ಸುಸ್ವಾಗತ ಆತ್ಮೀಯರೇ ಹಣೆಯಲ್ಲಿ ಸಿಂಧೂರ ತಲೆಯಲ್ಲಿ ಹೂವು ಕೆನ್ನೆಯಲ್ಲಿ ಅರಿಶಿನ ಹಾಗು ಕಾಲಲ್ಲಿ ಕಾಲುಂಗುರ ಇವೆಲ್ಲವು ನಮ್ಮ ಸನಾತನ ಹಿಂದೂ ಸಂಪ್ರದಾಯದಲ್ಲಿ ಸುಮಂಗಳೆಯರ ಲಕ್ಷಣ ಗಳಾಗಿವೆ. ಸ್ತ್ರೀಯರು ಧರಿಸುವ ಪ್ರತಿಯೊಂದು ಆಭರಣಕ್ಕೂ ಅದರದ್ದೇ ಆದ ಮಹತ್ವಗಳಿವೆ. ವಿವಾಹಿತ ಸ್ತ್ರೀಯರು ಧರಿಸುವ ಆಭರಣಗಳಲ್ಲಿ ಕಾಲುಂಗುರ ಸಹ ಪ್ರಮುಖ ಜನಿಸಿಕೊಳ್ಳುತ್ತದೆ. ಕಾಲುಂಗುರವನ್ನು ಹಾಕಿಕೊಳ್ಳುವುದು ಕೇವಲ ಮದುವೆಯಾಗಿದ್ದೇವೆ ಎಂಬುದನ್ನು ತೋರಿಸಲಿಕ್ಕೆ ಮಾತ್ರವಲ್ಲ. ಅದರ ಹಿಂದೆ ವೈಜ್ಞಾನಿಕ ಕಾರಣವು ಸಹ ಇದೆ. ಹಾಗಾದರೆ ಕಾಲುಂಗರದ ಮಹತ್ವವೇನು? ಇದರ ಹಿಂದೆ ಇರುವಂತಹ ವೈಜ್ಞಾನಿಕ ಕಾರಣಗಳೇನು? ಬನ್ನಿ, ತಿಳಿದುಕೊಳ್ಳೋಣ. ಮದುವೆಯ ಸಂದರ್ಭದಲ್ಲಿ ಸಂಪ್ರದಾಯದ ಭಾಗವಾಗಿ ಪತಿ ತನ್ನ ಪತ್ನಿ ಗೆ ಕಾಲುಂಗುರವನ್ನು ತೊಡಿಸುತ್ತಾನೆ. ಸಾಮಾನ್ಯವಾಗಿ ಕಾಲಿನ ಎರಡನೇ ಬೆರಳಿಗೆ ಬೆಳ್ಳಿ ಕಾಲುಂಗುರ ವನ್ನು ತೊಡಿಸಲಾಗುತ್ತದೆ.
ಮುತ್ತೈದೆಯ ಐದು ಮುತ್ತು ಗಳಲ್ಲಿ ಈ ಕಾಲುಂಗುರವೂ ಸಹ ಒಂದು. ಹಾಗಾಗಿ ಸ್ತ್ರೀಯರು ಕಾಲುಂಗುರವನ್ನು ತಮ್ಮ ಸೌಭಾಗ್ಯವೆಂದೇ ಪರಿಗಣಿಸುತ್ತಾರೆ. ಪೌರಾಣಿಕ ಕಾಲದಲ್ಲಿ ನಾವು ಗಮನಿಸಿದಾಗ ರಾಮಾಯಣದಲ್ಲೂ ಸಹ ಕಾಲುಂಗುರದ ಉಲ್ಲೇಖವಿದೆ. ರಾವಣ ಸೀತೆಯ ಅಪಹರಣ ಮಾಡಿದಾಗ ಸೀತಾ ದೇವಿ, ಪ್ರಭು ಶ್ರೀ ರಾಮಚಂದ್ರರಿಗೆ ಪತ್ತೆ ಹಚ್ಚಲು ಸಾಧ್ಯವಾಗಲಿದ್ದು, ಪುಷ್ಪಕವಿಮಾನದಿಂದ ತನ್ನ ಇತರ ಆಭರಣಗಳೊಂದಿಗೆ ಕಾಲುಂಗುರವನ್ನು ಸಹ ಎಸೆದಿರುತ್ತಾರೆ. ಪ್ರಭು ಶ್ರೀ ರಾಮಚಂದ್ರನಿಗೆ ಸೀತೆಯನ್ನು ರಾವಣ ಅಪಹರಿಸಿ ದಾರಿಯನ್ನು ಪತ್ತೆ ಹಚ್ಚಲು ಈ ಕಾಲುಂಗುರವೇ ಸಹಾಯವನ್ನು ಮಾಡುತ್ತದೆ. ಕಾಲುಂಗುರ ಆಗಿನ ಕಾಲದಿಂದಲೂ ಸಹ ಬಳಕೆಯಲ್ಲಿದೆ ಎಂದು ಇದರಿಂದ ನಮಗೆ ತಿಳಿದು ಬರುತ್ತದೆ. ಕಾಲುಂಗುರ ಸಾಮಾನ್ಯವಾಗಿ ಬೆಳ್ಳಿಯಿಂದ ಮಾಡಲ್ಪಟ್ಟ ಇರುತ್ತದೆ.
ಧಾರ್ಮಿಕತೆಯ ಹೊರತಾಗಿ ಯೂ ಸಹ ವೈಜ್ಞಾನಿಕ ದೃಷ್ಟಿಯಿಂದ ಚಿನ್ನದ ಕಾಲುಂಗುರ ಧರಿಸುವುದು ಅಷ್ಟು ಸಮಂಜಸವಲ್ಲ. ಚಿನ್ನ ದೇಹದಲ್ಲಿ ಶಾಖ ವನ್ನು ಹೆಚ್ಚು ಮಾಡಿದರೆ ಬೆಳ್ಳಿ ದೇಹಕ್ಕೆ ತಂಪನ್ನು ನೀಡುತ್ತದೆ. ಅದಕ್ಕಾಗಿ ಸೊಂಟದ ಮೇಲೆ ಚಿನ್ನದ ಆಭರಣಗಳನ್ನು ಹಾಗು ಸೊಂಟದ ಕೆಳಗೆ ಬೆಳ್ಳಿಯ ಆಭರಣಗಳನ್ನು ಧರಿಸಲಾಗುತ್ತದೆ. ಇದರಿಂದ ದೇಹದ ತಾಪಮಾನ ಸಮತೋಲನವನ್ನು ಕಾಯ್ದುಕೊಳ್ಳುತ್ತದೆ.ಅಷ್ಟು ಮಾತ್ರವಲ್ಲದೆ ಬೆಳ್ಳಿ ಒಂದು ಉತ್ತಮವಾದವಾಹಕವಾಗಿದೆ. ಬೆಳ್ಳಿ ಕಾಲುಂಗುರ ಭೂಮಿಯಲ್ಲಿ ಇರುವಂತಹ ಶಕ್ತಿಯನ್ನೆಲ್ಲ ಹೀರಿ ಕೊಂಡು ದನಾತ್ಮಕ ಶಕ್ತಿ ದೇಹದಲ್ಲೆಲ್ಲ ಸಂಚಾರ ಮಾಡುವಂತೆ ಮಾಡುತ್ತದೆ. ಇದರಿಂದ ಸಂಪೂರ್ಣವಾದ ದೈಹಿಕ ವ್ಯವಸ್ಥೆಗೆ ನವ ಚೈತನ್ಯ ಒದಗಿ ಬರುತ್ತದೆ.
ಹಾಗಾಗಿ ಬೆಳ್ಳಿ ಕಾಲುಂಗುರ ಧಾರಣೆ ಮಾಡುವುದರಿಂದ ಸ್ಥಳೀಯರು ಮಾನಸಿಕ ವಾಗಿ ಮತ್ತು ದೈಹಿಕ ವಾಗಿ ಆರೋಗ್ಯವಾಗಿರುತ್ತಾರೆ. ಇನ್ನೊಂದು ಸಂಗತಿಯೆಂದರೆ ಸಾಮಾನ್ಯವಾಗಿ ಹೆಬ್ಬರಳಿನ ಪಕ್ಕದ ಬೆರಳಿಗೆ ಕಾಲುಂಗುರ ತೊಡುವುದು ವಾಡಿಕೆ. ಈ ಬೆರಳಿನಲ್ಲಿ ವಿಶೇಷವಾದನ ವಿರುತ್ತದೆ. ಅದು ಗರ್ಭಕೋಶಕ್ಕೆ ನೇರ ಸಂಪರ್ಕ ಹೊಂದಿರುತ್ತದೆ. ಇದರಿಂದ ಗರ್ಭಕೋಶ ಸಂಬಂಧಿತ ಸಮಸ್ಯೆಗಳೆಲ್ಲ ನಿವಾರಣೆಯಾಗಿ ಗರ್ಭಧಾರಣೆ ಎಲ್ಲಿಯೂ ಸಹ ಸಹಕಾರಿಯಾಗುತ್ತದೆ. ಮಹಿಳೆಯರು ಅಡುಗೆ ಮನೆಯಲ್ಲಿ ಗಂಟೆ ಗಟ್ಟಲೆ ನಿಂತು ಕೊಂಡೆ, ಕೆಲಸ ವನ್ನು ಮಾಡುತ್ತಾರೆ.ಇದರಿಂದ ಕಾಲು ಹಾಗೂ ಬೆನ್ನು ನೋವು ಬರುವುದು ಸರ್ವೇ ಸಾಮಾನ್ಯ. ಆದರೆ ಬೆಳ್ಳಿ ರಕ್ತ ಪರಿಚಲನೆಗೆ ಸಹಾಯಕಾರಿಯಾಗಿರುತ್ತದೆ.