ನಮಗೆ ಗೊತ್ತಿರುವ ಹಾಗೆ ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಮಳೆ ಹೊಡೆದಿತ್ತು ಇದರಿಂದ ಬಹಳಷ್ಟು ರೈತರಿಗೆ ಎಲ್ಲಾ ನಷ್ಟವು ಕೂಡ ಆಗಿದೆ ಈ ನಷ್ಟದಿಂದ ಹೊರಬರಲು ಕರ್ನಾಟಕ ಸರ್ಕಾರ ರೈತರಿಗೆ ಸಹಾಯ ಮಾಡಲು ಮುಂದಿನ ಹೋಗಿದೆ ಇದರ ಬಗ್ಗೆ ಸಂಪೂರ್ಣವಾದ ಮಾಹಿತಿ ಇಲ್ಲಿದೆ ಇಡೀ ಕರ್ನಾಟಕದಾದ್ಯಂತ ಇರುವ ರಾಜ್ಯದ ಎಲ್ಲ ರೈತರಿಗೆ ರಾಜ್ಯದ ಕಂದಾಯ ಸಚಿವರಾದ ಕೃಷ್ಣ ಭೈರೇಗೌಡ ಅವರು ಬಂಪರ್ ಗಿಫ್ಟ್ ನೀಡಿದ್ದಾರೆ. ರಾಜ್ಯದಲ್ಲಿ ಈ ಬಾರಿ ಮುಂಗಾರು ಮಳೆ ಚೆನ್ನಾಗಿ ಬಂದಿದ್ದು, ಕೆಲವು ಕಡೆ ರೈತರ ಬೆಳೆ ಹಾನಿಯೂ ಕೂಡ ಉಂಟಾಗಿದೆ. ರಾಜ್ಯದಲ್ಲಿ ಬಹಳಷ್ಟು ರೈತರು ಅತಿವೃಷ್ಟಿಯಿಂದ ಅಂದ್ರೆ ಮಳೆ ಹೆಚ್ಚಾಗಿರುವ ಕಾರಣಕ್ಕಾಗಿ ರೈತರ ಬೆಳೆಗಳು ಹಾನಿ ಉಂಟಾಗಿದೆ. ರಾಜ್ಯದಲ್ಲಿ ರೈತರು ಈ ಬಾರಿ ಮಳೆಯಿಂದ ಹಾನಿಗೊಳಗಾದ ರೈತರ ಖಾತೆಗಳಿಗೆ ಹಣ ಬಿಡುಗಡೆ ಮಾಡಲು ರಾಜ್ಯ ಸರ್ಕಾರ ಸಿದ್ಧ ಇದೆ.

ಇಂತಹ ರೈತರಿಗೆ ಅಂದರೆ ಈ ಜಿಲ್ಲೆಗಳ ಮತ್ತು ಈ ರೈತರಿಗೆ ಮಾತ್ರ ಹಣ ವರ್ಗಾವಣೆಯಾಗಲಿದೆ ಎಂದು ರಾಜ್ಯದ ಕಂದಾಯ ಸಚಿವರು ತಿಳಿಸಿದ್ದಾರೆ. ಹಾಗಿದ್ದರೆ ರಾಜ್ಯದಲ್ಲಿ ಮಳೆಯಿಂದಾಗಿ ಬೆಳೆ ಹಾನಿ ಆಗಿರುವ ರೈತರಿಗೆ ಪರಿಹಾರ ಹಣ ಯಾವಾಗ ಜಮಾ ಆಗುತ್ತೆ ಏನು ಅಂತ ಕಂಪ್ಲೀಟ್ ಮಾಹಿತಿಯನ್ನ ತಿಳಿದುಕೊಳ್ಳೋಣ.. ದಾಖಲೆಗಳನ್ನು ಸಲ್ಲಿಸಿ ರಾಜ್ಯಾದ್ಯಂತ 80,000 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಾಶವಾಗಿದ್ದು, ವಾರದೊಳಗಾಗಿ ಎಲ್ಲ ರೈತರಿಗೂ ಪರಿಹಾರ ನೀಡಲಾಗುವುದು ಎಂದು ಸಚಿವರು ಕೃಷ್ಣ ಭೈರೇಗೌಡ ಭರವಸೆಯನ್ನ ನೀಡಿದ್ದರು. ಈ ಬಗ್ಗೆ ಮಾತನಾಡಿದ ಅವರು, ರಾಜ್ಯಾದ್ಯಂತ ಕೃಷಿ ಬೆಳೆ 78,679 ಹೆಕ್ಟೇರ್ ಹಾನಿಯಾಗಿದ್ದರೆ ತೋಟಗಾರಿಕಾ ಬೆಳೆ 22,294 ಹೆಕ್ಟೇರ್ ಪ್ರದೇಶ ಹಾನಿಯಾಗಿದೆ. ವಾರದೊಳಗೆ ಯಾವ ಯಾವ ಬೆಳೆಗಳು ಹಾನಿ ಆಗಿದೆ ಎಂಬ ಬಗ್ಗೆಯೂ ಖಚಿತ ಮಾಹಿತಿ ಸಿಗಲಿದೆ.

ತದನಂತರ ರೈತರಿಗೆ ಪರಿಹಾರ ನೀಡುವ ಕಾರ್ಯಕ್ಕೂ ಚಾಲನೆ ನೀಡಲಾಗುವುದು. ಪ್ರಸ್ತುತ ರಾಜ್ಯ ಸರ್ಕಾರದ ಬೆಳೆ ಇರುವ ಸಂಪನ್ಮೂಲಗಳಿಗೆ ಪರಿಹಾರ ನೀಡಲಾಗುವುದು. ಇನ್ನು ಒಂದುವರೆ ತಿಂಗಳ ಮಳೆ ಸಾಧ್ಯತೆ ಇರೋದ್ರಿಂದ ಮುಂದಿನ ದಿನಗಳಲ್ಲಿ ಮತ್ತಷ್ಟು ಬೆಳೆ ಹಾನಿಯಾಗುವ ಸಾಧ್ಯತೆ ಇದೆ. ಹೀಗಾಗಿ ಮುಂಗಾರಿನ ಸಂಪೂರ್ಣ ಅವಧಿ ಮುಗಿಯುವವರೆಗೆ ಕಾದುಸದ ನಂತರ ಪರಿಹಾರಕ್ಕೆ ಕೇಂದ್ರ ಸರ್ಕಾರಕ್ಕೆ ಮನವಿಯನ್ನು ಸಲ್ಲಿಸಲಾಗುವುದು ಎಂದು ತಿಳಿಸಿದರು. ಈ ಮುಂಗಾರು ಮಳೆಯಿಂದ 80000 ಹೆಕ್ಟರ್ ನಷ್ಟು ಜಾಗ ನಷ್ಟವಾಗಿದೆ ಎಂದು ಹೇಳಿದರು ಹಾಗೆ ಸುಮಾರು ಆರು ನೂರು ಕೋಟಿ ಹಣ ನಷ್ಟವನ್ನು ಭರಿಸಲು ನಮ್ಮತ್ರ ಇದೆ ಎಂದು ಸಚಿವರು ಹೇಳಿದ್ದಾರೆ. ಆದಷ್ಟು ಬೇಗ ಬಿಡುಗಡೆ ಮಾಡುತ್ತೇವೆ ಎಂದು ಹೇಳಿದರು ಇನ್ನು ಹೆಚ್ಚಿನ ಮಾಹಿತಿಗಾಗಿ ಕೇಳಿರುವ ವಿಡಿಯೋ ವೀಕ್ಷಣೆ ಮಾಡಿ

Leave a Reply

Your email address will not be published. Required fields are marked *