ತೊಗರಿ ಕಾಳು ನಾವು ಸೇವನೆ ಮಾಡೋದ್ರಿಂದ ನಮ್ಮ ಆರೋಗ್ಯದ ಮೇಲೆ ಏನೇನು ಪರಿಣಾಮ ಬೀರುತ್ತೆ ಗೊತ್ತಾ? ನಮಗೆ ಬೇರೆ ಬೇರೆ ರೀತಿಯ ಹಸಿ ಹಸಿರು ಕಾಳುಗಳು ಸಿದ್ದವಾಗಿರುವ ಬಟಾಣಿ ಸಿಗುತ್ತೆ. ಅವರೇ ಕಾಳು ಸಿಗುತ್ತೆ ತೊಗರಿ ಕಾಳು ಇನ್ನು ಅನೇಕ ರೀತಿಯ ಹಸಿ ಕಾಳುಗಳು ಸಿಗುತ್ತವೆ. ಒಂದಲ್ಲ ಒಂದು ರೀತಿಯಲ್ಲಿ ಬಳಸಬಹುದು ಇಲ್ಲಿ ನಾವು ಅಡುಗೆಯಲ್ಲಿ ಬೇರೆ ಬೇರೆ ರೀತಿಯ ಅಡುಗೆಗಳನ್ನು ಮಾಡಬಹುದು, ಅದರಲ್ಲಿ ಮುಖ್ಯ
ಯಾವದು ಅಂತ ಹೇಳಿದ್ರೆ ತೊಗರಿ ಕಾಳು ನಮ್ಮ ಆರೋಗ್ಯದ ದೃಷ್ಟಿಯಿಂದ ತುಂಬಾನೇ ಒಳ್ಳೇದು ಅಂತ ಹೇಳಬಹುದು. ಇನ್ನು ಇದರ ಬೆನಿಫಿಟ್ ನೋಡೋಕೆ ಹೋದ್ರೆ ಮೊದಲನೆಯದಾಗಿ ನಮ್ಮ ದೇಹಕ್ಕೆ ಅಗತ್ಯವಾಗಿ ಬೇಕಾಗುವಂತಹ ಶಕ್ತಿಯನ್ನು ಒದಗಿಸುತ್ತದೆ. ಇದು ದೇಹಕ್ಕೆ ಒಂದು ಎನರ್ಜಿ ಬೂಸ್ಟರ್ ಅಂತಾನೇ ಹೇಳಬಹುದು. ನಾವು ಯಾವುದೇ ರೀತಿಯ ಅಡುಗೆಯಲ್ಲಿ ಇದನ್ನ ಅವಾಗವಾಗ ಬಳಸಬಹುದು. ಇನ್ನು ಇದರಲ್ಲಿ ಅನೇಕ ರೀತಿಯ ಪೋಷಕಾಂಶಗಳು ನಮಗೆ ಸಿಗೋದ್ರಿಂದ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ಕೊಳ್ಳುವುದಕ್ಕೆ ಸಹಾಯ ಆಗುತ್ತೆ. ದೇಹದ ಇಮ್ಯೂನಿಟಿ ಕಡಿಮೆ ಆದ್ರೆ ಕೂಡ ನಮಗೆ ಅನೇಕ ರೀತಿಯ ಆರೋಗ್ಯ ಸಮಸ್ಯೆಗಳು ಪದೇ ಪದೆ ಕಾಡುತ್ತವೆ. ಇಮ್ಯೂನಿಟಿಯನ್ನ ಜಾಸ್ತಿ ಮಾಡ್ಕೊಳ್ಳೋಕೆ ಕೂಡ
ಇದು ತುಂಬಾನೇ ಸಹಕಾರಿ. ಅದೇ ರೀತಿಯಲ್ಲಿ ನಮ್ಮ ಆರೋಗ್ಯಕ್ಕೂ ತುಂಬಾನೆ ಒಳ್ಳೇದು ಅಂತ ಹೇಳಬಹುದು. ಹೃದಯದ ಆರೋಗ್ಯವನ್ನು ಕಾಪಾಡಿ ಕೊಳ್ಳುವುದಕ್ಕೆ ಸಹಾಯ ಮಾಡುತ್ತದೆ. ಇನ್ನು ಇದರಲ್ಲಿ ಫೈಬರ್ ಕಂಟೆಂಟ್ ಅಥವಾ ನಾರಿನಂಶ ನಿಮಗೆ ಹೇರಳವಾಗಿ ಸಿಗುತ್ತದೆ. ಇದರಿಂದಾಗಿ ಜೀರ್ಣ ಸಂಬಂಧಿ ಸಮಸ್ಯೆಗಳು ಬರ ಬಾರದು ಅಂತ ಆದ್ರೆ ಕೂಡ ನಾವು ಇದನ್ನು ಬಳಸಬಹುದು.ತೂಗರಿಗಳಿಂದ ಸೇವನೆಯನ್ನು ನಾವು ಮಾಡೋದ್ರಿಂದ ಜೀರ್ಣ ಸರಾಗವಾಗಿ ಆಗೋದಿಕ್ಕೆ ಜೀರ್ಣಕ್ರಿಯೆ ಚುರುಕಾಗುವುದಕ್ಕೆ ಕೂಡ ಸಹಾಯ ಆಗುತ್ತೆ. ಹಾಗೆ ಯಾರಿಗೆ ವೇಟ್ ಲಾಸ್ ಮಾಡಬೇಕು ಅಂತ ಇರುತ್ತೆ ಅಂತವರಿಗೆ ಕೂಡ ತುಂಬಾನೇ ಒಳ್ಳೆಯದು. ಇದು ದೇಹದಲ್ಲಿ ಅನಗತ್ಯ ಕೊಬ್ಬನ್ನು ಕರಗಿಸದಕ್ಕೆ ಸಹಾಯ ಆಗುತ್ತೆ ಇದು.
ಹಾಗಾಗಿ ಯಾರು ತೂಕ ಇಳಿಕೆ ಮಾಡಿಕೊಳ್ಳ ಬೇಕು ಅಂತ ಇರುತ್ತೆ. ಅವರು ಆಹಾರದಲ್ಲಿ ಇದನ್ನು ಬಳಸಬಹುದು. ಇದರ ಜೊತೆಯಲ್ಲಿ ನಮ್ಮ ದೇಹದಲ್ಲಿ ರಕ್ತದೊತ್ತಡ ವನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳ ಅದಕ್ಕೆ ಕೂಡ ಸಹಾಯ ಆಗುತ್ತೆ. ಯಾರು ಹೈ ಬಿಪಿ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಅಧಿಕ ರಕ್ತದೊತ್ತಡ ಸಮಸ್ಯೆ ಕಾಡ್ತಾ ಇರುತ್ತೆ ಅಂತವರು ಕೂಡ ತೂಗುರಿಗಳನ್ನು ಬಳಸಬಹುದು. ಇದರಿಂದಾಗಿ ದೇಹದಲ್ಲಿ ರಕ್ತ ಸಂಚಾರ ಸರಾಗವಾಗಿ ಆಗುತ್ತದೆ. ಹಾಗೇ ನೇ ರಕ್ತದೊತ್ತಡ ಕೂಡ ನಿಯಂತ್ರಣದಲ್ಲಿ ಇರಿಸಿಕೊಳ್ಳ ಅದಕ್ಕೆ ಸಹಾಯ ಆಗುತ್ತೆ.ಯಾರು ರಕ್ತ ಹೀನತೆ ಸಮಸ್ಯೆಯಿಂದ ಬಳಲ್ತಾ ಇರೋ ಅನಿಮಿಯ ಸಮಸ್ಯೆಯಿಂದ ಬಳಲುತ್ತಿರುತ್ತಾರೆ ಅಂತವರಿಗಂತೂ ಹೇಳಿ ಮಾಡಿಸಿದಂತಹ ಒಂದು ಕಾಳು ಅಂತ ಹೇಳಬಹುದು.