ನಮಗೆ ಗೊತ್ತಿರುವ ಹಾಗೆ ಹಳೆಯ ಕಾಲದಲ್ಲಿ ಅಂದರೆ ನಮ್ಮ ಹಿರಿಯರ ಕಾಲದಲ್ಲಿ ಕಾನೂನು ಅಷ್ಟು ಇರಲಿಲ್ಲ ಆಮೇಲೆ ಅದಕ್ಕೆ ಬೇಕಾದಂತಹ ಕಚೇರಿಗಳು ಇದ್ದಿದ್ದಿಲ್ಲ ಹಾಗಾಗಿ ನಮ್ಮ ಹಿರಿಯರು ಮಾತಿನ ಮೂಲಕವೇ ಆಸ್ತಿಯನ್ನು ವಿಂಗಡನೆ ಮಾಡುತ್ತಿದ್ದರು ಹಾಗೆ ನೋಡಿದರೆ ಅಂದಿನ ಕಾಲದಲ್ಲಿ ಯಾವುದೇ ರೀತಿಯಾದಂತಹ ಸಮಸ್ಯೆಗಳು ಬರುತ್ತಾ ಇರಲಿಲ್ಲ ಆದರೆ ಇವತ್ತಿನ ಕಾಲಕ್ಕೆ ಎಲ್ಲಾ ರೀತಿಯಾದಂತಹ ಕಾಗದ ಪತ್ರಗಳು ಬೇಕೇ ಬೇಕು ಬಾಯಿಯ ಮಾತಿನ ಪ್ರಕಾರ ಆಸ್ತಿಯನ್ನು ವಿಂಗಡನೆ ಮಾಡಿದರೆ ಇವತ್ತಿನ ಜಗತ್ತಿನಲ್ಲಿ ಹಲವಾರು ರೀತಿಯಾದಂತಹ ಸಮಸ್ಯೆಗಳು ಉತ್ಪತ್ತಿಯಾಗುತ್ತವೆ.

ಮುಂಚೆಲ್ಲ ರಿಜಿಸ್ಟ್ರೇಷನ್ ಮಾಡುತ್ತಿರಲಿಲ್ಲ ಕಾನೂನಿನ ಜ್ಞಾನದ ಕೊರತೆಯಿಂದ ಮುಂದೆ ಆಗುವ ತೊಂದರೆಗಳ ಬಗ್ಗೆ ಅರಿವಿಲ್ಲದೇನೆ ಸುಮ್ಮನೆ ಬಾಯಿ ಮಾತಿನಿಂದ ಮತ್ತು ರಿಜಿಸ್ಟರ್ ಆಗಿ ಪಂಚಾಯಿತಿ ಮಾಡಿ ಅವರವರೇ ಮಾತನಾಡಿ ಆಸ್ತಿ ಹಂಚಿಕೆ ಆಗಿರಬಹುದು ಅಥವಾ ಹಕ್ಕು ಬಿಟ್ಟು ಕೊಟ್ಟಿರುವುದು ಆಗಿರಬಹುದು ಬಾಯಿ ಮಾತಿನ ಮೂಲಕ ನಿಮಗೆ ಆಸ್ತಿ ಬರಬೇಕು ನಿಮಗೆಷ್ಟು ಇರಬೇಕು ನಮಗೆ ಇಷ್ಟು ಬರಬೇಕು ತಂದೆ-ತಾಯಿಗೆ ಎಷ್ಟು ಬರಬೇಕು ಅಂತ ಹೇಳುತ್ತಾ ಹುಳಿ ಮಾಡಿಕೊಂಡು ಅವರ ಹಿಡಿತದಲ್ಲಿ ಇಟ್ಟುಕೊಂಡು ಅನುಭವಿಸುತ್ತಾ ಇದ್ದರು ಯಾವುದೇ ರಿಜಿಸ್ಟ್ರೇಷನ್ ಗಳನ್ನು ಮಾಡುತ್ತಿರಲಿಲ್ಲ.

ಕಾಲ ಸರಿದಂತೆ ಭೂಮಿಯ ಬೆಲೆ ಹೆಚ್ಚಾಗುತ್ತಾ ಹೋಯ್ತು ಸಂಬಂಧಗಳ ಬೆಲೆ ಕಡಿಮೆಯಾಗುತ್ತಾ ಹೋಯಿತು ಆಸ್ತಿಗಳಿಗಾಗಿ ಕಚ್ಚಾಟ ಶುರುವಾಯಿತು ಅಣ್ಣ ತಮ್ಮಂದಿರ ಮಧ್ಯೆ ನನಗೆ ಕಡಿಮೆ ಬಂದಿದೆ ನಿನಗೆ ಜಾಸ್ತಿ ಬಂದಿದೆ ನಾನು ಕೋರ್ಟಿಗೆ ಹೋಗಿ ನನ್ನ ಹಕ್ಕನ್ನು ಪಡೆದುಕೊಳ್ಳುತ್ತೇನೆ ಅಂತ ಕೋರ್ಟುಗಳಿಗೆ ಹಾಕಲು ಶುರು ಮಾಡಿದರು ಮುಂಚೆಲ್ಲ ರಿಜಿಸ್ಟ್ರೇಷನ್ ಆಗದಿರುವ ಕಾರಣಕ್ಕೆ ದಾಖಲೆಗಳು ಸರಿಯಾಗಿ ಇರುವುದಿಲ್ಲ ದಾಖಲೆಗಳು ಸರಿಯಾಗಿ ಇಲ್ಲದಿರುವ ಕಾರಣಕ್ಕೆ ಹೆಚ್ಚಿನ ಪಾಲು ಪಡೆಯುವ ಗೋಸ್ಕರ ಕೋರ್ಟ್ಗಳಲ್ಲಿ ಕೇಸ್ ಗಳು ಹೆಚ್ಚಾಗುತ್ತಾ ಇದ್ದಾವೆ ವ್ಯಾಜ್ಯಗಳಂತು ಎಲ್ಲರ ಮನೆಯಲ್ಲೂ ಶುರುವಾಗಿಬಿಟ್ಟಿದೆ.

ಈಗ ಒಂದು ಒಟ್ಟು ಕುಟುಂಬ ಇರುತ್ತದೆ ಆವಿಭಕ್ತ ಕುಟುಂಬದಲ್ಲಿ ತಂದೆ ತಾಯಿ ಸಹೋದರ ಸಹೋದರಿ ಸೇರಿದಂತೆ ತುಂಬಾ ಜನರು ಇರುತ್ತಾರೆ ಹೆಣ್ಣು ಮಕ್ಕಳೆಲ್ಲ ಮದುವೆಯಾಗಿ ಹೋಗುವಂತಹವರು ಅನ್ನುವ ಕಾರಣಕ್ಕಾಗಿ ಹೆಣ್ಣು ಮಕ್ಕಳಿಗೆ ತಮ್ಮ ಆಸ್ತಿಯಲ್ಲಿ ಏನು ಹಕ್ಕು ಬೇಡ ನಮ್ಮ ಹಕ್ಕನ್ನು ನೀವೇ ಹಂಚಿಕೊಳ್ಳಿ ಅಂತ ಬಿಟ್ಟಿರುತ್ತಾರೆ ಆಗ ಬಿಟ್ಟಿಕೊಟ್ಟ ಆಸ್ತಿ ಯಾರ ಉಳಿತಿಯಲ್ಲಿರುತ್ತದೆಯೋ ಅವರು ತಮ್ಮ ಹೆಸರಿಗೆ ಖಾತೆಯನ್ನು ಅನುಭವಿಸುತ್ತಾ ಇರುತ್ತಾರೆ ದಾಖಲೆಗಳನ್ನೆಲ್ಲ ಅವರ ಹೆಸರಿಗೆ ಮಾಡಿಸಿಕೊಂಡು ಬಂದಿರುತ್ತಾರೆ.

ದಿನ ಕಳೆದಂತೆ ಆಸ್ತಿಯ ವ್ಯಾಲ್ಯೂಯೇಷನ್ ಜಾಸ್ತಿಯಾಗುತ್ತಾ ಹೋಗುತ್ತದೆ ಅಥವಾ ಮದುವೆ ಮಾಡಿಕೊಟ್ಟ ಹೆಣ್ಣು ಮಕ್ಕಳು ತಮಗೆ ಹಕ್ಕು ಬೇಕು ಅಂದರೆ ಹಕ್ಕನ್ನು ಬಿಟ್ಟು ಕೊಟ್ಟಿರುತ್ತಾರೆ ಜೊತೆಗೆ ಬಾಯಿಮಾತಿಲಿ ಬಿಟ್ಟು ಕೊಟ್ಟಿರುತ್ತಾರೆ ಯಾವುದೇ ರಿಜಿಸ್ಟ್ರೇಷನ್ ಅನ್ನು ಮಾಡಿಸಿಕೊಟ್ಟಿರದೆ ಇರುವುದರಿಂದ ಒಂದಿಷ್ಟು ಜನರ ಮಾತುಗಳನ್ನು ಕೇಳಿಕೊಂಡು ಮತ್ತು ಕಾನೂನಿನ ಜ್ಞಾನವನ್ನು ಪಡೆದುಕೊಂಡು ತಮ್ಮ ಹಕ್ಕನ್ನು ಬೇಕು ಅಂತ ಕೇಳಿ ಬರಬಹುದು.

ಅಥವಾ ಗಂಡು ಮಕ್ಕಳಲ್ಲಿ ಹಿರಿಯರನ್ನು ಸ್ವಲ್ಪ ಜಾಸ್ತಿ ಹಕ್ಕನ್ನು ಕೊಟ್ಟಿರುತ್ತಾರೆ ತಂದೆ-ತಾಯಿಯ ಆಗ ಉಳಿದಂತ ಸಹೋದರ ಸಹೋದರಿಯರ ಎಲ್ಲರೂ ಕೂಡ ಬಾಯಿ ಮಾತಿನ ಮೂಲಕ ದೊಡ್ಡಣ್ಣನಿಗೆ ಸ್ವಲ್ಪ ಜಾಸ್ತಿ ಹಕ್ಕನ್ನು ಕೊಟ್ಟು ಉಳಿದವರು ಕಡಿಮೆಯಾಗಿ ಪಡೆದುಕೊಂಡಿರುತ್ತಾರೆ. ಮತ್ತೆ ಹಿರಿಯ ಅಣ್ಣನಿಗೆ ಜಾಸ್ತಿ ಆಸ್ತಿ ಹೋಯಿತು ಎಂದು ಕೋರ್ಟ್ ಮೆಟ್ಟಿಲು ಕೂಡ ಇರುತ್ತಾರೆ ಕಾನೂನಿನಲ್ಲಿ ಇಂತಹ ವಿಚಾರಗಳು ಹೆಚ್ಚಿರುವುದರಿಂದ ಪ್ರಿನ್ಸಿಪಲ್ ಆಫ್ ಎಷ್ಟೋಫಲ್ ಎಂಬ ಸಿದ್ಧಾಂತ ಇದೆ.

ಯಾವಾಗ ಹಿರಿಯಣ್ಣನ ಆಸ್ತಿ ಹೆಚ್ಚಿದೆ ಎಂದು ಕೋರ್ಟ್ ಮೆಟ್ಟಿಲು ಏರಿದಾಗ ಎ ಸಿದ್ದಾಂತ ಕಾರ್ಯರೂಪಕ್ಕೆ ಬರುತ್ತದೆ ಒಂದು ವೇಳೆ ಕೋರ್ಟ್ ನಲ್ಲಿ ಎಲ್ಲಾ ಪುರಾವೆ ಗಳು ಇದ್ದರೆ ನೀವು ಕೋರ್ಟಿನಲ್ಲಿ ವಾದ ಮಂಡಿಸಿ ನೀವು ವಾದವನ್ನು ಗೆದ್ದರೆ ಮಾತ್ರ ನಿಮಗೆ ಆಸ್ತಿ ಸೇರುತ್ತದೆ. ಬಾಯಿ ಮಾತಿನಿಂದ ಆಸ್ತಿ ಹಂಚಿಕೆ ಆಗಿದೆ ಎಂದು ವಾದವನ್ನು ನೀವು ಗೆಲ್ಲಬೇಕು ಆದರೆ ಈಗಿನ ಕಾನೂನಿನ ಪ್ರಕಾರ ಯಾರ ಹೆಸರಿಗೆ ಆಸ್ತಿ ಇರುತ್ತದೆ ಅವರೇ ಆಸ್ತಿಗೆ ಹಕ್ಕುದಾರ ಎಂದು ಕಾನೂನು ಹೇಳುತ್ತದೆ.

ಸುಮಾರು ವರ್ಷಗಳ ಕಾಲ ಆದಮೇಲೆ ತಾಯಿ ಮಾತಿನಿಂದ ಆದ ಆಸ್ತಿಯ ಹಂಚಿಕೆ ಬಗ್ಗೆ ಕೋರ್ಟ್ ಮೆಟ್ಟಿಲು ಹಿರಿಯಾಗ ಈ ಮೇಲೆ ಇರುವಂತಹ ಸಿದ್ಧಾಂತ ಕಾರ್ಯರೂಪಕ್ಕೆ ಬರುತ್ತದೆ ಆದರೆ ಈ ವಾದವನ್ನು ಗೆಲ್ಲುವುದು ತುಂಬಾನೇ ಕಷ್ಟಕರವಾಗಿದೆ.

Leave a Reply

Your email address will not be published. Required fields are marked *