ನಮಸ್ತೆ ಪ್ರಿಯ ಓದುಗರೇ, ನಾವೆಲ್ಲರೂ ವೈಫೈ ಪಾಸ್ ವರ್ಡ್ ನ ಎಷ್ಟು ಸುಲಭವಾದ ದ್ದನ್ನು ಇಟ್ಟುಕೊಂಡರೂ ಅದನ್ನ ಬೇಗ ಮರೆತು ಹೋಗ್ತಾನೆ ಇರ್ತೀವಿ. ಯಾರಾದ್ರೂ ಫ್ರೆಂಡ್ಸ್ ಅಥವಾ ಫ್ಯಾಮಿಲಿ ಅವರು ಮನೆಗೆ ಬಂದಾಗ ಪಾಸ್ ವರ್ಡ್ ಕೇಳಿದಾಗ ನೆನಪಿಗೆ ಬರುವುದೇ ಇಲ್ಲ. ಇವತ್ತಿನ ಈ ಲೇಖನದಲ್ಲಿ ಸುಲಭವಾಗಿ ಹೇಗೆ ನಮ್ಮ ವೈ ಫೈ ನ ಬೇರೆಯವರಿಗೆ QR ಕೋಡ್ ನ ಶೇರ್ ಮಾಡೋದು ಅಂತ ನೋಡೋಣ ಸ್ನೇಹಿತರೆ. ಮೊದಲು ಐ ಫೋನ್ ಮೊಬೈಲ್ ಇದ್ದವರು ಹೇಗೆ ವೈಫೈ ನ ಶೇರ್ ಮಾಡೋದು ಅಂತ ನೋಡೋಣ. ಆಮೇಲೆ ಆಂಡ್ರಾಯ್ಡ್ ಫೋನ್ ಅಲ್ಲಿ ಹೇಗೆ ವೈಫೈ ಶೇರ್ ಮಾಡೋದು ಅಂತ ನೋಡೋಣ. ಮೊದಲನೆಯದು ಐ ಫೋನ್ ಅಲ್ಲಿ ಸೆಟ್ಟಿಂಗ್ಸ್ ಆಪ್ಷನ್ ಓಪನ್ ಮಾಡಿ, ಅಲ್ಲಿ ವೈಫೈ ನ ಸೆಲೆಕ್ಟ್ ಮಾಡಿ, ನಿಮ್ಮ ಯಾವ ಫೋನ್ ಗೆ ವೈಫೈ ಕನೆಕ್ಟ್ ಆಗಿರುತ್ತೆ ಆ ಫೋನ್ ಅನ್ನು ತೆಗೆದುಕೊಳ್ಳಿ, ಆಮೇಲೆ ಯಾವ ವೈಫೈ ಕನೆಕ್ಟ್ ಆಗಿರುತ್ತೆ ಅದನ್ನು ಸೆಲೆಕ್ಟ್ ಮಾಡಿಕೊಳ್ಳಿ, ಆವಾಗ ನಿಮಗೆ QR ಕೋಡ್ ಓಪನ್ ಆಗುತ್ತೆ, ಅದನ್ನು ನೀವು ಯಾವ ಫೋನ್ ಗೆ ಶೇರ್ ಮಾಡಬೇಕು ಎಂದಿದ್ದೀರಿ ಆ ಫೋನ್ ನ ಕ್ಯಾಮೆರಾ ಓಪನ್ ಮಾಡಿ ಆ QR ಕೋಡ್ ಅನ್ನು ಸ್ಕ್ಯಾನ್ ಮಾಡಿ, ಸ್ಕ್ಯಾನ್ ಮಾಡಿದ ತಕ್ಷಣ ಒಂದು ನೋಟಿಫಿಕೇಶನ್ ಬರುತ್ತೆ, ಈ ವೈಫೈ ಗೆ ನೀವು ನಿಮ್ಮ ಐ ಫೋನ್ ಅನ್ನು ಕನೆಕ್ಟ್ ಮಾಡಲು ಇಚ್ಛೆ ಪಡುತ್ತಿರಾ? ಎಂದು.
ನೀವು ಅದಕ್ಕೆ ಓಕೆ ಎಂದು ಸೆಲೆಕ್ಟ್ ಮಾಡಿದ್ರೆ ನಿಮ್ಮ ಐ ಫೋನ್ ಗೆ ವೈಫೈ ಕನೆಕ್ಟ್ ಆಗಿರುತ್ತೆ. ಸೋ ತುಂಬಾ ಸರಳವಾಗಿ ಇಂಟರ್ನೆಟ್ ನ ಬಳಸಬಹುದು. ಇವಾಗ ಇದೇ ವೈಫೈ ನ ಆಂಡ್ರಾಯ್ಡ್ ಫೋನ್ ಗೆ ಕನೆಕ್ಟ್ ಮಾಡುವ ವಿಧಾನ ನೋಡೋಣ. ನಿಮ್ಮ ಆಂಡ್ರಾಯ್ಡ್ ಫೋನ್ ಅಲ್ಲಿ ಸೆಟ್ಟಿಂಗ್ಸ್ ಆಪ್ಷನ್ ಓಪನ್ ಮಾಡಿ ಅಲ್ಲಿ ವೈಫೈ ಸೆಲೆಕ್ಟ್ ಮಾಡಿಕೊಳ್ಳಿ, ವೈಫೈ ನ ಸೆಲೆಕ್ಟ್ ಮಾಡಿದಾಗ QR ಕೋಡ್ ಓಪನ್ ಆಗುತ್ತೆ, ಇದು ನಿಮ್ಮ ವೈಫೈ ಕನೆಕ್ಟ್ ಆಗಿರುತ್ತೆ ಅಲ್ವಾ ಆ ಫೋನ್ ಅಲ್ಲಿ. ಈಗ ಇನ್ನೊಂದು ಅಂಡಾಯ್ಡ್ ಅಥವಾ ನೀವು ಯಾವ ಫೋನ್ ಗೆ ವೈಫೈ ಶೇರ್ ಮಾಡಲು ಬಯಸುತ್ತಿದ್ದಿರಾ ಆ ಫೋನ್ ತೆಗೆದುಕೊಳ್ಳಿ, ನಂತರ ಪ್ಲೇ ಸ್ಟೋರ್ ಗೆ ಹೋಗಿ QR ಕೋಡ್ ಸ್ಕ್ಯಾನರ್ ಅಪ್ಲಿಕೇಷನ್ ನ ಡೌನ್ಲೋಡ್ ಮಾಡಿಕೊಳ್ಳಿ, ಅದರಲ್ಲಿ ತುಂಬಾ ಸ್ಕ್ಯಾನರ್ ಆಪ್ ಇರುತ್ತವೆ, ನೀವು ಯಾವುದಾದ್ರೂ ಡೌನ್ಲೋಡ್ ಮಾಡಬಹುದು. ಒಟ್ಟಿನಲ್ಲಿ ಆ ಆಪ್ QR ಕೋಡ್ ನ ರೀಡ್ ಅಥವ ಸ್ಕ್ಯಾನ್ ಮಾಡಬೇಕು.
ಆ ಆಪ್ ಡೌನ್ಲೋಡ್ ಆದ ಮೇಲೆ ಆ ಆಪ್ ನ ಓಪನ್ ಮಾಡಿ, ಮೊದಲೇ ಓಪನ್ ಮಾಡಿಟ್ಟಿದ್ದ ಅಂದರೆ ವೈಫೈ ಕನೆಕ್ಟ್ ಆದ ಫೋನ್ ನ QR ಕೋಡ್ ನ ಸ್ಕ್ಯಾನ್ ಮಾಡಿಕೊಳ್ಳಿ, ಆಮೇಲೆ ನಿಮಗೆ ನಾಲ್ಕು ರೀತಿಯ ಆಪ್ಷನ್ ಕಾಣಿಸುತ್ತೆ, ಕಾಣುವಂಥ ನಾಲ್ಕು ಆಪ್ಷನ್ ನಲ್ಲಿ ಮೊದಲನೆಯದು ವೈಫೈ ನ ಡೈರೆಕ್ಟ್ ಆಗಿ ಕನೆಕ್ಟ್ ಮಾಡಲಿಕ್ಕೆ, ಆಮೇಲೆ ಇದನ್ನು ಬೇರೇವರಿಗೂ ಶೇರ್ ಅಥವಾ ಕಳಿಸಬೇಕು ಎಂದಾದರೆ ಆ ಆಪ್ಷನ್ ನಲ್ಲಿ ಮೂರನೆಯದನ್ನು ಸೆಲೆಕ್ಟ್ ಮಾಡಿಕೊಳ್ಳಬಹುದು. ನಾಲ್ಕನೆಯ ಆಪ್ಷನ್ ನಿಮ್ಮ ವೈಫೈ ಪಾಸ್ ವರ್ಡ್ ಮತ್ತು QR ಕೋಡ್ ನ ಯಾವುದಾದರೂ ನೋಟ್ ಪ್ಯಾಡ್ ಅಲ್ಲಿ ಸೇವ್ ಮಾಡಲು ಸಹಾಯ ಮಾಡುವಂಥದ್ದು. ಇವಾಗ ನಾವು ಮೊಬೈಲ್ ಗೆ ಡೈರೆಕ್ಟ್ ವೈಫೈ ಕನೆಕ್ಟ್ ಮಾಡಿಕೊಳ್ಳುತ್ತಿರುವುದರಿಂದ ಮೊದಲನೆಯ ಆಪ್ಷನ್ ನ ಸೆಲೆಕ್ಟ್ ಮಾಡಿಕೊಳ್ಳೋಣ. ಇದರಿಂದ ಆಟೋಮ್ಯಾಟಿಕ್ ಆಗಿ ವೈಫೈ ಕನೆಕ್ಟ್ ಆಗಿರುತ್ತೆ. ನೋಡಿದಿರಲ್ಲ ಸ್ನೇಹಿತರೆ ಎಷ್ಟು ಸುಲಭವಾಗಿ ವೈಫೈ ಪಾಸ್ ವರ್ಡ್ ನ ಬೇರೆಯವರಿಗೆ ಶೇರ್ ಮಾಡಬಹುದು ಮತ್ತೆ ಬೇರೆ ಫೋನ್ ಇಂದ ನಾವು ಕನೆಕ್ಟ್ ಆಗಬಹುದು. ನೀವು ಕೂಡ ಟ್ರೈ ಮಾಡಿ ನೋಡಿ. ಈ ಮಾಹಿತಿ ನಿಮಗೆ ಇಷ್ಟ ಆದಲ್ಲಿ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ. ಶುಭದಿನ.