ಮನುಷ್ಯ ಇಷ್ಟು ಅಭಿವೃದ್ಧಿ ಒಂದು ಹಂತಕ್ಕೆ ಬಂದಿದ್ದಾನೆ ಅಂದ್ರೆ ಅದಕ್ಕೆ ಕಾರಣ ಆತನ ಸೂಕ್ಷ್ಮಬುದ್ಧಿ ಮತ್ತು ಸೂಕ್ಷ್ಮ ಅವಲೋಕನ. ಇತ್ತೀಚಿನ ದಿನಗಳಲ್ಲಿ ಬರುವಂತಹ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಹಲವಾರು ರೀತಿಯಾದಂತಹ ನಾವು ಬೆಳೆಗಳನ್ನು ಬೆಳೆಯಬಹುದು. ಅದೇ ಸೂಕ್ಷ್ಮಬುದ್ಧಿಯನ್ನು ಬಳಸಿಕೊಂಡ ಇವರು 4,00,000 ಉದ್ಯೋಗ ಬಿಟ್ಟು ಬಂದು ವ್ಯವಸಾಯ ಮಾಡಿ ಇವತ್ತು ವಿದೇಶಿಗರಿಗೆ ಸೆಡ್ಡು ಹೊಡೆಯುತ್ತಿದ್ದಾರೆ. ಕನ್ನಡ ಮಣ್ಣಲ್ಲಿ ಚಿನ್ನ ಬೆಳೆಯಲು ಹೊರಟಿದ್ದಾರೆ ಅಷ್ಟಕ್ಕು ಅವರು ಉಪಯೋಗಿಸಿದ ಐಡಿಯಾ ಯಾವುದು ಎಂದು ನೋಡೋಣ ಬನ್ನಿ ಬಳ್ಳಾರಿಯ ಕೂಡ್ಲಿಗಿ ತಾಲೂಕಿನ ಚಿಕ್ಕಜೋಗಿಹಳ್ಳಿ 36 ವರ್ಷದ ಗಿರೀಶ್ ಅವರು ಬಿ.ಟೆಕ್ ಮಾಡಿ ತಿಂಗಳಿಗೆ 4,00,000 ಸಂಬಳ ಪಡೆಯುತ್ತ ಜರ್ಮನಿಯಲ್ಲಿ ಒಳ್ಳೆಯ ಉದ್ಯೋಗದಲ್ಲಿದ್ದರು.

ಆದರೆ ಗಿರೀಶ್ ಅವರ ಮನಸ್ಸು ಮಾತ್ರ ಯಾವಾಗಲೂ ಊರಿನ ಕಡೆ ಹಾಗೂ ತಂದೆ ತಾಯಿಯ ಕಡೆ ಸೆಳೆಯುತ್ತಿತ್ತು. ಕೊನೆಗೆ ಒಂದು ದೊಡ್ಡ ನಿರ್ಧಾರ ಮಾಡಿ ತನ್ನ ಕೆಲಸಕ್ಕೆ ರಾಜೀನಾಮೆ ಕೊಟ್ಟು ಊರಲ್ಲಿ ತನಗಿರುವ ಜಮೀನಿನಲ್ಲಿ ವ್ಯವಸಾಯ ಮಾಡಲು ಮುಂದಾದರು. ಗಿರೀಶ್ ಅವರು ನೀರಿಗಾಗಿ ತನ್ನ ಜಮೀನಿನಲ್ಲಿ ಸುಮಾರು 40 ಬೋರ್‌ವೆಲ್ ಹಾಕಿಸಿದರು.ಆದರೆ ನೀರು ಮಾತ್ರ ಸಿಗಲಿಲ್ಲ. ಆಗ ಗಿರೀಶ್ಗೆ ಒಲಿದು ಒಂದು ಅದ್ಭುತ ಆಲೋಚನೆ. ಐಡಿಯಾ ತುಂಬಾ ಸಿಂಪಲ್ ಆದರೆ ಅದನ್ನು ಕಾರ್ಯರೂಪಕ್ಕೆ ತರುವುದು ದೊಡ್ಡ ಸವಾಲು. ಐಡಿಯಾ ಏನಪ್ಪ ಅಂದ್ರೆ ಮಳೆ ನೀರನ್ನು ಶೇಖರಣೆ ಮಾಡಿ ಅದರಿಂದ ವ್ಯವಸಾಯ ಮಾಡುವುದು.

ಆದರೆ ಅದು ಹೇಗೆ ಅನ್ನೋದು ಗಿರೀಶ್ ಮುಂದಿದ್ದ ದೊಡ್ಡ ಸವಾಲು ತನಗಿದ್ದತ್ತು ಎಕರೆ ಜಮೀನು ಇಲ್ಲಿ ಗುಲಾಬಿ ಬೆಳೆಯಲು ಪ್ಲಾನ್ ಮಾಡಿದ್ದ ಗಿರೀಶ್ ಅವರು ಒಂದು ಎಕರೆ ವಿಸ್ತಾರದ ಏಳು ಪಾಲಿಹೌಸ್‌ಗಳನ್ನು ನಿರ್ಮಿಸಿ ಅದರ ಒಳಗೆ ಗುಲಾಬಿ ಬೆಳೆಯಲು ಮುಂದಾದರು. ಹಾಗೆ ನೀರಿಗಾಗಿ ಒಂದು ಸ್ಕೆಚ್ ಹಾಕಿದರು. ಅದರ ಪ್ರಕಾರ ಮಳೆಗಾಲದಲ್ಲಿ ಪಾಲಿಹೌಸ್ ಮೇಲೆ ಬೀಳುವ ಮಳೆಯ ನೀರನ್ನು ಪೈಪ್‌ಗಳ ಮೂಲಕ ಹರಿಸಿ ವ್ಯವಸ್ಥಿತ ವಾಗಿ ನಿರ್ಮಿಸಿರುವ ಒಂದು ಕೆರೆಯಲ್ಲಿ ಶೇಖರಣೆ ಮಾಡುವುದು.

ನಂತರ ಶೇಖರಣೆಯಾದ ಮಳೆಯ ನೀರನ್ನು ವರ್ಷಪೂರ್ತಿ ಬಳಸಿಕೊಳ್ಳುವುದು ಹೀಗೆ ವ್ಯವಸ್ಥಿತವಾಗಿ ಪ್ಲಾನ್ ಮಾಡಿದ ಗಿರೀಶ್ ಅವರು ಕೇವಲ ಏಳು ಪಾಲಿಹೌಸ್ ಮೇಲೆ ಬೀಳುವ ಮಳೆಯ ನೀರನ್ನೇ ಬಳಸಿಕೊಂಡು ಗುಲಾಬಿ ಬೆಳೆಯುತ್ತಿದ್ದಾರೆ.ಮಳೆಗಾಲದಲ್ಲಿ 1,30,00,000 ಲೀಟರ್ ಮಳೆ ನೀರನ್ನು ಶೇಖರಣೆ ಮಾಡುತ್ತಿರುವ ಗಿರೀಶ್ ಅವರು ಆ ನೀರನ್ನು ಬಳಸಿಕೊಂಡು ಸುಂದರವಾದ ಗುಲಾಬಿ ಹೂವುಗಳನ್ನು ಬೆಳೆಯುತ್ತಿದ್ದಾರೆ. ತಿಂಗಳಿಗೆ 15,000 ಗುಲಾಬಿ ಹೂಗಳನ್ನು ಬೆಳೆಯುತ್ತಿರುವ ಗಿರೀಶ್ ಅವರು ಅವುಗಳನ್ನು ಭಾರತ ಮತ್ತು ವಿದೇಶಗಳಲ್ಲಿ ಮಾರಾಟ ಮಾಡುತ್ತಿದ್ದಾರೆ.

 

Leave a Reply

Your email address will not be published. Required fields are marked *