ಜಮೀನಿನ ಮಾಲಿಕ ಮರಣದ ನಂತರ ಕುಟುಂಬದ ಸದಸ್ಯರು ಆಸ್ತಿಯನ್ನು ಭಾಗ ಹೇಗೆ ಮಾಡಿಕೊಳ್ಳಬೇಕು ಅಂದ್ರೆ ಕುಟುಂಬದಲ್ಲಿ ತನ್ನ ಹೆಸರಿಗೆ ಆಸ್ತಿ ಹೊಂದಿದ ಹಿರಿಯ ವ್ಯಕ್ತಿ ಮರಣದ ನಂತರ ಅವನ ಆಸ್ತಿ ಪಾಲು ಹೇಗೆ ಮಾಡಿಕೊಳ್ಳಬೇಕು ಎಂದು ಆಸ್ತಿ ಒಡೆಯ ತೀರಿದ ಬಳಿಕ ಕುಟುಂಬದಲ್ಲಿರುವ ಸದಸ್ಯರು ಅವರ ಹೆಸರಿಗೆ ಖಾತೆ ಬದಲಾವಣೆ ಮಾಡಿಕೊಳ್ಳುವುದಿಲ್ಲ. ಯಾಕೆ ಅನ್ನೋದು ಈಗ ಹಲವಾರು ಕಾರಣಗಳಿರುತ್ತವೆ. ಅವುಗಳಲ್ಲಿ ಕುಟುಂಬದಲ್ಲಿ ಒಡಕು ಅಣ್ಣ ತಮ್ಮಂದಿರ ಜಗಳ ಆಗಿರಬಹುದು. ಸತ್ತ ವ್ಯಕ್ತಿಗೆ ಎರಡು ಅಥವಾ ಎರಡಕ್ಕಿಂತ ಹೆಚ್ಚು ಹೆಂಡತಿಯನ್ನು ಇದ್ದಿರಬಹುದು.
ಭೂವಿವಾದ ಯಾವುದೇ ರೀತಿಯ ಭೂಮಿಯ ಮೇಲೆಯುವಾದ ಇದ್ದಿರಬಹುದು ಅಥವಾ ಸಾಮಾನ್ಯವಾಗಿ ತಿಳುವಳಿಕೆ ಕೊರತೆಯಿಂದಲೋ ತಮ್ಮ ಹೆಸರಿಗೆ ಹಕ್ಕು ಬದಲಾವಣೆ ಮಾಡಿಕೊಂಡು ಇರುವುದಿಲ್ಲ. ಆದರೆ ಸರ್ಕಾರದ ನಿಯಮಗಳು ಏನು ಹೇಳುತ್ತವೆ ಅಂದ್ರೆ ಜಮೀನಿನ ಮಾಲಿಕ ಮರಣದ ನಂತರ ಅವನ ಕುಟುಂಬದ ವಾರಸುದಾರರು ಆರು ತಿಂಗಳ ಒಳಗಡೆ ಖಾತೆ ಬದಲಾವಣೆ ಮಾಡಿಕೊಳ್ಳಲೇಬೇಕು. ಜಮೀನಿನ ವಿವಾದ ಇರಲಿ ಬಿಡಲಿ ಕಡ್ಡಾಯವಾಗಿ ಪೌತಿ ಖಾತೆ ಮೂಲಕ ಹಕ್ಕು ಬದಲಾವಣೆ ಮಾಡಿಕೊಳ್ಳೋದು ಮೊದಲ ಸ್ಟೆಪ್ ಆಗಿರುತ್ತೆ ಜಮೀನಿನ ಒಡೆಯ ತೀರಿದ ಬಳಿಕ ಆ ಜಮೀನು ಕುಟುಂಬದ ಒಳಗಡೆ ಹೇಗೆ ಪಾಲು ಮಾಡಿಕೊಳ್ಳಬೇಕು ಅನ್ನೋದು ಸ್ಟೆಪ್‌ಬೈಸ್ಟೆಪ್ ಒಂದೊಂದಾಗಿ ನೋಡೋಣ.
ಮೊದಲನೇಷ್ಟೇ ಜಮೀನಿನ ಮಾಲಿಕ ಮರಣ ಹೊಂದಿದಾಗ ಅವನ ಮನೆಯವರು ಪೌತಿ ಖಾತೆ ಮಾಡಿಸಿಕೊಳ್ಳಬೇಕು.ಈ ಪೌತಿ ಖಾತೆ ಬಗ್ಗೆ ಹೇಳುವುದಾದರೆ ಮರಣ ಹೊಂದಿದ ಖಾತೆದಾರರ ಹೆಸರು ತೆಗೆದು ಅಂದ್ರೆ ದಾಖಲೆಯಲ್ಲಿ ಮರಣ ಹೊಂದಿದ ವ್ಯಕ್ತಿಯ ಹೆಸರು ತೆಗೆ ದು ಕುಟುಂಬದಲ್ಲಿರುವ ಎಲ್ಲಾ ಸದಸ್ಯರು ಅಂದ್ರೆ ಮರಣ ಹೊಂದಿದ ವ್ಯಕ್ತಿಯ ನೇರ ವಾರಸುದಾರರ ಹೆಸರಿಗೆ ಜಂಟಿಯಾಗಿ ಖಾತೆ ಬದಲಾವಣೆ ಮಾಡುವುದನ್ನು ಪೌತಿ ಖಾತೆ ಎಂದು ಕರೆಯುತ್ತೇವೆ. ನೆನಪಿಡಿ ತಾಯಿಯಾಗಲಿ, ಹೆಂಡತಿ ಮಕ್ಕಳು ಇವರೇ ನೇರ ವಾರಸುದಾರರು ಆಗುತ್ತಾರೆ. ಒಬ್ಬರ ಹೆಸರಿಗೆ ಹಕ್ಕು ಬದಲಾವಣೆ ಮಾಡಬಹುದು.
ಅದು ಯಾವಾಗ ಅಂದ್ರೆ ಉಳಿದ ಸದಸ್ಯರು ಒಪ್ಪಿಗೆ ಪತ್ರಬೇಕಾಗುತ್ತೆ.
ಒಪ್ಪಿಗೆ ಕೊಟ್ಟಾಗ ಮಾತ್ರ ಅದರಂತೆ ಇಲ್ಲಿ ಪ್ರಮುಖವಾಗಿ ಗಮನಿಸಬೇಕಾದ ಅಂಶ ಅಂದ್ರೆ ಪೌತಿಖಾತೆ ಆಗಿದೆ ಎಂದ ಮಾತ್ರಕ್ಕೆ ಜಮೀನು ಸಂಪೂರ್ಣವಾಗಿ ಅವರ ಹೆಸರಿಗೆ ಆಗೋದಿಲ್ಲ. ಜಸ್ಟ್ ಕಂದಾಯ ವಸೂಲಿಗಾಗಿ ಮತ್ತು ಇತರೆ ಸೌಲಭ್ಯಗಳನ್ನು ಪಡೆದುಕೊಳ್ಳಲು ಮಾತ್ರ ವ್ಯವಸ್ಥೆ ಇರುತ್ತೆ. ಪೌತಿ ಖಾತೆ ಅಡಿಯಲ್ಲಿ ವಾರಸುದಾರರ ಹೆಸರಿಗೆ ಹಕ್ಕು ಬದಲಾವಣೆ ಆಗುತ್ತೆ. ಎಲ್ಲ ಪಾಲುದಾರರ ಆಧಾರ್ ಕಾರ್ಡ್ಬೇಕಾಗುತ್ತೆ ಮತ್ತು ಜಮೀನಿಗೆ ಸಂಬಂಧಪಟ್ಟ ಪಹಣಿಗಳು ತೆಗೆದುಕೊಂಡು ಒಂದು ಫಾರ್ಮ್ ಸಿಗುತ್ತೆ. ಬಿ ನಮೂನೆ ಫಾರ್ಮ್ ಅಂತ ಇರುತ್ತೆ. ಆ ಫಾರಂ ಸಂಪೂರ್ಣವಾಗಿ ಭರ್ತಿ ಮಾಡಬೇಕು. ಮುಂದಿನ ಹಂತಗಳನ್ನು ತಿಳಿಯಲು ಕೆಳಗಿನ ವಿಡಿಯೋ ವೀಕ್ಷಣೆ ಮಾಡಿ.