ಒಂದು ಒಟ್ಟು ಕುಟುಂಬದ ಆಸ್ತಿ ಅಥವಾ ತಂದೆ ಗಳಿಸಿದ್ದ ಆಸ್ತಿಯನ್ನು ಕುಟುಂಬದ ಎಲ್ಲಾ ಸದಸ್ಯರು ಹೇಗೆ ಹಂಚಿಕೊಳ್ಳಬೇಕು ಅಂದ್ರೆ ಯಾವ ರೀತಿ ಪಾಲು ಮಾಡಿಕೊಳ್ಳಬೇಕು, ಯಾವ ದಾಖಲೆಗಳು ಬೇಕಾಗುತ್ತವೆ. ಆ ಒಂದು ತಂದೆ, ಮಕ್ಕಳು ಅಂದ್ರೆ ಮಕ್ಕಳು ಆಸೆ ಹಂಚಿಕೊಳ್ಳುವಾಗ ಮನೆ ಮಾಲೀಕನ ಪಾತ್ರ ಇದ್ದೇ ಇರುತ್ತೆ. ಆಸ್ತಿ ಹಂಚಿಕೊಡುವಾಗ ಆಸ್ತಿ ಮೇಲೆ ಈ ಋಣಭಾರ ಅಂದ್ರೆ ಆಸ್ತಿ ಮೇಲೆ ಸಾಲ ಇದ್ದರೆ ಅದನ್ನು ವಿಲೇವಾರಿ ಹೇಗೆ ಮಾಡಬೇಕು? ಎಲ್ಲಕ್ಕಿಂತ ಮುಖ್ಯವಾಗಿ ಉಪನೋಂದಣಿ ಕಚೇರಿಯಲ್ಲಿ ಅಂದ್ರೆ ಸಬ್ ರಿಜಿಸ್ಟರ್ ಆಫೀಸ್ ನಲ್ಲಿ ರಿಜಿಸ್ಟರ್ ಪದ್ಧತಿ ಯಾವ ರೀತಿ ಇರುತ್ತೆ ಅಂತ ಎಲ್ಲ ಮಾಹಿತಿ ಸ್ಟೆಪ್‌ಬೈಸ್ಟೆಪ್ ಹೇಳುತ್ತೇವೆ. ಆಸ್ತಿ ಭಾಗ ಮಾಡಿ ಮಕ್ಕಳು ತಮ್ಮ ಹೆಸರಿಗೆ ಮಾಡ್ಕೋಬೇಕಾದ್ರೆ ಈ ಸೂಚನೆಗಳು ನೀವು ಒಮ್ಮೆ ತಿಳಿದುಕೊಳ್ಳುವುದು ಸೂಕ್ತ.
ಪಿತ್ರಾರ್ಜಿತ ಆಸ್ತಿ ಭಾಗ ಮಾಡಿ ತಮ್ಮ ಹೆಸರಿಗೆ ಮಾಡಿಕೊಳ್ಳುವುದು ಅಷ್ಟೊಂದು ಸುಲಭದ ಮಾತಲ್ಲ. ಯಾಕೆಂದರೆ ಈ ಜಮೀನು ಪಾಲು ಮಾಡಿಕೊಳ್ಳಲು ಕುಟುಂಬದ ಎಲ್ಲಾ ಸದಸ್ಯರು ಒಪ್ಪಿಗೆ ಅತಿ ಮುಖ್ಯ ಪಾತ್ರ ವಹಿಸುತ್ತೆ ಅದೇ ರೀತಿ ಮನೆ ಹೆಣ್ಣುಮಕ್ಕಳು ಅಥವಾ ಮನೆಗೆ ಬಂದ ಸೊಸೆಯಂದಿರು ಕೂಡ ಒಪ್ಪಿಗೆಬೇಕಾಗುತ್ತೆ. ಎಲ್ಲಕ್ಕಿಂತ ಮುಖ್ಯವಾಗಿ ಆಸ್ತಿ ಮೇಲೆ ಸಾಲ ಏನಾದ್ರೂ ಇದ್ರೆ ಆಸಿಮ್ ಪಾಲು ಮತ್ತಷ್ಟು ಜಟಿಲ ಆಗಬಹುದು ಆದ್ರೆ ಸ್ವಯಾರ್ಜಿತ ಆಸ್ತಿ ಪಾಲು ಮಾಡಿಕೊಳ್ಳುವಾಗ ಅಷ್ಟೊಂದು ಸಮಸ್ಯೆ ಹೆಚ್ಚಾಗಿ ಬರುವುದಿಲ್ಲ. ಇದಕ್ಕೆ ಕಾರಣ ಇಷ್ಟೇ. ಮನೆ ಯಜಮಾನ ಗಳಿಸಿದ ಆಸ್ತಿ ಆಗಿರುತ್ತೆ ಅಂದ್ರೆ ತನ್ನ ಸ್ವಂತ ಆಗಿರುತ್ತೆ ತಂದೆ ಆಸ್ತಿಲ್ಲಿ ತೀರ್ಮಾನವು ಅದೇ ಮನೆ ಯಜಮಾನನ ಅಂತಿಮವಾಗಿರುತ್ತೆ. ಇಲ್ಲಿ ತೀರ್ಮಾನವನ್ನು ಮನಸ್ಸು ಮಾಡಿದ್ರೆ ಒಬ್ಬರಿಗೆ ಹೆಚ್ಚಿನ ಆಸ್ತಿ, ಇನ್ನೊಬ್ಬರಿಗೆ ಕಡಿಮೆ ಆಸ್ತಿ ಪಾಲು ಮಾಡಿಕೊಡಬಹುದು.
ಇದನ್ನು ಯಾರು ಸಹ ಪ್ರಶ್ನೆ ಮಾಡಲು ಬರೋದಿಲ್ಲ.ಯಾಕಂದ್ರೆ ಅದು ಸ್ವಯಾರ್ಜಿತ ಆಸ್ತಿ ಆಗಿರೋದ್ರಿಂದ ಸ್ವಯಾರ್ಜಿತ ಆಸ್ತಿಯೂ ಎಲ್ಲವೂ ಸಹ ತನ್ನ ಮಾಲೀಕನ ವಿವೇಚನೆಗೆ ಬಿಟ್ಟಿದ್ದು ಆಗಿರುತ್ತೆ, ಇದು ನಿಮ್ಮ ಗಮನದಲ್ಲಿರಲಿ ಒಬ್ಬ ತಂದೆಯಾದವನು. ತನ್ನ ಆಸ್ತಿಯನ್ನು ಮಕ್ಕಳ ನಡುವೆ ಹೇಗೆ ಅಂತಬೇಕು? ಜಮೀನು ಅಳತೆ ಯಾವ ರೀತಿ ಮಾಡಿಸಬೇಕು? ಜಮೀನಾಗಲಿ ಅಥವಾ ಮನೆ ಆಗಲಿ ಪಾಲು ಮಾಡಿಕೊಳ್ಳುವಾಗ ಮನೆ ಹಿರಿಯ ಸದಸ್ಯರ ಪಾತ್ರ ಅತಿ ದೊಡ್ಡ ಪಾತ್ರ ಆಗಿರುತ್ತೆ. ಈ ಹಿನ್ನಲೆಯಲ್ಲಿ ಮನೆಯ ಕುಟುಂಬದ ಎಲ್ಲಾ ಸದಸ್ಯರು ಸೇರಿ ಜಮೀನಿನ ಹಂಚಿಕೆ ಮಾಡುವ ಕುರಿತು ಚರ್ಚೆ ಮಾಡಿ ಒಂದು ಒಪ್ಪಂದಕ್ಕೆ ಬರಲೇಬೇಕು.
ಎಲ್ಲರೂ ಸೇರಿ ಒಂದು ಖಚಿತ ನಿರ್ಧಾರಕ್ಕೆ ಬಂದು ಒಂದು ಒಪ್ಪಂದ ಪತ್ರ ಬರೆಸಿಕೊಳ್ಳಬೇಕು ಅಂದ್ರೆ ಒಪ್ಪಂದ ಪತ್ರ ಅಂದರೆ ಒಂದು ಬಿಳಿ ಹಾಳೆ ಮೇಲೆ ಬರುವುದಾಗಲಿ ಅಥವಾ ಸ್ಟಾಂಪ್ ಪೇಪರ್ ಮೇಲೆ ಸಹ ಬರೆಯಬಹುದು. ಒಂದು ಒಪ್ಪಂದ ಪತ್ರ ಪತ್ರ ಬರೆದು ಎಲ್ಲರೂ ಸಹ ಒಂದು ಒಪ್ಪಂದ ಪತ್ರದ ಮೇಲೆ ಸಹಿ ಮಾಡಬೇಕಾಗುತ್ತೆ. ಆಸ್ತಿ ಹಂಚಿಕೆ ಆಗುವ ತನಕ ಎಲ್ಲರೂ ಸಹ ಒಂದು ಒಪ್ಪಂದ ಪತ್ರದಂತೆ ನಡೆದುಕೊಂಡರೆ ಮುಂದಿನ ಕೆಲಸ ಬಹುಸುಲಭವಾಗಿ ಆಗುತ್ತೆ. ಇನ್ನು ಸಂಪೂರ್ಣ ಮಾಹಿತಿಗಾಗಿ ಈ ಕೆಳಗಿನ ವಿಡಿಯೋ ವೀಕ್ಷಣೆ ಮಾಡಿ