ಸ್ನೇಹಿತರೆ ಯುವ ನಿಧಿ ಯೋಜನೆ ಮೂಲಕ ವಿದ್ಯಾರ್ಥಿಗಳ ಖಾತೆಗೆ ನೇರವಾಗಿ ಅಕೌಂಟಿಗೆ 3000 ಆಗ್ತಾ ಇದ್ದಾರೆ.ಕರ್ನಾಟಕ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ಗ್ಯಾರೆಂಟಿ ಯೋಜನೆಗಳ ಪೈಕಿ 5ನೇಯ ಮತ್ತು ಕೊನೆಯ ಗ್ಯಾರೆಂಟಿ ಯೋಜನೆ ಯುವನಿಧಿಗೆ ಇಂದು ಶಿವಮೊಗ್ಗದಲ್ಲಿ ಚಾಲನೆ ಸಿಕ್ಕಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಫಲಾನುಭವಿಗಳ ಖಾತೆಗೆ ಯುವನಿಧಿಯ ಹಣ ವರ್ಗಾವಣೆ ಮಾಡಿದರು.ಇವತ್ತ ಇದೀಗ ಬಂದಿರುವ ಲೇಟೆಸ್ಟ್ ಅಪ್ಡೇಟ್ ನ್ಯೂಸ್ ಇದು ಯುವ ನಿಧಿ ಯೋಜನೆಯ ಲೇಟೆಸ್ಟ್ ನ್ಯೂಸ್. ಬಹಳಷ್ಟು ಮಂದಿ ವಿದ್ಯಾರ್ಥಿಗಳು ಇದ್ದಾರೆ.
ಈಗ ಯುವ ನಿಧಿ ಯೋಜನೆಗೆ ಅರ್ಜಿಸಿದರೆ ಡಿಪ್ಲೊಮಾ ಮಾಡಿದವರಿಗೆ ₹1500 ಹಾಗೂ ಡೀಗ್ರಿ ಮಾಡಿದವರಿಗೆ 3000 ಹಣವನ್ನ ಅವರ ಖಾತೆಗಳಿಗೆ ರಿಲೀಸ್ ಮಾಡುತ್ತಾರೆ. ಇದಕ್ಕೆ ಸಂಬಂಧಪಟ್ಟಂತೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ನಮ್ಮ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ವಿದ್ಯಾರ್ಥಿಗಳ ಖಾತೆಗೆ ನೇರವಾಗಿ ನೇರ ನಗದು, ಹಣ ವರ್ಗಾವಣೆ ಮಾಡಿದ್ದಾರೆ. ಬನ್ನಿ ಯಾವ ಸಮಯಕ್ಕೆ ನಿಮ್ಮ ಖಾತೆಗೆ ಹಣ ಬರ್ತಾ ಇದೆ. ಎಷ್ಟು ಗಂಟೆಗೆ ರಿಲೀಸ್ ಆಗ್ತಾ ಇದೆ. ಇದಕ್ಕೆ ಸಂಬಂಧ ಪಟ್ಟಂತಹ ಆದಂತ ಮಾಹಿತಿಯನ್ನು ಕೊಡ್ತಿನಿ ಬಹಳಷ್ಟು ವಿದ್ಯಾರ್ಥಿಗಳು ಯುವ ನಿಧಿ ಯೋಜನೆಗೆ ಬಹಳಷ್ಟು ಮಂದಿ ಅರ್ಜಿಯನ್ನು ಸಲ್ಲಿಸಿದ್ದಾರೆ ಅಂತ ಖಾತೆಗೆ ಐವತ್ತ 3000 ಹಣ ಜಮಾ ಆಗ್ತಾ ಇದೆ.ಫಲಾನುಭವಿಗಳಿಗೆ ನೇರ ನಗದು ವರ್ಗಾವಣೆ ಕಾರ್ಯಕ್ರಮ ಅಂತ ಇವತ್ತುನ್ನು ಇಟ್ಟುಕೂಳ್ಳಲಾಗಿದೆ.
ಇದು ನಿಮಗೆ ಸ್ನೇಹಿತರು, ಯಾರು ವಿದ್ಯಾರ್ಥಿಗಳಿದ್ದಾರೆ ಡಿಗ್ರಿ ಮತ್ತು ಡಿಪ್ಲೊಮಾ ಮಾಡಿದ ವಿದ್ಯಾರ್ಥಿಗಳಿಗೆ ಅವರ ಖಾತೆಗಳಿಗೆ ನೇರವಾಗಿ ಹಣವನ್ನು ಜಮಾ ಮಾಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳ ಲಾಗಿದೆ. ಇದರಲ್ಲಿ ಡಿಪ್ಲೊಮಾ ಮಾಡಿದವರಿಗೆ ₹1500 ಹಣ ನೇರವಾಗಿ ಹೋದರೆ ಡಿಗ್ರಿ ಮಾಡಿದವರಿಗೆ 3000 ಹಣ ಖಾತೆಗೆ ನೇರವಾಗಿ ಜಮಾ ಮಾಡುತ್ತಾರೆ. ಶಿವಮೊಗ್ಗದ ಫ್ರೀಡಂ ಪಾರ್ಕ್ನಲ್ಲಿ ಹಮ್ಮಿಕೊಂಡಿದ್ದ ಅದ್ದೂರಿ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಫಲಾನುಭವಿಗಳ ಖಾತೆಗೆ ಹಣ ಬಿಡುಗಡೆ ಮಾಡಿದರು.
ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್ ಪಕ್ಷ ನೀಡಿದ್ದ ಐದು ಗ್ಯಾರೆಂಟಿಗಳ ಪೈಕಿ ಇದು ಕೊನೆಯ ಗ್ಯಾರೆಂಟಿ ಯೋಜನೆ. ಯುವನಿಧಿ ಜಾರಿಯೊಂದಿಗೆ ಕಾಂಗ್ರೆಸ್ ಪಕ್ಷ ನೀಡಿದ ಎಲ್ಲ ಗ್ಯಾರೆಂಟಿ ಯೋಜನೆಗಳನ್ನು ಜಾರಿಗೊಳಿಸಿದಂತೆ ಆಗಿದೆ. ಯುವನಿಧಿ ಯೋಜನೆಗೆ 5.29 ಲಕ್ಷ ನೋಂದಣಿ ಗುರಿ ಇರಿಸಿಕೊಂಡಿದ್ದು, ಈಗಾಗಲೇ 61 ಸಾವಿರಕ್ಕೂ ಹೆಚ್ಚು ನೋಂದಣಿ ಆಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.