ಶ್ರೀ ಪಂಚಮುಖಿ ಜೋತಿಷ್ಯ ಪಂಡಿತ್ ಶ್ರೀ ಗಣೇಶ್ ಕುಮಾರ್ ಎಲ್ಲ ಕಷ್ಟಗಳಿಗೂ ಫೋನಿನ ಮೂಲಕ ಪರಿಹಾರ ನೀಡುತ್ತಾರೆ 22 ವರ್ಷಗಳ ಸುದೀರ್ಘ ಅನುಭ ಹೊಂದಿರುವ ಸುಪ್ರಸಿದ್ದ ಜ್ಯೋತಿಷ್ಯರು, ಸಮಸ್ಯೆ ಯಾವುದೇ ಇರಲಿ ಇವರಲ್ಲಿ ಖಂಡಿತ ನಿಮ್ಮ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆದರದಿಂದ ನಿಮ್ಮ ಸಮಸ್ಯೆಗಳನ್ನು ಶಾಶ್ವತವಾಗಿ ಪರಿಹಾರ ಮಾಡುತ್ತಾರೆ ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ವಾರದಲ್ಲಿ 7 ದಿನಗಳಿವೆ ಅದರಲ್ಲಿ ಭಾನುವಾರ ಬಂದರೆ ಸಾಕು ರಜೆ ಬಂತು ಅಂತ ಮಕ್ಕಳಿಂದ ದೊಡ್ಡವರು ಸಂಭ್ರಮಿಸುತ್ತೇವೆ. ಆದರೆ ಭಾನುವಾರವೇ ರಜೆ ಏಕೆ.? ಅಷ್ಟಕ್ಕೂ ಈ ಪದ್ದತಿಯನ್ನು ಜಾರಿಗೆ ತಂದಂತ ಆ ಮಹಾನ್ ವ್ಯಕ್ತಿ ಯಾರು.? ಮತ್ತು ಇದರ ಹಿಂದಿರುವ ಕಾರಣವೇನು ಅನ್ನೋದನ್ನ ತಿಳಿಯೋಣ ಬನ್ನಿ. ಇವತ್ತಿನ ದಿನದಲ್ಲಿ ಭಾನುವಾರ ರಜೆ ದಿನವಾಗಿ ಪಡೆಯುತ್ತಿರಲು ಕಾರಣ ಅಂದ್ರೆ ಈ ಮಹಾನ್ ವ್ಯಕ್ತಿ, ಇವರ ಹೆಸರು ನಾರಾಯಣ ಮೇಘಾಜಿ ಲೊಕೊಂಡೆ. ಇವರು ಹುಟ್ಟಿದ್ದು 1848 ರಲ್ಲಿ ಮರಣ ಹೊಂದಿದ್ದು 1897 ರಲ್ಲಿ ಈ ಸಮಯದಲ್ಲಿ ನಾವು ಬ್ರಿಟಿಷರ ಆಳ್ವಿಕೆಯಲ್ಲಿದ್ದೆವು ಎಂಬುದು ನಮಗೆ ನಿಮಗೆ ತಿಳಿದಿರುವ ವಿಷಯ. ಅಂತಹ ಸಂದರ್ಭದಲ್ಲಿ ಈ ಮೇಘಾಜಿ ಲೊಕೊಂಡೆ ಎಂಬುವವರು ಸತ್ಯ ಶೋಧನಾ ಉದ್ಯಮದಲ್ಲಿ ಕಾರ್ಯಕರ್ತರಾಗಿದ್ದರು, ಮತ್ತು ಕಾರ್ಮಿಕರ ನಾಯಕರು ಸಹ ಆಗಿದ್ದರು.

ಭಾನುವಾರ ದಿನ ರಜೆಯನ್ನು ತರಲು ಒಂದು ಕಾರಣವಿದೆ: ಬ್ರಿಟಿಷರು ನಮ್ಮ ದೇಶವನ್ನು ಆಳುತ್ತಿದ್ದ ವೇಳೆಯಲ್ಲಿ ಇವರು ಈ ರೀತಿ ಕೇಳುತ್ತಾರೆ, ನಮಗೆ ವಾರದಲ್ಲಿ ಒಂದು ದಿನವಾದರೂ ರಜಾ ದಿನವಾಗಿ ಬೇಕು. ಸಮಾಜಕ್ಕೆ ನಾವು ಏನಾದರು ಕೊಡುಗೆಯನ್ನ ನೀಡಲು ನಮಗೆ ಒಂದು ದಿನವಾದರೂ ರಜಾ ಬೇಕು ಎಂದು ಬ್ರಿಟಿಷರ ಹತ್ತಿರ ಮನವಿಯನ್ನ ಮಾಡಿದರು. ಆದರೆ ಬ್ರಿಟಿಷ್ ಸರಕಾರ ಈ ಒಂದು ಬೇಡಿಕೆಯನ್ನ ಒಪ್ಪುವುದಿಲ್ಲ.

ಇದಕ್ಕೆ ಸುಮ್ಮನಿರದ ನಾರಾಯಣ ಮೇಘಾಜಿ ಲೊಕೊಂಡೆಯವರು ಸತತ ಎಂಟು ವರ್ಷಗಳ ಕಾಲ ರಜಾ ದಿನವನ್ನ ಪಡೆಯುವುದಕ್ಕಾಗಿ ಹೋರಾಟವನ್ನ ಮಾಡುತ್ತಾರೆ. ಇದಕ್ಕಾಗಿ ಅವರು ತಮ್ಮ ಕೆಲಸಕ್ಕೆ ರಾಜೀನಾಮೆ ನೀಡುತ್ತಾರೆ. ಇದಾದ ಬಳಿಕ ಹೋರಾಟ ಬಹಳ ತೀವ್ರ ರೂಪವನ್ನ ಪಡೆಯುತ್ತದೆ. ಆ ಸಂದರ್ಭದಲ್ಲಿ ಬ್ರಿಟಿಷ್ ಸರಕಾರ ಈ ಒಂದು ಬೇಡಿಕೆಗೆ ಮಣಿದು, ಭಾನುವಾರವನ್ನು ರಜಾ ದಿನ ಎಂದು ಘೋಷಣೆ ಮಾಡುತ್ತದೆ.

ಅಂದು ಅವರು ಪಟ್ಟಿದ ಶ್ರಮಕ್ಕೆ ಇಂದು ನಮೆಲ್ಲರಿಗೂ ಭಾನುವಾರದ ದಿನ ರಜೆ ದಿನವಾಗಿ ಸಿಗುತ್ತಿದೆ, ಬಹಳಷ್ಟು ಜನಕ್ಕೆ ಈ ವಿಚಾರ ಗೊತ್ತಿರೋದಿಲ್ಲ ಭಾನುವಾರದ ದಿನ ರಜೆಯನ್ನು ಯಾಕೆ ಮಾಡುತ್ತಾರೆ ಅಂದ್ರೆ ಬೇರೆ ರೀತಿಯ ಕಾರಣಗಳನ್ನು ಹೇಳುತ್ತಾರೆ, ಈ ಮಾಹಿತಿ ಇಷ್ಟ ಆದಲ್ಲಿ ಇತರರಿಗೂ ಹಂಚಿಕೊಳ್ಳಿ.

Leave a Reply

Your email address will not be published. Required fields are marked *