ದಿನವೆಲ್ಲ ದುಡಿದರು ವರ್ಷಕ್ಕೆ ಲಕ್ಷ ಲಕ್ಷ ರೂಪಾಯಿ ಸಾಯೋಷ್ಟರಲ್ಲಿ ಕೋಟಿ ಕೋಟಿ ಸಂಪಾದಿಸೋದು ತುಂಬಾನೇ ಕಷ್ಟ. ಒಂದು ವೇಳೆ ಕೋಟ್ಯಾಧಿಪತಿ ಆಗಬೇಕಾದರೆ ದೇವಲೋಕದಿಂದ ಕುಬೇರ ಧರೆಗಿಳಿದು ಬಂದು ಸಾಲ ಕೊಡಬೇಕು ಅಷ್ಟೇ, ಇದ್ರೆ ಬಂಪರ್ ಲಾಟರಿ ಹೊಡಿಬೇಕು. ಆದರೆ ಭಿಕ್ಷೆ ಬೇಡಿ ತಿಂಗಳಿಗೆ ₹60,000 75,000 ರೂಪಾಯಿವರೆಗೂ ಸಂಪಾದಿಸಬಹುದು ಅಂದ್ರೆ ನೀವು ನಂಬ್ತೀರಾ ಯಾರು ಅಲ್ಲ ಬಿಡಿ, ನೀವು ನಂಬಲೇ ಬೇಕಾದ ಜಗತ್ತಿನ ಶ್ರೀಮಂತ ಭಿಕ್ಷುಕನೊಬ್ಬ ಮುಂಬೈ ಮಾಯಾನಗರಿಯಲ್ಲಿ ಸಿಕ್ಕಿಬಿದ್ದಿದ್ದಾನೆ. ಈ ಭಿಕ್ಷುಕನ ಬಂಗಲೆ ಇವನ ಸಂಪತ್ತಿನ ಮೌಲ್ಯ ತಿಂಗಳ ಬಾಡಿಗೆ ಪ್ರತಿ ದಿನದ ಆದಾಯ ಮೊತ್ತ ಕೇಳಿ ಎಲ್ಲರೂ ಕೂಡ ಬೆಚ್ಚಿ ಬಿದ್ದಿದ್ದಾರೆ.
ಜಗತ್ತಿನಲ್ಲೇ ಶ್ರೀಮಂತ ಭಿಕ್ಷುಕ ಕಂಡ್ರಿ. ಇವನ ಹೆಸರು ಜಯಂತ ಮುಂಬೈ ಗಲ್ಲಿ ಗಲ್ಲಿಗಳಲ್ಲಿ ಭಿಕ್ಷೆ ಬೇಡುವ ಭರತ್ ಜೈನ್ ಕೋಟಿ ಕೋಟಿಯ ಒಡೆಯ ಕೂಡ ಪ್ರತಿದಿನ ಭಿಕ್ಷೆ ಬೇಡುವ ಈತನ ತಿಂಗಳ ಆದಾಯನೇ ₹60,000 75,000 ರೂಪಾಯಿವರೆಗೂ ಇದೆ.ಬಡತನದಲ್ಲೇ ಬೆಳೆದದಂತಹ ಭರತ್ ಬಾಲ್ಯದಲ್ಲೆ ಶಾಲೆಗೆ ಹೋಗಿ ಓದೋಕೆ ಆಗಲಿಲ್ಲ. ಆರ್ಥಿಕ ಸಂಕಷ್ಟದಿಂದ ವಿದ್ಯಾಭ್ಯಾಸವನ್ನು ಅರ್ಧಕ್ಕೆ ಮೊಟಕುಗೊಳಿಸಿ ಗುಡ್ ಬೈ ಹೇಳಿ ನಂತರ ಭರ್ಜರಿ ಭಿಕ್ಷೆ ಬೇಡಿಕೊಂಡೇ ಜೀವನ ಸಾಗಿಸುತ್ತಾ ಭಿಕ್ಷೆ ಬೇಡಿ ಕೋಟಿ ಕೋಟಿ ಸಂಪಾದನೆ ಮಾಡುವಂತಹ ಭರತ್ ಜೈನ್ ಮುಂಬೈನಲ್ಲಿ ಅತಿ ದೊಡ್ಡ ಬಂಗಲೆಯನ್ನು ಹೊಂದಿದ್ದಾನೆ. ಹೆಂಡತಿ, ಇಬ್ಬರು ಮಕ್ಕಳು ಸಹೋದರ ತಂದೆಯ ಜೊತೆ ಐಷಾರಾಮಿಯ ಜೀವನ ಸಾಗಿಸುತ್ತಿದ್ದಾನೆ.
ಭಿಕ್ಷೆ ಬೇಡೋದಿಂದಲ್ಲದೆ ಮುಂಬೈ ನಗರದಲ್ಲಿ ಪ್ರತಿ ತಿಂಗಳು 30,000 ಬಾಡಿಗೆ ಕೂಡ ಬರುತ್ತೆ ಅನ್ನೋದು ಮತ್ತೊಂದು ವಿಶೇಷ.ತಾನು ಓದಲು ಸಾಧ್ಯವಾಗಿದ್ದಕ್ಕೆ ಭರತ್ ಜೈನ್ ತನ್ನ ಇಬ್ಬರು ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸವನ್ನು ಕೊಡಿಸಬೇಕು ಅಂತ ಹೇಳಿ ಅವನ ಒಳ್ಳೆ ಸ್ಕೂಲ್ ಗೆ ಹಾಕಿ ಒಳ್ಳೆ ವಿದ್ಯಾಭ್ಯಾಸ ಕೂಡ ಕೊಡುತ್ತಿದ್ದಾನೆ. ಭರತ್ ಜೈನ್ ಮೂಲತಃ ಮುಂಬೈನವರು. ಮುಂಬೈನಲ್ಲಿ ಹುಟ್ಟಿ ಬೆಳೆದ ಭರತ್ ಭಿಕ್ಷೆ ಬೇಡುತ್ತಲೆ ಜೀವನದಲ್ಲಿ ಕೋಟ್ಯಾಂತರ ರೂಪಾಯಿ ಸಂಪಾದನೆ ಮಾಡಿದ್ದಾನೆ. ಭರ್ಜರಿ ಸದ್ಯ ಮುಂಬೈನಲ್ಲಿ ₹12,00,00,000 ಬೆಲೆಬಾಳುವಂತಹ ಎರಡು ಬೆಡ್ರೂಮ್ನ ಫ್ಲ್ಯಾಟ್ ಹೊಂದಿದ್ದಾನೆ. ಇದಲ್ಲದೆ ರಿಯಲ್ ಎಸ್ಟೇಟ್ ಉದ್ಯಮದಲ್ಲೂ ಕೂಡ ಬಂಡವಾಳ ಹೂಡಿಕೆ ಮಾಡುವಂತಹ ಭರ್ಜರಿ ಥಾಣೆಯಲ್ಲಿ ವಾಣಿಜ್ಯ ಮಳಿಗೆಗಳನ್ನು ಬಾಡಿಗೆಗೆ ಕೊಟ್ಟಿದ್ದಾನಂತೆ. ಈ ಶೋಗಳ ಬಾಡಿಗೆಯಿಂದಲೇ ಪ್ರತಿ ತಿಂಗಳು ಬರೋಬ್ಬರಿ ₹30,000 ಹಣವನ್ನು ಕೂಡ ಇವನು ಆರಾಮಾಗಿ ಗಳಿಸುತ್ತಿದ್ದಾನೆ. ಇವನ ಬಗ್ಗೆ ನಿಮ್ಮ ಅನಿಸಿಕೆ ಏನು ಎಂಬುದು ನಮಗೆ ತಪ್ಪದೆ ಕಾಮೆಂಟ್ ಮುಖಾಂತರ ತಿಳಿಸಿ.