ತುಂಬಾ ಜನ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಯಾಕೆ ಯಾವಾಗ್ಲೂ ಕೂಡ ಇಲ್ಲಿ ಕಾಣಿಸಿಕೊಳ್ಳೋದಿಲ್ಲ. ಇದುವರೆಗೂ ಕೂಡ ಜಾಸ್ತಿ ಪ್ರಶ್ನೆಗಳನ್ನ ಯಾಕೆ ಮಾಡಿಲ್ಲ. ಅವ್ರಿಗೆ ಏನಾದ್ರುಗಳು ಅಂದ್ರೆ ಭಯ ಇದ್ಯ ಅಂತ ಸೋಶಿಯಲ್ ಮೀಡಿಯಾದಲ್ಲಿ ಆಗಿಂದಾಗೆ ಪ್ರಶ್ನೆ ಮಾಡ್ತಾನೆ ಇದ್ರು ಇನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಲೋಕಸಭಾ ಚುನಾವಣೆ ಹತ್ತಿರ ಬಂದರು ಕೂಡ ಈ ಒಂದು ಪ್ರಶ್ನೆಗೆ ಎಲ್ಲಿಯೂ ಕೂಡ ಉತ್ತರವನ್ನು ಕೊಟ್ಟಿರಲಿಲ್ಲ. ಅವರು ಆಗಾಗ ಮನ್ ಕಿ ಬಾತ್ ಎನ್ನುವಂತಹ ಕಾರ್ಯಕ್ರಮವನ್ನು ಕೂಡ ಮಾಡ್ತಾರೆ. ಆದ್ರೆ ಮಾಧ್ಯಮಗಳ ಕೈಗೆ ಸಿಗೋದು ಪ್ರಧಾನ ಮಂತ್ರಿ ತುಂಬಾ ವಿರಳ. ಇನ್ನು ಸಂದರ್ಶನಗಳನ್ನು ಕೊಡಲು ಕೂಡ ಅವರು ನಿರಾಕರಿಸಿದರು.
ಆದರೆ ಈಗ ಪ್ರಧಾನ ಮಂತ್ರಿ ಅವರು ಯಾಕೆ ಈ ರೀತಿ ಮಾಡ್ತಾರೆ.ಮಾಧ್ಯಮಗಳ ಕೈಗೆ ಯಾಕೆ ಸಿಗೋದಿಲ್ಲ ಅಂತ ಉತ್ತರಿಸಿದ್ದಾರೆ. ಹೌದು, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಮಾಧ್ಯಮದಲ್ಲಿ ಬದಲಾವಣೆಯನ್ನ ತರೋದಿಕ್ಕೆ ಮತ್ತು ಸಾರ್ವಜನಿಕರನ್ನ ತಲುಪೋದಕ್ಕೆ ಒಂದು ಸಮೂಹ ಮಾಧ್ಯಮ ಅಂತ ಕೂಡ ಅನಿಸಿದ್ದಾರೆ ಅಂದ್ರೆ ಸಾರ್ವಜನಿಕರಿಗೆ ತಲುಪೋದಿಕ್ಕೆ ಹಿಂದೆ ಮಾಧ್ಯಮ ಒಂದೇ ದಾರಿಯಾಗಿತ್ತು. ಇನ್ನು ಇಂಡಿಯಾ ಟುಡೇಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಈ ಬಗ್ಗೆ ಪ್ರಧಾನಿ ಹೇಳಿಕೊಂಡಿದ್ದಾರೆ. ಗುಜರಾತ್ ಮುಖ್ಯಮಂತ್ರಿಯಾದಾಗಿನಿಂದ ಸಮಯಕ್ಕೆ ಹೋಲಿಸಿದರೆ ಈಗ ಯಾಕೆ ಪತ್ರಿಕಾಗೋಷ್ಠಿಗಳನ್ನು ಜಾಸ್ತಿ ಮಾಡ್ತಾ ಇಲ್ಲ ಅಂದ್ರೆ ಪ್ರಶ್ನೆಗಳನ್ನ ಕರೀತಾ ಇಲ್ಲ ಅಂತ ಕೇಳಿದ್ರು.
ಪ್ರಧಾನ ಮಂತ್ರಿ ಅವರಿಗೆ ಇದಕ್ಕೆ ಉತ್ತರಿಸಿದ ನರೇಂದ್ರ ಮೋದಿಯೇ ಮಾಧ್ಯಮಗಳು ಒಂದು ನಿರ್ದಿಷ್ಟ ರೀತಿಯಲ್ಲಿ ಕೆಲಸ ಮಾಡುತ್ತೆ. ಅವರು ಆ ಹಾದಿಯಲ್ಲಿ ಹೋಗೋದಿಕ್ಕೆ ಬಯಸುವುದಿಲ್ಲ ಅಂತ ಹೇಳಿದ್ರು ಇನ್ನು ತಾನು ಕಷ್ಟಪಟ್ಟು ದುಡಿಯಬೇಕು. ತಾನು ಬಡವರ ಮನೆಗೆ ಹೋಗಬೇಕು. ತಾನು ವಿಜ್ಞಾನ ಭವನದಲ್ಲಿ ರಿಬ್ಬನ್ ಕತ್ತರಿಸಿದ ಫೋಟೋವನ್ನು ತೆಗೆಯಬಹುದು ಆದರೆ ಅದನ್ನು ಹಾಗೆ ಮಾಡೋದಿಲ್ಲ ತಾನು ಜಾರ್ಖಂಡಿನ ಸಣ್ಣ ಜಿಲ್ಲೆಗೆ ಹೋಗಿ ಸಣ್ಣ ಯೋಜನೆಗಳತ್ತ ಕೆಲಸ ಮಾಡುತ್ತೇನೆ ಅಂತ ಹೇಳಿದ್ದಾರೆ. ಇನ್ನು ಇದಕ್ಕೆ ಸಂಬಂಧಿಸಿದಂತೆ ತಾನು ಆಜ್ ತಕ್ ನೊಂದಿಗೆ ಮೊದಲು ಮಾತನಾಡಿದ್ದೆ ಆದರೆ ಈಗ ಯಾರೊಂದಿಗೂ ಮಾತನಾಡುವುದನ್ನ ನಾನು ಬಿಟ್ಟಿದ್ದೇನೆ.
ಕೆಲವೊಂದಿಷ್ಟು ಮಾಧ್ಯಮಗಳಿಗೆ ಮಾತ್ರ ನಾನು ಉತ್ತರ ಕೊಡುತ್ತಿದ್ದೇನೆ ಎಂದು ಹೇಳಿದರು ಆದರೂ ಕೂಡ ನಾವು ಈಗಾಗಲೇ ನೋಡಿದ ಹಾಗೆ ಮಾಧ್ಯಮದವರು ಒಂದು ಕಡೆ ಒಂದುನು ತೋರಿಸಿದರೆ ಇನ್ನೊಂದು ಕಡೆ ಇನ್ನೊಂದು ತೋರಿಸುತ್ತಾರೆ ಯಾವುದೇ ವಿಷಯದಲ್ಲೂ ಕೂಡ ಮಾಧ್ಯಮದವರನ್ನು ಅಸಾಧ್ಯವಾಗಿದೆ. ಹಾಗಾಗಿ ಮೋದಿಯವರು ನೀವು ನೋಡಿದ ಹಾಗೆ ಆದಷ್ಟು ಮಧ್ಯಮದವರಿಗೆ ಕೈಗೆ ಸಿಗುವುದಿಲ್ಲ ಇದರ ಬಗ್ಗೆ ನಿಮ್ಮ ಅನಿಸಿಕೆ ಏನು ಎಂಬುದನ್ನು ತಪ್ಪದೆ ನಮಗೆ ಕಾಮೆಂಟ್ ಮೂಲಕ ತಿಳಿಸಿ.