ವೀಕ್ಷಕರೇ ಸುಮಾರು ಜನರಿಗೆ ಇವತ್ತು ಗೃಹಲಕ್ಷ್ಮಿ ಯೋಜನೆಯ ಹಣ ತಮ್ಮ ಅಕೌಂಟಿಗೆ ಜಮಾ ಆಗಿದೆ ಹೌದು ಸಾಮಾನ್ಯವಾಗಿ ಎಲ್ಲಾ ಮಹಿಳೆಯರಿಗೂ ಈ ಗ್ರಹಲಕ್ಷ್ಮಿ ಯೋಜನೆಯ ಹಣ ಯಾವಾಗ ಬರುತ್ತಿದೆ ಎಂದು ಕಾಯುತ್ತಿರುತ್ತಾರೆ ಹಾಗಾಗಿ ಇವೆಲ್ಲರಿಗು ಕೂಡ ಒಂದು ಒಳ್ಳೆಯ ಸಿಹಿ ಸುದ್ದಿ ಎಂದು ಹೇಳಲಾಗುತ್ತದೆ ಒಂದು ವೇಳೆ ನಿಮಗೂ ಹಣ ಬಂದಿಲ್ಲವೆಂದರೆ ಅದನ್ನು ನಿಮ್ಮ ಮೊಬೈಲಿನಲ್ಲಿಯೇ ಹೇಗೆ ಚೆಕ್ ಮಾಡಿಕೊಳ್ಳಬೇಕು ಎಂಬುದನ್ನು ಇವತ್ತಿನ ಮಾಹಿತಿಯಲ್ಲಿ ನಿಮಗೆ ತಿಳಿಸಿಕೊಡುತ್ತಿದ್ದೇವೆ ಹಾಗಾಗಿ ಮಾಹಿತಿಯನ್ನು ಸಂಪೂರ್ಣವಾಗಿ ಓದಿ ಮತ್ತೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳುವುದನ್ನು ಮರೆಯಬೇಡಿ. ಮೊದಲಿಗೆ ನೀವು ಮಾಡಬೇಕು ಏನು ಎಂದರೆ ನಿಮ್ಮ ಮೊಬೈಲ್ ಫೋನನ್ನು ತೆಗೆದುಕೊಂಡು
ನಂತರ ಪ್ಲೇ ಸ್ಟೋರ್ ನಲ್ಲಿ ಹೋಗಿ ಒಂದು ಅಪ್ಲಿಕೇಶನ್ ಅನ್ನು ಹಾಕಿಕೊಳ್ಳಬೇಕು ಆ ಅಪ್ಲಿಕೇಶನ್ ಹೆಸರು ಡಿಬಿಟಿ ಕರ್ನಾಟಕ ಸರಕಾರದಿಂದ ಮಾನ್ಯತೆ ಪಡೆದಿರುವಂತಹ ಅಪ್ಲಿಕೇಶನ್ ಆಗಿದೆ ಹಾಗಾಗಿ ನೀವು ಯಾವುದೇ ಯೋಜನೆಯ ಹಣದ ಸಮಸ್ಯೆ ಆಗಿದ್ದರೆ ನೀವು ಚೆಕ್ ಮಾಡಿಕೊಳ್ಳಬಹುದು.ನಂತರ ನೀವು ಅಪ್ಲಿಕೇಶನ್ ಅನ್ನು ಹಾಕಿಕೊಂಡ ಆದಮೇಲೆ ನೀವು ಮಾಡಬೇಕಾಗಿರುವುದು ರಿಜಿಸ್ಟರ್ ಹೌದು ಅಲ್ಲಿ ನೀವು ಯೂಸರ್ ರಿಜಿಸ್ಟರ್ ಅಂತ ಇರುತ್ತದೆ ಇದರ ಮೇಲೆ ಕ್ಲಿಕ್ ಮಾಡಿಕೊಂಡು ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಿ ನಂತರ ನೀವು ಮುಂದೆ ಹೋಗಬಹುದು.
ನಂತರ ನಿಮ್ಮ ಎಲ್ಲಾ ಮಾಹಿತಿ ಇದರಲ್ಲಿ ಸಂಗ್ರಹವಾಗುತ್ತದೆ ಆಮೇಲೆ ನೀವು ಒಂದು ಪಾಸ್ವರ್ಡ್ ಅನ್ನು ಸೆಟ್ ಮಾಡಿಕೊಳ್ಳಿ. ಆದರೆ ನೆನಪಿಡಿ ಇದನ್ನು ಯಾವುದೇ ಕಾರಣಕ್ಕೂ ಮರೆಯಬಾರದು. ನಂತರ ಲಾಗಿನ್ ಆಗಿ ಇದಾದ ಮೇಲೆ ನಿಮಗೆ ನಾಲ್ಕು ಆಪ್ಷನ್ ಸಿಗುತ್ತದೆ ಅದರಲ್ಲಿ ನಿಮ್ಮ ಬ್ಯಾಂಕಿನ ಸ್ಥಿತಿಯ ಬಗ್ಗೆ ತಿಳಿದುಕೊಳ್ಳಬೇಕು ಎಂದರೆ ನಿಮ್ಮ ಮೇಲ್ಗಡೆಯ ಕೊನೆಯದಾಗಿ ಕಾಣುವಂತಹ ಬ್ಯಾಂಕ್ ಸೀಡಿಂಗ್ ಅದರ ಮೇಲೆ ಕ್ಲಿಕ್ ಮಾಡಿ ನಂತರ ನಿಮ್ಮ ಆಧಾರ್ ಕಾರ್ಡನ್ನು ಹಾಕಿಕೊಂಡು ಅದರಲ್ಲಿ ನಿಮ್ಮ ಬ್ಯಾಂಕ್ ಹಾಗೂ ಆಧಾರ್ ಕಾರ್ಡ್ ಎರಡು ಜೋಡಣೆ ಆಗಿದೆಯೋ ಅಥವಾ ಇಲ್ಲವೋ ಎಂಬುದನ್ನು ಸರಿಯಾಗಿ ತೋರಿಸುತ್ತದೆ.
ಒಂದು ವೇಳೆ ನಿಮಗೆ ಎಲ್ಲಾ ಸರಿ ಇದೆ ಆದರೂ ಕೂಡ ಹಣ ಬಂದಿಲ್ಲವೆಂದರೆ ನೀವು ಮಾಡಬೇಕಾಗಿರುವುದು ಮೇಲ್ಗಡೆ ಕಾಣುವ ಪೇಮೆಂಟ್ ಸ್ಟೇಟಸ್ ಎಂಬುದರ ಮೇಲೆ ಕ್ಲಿಕ್ ಮಾಡಿಕೊಳ್ಳಬೇಕಾಗುತ್ತದೆ. ನಂತರ ಅಲ್ಲಿ ಹೋದ ಮೇಲೆ ನಿಮಗೆ ಯಾವ ಯೋಜನೆಯ ಬಗ್ಗೆ ಮಾಹಿತಿ ಪಡೆಯಕೊಳ್ಳಬೇಕು ಎಂಬುದನ್ನು ನೀವು ಸೆಲೆಕ್ಟ್ ಮಾಡಿಕೊಳ್ಳಬೇಕು. ಇತ್ತೀಚಿಗೆ ಪೆಂಚಲಿನ ಹಣ ಕೂಡ ಇದೇ ಒಂದು ಅಪ್ಲಿಕೇಶನ್ ನಲ್ಲಿ ಹಾಕಲಾಗಿದೆ ಹಾಗಾಗಿ ನಿಮ್ಮ ಅದರ ಬಗ್ಗೆ ಸಮಸ್ಯೆ ಏನಾದರೂ ಇದ್ದರೆ ಇದೇ ನಾವು ಹೇಳಿದಂತಹ ದಾರಿಗಳನ್ನು ಪಾಲನೆ ಮಾಡಿ ಒಂದು ವೇಳೆ.
ನಿಮ್ಮ ಗ್ರಹಲಕ್ಷ್ಮಿ ಯೋಜನೆಯ ಹಣ ಇನ್ನು ಬಂದಿಲ್ಲ ಅಥವಾ ಅನ್ನ ಭಾಗ್ಯ ಯೋಜನೆ ಹಣ ಬಂದಿಲ್ಲವೆಂದರೆ ನೀವು ಕಾಣುವಂತಹ ಯೋಜನೆಯ ಮೇಲೆ ಕ್ಲಿಕ್ ಮಾಡಿಕೊಂಡು ಅದರಲ್ಲಿ ನಿಮಗೆ ಆಗಿದೆ ಅಂತ ಸಮಸ್ಯೆ ಹಾಗೂ ಸ್ಥಿತಿಯ ಬಗ್ಗೆ ಎಲ್ಲವೂ ಕೂಡ ಸಂಪೂರ್ಣವಾಗಿ ಮಾಹಿತಿ ನೀಡುತ್ತದೆ ಆದರೆ ಯಾವುದೇ ಕಾರಣಕ್ಕೂ ಭಯಪಡುವಂತಹ ಕಾರಣ ಇಲ್ಲ ಏಕೆಂದರೆ ಈ ಅಪ್ಲಿಕೇಶನ್ ಕರ್ನಾಟಕ ಸರ್ಕಾರದ ಯೋಜನೆಯಿಂದಲೇ ಮಾನ್ಯತೆ ಪಡೆದಿದೆ.