ಸಾರಥಿ ವಾಹನ ಯೋಜನೆಗೆ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನ ಮಾಡಿದೆ ಸರ್ಕಾರ. ಇದರಿಂದ ತುಂಬಾ ಹೆಲ್ಪ್ ಆಗುತ್ತದೆ. ಪ್ರತಿವರ್ಷದಂತೆ ಈ ವರ್ಷ ಕೂಡ ನಮ್ಮ ರಾಜ್ಯ ಸರ್ಕಾರ ಸಾರಥಿ ವಾಹನ ಎನ್ನುವಂತಹ ಒಂದು ಯೋಜನೆಗೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನ ಮಾಡಿದೆ. ಈ ಒಂದು ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಿ ಇದರಿಂದ ಟ್ಯಾಕ್ಸಿ ಖರೀದಿ ಮಾಡಬಹುದು ಹಾಗೂ ಪ್ಯಾಸೆಂಜರ್ ವಾಹನ ಖರೀದಿ ಮಾಡಬಹುದು. ನಾಲ್ಕು ಚಕ್ರದ ವಾಹನ ಹಾಗೂ ಗೂಡ್ಸ್ ವಾಹನ ಕೂಡ ಖರೀದಿ ಮಾಡಬಹುದು. ಹಾಗಾದ್ರೆ ಇದಕ್ಕೆ ಅರ್ಜಿ ಸಲ್ಲಿಸಲು ಏನೆಲ್ಲ ದಾಖಲೆಗಳುಬೇಕು ಹಾಗೂ ಯಾವ ಯಾವ ವರ್ಗದ ಜನಾಂಗದವರು ಈ ಒಂದು ಸಾರಥಿ ಯೋಜನೆಗೆ ಅರ್ಜಿ ಸಲ್ಲಿಸಬಹುದು ಅಂತ ಸಂಪೂರ್ಣವಾಗಿರುವಂತಹ ಮಾಹಿತಿಯನ್ನ ನಿಮಗೆ ತಿಳಿಸಿಕೊಡುತ್ತೇವೆ.

ಮೊದಲನೆಯದಾಗಿ ನೋಡಿ ಸ್ವಾವಲಂಬಿ ಸ್ವಾರ್ಥಿ ಯೋಜನೆ ಅಂತಾರೆ. ಅದಕ್ಕೆ ಸಾರಥಿ ಯೋಜನೆ ಹಿಂದುಳಿದ ವರ್ಗಗಳ ನಿರುದ್ಯೋಗಿ ಯುವಕರಿಗೆ ಸ್ವಯಂ ಉದ್ಯೋಗ ಕೊಳ್ಳಲು ಸಾವಲಂಬಿ ಸಾರಥಿ ಯೋಜನೆಯಡಿ ನಾಲ್ಕು ಚಕ್ರಗಳ ವಾಹನ ಖರೀದಿಗೆ ಬ್ಯಾಂಕ್‌ಗಳಿಂದ ಪಡೆಯುವ ಸಾಲಕ್ಕೆ ಶೇಕಡಾ ಐವತ್ತರಷ್ಟು ಗರಿಷ್ಠ ರೂಪಾಯಿ ಮೂರು ಲಕ್ಷಗಳ ಸಹಾಯಧನ ಮಂಜೂರು ಮಾಡಲಾಗುವುದು ಎಸ್‌ಸಿ ಎಸ್‌ಟಿ ಅಭ್ಯರ್ಥಿಗಳಿಗೆ 4,00,000 ರೂ.ಗಳು ಅಥವಾ ವಾಹನ 75% ರಷ್ಟು ನೀಡಲಾಗುತ್ತದೆ ಅಲ್ಪಸಂಖ್ಯಾತರಿಗೆ 3,00,000 ರೂ. ವರೆಗೆ ಅಥವಾ ವಾಹನದ ಬೆಲೆಯ ಶೇ. 50% ರಷ್ಟನ್ನು ನೀಡಲಾಗುತ್ತದೆ. ಇದರೊಂದಿಗೆ ಒಬಿಸಿ ಅಭ್ಯರ್ಥಿಗಳಿಗೆ 3,00,000 ರೂ.ಗಳ ಸಬ್ಸಿಡಿ ನೀಡಲಾಗುತ್ತದೆ.

ಇದರೊಂದಿಗೆ ಪ್ಯಾಸೆಂಜ‌ರ್ ಆಟೋರಿಕ್ಷಾ ಮೇಲಿನ ಸಬ್ಸಿಡಿ 75,000 ರೂ.ಗಳಾಗಿದೆ. ಸೌಲಭ್ಯ ಪಡೆಯಲು ಬಯಸುವ ಹಿಂದು ಳಿದ ವರ್ಗಗಳ ಪ್ರವರ್ಗ ಒಂದು 2A ಮತ್ತು 2B ಸೇರಿದವರಾಗಿರಬೇಕು. ಹಿಂದುಳಿದ ವರ್ಗ ಅಥವಾ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ವರ್ಗದವಾಗಿರಬೇಕು. ಕುಟುಂಬದ ವಾರ್ಷಿಕ ವರಮಾನ ಗ್ರಾಮಾಂತರ ಪ್ರದೇಶದವರಿಗೆ 98 ಸಾವಿರಕ್ಕಿಂತಲೂ ಕಡಿಮೆ ಇರಬೇಕು. ಪಟ್ಟಣ ಪ್ರದೇಶದವರಿಗೆ 1,00,020 ಸಾವಿರಕ್ಕಿಂತಲೂ ಕಡಿಮೆ ಇರಬೇಕು.ಅರ್ಜಿದಾರರ ವಯಸ್ಸು 21 ವರ್ಷದಿಂದ 45 ವರ್ಷದ ವಯೋಮಿತಿ ಒಳಗಿರಬೇಕು. ಈ ಯೋಜನೆಯಲ್ಲಿ ಆರ್ಥಿಕ ಸಹಾಯ ಪಡೆಯಲು ಇಚ್ಚಿಸುವ ಅರ್ಜಿದಾರರು ಲಘು ವಾಹನ ಚಾಲನಾ ಪರವಾನಿಗೆ ಹೊಂದಿರಬೇಕು ಅಂದ್ರೆ ಲೈಟ್ಸ್ ಡ್ರೈವಿಂಗ್ ಲೈಸನ್ಸ್ ನಿಮ್ಮ ಹತ್ರ ಕಡ್ಡಾಯವಾಗಿ ಇರಲೇಬೇಕು.

ಇದ್ದಾಗ ಮಾತ್ರ ಇದಕ್ಕೆ ಅರ್ಜಿ ಸಲ್ಲಿಸೋಕೆ ಸಾಧ್ಯ. ಅಗತ್ಯವಾದ ದಾಖಲೆಗಳು ಕರ್ನಾಟಕದ ನಿವಾಸ ಪುರಾವೆ , ಪಾಸ್‌ಪೋರ್ಟ್ ಗಾತ್ರದ ಫೋಟೋ , ಬ್ಯಾಂಕ್ ಖಾತೆ ವಿವರಗಳು ,ಆದಾಯ ಪ್ರಮಾಣಪತ್ರ,ಚಾಲನಾ ಪರವಾನಿಗೆ, ಆಧಾರ್ ಕಾರ್ಡ್ , ಅಲ್ಪಸಂಖ್ಯಾತರ ಪ್ರಮಾಣಪತ್ರ , ವಾಹನದ ಬಗ್ಗೆ ಮಾಹಿತಿ , ಸ್ವಯಂ ಘೋಷಣೆ ನಮೂನೆ ,ಮೊಬೈಲ್ ನಂಬರ್ ಅರ್ಜಿ ಸಲ್ಲಿಕೆ ಮಾಡಲು ಆಯಾ ಜಾತಿಯ ನಿಗಮ ಮಂಡಳಿಗೆ ಭೇಟಿ ನೀಡಿ. ಈಗಾಗಲೇ ಕರ್ನಾಟಕ ಸರ್ಕಾರ ಅರ್ಜಿ ಆಹ್ವಾನಿಸಿದೆ.

Leave a Reply

Your email address will not be published. Required fields are marked *