WhatsApp Group Join Now

ನಿಮ್ಮ ಜಮೀನಿನ ಹಳೆ ದಾಖಲೆಗಳಾದ ಸರ್ವೆ ಸ್ಕೆಚ್ ಪೋಡಿ, ಟಿಪ್ಪಣಿ ಮೂಲಸರ್ವೇ ಜಮೀನಿನ ಮೂಲ ಪುಸ್ತಕ ಕಾಲೋಚಿತಗೊಳಿಸುವ ನಿಮ್ಮ ಜಮೀನಿನ ಹಿಸ್ಸಾ ಸರ್ವೆ. ಹೀಗೆ ನಿಮ್ಮ ಜಮೀನಿನ ಪ್ರತಿಯೊಂದು ಹಳೆ ದಾಖಲಾತಿಗಳು ಅಂದ್ರೆ ಹಳೆ ದಾಖಲೆಗಳು. ಜಸ್ಟ್ ನಿಮ್ಮ ಮೊಬೈಲ್ ಮುಖಾಂತರ ನೋಡಬಹುದು ಮತ್ತು ಪ್ರಿಂಟ್ ಸಹ ತೆಗೆದುಕೊಳ್ಳಬಹುದು. ಹಾಗೆ ನಿಮಗೆ ಅನಿಸುತ್ತೆ. ಜಮೀನಿನಲ್ಲೇ ದಾಖಲಾತಿಗಳು ಯಾಕೆ ನೋಡಬೇಕು ಮತ್ತು ಅದರ ಉಪಯೋಗಗಳು ಏನು ಅಂತ ನಿಮಗೆ ಗೊತ್ತಿರಲಿ ಅನ್ನೋ ಉದ್ದೇಶದಿಂದ ಈ ಮಾಹಿತಿಯನ್ನು ಮಾಡಿದ್ದೇವೆ.

ಹಾಗಿದ್ದರೆ ನಿಮ್ಮ ಜಮೀನಿನಲ್ಲೇ ದಾಖಲಾತಿಗಳು ಯಾವ ರೀತಿ ತೆಗೆದುಕೊಳ್ಳಬೇಕು ಮತ್ತು ಅದರ ಉಪಯೋಗಗಳು ಪ್ರತಿಯೊಬ್ಬ ರೈತರಿಗೂ ಗೊತ್ತಿರಬೇಕು. ಹಾಗಾದರೆ ಮೊಟ್ಟ ಮೊದಲಿಗೆ ಜಮೀನಿನಲ್ಲೇ ದಾಖಲಾತಿಗಳ ಉಪಯೋಗಗಳನ್ನು ನೋಡೋಣ. ಜಮೀನಿನ ಹದ್ದುಬಸ್ತು ಗುರುತಿಸಲು ಹಳೆ ದಾಖಲೆಗಳು ಪಾತ್ರ ತುಂಬಾ ದೊಡ್ಡದಾಗಿರುತ್ತದೆ ಎಂದು ಹೇಳಬಹುದು. ಉದಾಹಣೆಗೆ ಹೊಲದ ಗಡಿಗಳನ್ನು ಗುರುತಿಸಲು ಮತ್ತು ಫಲದ ಮುಖ್ಯ ಗುರುತು ಕಾಲದ ಕಲ್ಲಿನ ದಿಬ್ಬ ಗಿಡಗಳು ಹಾಳಾಗುವ ಸಂಭವ ಇದ್ದೇ ಇರುತ್ತೆ.ಇದನ್ನೆಲ್ಲ ಹಳೆ ದಾಖಲೆಗಳಿಂದ ತಿಳಿದು ಕೊಂಡು ಅದರಂತೆ ಅಳತೆ ಮಾಡಲು ಭೂಮಾಪಕರಿಗೆ ಸಹಾಯ ಆಗುತ್ತೆ ಎಂದು ಹೇಳಬಹುದು.

ಎರಡನೆಯದು ಭೂ ಪರಿವರ್ತನೆ ಆಗುವುದಕ್ಕೆ ಈ ಹಳೆ ದಾಖಲಾತಿಗಳು ಕೇಳಲಾಗುತ್ತೆ. ಕೆಲವೊಮ್ಮೆ ಎಂದು ಸಹ ಹೇಳಬಹುದು.ಮೂರನೆಯದು ನಿಮ್ಮ ಜಮೀನಿನ ಪುರಾತನ ಅಂದರೆ ಹಳೆಯ ಕಾಲದ ಮಾಲಿಕರು ಯಾರು ಇರಬಹುದು ಎಂದು ನೋಡಲು ಈ ಹಳೆಯ ದಾಖಲೆಗಳಿಂದ ತುಂಬಾ ಸಹಾಯ ಆಗುತ್ತೆ ಎಂದು ಹೇಳಬಹುದು ನಾಲ್ಕನೆಯದು ಜಮೀನಿಗೆ ಸಂಬಂಧಪಟ್ಟಂತೆ ನ್ಯಾಯಾಲಯದಲ್ಲಿ ತಂಟೆ ತಕರಾರುಗಳು ಇದ್ದಲ್ಲಿ ಈ ಹಳೆಯ ದಾಖಲಾತಿಗಳು ಕೆಲವೊಮ್ಮೆ ಕೇಳಿದ್ರೂ ಕೇಳಲಾಗುತ್ತೆ. ಈಗ ನಿಮ್ಮ ಜಮೀನಿನಲ್ಲೇ ದಾಖಲಾತಿಗಳು ಯಾವ ರೀತಿ ಮೊಬೈಲ್‌ನಲ್ಲಿ ನೋಡ ಬೇಕು ಮತ್ತು ಪ್ರಿಂಟ್ ಹೇಗೆ ತೆಗೆದುಕೊಳ್ಳಬೇಕು ಎಂಬುದನ್ನು ನೋಡೋಣ.

ಮೊದಲಿಗೆ ಒಂದು ಬ್ರೌಸರ್ ಓಪನ್ ಮಾಡಿಕೊಂಡು ನಿಮ್ಮ ಮೊಬೈಲ್ ಅಥವಾ ಸಿಸ್ಟಮ್ ನಲ್ಲಿ ಬ್ರೌಸರ್ ಓಪನ್ ಮಾಡಿಕೊಳ್ಳಿ. ಬ್ರೌಸರ್ ಅಡ್ರೆಸ್‌ಬಾರ್‌ನಲ್ಲಿ ಲ್ಯಾಂಡ್ ರೆಕಾರ್ಡ್ ಡಾಟ್ ಕರ್ನಾಟಕ ಡಾಟ್ ಜೀವೂವಿ ಈ ವೆಬ್‌ಸೈಟ್ ಒಪನ್ ಮಾಡಿಕೊಳ್ಳಿ. ಈ ವೆಬ್ ಸೈಟ್ ಕರ್ನಾಟಕ ಸರ್ಕಾರದ ವೆಬ್ ಸೈಟ್ ಆಗಿದ್ದು, ಈ ವೆಬ್‌ಸೈಟ್‌ನಲ್ಲಿ ಸರ್ವೆ ಇಲಾಖೆಗೆ ಸಂಬಂಧಪಟ್ಟ ದಾಖಲೆಗಳು ಮಾಹಿತಿಗಳು ನೋಡಬಹುದು. ಹಾಗೆಯೇ ನಂತರ ವಿಧಾನಗಳನ್ನು ನಿಮಗೆ ಮಾಹಿತಿ ಮುಖಾಂತರ ಹೇಳಿದರೆ ಅರ್ಥ ಮಾಡಿಕೊಳ್ಳಲು ಕಷ್ಟವಾಗುತ್ತದೆ ಹಾಗಾಗಿ ಈ ಕೆಳಗೆ ನೀಡಿರುವಂತಹ ವಿಡಿಯೋವಿನ ಲಿಂಕ್ ಅನ್ನು ಒಮ್ಮೆ ಓಪನ್ ಮಾಡಿಕೊಂಡು ನೋಡಿ ಸಂಪೂರ್ಣವಾದ ಮಾಹಿತಿ ನಿಮಗೆ ಸಿಗುತ್ತದೆ ಹಾಗೂ ವಿಧಾನಗಳು ಇನ್ನೂ ಸುಲಭವಾಗಿ ನಿಮಗೆ ವಿಡಿಯೋ ಮುಖಾಂತರ ಅರ್ಥವಾಗುತ್ತದೆ.

 

WhatsApp Group Join Now

Leave a Reply

Your email address will not be published. Required fields are marked *