WhatsApp Group Join Now

ಭಾರತ ದೇಶದ ಪ್ರಧಾನಮಂತ್ರಿಯವರು 94 ವರ್ಷ ವಯಸ್ಸಾಗಿರುವ ಇರುವ ಒಂದು ಬಾಡಿಗೆ ಮನೆಗೆ ಬಂದು ಅವರನ್ನು ಮಾತನಾಡಿಸಿ 1 ದಿನ ಅವರ ಬಳಿ ಸಮಯ ಕಳೆದು ಮತ್ತೆ ವಾಪಸ್ ಹೋಗ್ತಾರೆ. ನಿಜವಾಗಿಯೂ ಈ ವಿಚಾರ ನಮ್ಮ ದೇಶದ ಪ್ರತಿಯೊಬ್ಬ ಜನತೆಗೂ ಶಾಕ್ ಕೊಡುತ್ತೆ. 94 ವರ್ಷದ ಬಾಡಿಗೆ ಮನೆಯಲ್ಲಿರುವ ವೃದ್ಧನ ಮನೆಗೆ ನೇರವಾಗಿ ಪ್ರಧಾನ ಮಂತ್ರಿಗಳು ಬರ್ತಾರೆ ಅಂದ್ರೆ ಅದು ಹೇಗೆ ಸಾಧ್ಯ ಅಂತ ಯೋಚನೆ ಮಾಡ್ತಿದ್ದೀರಾ.ಹೌದು, ನಿಜವಾಗಿಯೂ ಸಾವಿರಾರು ಜನರ ಕಣ್ಣಮುಂದೆ ನಡೆದಿರುವ ಘಟನೆ ಇದು. ಪ್ರಧಾನ ಮಂತ್ರಿಗಳು ಬರ್ತಾ ಇರೋದು ಗೊತ್ತಾಗಿ ಮನೆ ಮಾಲೀಕ ನೆರೆಮನೆಯವರು ಮತ್ತು ಸುತ್ತ ಮುತ್ತ ಇರುವ ಜನಗಳೆಲ್ಲರೂ ಒಂದು ಕ್ಷಣ ತಬ್ಬಿಬ್ಬಾಗಿ ಹೋಗ್ತಾರೆ.

ಭಾರತ ದೇಶದ ರಾಜಧಾನಿ ದಿಲ್ಲಿ ನಗರದ ನಿವಾಸಿ ಲಾಲ್‌ಜಿ ವಯಸ್ಸು 94 ಈವರೆಗೆ ಬರ್ತಾ ಇದ್ದದ್ದು ಕೇವಲ ₹500, ಪೆನ್ಸನ್ ₹500 ಪೆನ್ಷನ್ ನಲ್ಲಿ ಬಾಡಿಗೆ ಕಟ್ಟಬೇಕು, ಜೀವನ ಕೂಡ ನಡೆಸಬೇಕು. ಈ ವೃದ್ಧನ ಹೆಂಡತಿ ಸ್ವಲ್ಪ ವರ್ಷಗಳ ಹಿಂದೆ ತೀರಿ ಕೊಂಡಿರುತ್ತಾರೆ. ಹೆಂಡತಿ ಹೋದ ಮೇಲೆ ಲಾಲ್‌ಜಿ ಅವರು ಒಂಟಿಯಾಗಿ ಬಿಡುತ್ತಾರೆ.ಮಕ್ಕಳು ಎಲ್ಲರೂ ಇವರನ್ನು ಬಿಟ್ಟು ಅಮೇರಿಕಾದಲ್ಲಿ ಸೆಟ್ಲ್ ಆಗಿರ್ತಾರೆ. ಮಕ್ಕಳಿಗೆ ತಂದೆ ತಾಯಿಯ ಬಗ್ಗೆ ಯೋಚನೆ ಇಲ್ಲ, ಬರುತ್ತಿದ್ದ ₹500 ಪೆನ್ಷನ್‌ನಲ್ಲಿ 300 ರೂ ರೂಪಾಯಿ ಬಾಡಿಗೆಗೆ ಹೋಗುತ್ತೆ. ಇನ್ನು ಉಳಿದ ₹200 ದುಡ್ಡಲ್ಲಿ ಪ್ರತಿದಿನ ಹೊಟ್ಟೆ ತುಂಬಿಸಿಕೊಳ್ಳುವುದಕ್ಕೆ ಹೋಗುತ್ತೆ. ಮುಂದಿನ ತಿಂಗಳು ಪೆನ್ಶನ್ ಬರುವ ತನಕ 200 ರೂಪಾಯಿಯಲ್ಲಿ ಒಂದು ತಿಂಗಳತನಕ ಮ್ಯಾನೇಜ್ ಮಾಡಬೇಕು.

ಕೆಲವೊಮ್ಮೆ ₹200 ಪೆನ್ಷನ್ ಇದ್ದಕ್ಕಿದ್ದ ಹಾಗೆ ಖಾಲಿ ಆಗ್ತಾ ಇತ್ತು. ಹಾಗಾಗಿ ಸಾಕಷ್ಟು ದಿನಗಳ ಕಾಲ ಏನೂ ಸೇವಿಸದೆ ಬರೀ ನೀರು ಕುಡಿದು ದಿನಗಳನ್ನು ಸಾಗಿಸಿದ್ದಾರೆ. ಕೆಲಸಕ್ಕೆ ಹೋಗುವುದಕ್ಕೆ ಲಾಲ್ಜಿಯವರ ಬಳಿ ಶಕ್ತಿಯಿಲ್ಲ ಆರೋಗ್ಯದಲ್ಲಿ ಏನಾದರೂ ಏರುಪೇರಾದರೆ ಟ್ರೀಟ್ಮೆಂಟ್ ಗೆ ಇವರ ಬಳಿ ದುಡ್ಡು ಇಲ್ಲ.ಅಷ್ಟೇ ಅಲ್ಲದೆ ಬರಿ ಅನ್ನ ತಿಂದು ಸಾಕಷ್ಟು ದಿನಗಳ ಕಾಲ ಹೊಟ್ಟೆ ತುಂಬಿಸಿಕೊಂಡಿದ್ದಾರೆ. 1 ದಿನ ವೃದ್ಧನ ಬಳಿ ಬಂದ ಮನೆ ಮಾಲೀಕ ಹೇಳ್ತಾನೆ. ಮುಂದಿನ ತಿಂಗಳಿಂದ ನೀನು ₹300 ಬಾಡಿಗೆ ಕೊಡುವಂತಿಲ್ಲ.₹500 ಬಾಡಿಗೆ ಕೊಡಬೇಕು ಅಂತ ವೃದ್ಧ ಹೇಳುತ್ತಾನೆ. ನಾನು ಸಂಪೂರ್ಣವಾಗಿ ಪಿಂಚಣಿಯಿಂದ ಜೀವನ ಮಾಡ್ತಾ ಇದ್ದೇನೆ. ನನಗೆ ಯಾವುದೇ ಬೇರೆ ಆದಾಯ ಇಲ್ಲ.ಬರುವ ₹500 ಪೆನ್ಷನ್ ನಿನಗೆ ಕೊಟ್ಟರೆ ನಾನು ಹೇಗೆ ಜೀವನ ಮಾಡಲಿ ಅಂತ ಮಾಲಿಕನಿಗೆ ಪ್ರಶ್ನೆ ಹಾಕ್ತಾರೆ.

ಎಷ್ಟೇ ಬೇಡಿದರೂ ಮನೆ ಮಾಲಿಕ ಕೇಳೋದೇ ಇಲ್ಲ, ಮನೆ ಮಾಲೀಕ ಹೇಳ್ತಾನೆ, ಮುಂದಿನ ತಿಂಗಳಿಂದ ₹500 ಬಾಡಿಗೆ ಇದೆ. ಕೊಡದಿದ್ದರೆ ಕೊಡು ಇಲ್ಲ ಅಂದ್ರೆ ಮನೆ ಖಾಲಿ ಮಾಡಿಕೊಂಡು ಹೋಗ್ತಾ ಇರು ಅಂತ ಮನೆ ಮಾಲೀಕ ಧಮಕಿ ಹಾಕಿ ಹೋಗುತ್ತಾನೆ. ಮುಂದಿನ ತಿಂಗಳು ವೃದ್ಧನ ಮನೆಗೆ ಬಂದ ಮಾಲೀಕ ₹500 ಬಾಡಿಗೆ ಕೇಳ್ತಾನೆ. ಲಾಲ್‌ಜಿ ಅವರು ಮಾಲಿಕನಿಗೆ ನಾನೂರು ರೂಪಾಯಿ ಕೊಟ್ಟು 100 ರುಪಾಯಿ ನನ್ನ ಹೊಟ್ಟೆ ತುಂಬಿಸಿಕೊಳ್ಳುವುದಕ್ಕೆ ಆದರೂ ನಾನು ಇಟ್ಟು ಕೊಳ್ಳುತ್ತೇನೆ.ದಯವಿಟ್ಟು ಈ 100 ರೂಪಾಯಿಯನ್ನು ನನ್ನ ಕೈಯಿಂದ ಕಿತ್ತುಕೊಳ್ಳಬೇಡ ಅಂತ ಮಾಲಿಕನಿಗೆರಿಂಗ್ ಮಾಡುತ್ತಾರೆ.

ಅದಕ್ಕೆ ಮಾಲೀಕ ಹೇಳ್ತಾನೆ ಸರಿ, ಹಾಗಾದ್ರೆ ಈ ₹100 ತಿಂಗಳು ನೀನೆ ಇಟ್ಟುಕೋ. ಹಾಗಂತ 500 ರೂಪಾಯಿಯನ್ನು ನಾನು ಬಿಟ್ಟೆ ಅಂತ ಅರ್ಥ ಅಲ್ಲ. ಮುಂದಿನ ತಿಂಗಳು ₹500 ಬಾಡಿಗೆಯಲ್ಲಿ 500 ರೂಪಾಯಿಯನ್ನು ಸೇರಿಸಿ ₹600 ನೀನು ನನಗೆ ಕೊಡಬೇಕು, ₹1 ಕಮ್ಮಿ ಆದರು ನಿನ್ನನ್ನು ಒದ್ದು ಹೊರಗಡೆ ಹಾಕುತ್ತೇನೆ ಅಂತ ಧಮಕಿ ಹಾಕಿ ಮತ್ತೆ ವಾಪಾಸ್ ಹೋಗ್ತಾನೆ. ಈತನ ಮಾತುಗಳನ್ನು ಕೇಳಿದ ವೃದ್ಧನಿಗೆ ಬಹಳ ಬೇಜಾರಾಗುತ್ತೆ. ನನ್ನ ಬಳಿ ಕೇವಲ ಪೆನ್ಶನ್ ದುಡ್ಡು ಬಿಟ್ಟರೆ ಬೇರೆ ಏನೂ ಇಲ್ಲ ನನಗೆ ದುಡಿಯುವ ಶಕ್ತಿ ಕೂಡ ಇಲ್ಲ. ಏನು ಮಾಡಬೇಕು ಅಂತ ಯೋಚನೆ ಮಾಡಲು ಶುರು ಮಾಡುತ್ತಾರೆ. ಅಕ್ಕಪಕ್ಕದ ನೆರೆಮನೆಯವರು ಬಂದು ಹಣದ ಸಹಾಯ ಮಾಡಲು ಮುಂದಾಗುತ್ತಾರೆ.ಆದರೆ ವೃದ್ಧ ತುಂಬಾ ಸ್ವಾಭಿಮಾನಿ ಆಗಿದ್ದು ಬೇರೆಯವರ ₹1 ಕೂಡ ಮುಟ್ಟುವುದಿಲ್ಲ. ಮತ್ತೆ ಮುಂದಿನ ತಿಂಗಳು ಮನೆ ಮಾಲಿಕ ಬರ್ತಾನೆ ಕಳೆದ ತಿಂಗಳ ಬಾಕಿ 100 ಮತ್ತು ಈ ತಿಂಗಳ ಬಾಡಿಗೆ ₹500 ಒಟ್ಟು ₹600 ಬಾಡಿಗೆ ಕೊಡುವಂತೆ ವೃದ್ಧನಿಗೆ ಕೇಳ್ತಾರೆ.

ವೃದ್ಧ ಹೇಳ್ತಾನೆ ನನ್ನ ಹತ್ತಿರ ಈಗ ಸದ್ಯಕ್ಕೆ ₹300 ಇದೆ. ಇದನ್ನೇ ತಗೊ ಬೇರೆ ₹1 ಕೂಡ ನನ್ನ ಹತ್ತಿರ ಇಲ್ಲ ಅಂತ ಈ ಮಾತನ್ನು ಕೇಳಿಸಿಕೊಂಡ ಮಾಲಿಕನಿಗೆ ಸಿಟ್ಟು ಬಂದು ತನ್ನನ್ನು ಹೊರಗೆ ದಬ್ಬಿ ಆತನ ಎಲ್ಲ ವಸ್ತುವನ್ನು ಹೊರಗೆ ಬಿಸಾಕುತ್ತಾನೆ. ನನಗೆ 10 ದಿನ ಸಮಯ ಕೊಡಿ.ಬೇರೆ ಎಲ್ಲಾದರು ಕೆಲಸಕ್ಕೆ ಹೋಗಿ. ನಿಮ್ಮ ಬಾಡಿಯನ್ನು ನಾನು ಕೊಡುತ್ತೇನೆ. ನನಗೆ ಉಳಿದುಕೊಳ್ಳಲು ಈ ಜಾಗ ಬಿಟ್ಟರೆ ಬೇರೆ ಯಾವ ಜಾಗವೂ ನನಗಿಲ್ಲ.ದಯವಿಟ್ಟು ಇದು ಒಂದು ಸಲ ನನಗೆ ಅವಕಾಶ ಕೊಡಿ ಅಂತ ವೃದ್ಧ ಮಾಲಿಕನಿಗೆ ಬೇಡುತ್ತಾನೆ.ಮಾಲೀಕ ಕೂಡ ಒಪ್ಪುತ್ತಾನೆ.

ಈ ಗಲಾಟೆ ಆಗುವ ಸಮಯದಲ್ಲಿ ಪಕ್ಕದ ರಸ್ತೆಯಲ್ಲಿ ಹಾದು ಹೋಗುತ್ತಿದ್ದ ಒಬ್ಬ ಪತ್ರಕರ್ತ ಈ ಗಲಾಟೆಯನ್ನು ನೋಡಿ ನನಗೆ ನ್ಯೂಸ್‌ನಲ್ಲಿ ಪ್ರಕಟ ಮಾಡೋದಕ್ಕೆ ಒಳ್ಳೆ ಮಾಹಿತಿ ಸಿಕ್ತು ಅಂತ ಯೋಚನೆ ಮಾಡಿ ತನ್ನ ಕೈಯಲ್ಲಿದ್ದ ಕ್ಯಾಮೆರಾದಲ್ಲಿ ವೃದ್ಧನ, ಫೋಟೋ ಮತ್ತು ಮಾಲಿಕನ ಫೋಟೋ ತೆಗೆದು ಪೇಪರನಲ್ಲಿ ಬರುವಂತೆ ಮಾಡುತ್ತಾನೆ. ಮತ್ತೊಂದು ಕಡೆ ಈ ಸುದ್ದಿ ಪ್ರಧಾನಮಂತ್ರಿಯವರ ತನಕ ಹೋಗುತ್ತೆ. ಇದಾದ ನಂತರ ಪ್ರಧಾನಿ ಮೋದಿ ಅವರೇ ಇವರನ್ನು ಬಂದು ಭೇಟಿಯಾಗುತ್ತಾರೆ.

WhatsApp Group Join Now

Leave a Reply

Your email address will not be published. Required fields are marked *