಯಗಳು ಸಲೈನ್ / ಅಲ್ಕಲೈನ್ ಮೇಲ್ದರ್ಜೆಗೇರಿಸಲು ಸಹಾಯ ಜೈವಿಕ – ಶೌಚಾಲಯಗಳು ಸಲೈನ್ / ಅಲ್ಕಲೈನ್ ಪ್ರದೇಶಗಳಲ್ಲಿ ಅಕ್ವಾಕಲ್ಟರ್ ಗಳು / ಸಿ ಗಳು ಸಾಗರ್ ಮಿತ್ರರು, ಎಫ್ ಎಫ್ ಪಿ ಒ ಮೀನುಗಾರಿಕೆ.
ಹಾಗೂ ಅಕ್ವಾಕಲ್ಟರ್ ಸ್ಟಾರ್ಟಪ್ ಗಳು ಹಾಗು ಇನ್ನೂ ಬೇಟರ್ ಗಳು ಸಮಗ್ರ ಅಕ್ವಾ ಪಾರ್ಕ್ ಗಳು ಕರಾವಳಿ ಮೀನುಗಾರಿಕೆ ಗ್ರಾಮಗಳ ಸಮಗ್ರ ಅಭಿವೃದ್ಧಿ ಆರ್ ಎ ಎಸ್, ಬಯೋಫ್ಲಾಕ್ & ಕೇಜ್ ಕಲ್ಟರ್, ಇ – ಟ್ರೇಡಿಂಗ್ / ಮಾರ್ಕೆಟಿಂಗ್. ಅರ್ಜಿ ಸಲ್ಲಿಸುವ ಹೆಚ್ಚಿನ ವಿವರಗಳಿಗೆ ಮತ್ತು ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಲು, ನಿಮ್ಮ ಪ್ರಾದೇಶಿಕ ಮೀನುಗಾರಿಕೆ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿ.