ಇಡೀ ಕರ್ನಾಟಕದಾದ್ಯಂತ ಇರುವ ರಾಜ್ಯದ ಎಲ್ಲ ರೈತರಿಗೆ ರಾಜ್ಯ ಸರ್ಕಾರದಿಂದ ಹೊಸರು ಜಾರಿಗೊಳಿಸಲಾಗಿದೆ. ಜಮೀನುಗಳಿಗೆ ಹೋಗಲು ದಾರಿ ಇದು ಕೂಡ ದಾರಿ ಬಿಡದೇ ಇದ್ದವರಿಗೆ ಮತ್ತು ಜಮೀನುಗಳಿಗೆ ಹೋಗಲು ದಾರಿ ಇಲ್ಲದವರು ಕೂಡ ಹೊಸ ರೂಲ್ಸ್ ಜಾರಿಗೊಳಿಸಿ ರಾಜ್ಯ ಸರ್ಕಾರ ಎಲ್ಲ ರೈತರಿಗೆ ಗುಡ್‌ನ್ಯೂಸ್ ಅನ್ನ ನೀಡಿದೆ. ಕೃಷಿ ಜಮೀನುಗಳಿಗೆ ಹೋಗಲು ಒಂದು ಜಮೀನನ್ನ ದಾಟಿಕೊಂಡು ಮತ್ತೊಂದು ಜಮೀನಿಗೆ ಹೋಗುವುದು ಅನಿವಾರ್ಯವಾಗಿರುತ್ತೆ. ಇಂತಹ ಸಂದರ್ಭದಲ್ಲಿ ಮುಂದುಗಡೆ ಇರುವ ಜಮೀನಿನ ಮಾಲೀಕರು ಹಿಂದುಗಡೆ ಇರುವ ಜಮೀನಿನ ಮಾಲೀಕರಿಗೆ ಸಮರ್ಪಕವಾದ ರಸ್ತೆ ಬಿಡದೆ ಸಾಕಷ್ಟು ತೊಂದರೆ ಉಂಟುಮಾಡುತ್ತಾರೆ ಮತ್ತು ನಕ್ಷೆಯಲ್ಲಿ ದಾರಿ ಇಲ್ಲದಿದ್ದರೂ ಕೂಡ ದಾರಿಯನ್ನ ಹೇಗೆ ಪಡೆದುಕೊಳ್ಳಬೇಕು? ಸರ್ಕಾರವೇ ದಾರಿ ಮಾಡಿಕೊಡುತ್ತೆ.

ಬನ್ನಿ, ಇಷ್ಟಕ್ಕೂ ನಿಮ್ಮ ಕೃಷಿ ಜಮೀನಿಗೆ ಹೋಗಲು ದಾರಿಯ ಸಮಸ್ಯೆ ಇದ್ರೆ ಕೊನೆಯವರೆಗೂ ನೋಡಿ. ಜಮೀನುಗಳ ಮಾಲೀಕರಿಗೆ ಸರ್ಕಾರದಿಂದ ಜಾರಿಗೊಳಿಸಿರುವ ಹೊಸ ರೂಲ್ಸ್ ಏನು? ಜಮೀನು ಹತ್ತಿರವೇ ಇರುತ್ತೆ. ಆದರೆ ಎತ್ತಿನ ಬಂಡಿ ಹೋಗುವ ದಾರಿ ಇಲ್ಲ ಬಹಳಷ್ಟು ತೊಂದರೆಯನ್ನು ಅನುಭವಿಸುತ್ತಾರೆ. ರೈತರ ಜಮೀನಿಗೆ ಕಾಲುದಾರಿ ಅಥವಾ ಎತ್ತಿನಬಂಡಿ ಹೋಗುವ ದಾರಿ ಇದ್ದರೂ ಸಹ ರೈತರಿಗೆ ಗೊತ್ತಿರೋದಿಲ್ಲ. ರೈತರಿಗೆ ಅನುಕೂಲವಾಗುವಂತಹ ಸುತ್ತೋಲೆಯೊಂದನ್ನ ರಾಜ್ಯ ಸರ್ಕಾರ ಹೊರಡಿಸಿದ್ದು, ಇನ್ನು ಮುಂದೆ ಯಾವುದೇ ಜಮೀನಿಗೆ ಹೋಗಲು ದಾರಿ ಇಲ್ಲದೆ ಇರುವ ಸಂದರ್ಭದಲ್ಲಿ ದಾರಿ ಮಾಡಿಕೊಡಲು ಸರ್ಕಾರ ಕಟ್ಟುನಿಟ್ಟಿನ ಆದೇಶವನ್ನ ಹೊರಡಿಸಿದೆ. ರೈತರು ವ್ಯವಸಾಯ ಉದ್ದೇಶಕ್ಕಾಗಿ ಖಾಸಗಿ ಜಮೀನಿನಲ್ಲಿ ತಿರುಗಾಡುತ್ತಿದ್ದಳು.

ಅವರಿಗೆ ಕಾಲುದಾರಿ ಅಥವಾ ಬಂಡಿ ದಾರಿ ಮಾಡಿಕೊಡಬೇಕು ಎಂದು ಸರ್ಕಾರದ ಸುತ್ತೋಲೆಯಲ್ಲಿ ತಿಳಿಸಲಾಗಿದೆ. ರೈತರು ಎಷ್ಟೋ ಬಾರಿ ತಮ್ಮ ಜಮೀನಿಗೆ ಬೇರೆ ಜಮೀನಿನ ಮೂಲಕ ಹಾದು ಹೋಗಬೇಕು ಇಂತಹ ಸಂದರ್ಭದಲ್ಲಿ ಕೃಷಿಗೆ ಅಗತ್ಯ ಇರುವ ಸಲಕರಣೆಗಳನ್ನ ಕೊಂಡೊಯ್ಯುವುದು ಬಹಳಾನೇ ಕಷ್ಟ. ದಾರಿ ಇಲ್ಲದಿದ್ದರು ಜಮೀನಿಗೆ ಹೋಗೋದು ಹೇಗೆ ಎನ್ನುವ ಸಮಸ್ಯೆ ಉದ್ಭವಿಸುತ್ತದೆ. ಈ ಎಲ್ಲ ಸಮಸ್ಯೆಗಳನ್ನ ಅರಿತು ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ. ಇದುವರೆಗೆ ಕಾಲುದಾರಿ ಅಥವಾ ಜಮೀನಿಗೆ ಹೋಗಲುಬೇಕಾಗಿರುವ ಸಣ್ಣ ದಾರಿಯ ವಿಚಾರವಾಗಿಯೂ ಹಲವು ರೈತರ ನಡುವೆ ಮನಸ್ತಾಪ ಜಗಳಗಳು ಮತ್ತು ಮಾರಾಮಾರಿಯು ಕೂಡ ನಡೆದಿದೆ. ಖಾಸಗಿ ಜಮೀನು ಹೊಂದಿರುವವರು ರೈತರು ತಮ್ಮ ಜಮೀನಿಗೆ ಹೋಗಲು ಕಾಲು ದಾರಿ ಮಾಡಿಕೊಡಲು ಅವಕಾಶ ನೀಡದೇ ಇರುವ ಪರಿಣಾಮ ರೈತರು ತಮ್ಮ ಜಮೀನಿನಲ್ಲಿ ಬೆಳೆದು ಸರಿಯಾಗಿ ಸಾಗಿಸಲು ಆಗದೆ ಬೆಳೆ ನಷ್ಟ ಅನುಭವಿಸುವಂತಾಗಿದೆ ಎಂಬುದನ್ನ ಸರ್ಕಾರ ಮನಗಂಡಿದೆ.

ಆದ್ರೆ ಅದೆಷ್ಟು ಬಾರಿ ವೈಯಕ್ತಿಕ ವಿಷಯ, ಮನಸ್ತಾಪಗಳಿಂದಾಗಿ ರೈತರು ಅನಾದಿಕಾಲದಿಂದ ಬಳಸುತ್ತಿದ್ದ ಕಾಲುದಾರಿಗಳನ್ನು ಮುಚ್ಚೋದು ಆ ಜಾಗದಲ್ಲಿ ತಿರುಗಾಡದಂತೆ ಮಾಡುವುದು. ಇಂತಹ ಸಮಸ್ಯೆಗಳು ಸಾಕಷ್ಟು ಬಾರಿ ಉದ್ಭವಿಸುತ್ತದೆ. ಆದರೆ ಈ ರೀತಿ ಕೃಷಿ ಚಟುವಟಿಕೆಗೆ ತೊಂದರೆ ಕೊಡದಂತೆ ಸರ್ಕಾರ ಮುಂಜಾಗ್ರತೆ ವಹಿಸುವಂತೆ ಗ್ರಾಮ ನಕ್ಷೆಯಲ್ಲಿ ತೋರಿಸಲಾಗಿರೋ ಕಾಲುದಾರಿ ಬಂಡಿದಾರಿ ಅಥವಾ ಸಣ್ಣ ದಾರಿಗಳನ್ನು ಅನ್ಯ ಕೃಷಿ ಬಳಕೆದಾರರು ಕೃಷಿಕರಿಗೆ ತಿರುಗಾಡಲು ಅವಕಾಶ ನೀಡಿದೆ. ಅಂತ ದಾರಿಗಳನ್ನು ಮುಚ್ಚಿದರೆ ದಾರಿಯನ್ನ ತೆರವುಗೊಳಿಸಿ ಅನಾದಿ ಕಾಲದಿಂದ ಇರುವ ದಾರಿಯನ್ನೇ ಇಲ್ಲವಾಗಿಸಿದರೆ ತಕ್ಷಣ ತಹಸೀಲ್ದಾರರು ಈ ಬಗ್ಗೆ ಮುಂಜಾಗ್ರತೆ ವಹಿಸಿ ರೈತರಿಗೆ ದಾರಿ ಮಾಡಿಕೊಡಬೇಕು ಎಂದು ಆದೇಶ ನೀಡಿದೆ.

Leave a Reply

Your email address will not be published. Required fields are marked *