WhatsApp Group Join Now

ತಾಳ್ಮೆ ಒಂದು ಇದ್ದರೆ ಸಾಕು ಜಗತ್ತನ್ನು ಗೆಲ್ಲಬಹುದು ಅನ್ನುತ್ತಾರೆ ತಾಳ್ಮೆ ಹಾಗೂ ಕಠಿಣ ಪರಿಶ್ರಮ ಓದಿನಲ್ಲಿ ಆಸಕ್ತಿ ಹಿಡಿದಿಟ್ಟುಕೊಂಡವರು ಎಲ್ಲವನ್ನು ಸಾಧಿಸಬಹುದು ಎಂಬುದಕ್ಕೆ ರಾಜಸ್ಥಾನ ಮೂಲದ ಪ್ರೇಮ್ ಅವರು ಸಾಕ್ಷಿಯಾಗಿದ್ದಾರೆ ಸರ್ಕಾರದ ಪ್ರಥಮ ದರ್ಜೆ ಸಹಾಯ ದ್ವಿತೀಯ ದರ್ಜೆ ಸಹಾಯಕ ಹುದ್ದೆಗಳನ್ನು ಪಡೆಯಬೇಕು ಅಂದ್ರೆ ಎರಡು ಮೂರು ವರ್ಷ ಓದಿ ಸುಸ್ತಾಗುವ ಆಕಾಂಕ್ಷಿಗಳು ಇದ್ದಾರೆ. ಸರ್ಕಾರ ಸರಿಯಾದ ಸಮಯಕ್ಕೆ ನೋಟಿಫಿಕೇಶನ್ ಬಿಡುಗಡೆ ಮಾಡಲ್ಲ ಇತ್ತ ಆರ್ಥಿಕ ಪರಿಸ್ಥಿತಿ ಹಾಗೂ ವಯಸ್ಸು ಮೀರುವ ಎಲ್ಲಾ ಸಮಸ್ಯೆಗಳಿಂದ ಅಭ್ಯರ್ಥಿ ಹುದ್ದೆ ಪಡೆಯುವ ತನಕ ಓದಲು ಆಗುವುದಿಲ್ಲ ಎಂಬೆಲ್ಲ ಸಮಸ್ಯೆಗಳು ಹೇಳುವವರು ಇದ್ದಾರೆ.

ಆದರೆ ನಾವು ಇಂದು ತಿಳಿಸುತ್ತಿರುವ ಐಪಿಎಸ್ ಅಧಿಕಾರಿಯೊಬ್ಬರು ಮೊದಲು ಪಡೆದಿದ್ದು ದ್ವಿತೀಯ ಪಿಯುಸಿ ಆಧಾರಿತ ವಿಲೇಜ್ ಅಕೌಂಟೆಂಟ್ ಹುದ್ದೆ ಕೊನೆಗೂ ಅವರು ತಮ್ಮ ಗುರಿ ಮುಟ್ಟಿದ್ದು ಐಪಿಎಸ್ ಆಗುವವರೆಗೆ ಆರು ವರ್ಷದಲ್ಲಿ 12 ಸರ್ಕಾರಿ ಹುದ್ದೆಗಳನ್ನು ಗಿಟ್ಟಿಸಿದ ಭೂಪಾ ಇವರು. ಪ್ರೇಮ್ ಸುಕ್ ದೆಲು ರಾಜಸ್ಥಾನ ರಾಜ್ಯದ ಮೂಲದವರು ಒಂದು ರೈತ ಕುಟುಂಬದಲ್ಲಿ ಇವರು ಜನಿಸಿದರು ಮೊದಲಿಗೆ ತಮ್ಮ ಕಠಿಣ ಶ್ರಮದಿಂದ ಪತ್ವಾರಿ ಆದರು ಪತ್ವಾರಿ ಎಂದರೆ ಗ್ರಾಮಾಲಿಕ್ಕಿಗ ಹುದ್ದೆ ಅವರು ಆ ಹುದ್ದೆಗೆ ತೃಪ್ತಿಪಟ್ಟುಕೊಂಡವರಲ್ಲ ಅವರ ಕನಸು ಯುಪಿಎಸ್ಸಿ ಪರೀಕ್ಷೆ ಪಾಸ್ ಮಾಡುದಾಗಿತ್ತು ಹಾಗೂ ಐಪಿಎಸ್ ಆಗುವುದಾಗಿತ್ತು.

ಪ್ರೇಮ್ ಸುಕ್ ತಂದೆ ಒಬ್ಬ ರೈತರು ಅವರ ಕುಟುಂಬದ ಆರ್ಥಿಕ ಪರಿಸ್ಥಿತಿ ಅಷ್ಟೊಂದು ಎತ್ತರಕ್ಕೆ ಹೋಗುವದಕ್ಕೆ ಆಗಿರಲಿಲ್ಲ ಆದ್ದರಿಂದ ಅವರ ತಂದೆ ವ್ಯವಸಾಯದ ಜೊತೆಗೆ ಒಂಟೆ ಕಾರ್ಟ್ ಅನ್ನು ನಡೆಸುತ್ತಿದ್ದರು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಒಂಟೆ ಮೇಲೆ ಜನರನ್ನು ಸಾಗಿಸುತ್ತಿದ್ದರು ಇದನ್ನೆಲ್ಲ ಗಮನಿಸುತ್ತಿದ್ದ ಪ್ರೇಮ್ ಆರ್ಥಿಕ ಪರಿಸ್ಥಿತಿ ಇಂದ ತಮ್ಮ ಕುಟುಂಬವನ್ನು ಮೇಲೆತ್ತುವ ಜೊತೆ ಸಾಧನೆ ಮಾಡುವ ಕನಸು ಕಟ್ಟಿಕೊಂಡರು ಆದ್ದರಿಂದ ಚಿಕ್ಕಂದಿನಿಂದಲೇ ಓದಿ ಸಾಧನೆ ಮಾಡುವ ಕನಸು ಕಟ್ಟಿಕೊಂಡಿದ್ದರಂತೆ. ಪ್ರೇಮ್ ಹತ್ತನೇ ತರಗತಿಯವರೆಗೂ ಸಹ ಸರ್ಕಾರಿ ಶಾಲೆಯಲ್ಲಿಯೇ ಗ್ರಾಮದಲ್ಲಿ ಓದಿದವರು ನಂತರದಲ್ಲಿ.

ಸರ್ಕಾರಿ ಕಾಲೇಜಿನಲ್ಲಿ ಓದಿದರು ಸ್ನಾತಕೋತ್ತರ ಪದವಿ ಅನ್ನು ಇತಿಹಾಸ ವಿಷಯದಲ್ಲಿ ವ್ಯಾಸಂಗ ಮಾಡಿ ಗೋಲ್ಡ್ ಮೆಡಲ್ ಸಹ ಪಡೆದಿದ್ದರು ಜೆ ಆರ್ ಎಫ್ ಅರ್ಹತೆ ಸಹ ಪಡೆದಿದ್ದಾರೆ. ಪ್ರೇಮ್ ಹಿರಿಯ ಅಣ್ಣ ರಾಜಸ್ಥಾನದಲ್ಲಿ ಕಾನ್ಸ್ಟೇಬಲ್ ಆಗಿದ್ದರು ಇವರಿಂದಲೇ ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಳ್ಳಲು ಸ್ಪೂರ್ತಿಗೊಂಡಿದ್ದ ಪ್ರೇಮ ಅವರು ಎರಡು ಸಾವಿರ ಹತ್ತರಲ್ಲಿ ಪದವಿ ಮುಗಿಸುತ್ತಿದ್ದಂತೆ ಗ್ರಾಮ ಲೆಕ್ಕಿಗ ಹುದ್ದೆಗೆ ಅರ್ಜಿ ಸಲ್ಲಿಸಿದ್ದರು ಆ ಹುದ್ದೆ ಗಿಟ್ಟಿಸಿದ್ದರು ಸಹ ನಂತರ ತಮ್ಮ ಸಾಮರ್ಥ್ಯ ಅರಿತ ಅವರು ಗ್ರಾಮ ಲೆಕ್ಕಿಗ ಹುದ್ದೆ ಕರ್ತವ್ಯ ನಿರ್ವಹಿಸುತ್ತಲೇ ಮಾಸ್ಟರ್ ಡಿಗ್ರಿ ಪಾಸ್ ಮಾಡಿದ್ದರು.

https://youtu.be/eWvrqjXZ75Y

WhatsApp Group Join Now

Leave a Reply

Your email address will not be published. Required fields are marked *